ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿರುವವರಿಗಾಗಿ ಅದ್ಭುತವಾದ ಸಂಕಲ್ಪ

in ಜ್ಯೋತಿಷ್ಯ 665 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್  ಋತು,ಅಧಿಕ ಮಾಸೆ, ಶುಕ್ಲ  ಪಕ್ಷದ ತೃತಿಯ ತಿಥಿ,  ಸ್ವಾತಿ ನಕ್ಷತ್ರ,  ಐಂದ್ರ ಯೋಗ,  ಗರಜ ಕರಣ,   ಸೆಪ್ಟೆಂಬರ್ 20  ,  ಬಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಮಧ್ಯಾಹ್ನ  2 ಗಂಟೆ  52 ನಿಮಿಷದಿಂದ ಸಂಜೆ 4 ಗಂಟೆ 24 ನಿಮಿಷದವರೆಗೂ ಇದೆ.
ಅಧಿಕ ಮಾಸದಲ್ಲಿ ಯಾವ ರೀತಿಯ ಶುಭ ಕಾರ್ಯಗಳನ್ನು ಕೂಡ ಮಾಡುವುದಿಲ್ಲ. ಜನರು ಸಣ್ಣ ಪುಟ್ಟ ಸಮಸ್ಯೆಗಳನ್ನೇ ದೊಡ್ಡದಾಗಿ ಮಾಡಿಕೊಂಡು ದೊಡ್ಡ ಸಮಸ್ಯೆ ಎಂದು  ಕೊರಗುತ್ತಾರೆ.  ತಮ್ಮ ಕನಸುಗಳು ಆಸೆ ಪಟ್ಟದ್ದು ನೆರವೇರದೆ ಇದ್ದಾಗ ನಮ್ಮ ಜೀವನ ಇಷ್ಟೇ ಎಂದು ಕೊರಗರು ಆರಂಭಿಸುತ್ತೀರ ಆದರೆ ಒಂದು ಬಾಗಿಲು ಮುಚ್ಚಿದರೆ ಭಗವಂತ ಇನ್ನು ಒಂಬತ್ತು ಬಾಗಿಲುಗಳನ್ನು ನಮಗಾಗಿ ತೆರೆದಿರುತ್ತಾರೆ. ಆದ್ದರಿಂದ  ಚಿಂತಿಸದೇ ಗುರಿಯ ಕಡೆ ಗಮನ ಕೊಡಿ. ಆಗುವುದು ಹಾಗೇ ಆಗುತ್ತದೆ ಅದನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ.  ಚಿಂತೆ ಮಾಡುವುದರಿಂದ ಅನೇಕ ರೀತಿಯ ಕಾಯಿಲೆಗಳು ಇಂದು ಜಾಸ್ತಿಯಾಗುತ್ತಲೇ ಇದೆ.  ಹೀಗಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿರುವವರಿಗಾಗಿ ಒಂದು ಅದ್ಭುತವಾದ ಸಂಕಲ್ಪವನ್ನು ಗುರೂಜಿ ರವರು ತಿಳಿಸಿಕೊಡಲಿದ್ದಾರೆ.  ನಿಮ್ಮ ಮನೆ ದೇವರಿಗೆ ಅದರಲ್ಲೂ ಹೆಣ್ಣು ದೇವರಿಗೆ ಅತಿ ಮುಖ್ಯವಾಗಿ ಜೊತೆಗೆ ಚಿಕ್ಕದಾದ ಕುಳಿತಿರುವ ಲಕ್ಷ್ಮಿ ವಿಗ್ರಹವನ್ನು ಮನೆಗೆ ತಂದು ಪ್ರತಿ ನಿತ್ಯ ಧೂಪ ನೈವೇದ್ಯ ವಿಟ್ಟು ಪೂಜೆ ಮಾಡಿ. ಶುಕ್ರವಾರ ದೇವಿಗೆ ಒಂದು ಬಟ್ಟಲು ಮಲ್ಲಿಗೆ ಹೂವನ್ನು ತೆಗೆದುಕೊಂಡು ಬಂದು ವಿಷ್ಣು ಸಹಸ್ರನಾಮವನ್ನು ಅಥವಾ ಲಕ್ಷ್ಮೀ ಸಹಸ್ರ  ನಾಮವನ್ನು ಕೇಳುತ್ತಾ ಒಂದೊಂದೇ ಹೂವನ್ನು ದೇವಿಗೆ ಅರ್ಪಿಸಿ.  ಹೀಗೆ ಸುಮಾರು ನಲವತ್ತು ಎಂಟು ದಿನಗಳ ಕಾಲ ಪೂಜೆ ಮಾಡಿ ಆಗ ಬದಲಾವಣೆ ನಿಮಗೇ ತಿಳಿಯುತ್ತದೆ. ಈ ಸಂಕಲ್ಪದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೊವನ್ನು ಸಂಪೂರ್ಣವಾಗಿ ನೋಡಿ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚಂದ್ರ ರಾಹು ಸಾರದಲ್ಲಿ ಇರುವುದರಿಂದ ಎಚ್ಚರಿಕೆ, ಇನ್ಫೆಕ್ಷನ್ ಗಳಾಗುವ ಸಂಭವವಿದೆ ಆರೋಗ್ಯದ ಕಡೆ ಹೆಚ್ಚು  ಗಮನ ಕೊಡಿ. ಸ್ವಲ್ಪ ಒತ್ತಡದ ಛಾಯೆ ಇದೆ.

Advertisement

ವೃಷಭ ರಾಶಿ : ಬಹು ವಿಶೇಷವಾಗಿರುವಂತಹ ಅದ್ಭುತವಾದ ದಿನ.  ತೊಂದರೆ ಏನೂ ಇಲ್ಲ. ಅಂತಹ ಶತ್ರುಗಳನ್ನಾದರೂ ಮಣಿಸುವಂತಹ ದಿನ ಸ್ವಲ್ಪ ವಾಗ್ ದೋಷವಿದೆ ಎಚ್ಚರಿಕೆ.

ಮಿಥುನ ರಾಶಿ : ಪ್ರಯಾಣದಲ್ಲಿ ಸ್ವಲ್ಪ ಜಾಗೃತೆ,  ಭೂಮಿಯ ವಿಚಾರದಲ್ಲಿ ಸ್ವಲ್ಪ ಜಾಗ್ರತೆ, ದೂರದ ಪ್ರಯಾಣ ಬೇಡ ವಾಹನಗಳ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದಿರಿ.

ಕರ್ಕಾಟಕ ರಾಶಿ : ಚೆನ್ನಾಗಿದೆ ತಾಯಿಯ ಆರೋಗ್ಯದ ಕಡೆ ಗಮನ ಕೊಡಿ.

ಸಿಂಹ ರಾಶಿ : ಚೆನ್ನಾಗಿದೆ ಪ್ರಬಲವಾದ  ವಾಂಚನ. ನಂದೇ ನಾನು ಎಂಬ  ಭಾವ ಸ್ವಲ್ಪ ಕಡಿಮೆ ಮಾಡಿಕೊಳ್ಳಿ.  ದುರ್ಗಾದೇವಿಗೆ ಸಂಧ್ಯಾಕಾಲದಲ್ಲಿ ದೀಪವನ್ನು ಹಚ್ಚಿ.

ಕನ್ಯಾ ರಾಶಿ : ಚೆನ್ನಾಗಿದೆ, ಯಾವುದೋ ಒಂದು ಅತೀತವನ್ನು ನೆನಪಿಸಿಕೊಂಡು ಗಾಬರಿಯಾಗುವುದುಂಟು. ಭೂಮಿಯ ವಿಚಾರದಲ್ಲಿ ಸ್ವಲ್ಪ ಓಡಾಟವಿದೆ ದುಡುಕಬೇಡಿ ಕುಜ ವಕ್ರ.

ತುಲಾ ರಾಶಿ : ಸಂಗಾತಿಯ ವಿಚಾರ ಪಾಲುದಾರಿಕೆ ವಿಚಾರ ಪಾರ್ಟ್ನರ್ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ದುರ್ಗಾ ದೇವಿಗೆ ದೀಪವನ್ನು ಹಚ್ಚಿ.

ವೃಶ್ಚಿಕ ರಾಶಿ : ಮನಸ್ಸಿಗೆ ಸ್ವಲ್ಪ ಗಲಿಬಿಲಿ  ಸುತ್ತಾಟವಿರುತ್ತದೆ.

ಧನಸ್ಸು ರಾಶಿ : ಶತ್ರುಗಳಿಂದ ಅತಿಯಾದ ಲಾಭದ ದಾರಿಯ ಲಾಭಕ್ಕೆ ಒಳಗಾಗುತ್ತೀರಿ ಎಚ್ಚರಿಕೆ. ಪ್ರಾಪರ್ಟಿ ತೆಗೆದುಕೊಳ್ಳುವ ವಿಚಾರದಲ್ಲಿ ಮನೆ ಬದಲಾಯಿಸುವ ವಿಚಾರದಲ್ಲಿ ಸ್ವಲ್ಪ ನಿಧಾನ ಮಾಡಿ.

ಮಕರ ರಾಶಿ : ಚೆನ್ನಾಗಿದೆ ಕಲಾವಿದರು ಟೆಕ್ನಿಷಿಯನ್ ಪೊಲೀಸ್ ಲಾಯರ್ ಆಗಿದ್ದರೆ  ಇಂದು ನಿಮಗೆ ಬಹುದೊಡ್ಡ ಹಂಟಿಂಗ್ .

ಕುಂಭ ರಾಶಿ : ಚೆನ್ನಾಗಿದೆ ನಿಮ್ಮ ಗೌರವ ಗತ್ತು ತೂಕಕ್ಕೆ ತಕ್ಕಂತ ಬದುಕು ನಿಮ್ಮದು.

ಮೀನ ರಾಶಿ : ನಿಮ್ಮ ಆರೋಗ್ಯದ ಕಡೆ ಮತ್ತು ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.

All Rights reserved Namma Kannada Entertainment.

Advertisement
Share this on...