ಹೆಸರು ಹಾಳು ಮಾಡುವಂತವರಿಗೆ ಬುದ್ಧಿ ಕಲಿಸುವ ಶಕ್ತಿ ಈ ರಾಶಿಯವರಿಗಿಂದು ಇರಲಿದೆ…

in ಜ್ಯೋತಿಷ್ಯ 188 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು, ಆಷಾಢ ಮಾಸೆ, ಶುಕ್ಲ ಪಕ್ಷದ ದಶಮಿ ತಿಥಿ, ಸ್ವಾತಿ  ನಕ್ಷತ್ರ,  ಶಿವಯೋಗ,  ತೈತುಲ ಕರಣ ಜೂನ್ 30   ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ ಉಲ್ಲೇಖ ಮಾಡಿಲ್ಲ.

Advertisement

ಮಕ್ಕಳ ಪರೀಕ್ಷೆಯ ಒತ್ತಡ ತಳಮಳ:

Advertisement

ಎಲ್ಲಾ ಮಕ್ಕಳು ಪರೀಕ್ಷೆಯ ಒತ್ತಡ ತಳಮಳ ಗೊಂದಲದಲ್ಲಿದ್ದಾರೆ ಅದರ  ಮಧ್ಯೆ ಕರೋನಾ ಎಂಬ ಸಾಂಕ್ರಾಮಿಕ ರೋಗದ ಹರಡುವಿಕೆ ಹೆಚ್ಚುತ್ತಲೇ ಇದೆ.  ಗುರು ನೀಚ, ವಕ್ರ ಅಲ್ಲದೆ ಕರ್ಮಾಧಿಪತಿ ಕೂಡ ವಕ್ರವಾಗಿದ್ದಾನೆ. ಗೊತ್ತಿದ್ದು ಕೂಡ ನಾವು ನಮ್ಮ ಮಕ್ಕಳನ್ನು ಹುಲಿಯ ಬೋನಿಗೆ ತಳ್ಳಿದಂತಾಗಿದೆ. ಒಳ್ಳೆಯ ಮಕ್ಕಳಿದ್ದರೆ ಮನೆಯಲ್ಲಿ ನೆಮ್ಮದಿ ಇರುತ್ತದೆ, ಒಳ್ಳೆಯ ತಂದೆ ಇದ್ದರೆ ಧೈರ್ಯ ಸಿಗುತ್ತದೆ,  ಒಳ್ಳೆಯ ತಾಯಿ ಇದ್ದರೆ ಶಕ್ತಿ ಸಿಗುತ್ತದೆ,  ಒಳ್ಳೆಯ ಸಂಗಾತಿ ಇದ್ದರೆ ಒಳ್ಳೆಯ ಮಿತ್ರ ಇದ್ದಂತೆ, ಎಲ್ಲಾ ತಂದೆ ತಾಯಿಗಳು ಅವರವರ ಮಕ್ಕಳಿಗಾಗಿಯೇ ಬದುಕಿರುತ್ತಾರೆ, ದಯವಿಟ್ಟು ಎಲ್ಲರೂ ಮಕ್ಕಳ ಕಡೆ ಗಮನ ಕೊಡಿ ಎಂದು ಗುರೂಜಿ ಕಳಕಳಿಯಿಂದ ಹೇಳಿದ್ದಾರೆ. ಹೈಪರ್ ಆಕ್ಟಿವಿಟಿ , ಲೋವರ್  ಆಕ್ಟಿವಿಟಿ,  ಸಿಟ್ಟಾಗುವುದು,  ತೊದಲುವಿಕೆ ,  ಮಗು ಸುಮ್ಮನೇ ಕೂರುವುದು, ಈ ರೀತಿ ಮಕ್ಕಳಿದ್ದರೆ ಅವರಿಗೆ ಬ್ರಹ್ಮ ಶಂಕರವನ್ನು ದಿನದಲ್ಲಿ ಎರಡು ಬಾರಿ ತಿನ್ನಿಸುವುದು ಒಳ್ಳೆಯದು.  ಮಕ್ಕಳಿಗೆ ಕೆಮ್ಮು ಬರದಂತೆ ತಡೆದು ಸರಾಗವಾಗಿ ಉಸಿರಾಟ ಮಾಡಲು ಬ್ರಹ್ಮ ಶಂಕರದಲ್ಲಿರುವ  ಮಂಡೂಕಪರ್ಣಿ ಚೂರ್ಣ  ಸಹಾಯ ಮಾಡುತ್ತದೆ.  ಮಕ್ಕಳಿಗೆ ಸ್ಟ್ರೆಂತ್ ಕೊಡುತ್ತದೆ.  ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬ್ರಹ್ಮಶಂಕರ ಪಡೆಯಲು 08045549465 / 08045549466 ಗೆ ಕರೆ ಮಾಡಿ

Advertisement

 

Advertisement

 

ನಿಮ್ಮ ರಾಶಿಗಳ ಫಲ ಹೀಗಿದೆ :

ಮೇಷ ರಾಶಿ : ಚೆನ್ನಾಗಿದೆ, ತೊಂದರೆ ಇಲ್ಲ, ಚಂದ್ರ ರಾಹು ಸಾರದಲ್ಲಿದ್ದು ರಾಹು ಕುಜನ ಸಾರದಲ್ಲಿ ಇರುವುದರಿಂದ ವೃತ್ತಿಪರವಾಗಿ ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆಯುತ್ತೀರಿ, ಗೆಲುವನ್ನು ಪಡೆಯುತ್ತೀರಿ, ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಿ,   ಅಲ್ಲದೆ  ಒಡಹುಟ್ಟಿದವರ ವಿಚಾರದ ಕಡೆ ಸ್ವಲ್ಪ ಗಮನ ವಹಿಸಿ.

ವೃಷಭ ರಾಶಿ : ಸ್ವಲ್ಪ ಆತುರ ಮನೆಯ ವಿಚಾರದಲ್ಲಿ ಕುಟುಂಬದ ವಿಚಾರದಲ್ಲಿ ಅಲ್ಲಿ ಒಂದು ಸಣ್ಣ ತಲ್ಲಣ ಜಾಗೃತರಾಗಿರಿ . ದುಡುಕಬೇಡಿ ಎಷ್ಟೇ ಕಷ್ಟ ಬಂದರೂ ಒಳ್ಳೆಯದನ್ನೇ ಮಾತನಾಡಿ , ಇದರಿಂದ ಗೆಲುವು ನಿಮ್ಮದಾಗುತ್ತದೆ.

ಮಿಥುನ ರಾಶಿ : ಟೆಕ್ನಿಕಲ್,  ಮೆಕ್ಯಾನಿಕಲ್,  ಎಂಜಿನಿಯರಿಂಗ್,  ಈ ವಿಭಾಗದಲ್ಲಿ ಇರುವವರಿಗೆ ಒತ್ತಡವಿದ್ದರೂ ಕೂಡ ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ.

 

ಕರ್ಕಾಟಕ ರಾಶಿ : ಭೂಮಿ ವಿಚಾರ,  ಒಡಹುಟ್ಟಿದವರ ವಿಚಾರದಲ್ಲಿ ತಲ್ಲಣ , ಅನ್ ಎಕ್ಸ್ಪೆಕ್ಟೆಡ್ ಆಗಿ ಗುಡ್ ನ್ಯೂಸ್ ಮತ್ತು ಬ್ಯಾಡ್ ಗಳೆರಡೂ ಕೂಡ ಬರುತ್ತವೆ ಜಾಗೃತರಾಗಿರಿ.

ಸಿಂಹ ರಾಶಿ : ಚೆನ್ನಾಗಿದೆ ತೊಂದರೆ ಏನೂ ಇಲ್ಲ, ಸೂರ್ಯನಿಗೆ ಇನ್ನು ಸ್ವಲ್ಪ  ರಾಹು ಪ್ರಭಾವವಿದೆ, ಬುಧ ವಕ್ರವಾಗಿದ್ದಾನೆ , ಆತಂಕ ಬೇಡ ಚೆನ್ನಾಗಿದೆ.

ಕನ್ಯಾ ರಾಶಿ : ದರ್ಪಯುತವಾದ,  ಅಧಿಕಾರಯುತವಾದ ದಿನ, ಯುದ್ಧೋನ್ಮಾದವಾಗಿರುತ್ತೀರಿ, ಜಗಳಕ್ಕೆ ಯಾರಾದರೂ ಮೇಲೆ ಹೋಗುತ್ತೀರಿ ಎಚ್ಚರಿಕೆ.

ತುಲಾ ರಾಶಿ : ವಾಹನ ಭೂಮಿ ಅತ್ಯಂತ ಜವಾಬ್ದಾರಿಯುತವಾದ ಕೆಲಸ ಒತ್ತಡವಾಗಿ ಬಿಡುತ್ತದೆ, ಮನೆಯಲ್ಲಿ ಪುಟ್ಟದಾದ ತುಪ್ಪದ ದೀಪವನ್ನು ಹಚ್ಚಿ , ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ,

 

ವೃಶ್ಚಿಕ ರಾಶಿ : ಸ್ವಲ್ಪ ನಿದ್ರೆ,  ಸ್ವಲ್ಪ ಸೋಮಾರಿ, ಸ್ವಲ್ಪ ಟೆನ್ಷನ್, ಎನ್ನಿಸಿದರೂ ಕೂಡಾ ಸ್ವಲ್ಪ ತಳಮಳವಾದರೂ ಚಂದ್ರ ಹನ್ನೆರಡನೇ ಮನೆಯಲ್ಲಿ ಇರುವುದರಿಂದ ಮನಸ್ಸಿನಲ್ಲಿ ಸ್ವಲ್ಪ ಕಳವಳವಿರುತ್ತದೆ. ಭಾಗ್ಯಾಧಿಪತಿ ಹನ್ನೆರಡನೇ ಮನೆಯಲ್ಲಿ ವ್ಯಯ ಭಾವ,  ಖರ್ಚು, ವೆಚ್ಚಗಳು ಹೆಚ್ಚಾಗುತ್ತವೆ.  ಮನಸ್ಸಿನಲ್ಲಿ  ಓಂ  ಗಂ ಗಣಪತಯೇ ನಮಃ ಎಂದು ಹೇಳಿಕೊಳ್ಳಿ , ಗಣಪತಿಯ ಸೇವೆ,  ಗಣಪತಿಯ ಪೂಜೆ ಮಾಡಿಕೊಳ್ಳಿ ಸಮಾಧಾನವಾಗುತ್ತದೆ,

ಧನಸ್ಸು ರಾಶಿ : ಬಹು ದೊಡ್ಡ ಲಾಭದ ನಿರೀಕ್ಷೆಯಲ್ಲಿ ಇದ್ರೆ,  ತುಂಬಾ ದೊಡ್ಡದಾದ ಕೆಲಸ ಕಾರ್ಯ ಯೋಜನೆಗಳಿಗೆ ಹೆಜ್ಜೆ ಇಟ್ಟಿದ್ದೀರಿ ಎಂದಾದರೆ ಅದು ನಡೆಯುತ್ತದೆ ತುಂಬಾ ಒಳ್ಳೆಯದಾಗುತ್ತದೆ, ಶುಭ ಸುದ್ದಿಯನ್ನು ಕೇಳುತ್ತೀರಿ .

 

 

ಮಕರ ರಾಶಿ : ಉದ್ಯೋಗದಲ್ಲಿ ನೆಮ್ಮದಿ,  ಸಮಾಧಾನ,  ಕಲಾವಿದರಾಗಿದ್ದರೆ ಶುಭ ಸುದ್ದಿಯನ್ನು ಕೇಳುವಿರಿ.

ಕುಂಭ ರಾಶಿ : ತಂದೆ ತಾಯಿಯ ಆರೋಗ್ಯದ ಕಡೆ ಗಮನ ಕೊಡಿ , ಯಾವುದೋ ಒಂದು ಅನ್ ಎಕ್ಸ್ಪೆಕ್ಟೆಡ್ ಮೂಲೆಯಿಂದ ನಿಮಗೆ ಶುಭ ಸುದ್ದಿಯೊಂದು ಬರುತ್ತದೆ.

ಮೀನ ರಾಶಿ : ಪಂಚಮಾಧಿಪತಿ ಅಷ್ಟಮದಲ್ಲಿರುವುದರಿಂದ ಮಕ್ಕಳ ಕಡೆ ಗಮನ ಕೊಡಿ,  ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ , ಕಷ್ಟಪಟ್ಟು ಪಡೆದು ಕೊಂಡಂತಹ ಹೆಸರನ್ನು  ಹಾಳು ಮಾಡುವಂತಹ ವಿಕೃತ ಮನಸ್ಸುಗಳಿರುತ್ತವೆ. ಆದ್ದರಿಂದ ಹೆಸರಿನ ಕಡೆ ಗಮನ ಕೊಡಿ. ಆ ಹೆಸರನ್ನು ಹಾಳು ಮಾಡುವಂತಹವರಿಗೆ ಬುದ್ಧಿ ಕಲಿಸುವಂತಹ ಶಕ್ತಿ ನಿಮಗಿರುತ್ತದೆ ಆತಂಕ ಬೇಡ.

Advertisement
Share this on...