ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ…

in ಜ್ಯೋತಿಷ್ಯ 48 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ ತ್ರಯೋದಶಿ,  ಜ್ಯೇಷ್ಠ ನಕ್ಷತ್ರ,  ಶುಭಯೋಗ,  ತೈತುಲ ಕರಣ ಜುಲೈ 03  ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ  ಮಧ್ಯಾಹ್ನ 3 ಗಂಟೆ,  44  ನಿಮಿಷದಿಂದ,  5 ಗಂಟೆ,  15 ನಿಮಿಷದವರೆಗೂ ಇದೆ.

Advertisement

ಕಾಮನ್ ಸೆನ್ಸ್ ಇದ್ದರೆ ಸಾಕು ಒಳ್ಳೆಯ ಜೀವನ:
ನೋಡುವುದು,  ಮನನ ಮಾಡಿಕೊಳ್ಳುವುದು ಮತ್ತೆ  ಮತ್ತೆ ಪರಿಶೀಲನೆ ಮಾಡಿಕೊಂಡು ಮುಂದೆ ಹೆಜ್ಜೆ ಇಟ್ಟರೆ ಬದುಕಿನಲ್ಲಿ ಯಶಸ್ಸನ್ನು ಕಾಣಬಹುದು. ಯಾರು ತನ್ನ ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಾನೋ ಅವನು ಗ್ರಾಮವನ್ನು ನಡೆಸಿಕೊಂಡು ಹೋಗುತ್ತಾನೆ,  ಯಾರು ಗ್ರಾಮವನ್ನು ನಡೆಸಿಕೊಂಡು ಹೋಗುತ್ತಾರೋ ಅವರು ರಾಜ್ಯವನ್ನು ನಡೆಸಿಕೊಂಡು ಹೋಗುತ್ತಾರೆ,  ಯಾರು ರಾಜ್ಯವನ್ನು ನಡೆಸಿಕೊಂಡು ಹೋಗುತ್ತಾರೊ  ಅವರು ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ . ಅದಕ್ಕೆ ಬೇಕಾಗಿರುವುದು ಅತಿಯಾದ ಬುದ್ಧಿವಂತಿಕೆಯಲ್ಲ. ಅದಕ್ಕೆ ಬೇಕಾಗಿರುವುದು ಒಂದು ಸಣ್ಣ ಕಾಮನ್ಸೆನ್ಸ್  ಮಾತ್ರ.   ಅತಿಯಾದ ಬುದ್ಧಿವಂತರ ಜೊತೆ ಜೀವನ ಮಾಡಲು ತುಂಬಾ ಕಷ್ಟ . ಸಣ್ಣ ಪುಟ್ಟ ಕಾಮನ್ ಸೆನ್ಸ್ ಇದ್ದರೆ ಸಾಕು ಒಳ್ಳೆಯ ಜೀವನವನ್ನು ನಡೆಸಬಹುದು. ಆದ್ದರಿಂದ ನನಗೆ ಬುದ್ಧಿವಂತಿಕೆ ಇಲ್ಲ ಎಂಬ ಭಾವನೆಯನ್ನು ಬಿಟ್ಟು ಎಲ್ಲರೂ ಒಳ್ಳೆಯ ಜೀವನವನ್ನು ನಡೆಸಿ.

Advertisement

Advertisement

ಪಾಸಿಟಿವ್ ಥಿಂಕಿಂಗ್  ಬೆಳೆಸಿಕೊಳ್ಳಿ:
ಕರೋನಾ ದಿಂದ ದೂರವಿರಲು ಆದಷ್ಟು ಒಬ್ಬೊಬ್ಬರ  ನಡುವೆ ಅಂತರವನ್ನು ಕಾಪಾಡಿಕೊಳ್ಳಿ. ಆರೋಗ್ಯವಂತ ಆಲೋಚನೆಗಳನ್ನು ಹೆಚ್ಚಾಗಿ ಮಾಡಿ,  ಬ್ರೇಕಿಂಗ್ ನ್ಯೂಸ್ ಗಳನ್ನು ನೋಡುವುದನ್ನು ಸ್ವಲ್ಪ ಆದಷ್ಟು ಕಡಿಮೆ ಮಾಡಿ. ನೆಗೆಟಿವ್ ಥಿಂಕಿಂಗ್ ಗಳನ್ನು ಮನಸ್ಸಿನಿಂದ ತೆಗೆದು ಹಾಕಿ,  ಪಾಸಿಟಿವ್ ಥಿಂಕಿಂಗ್  ಅನ್ನುಬೆಳೆಸಿಕೊಳ್ಳಿ ಇದರಿಂದ  ಅರ್ಧ ರೋಗ ವಾಸಿ ಆದಂತೆಯೆ. ಮನೆಯ ಮುಂದೆ ಒಂದು ತುಳಸಿ ಗಿಡವಿದ್ದರೆ ಅದು ಸಾವಿರಾರು ವೈರಸ್ಗಳನ್ನು ನಿಯಂತ್ರಿಸುತ್ತದೆ ಎಂಬುದು ನಮ್ಮೆಲ್ಲರಿಗೂ ಹಿಂದಿನಿಂದಲೂ  ಗೊತ್ತಿರುವ ವಿಚಾರ. ಶಂಕರಾಮೃತವನ್ನು ತೆಗೆದುಕೊಂಡವರಿಗೆ ಒಂದು ಹಸ್ತಾಮೃತವನ್ನು ಉಚಿತವಾಗಿ ಕೊಡಲಾಗುತ್ತದೆ ಈ ಹಸ್ತಾಮೃತವು  ತುಳಸಿ ಎಕ್ಸ್ಟ್ರ್ಯಾಕ್ಟ್ ನಿಂದ ತಯಾರಿಸಲಾಗಿದೆ. ತಾಮ್ರದ ಚೊಂಬಿನಲ್ಲಿ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯಿರಿ. ಇದು ಆರೋಗ್ಯವನ್ನು ಹೆಚ್ಚಿಸುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Advertisement

.

 ನಿಮ್ಮ ರಾಶಿಗಳ ಫಲ ಹೀಗಿದೆ :

ಮೇಷ ರಾಶಿ : ಚೆನ್ನಾಗಿದೆ, ಚಂದ್ರ ಬುಧನ ಸಾರದಲ್ಲಿದ್ದಾನೆ. ವಿಪರೀತ ತಲೆ ಕೆಡಿಸಿಕೊಂಡು ತಲೆನೋವು ತಂದಿಟ್ಟು ಕೊಳ್ಳುತ್ತೀರಾ, ತಲೆಭಾರ, ಕಿವಿ ನೋವು,  ಬಾಯಿ ಹುಣ್ಣು, ಉಷ್ಣ ವೈಪರೀತ್ಯ ಮುಂತಾದವಗಳಾಗುತ್ತವೆ ಆರೋಗ್ಯದ ಕಡೆಗೆ ಗಮನ ಕೊಡಿ,  ಮಿಕ್ಕಂತೆ ಏನೂ ತೊಂದರೆ ಇಲ್ಲ, ವಿಪರೀತವಾದ ಮುಂದಾಲೋಚನೆ ಬೇಡ.

ವೃಷಭ ರಾಶಿ : ಚೆನ್ನಾಗಿದೆ, ಬುದ್ಧಿ ಉಪಯೋಗಿಸಿ ಮಾಡಿಸುವ ಕೆಲಸಗಳಲ್ಲಿ ಯೋಚಿಸಿ,  ಪರಾಮಾರ್ಶಿಸಿ  ಪರೀಕ್ಷಿಸಿ ಮಾಡುವ ಕೆಲಸಗಳಲ್ಲಿ ಒಳ್ಳೆಯ ಫಲ ಸಿಗುತ್ತದೆ, ಅಭಿವೃದ್ಧಿಯಾಗುತ್ತದೆ .

ಮಿಥುನ ರಾಶಿ : ಚಂದ್ರ ಬುಧನ ಸಾರದಲ್ಲಿದ್ದಾನೆ, ಆ ಬುಧ ನಿಮ್ಮ ಮನೆಯಲ್ಲೇ ಇದ್ದಾನೆ, ಮಿಥುನ ರಾಶಿಯವರ  ಮೇಧಾಶಕ್ತಿ ಅಪಾರ. ನೀವು ಎಲ್ಲರಿಗೂ ಅಡ್ವೈಸ್ ಮಾಡುತ್ತೀರಾ ಆದರೆ ನೀವೇ ಅಳವಡಿಸಿಕೊಳ್ಳುವುದಿಲ್ಲ, ಅಳವಡಿಸಿಕೊಳ್ಳಿ ಗೆಲುವು ನಿಮ್ಮದೆ.

ಕರ್ಕಾಟಕ ರಾಶಿ : ಬುಧ ಹನ್ನೆರಡನೇ ಮನೆಯಲ್ಲಿದ್ದಾನೆ,   ಹಣಕಾಸಿನ ವಿಚಾರ ಲೆಕ್ಕಾಚಾರದಲ್ಲಿ ತುಂಬಾ ತಲೆ ಕೆಡಿಸಿಕೊಳ್ಳುತ್ತೀರಿ,  ತೊಂದರೆ ಏನೂ ಇಲ್ಲ, ಭಗವಂತ ಯಾರಿಗೆ ಎಷ್ಟು ಕೊಡಬೇಕು ಎಂಬುದನ್ನು ಮೊದಲೇ ನಿರ್ಧಾರ ಮಾಡಿರುತ್ತಾನೆ ಆದ್ದರಿಂದ  ಯೋಚನೆ ಮಾಡುವ ಮೊದಲು ಬದಲು ನಿಮ್ಮ ಕಾರ್ಯಗಳನ್ನು ನೀವು ಸರಿಯಾಗಿ ಮಾಡಿ.

ಸಿಂಹ ರಾಶಿ : ವಿಶೇಷವಾದ ದಿನ,  ಕಾಸಿಗೆ ತಕ್ಕಂತೆ ಕಜ್ಜಾಯ, ಕಜ್ಜಾಯಕ್ಕೆ ತಕ್ಕಂತೆ ಖರ್ಚು,  ತೊಂದರೆ ಏನೂ ಇಲ್ಲ.

ಕನ್ಯಾ ರಾಶಿ : ಗಲಿಬಿಲಿಗೆ ಒಳಗಾಗುತ್ತೀರಿ , ಬ್ಯಾಲೆನ್ಸ್ ಮಾಡಲು ಒದ್ದಾಡುತ್ತೀರಿ ಕೆಲವೊಮ್ಮೆ ಬ್ಯಾಲೆನ್ಸ್ ಗಿಂತ  ಇಂಬ್ಯಾಲೆನ್ಸ್ ಆಗುವುದು ಒಳಿತು.

ತುಲಾ ರಾಶಿ : ವೃತ್ತಿಪರವಾಗಿ ಏನೂ ತೊಂದರೆ ಇಲ್ಲ ಸ್ವಲ್ಪ ಕನ್ಫ್ಯೂಷನ್ ಒಳಗಾಗುತ್ತೀರಿ,  ಒತ್ತಡಕ್ಕೊಳಗಾಗುತ್ತೀರಾ,  ಆತಂಕ ಪಟ್ಟುಕೊಳ್ಳಬೇಡಿ, ವಿಷ್ಣು  ಸಹಸ್ರ ನಾಮವನ್ನು ಪಠಿಸಿ .

ವೃಶ್ಚಿಕ ರಾಶಿ : ನಿಮಗೂ ಬುಧನಿಗೆ ಆಗುವುದಿಲ್ಲ,  ಸ್ವಲ್ಪ ಲೆಕ್ಕಾಚಾರ, ಆಹಾರದಲ್ಲಿ ಸ್ವಲ್ಪ ಏರುಪೇರಾಗುತ್ತದೆ ಆದರೂ ನಿಭಾಯಿಸಿಕೊಂಡು ಹೋಗುತ್ತೀರ.

ಧನಸ್ಸು ರಾಶಿ : ಚೆನ್ನಾಗಿದೆ, ಆತಂಕ ಪಡುವಂತಹದ್ದು ಏನೂ ಇಲ್ಲ,  ಬುಧ ಕೇಂದ್ರದಲ್ಲಿ ಕುಳಿತಿರುವುದರಿಂದ ಬೇರೆಯವರ ಮಾತನ್ನು ಕೇಳಿ ನೀವು ಮುಂದಕ್ಕೆ ಹೆಜ್ಜೆ ಇಡಬೇಕಾಗುತ್ತದೆ, ಒತ್ತಡವೇನೂ ಇಲ್ಲ,  ಶುಭ ಸುದ್ದಿಯೊಂದನ್ನು ಕೇಳುತ್ತೀರಿ.

ಮಕರ ರಾಶಿ : ತುಂಬಾ ಬುದ್ಧಿ ಉಪಯೋಗಿಸಿ ಯೋಚನೆ ಮಾಡುತ್ತೀರಿ ಅದು ಬೇಕಾಗಿಲ್ಲ , ಆಗ ಗೆಲುವು ನಿಮ್ಮದೆ.

ಕುಂಭ ರಾಶಿ : ನಿಮ್ಮ ಮೇಧಾ ಶಕ್ತಿಗೆ, ಜ್ಞಾನ ಶಕ್ತಿಗೆ , ಬುದ್ಧಿಶಕ್ತಿಗೆ ತಕ್ಕಂತೆ ಪ್ರತಿಫಲವನ್ನು ನೋಡುವಂತಹ ದಿನ.

ಮೀನ ರಾಶಿ : ಸ್ವಲ್ಪ ಒತ್ತಡದ ದಿನ, ಆದರೂ ತೊಂದರೆ ಏನೂ ಇಲ್ಲ, ಸಪ್ತಮಾಧಿಪತಿ ಸ್ಥಾನದಲ್ಲಿ ಚಂದ್ರನಿದ್ದಾನೆ ಪೂರ್ವಪುಣ್ಯಾಧಿಪತಿ ಭಾಗ್ಯ ಸ್ಥಾನದಲ್ಲಿ ಇರುವುದರಿಂದ,  ನಿಮ್ಮ ಯೋಗ್ಯತೆಗೆ ತಕ್ಕಂಥ ಕೆಲಸವನ್ನು ಮಾಡುತ್ತಿದ್ದೀರಿ,  ಅದಕ್ಕೆ ತಕ್ಕಂಥ ಪ್ರತಿಫಲವನ್ನು ನೋಡುವಂತಹ ದಿನ.

Advertisement
Share this on...