ದಿನ ಭವಿಷ್ಯ 05 ಜುಲೈ 2020 – ಶ್ರೀ ಶ್ರೀ ರವಿಶಂಕರ್ ಗುರೂಜಿ

in ಜ್ಯೋತಿಷ್ಯ 219 views

ಬೆಳಿಗ್ಗೆ ಎದ್ದ ತಕ್ಷಣ ಮತ್ತು ಸಂಜೆ ಪ್ರತಿ ದಿನ ಒಂದು ಲೋಟ ಬಿಸಿ ನೀರಿಗೆ ಒಂದು ಚಿಟಿಕೆ ಮೆಂತ್ಯಪುಡಿ,  ಒಂದು ಚಿಟಿಕೆ ಕಪ್ಪು ಜೀರಿಗೆ ಪುಡಿ, ಓಂ ಕಾಳು ಒಂದು ಚಿಟಿಕೆ , ಎರಡು ತುಳಸಿ ಎಲೆ ಇವುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ಪ್ರತಿನಿತ್ಯ ತುಳಸಿ ಗಿಡದ ಹತ್ತಿರ ಒಂದು ಪುಟ್ಟ ದೀಪವನ್ನು ಹಚ್ಚಿ. ರಾಗಿ ಹಿಟ್ಟು ಸ್ವಲ್ಪ,  ಅರಿಶಿನ ಸ್ವಲ್ಪ,  ಸ್ವಲ್ಪ ಒಣಗಿದ ತುಳಸಿ ಎಲೆಗಳನ್ನು ಸೇರಿಸಿ  ಮನೆಯಲ್ಲಿ  ದಿನಕ್ಕೆ ಮೂರು ಬಾರಿ ಧೂಪ ಹಾಕಿ.  ತುಂಬಾ ಥಂಡಿ  ಇದ್ದವರು ಬಲಗಡೆ ಮೂಗನ್ನು ಮುಚ್ಚಿ ಎಡಗಡೆ ಮೂಗಿನಲ್ಲಿ ಉಸಿರನ್ನು ಎಳೆದುಕೊಂಡು ಉಸಿರನ್ನು ಬಿಡಿ ಇದರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ.  ಸೂರ್ಯ ನಾಡಿ  ಉದ್ರೇಕ ಮಾಡಿಕೊಂಡರೆ ದೇಹ ಬಿಸಿಯಾಗುತ್ತದೆ.

Advertisement

Advertisement

ನಿಮ್ಮ ರಾಶಿಗಳ ಫಲ ಹೀಗಿದೆ:

Advertisement

ಮೇಷ ರಾಶಿ : ಐಯಿ೦ದ್ರ ಯೋಗದ ಈ ದಿನ ಚೆನ್ನಾಗಿದೆ ಚಂದ್ರ ಶುಕ್ರನ ಸಾರದಲ್ಲಿದ್ದಾನೆ , ಚೆನ್ನಾಗಿದೆ , ಶುಕ್ರ ವಕ್ರತೆಯನ್ನು ಬಿಟ್ಟಿರುವುದರಿಂದ ಮನೆಯಲ್ಲಿ ಖುಷಿ , ಸಂತೋಷ,  ಸಂಭ್ರಮವಿರುತ್ತದೆ,  ಎಲ್ಲ ರಾಶಿಯವರು ಕೂಡ ಇಂದು ಒಂದು ತುಪ್ಪದ ದೀಪವನ್ನು ಹಚ್ಚಿ ಒಳ್ಳೆಯದು,  ಯಾರೂ ಭಯಪಡುವುದು ಆತಂಕ ಪಡುವುದು ಬೇಡ.

Advertisement

ವೃಷಭ ರಾಶಿ :  ಒಂದು ಸಣ್ಣ ಗೋಪೂಜೆಯನ್ನು ಮಾಡಿಕೊಳ್ಳಿ,  ಖರ್ಚು ವೆಚ್ಚದ ಬಗ್ಗೆ ಸ್ವಲ್ಪ ಆತಂಕವಿರುತ್ತದೆ,  ಗುರು ಬೇರೆ ಅಷ್ಟಮಕ್ಕೆ ಬರುತ್ತಿದ್ದಾನೆ , ಸ್ವಲ್ಪ ತಳಮಳವಾಗುತ್ತದೆ, ಗೋ ಪೂಜೆ  ಮಾಡಿಕೊಳ್ಳಿ ಒಳ್ಳೆಯದಾಗುತ್ತದೆ.

ಮಿಥುನ ರಾಶಿ : ಯೋಗದ ದಿನ,  ಶುಭಕರ ದಿನ,  ಆನಂದದ ದಿನ,  ರಮಣೀಯ ದಿನ,  ಖುಷಿಯ ದಿನ.

 

ಕರ್ಕಾಟಕ ರಾಶಿ : ಆತ್ಮೀಯರೊಂದಿಗೆ ಮಾತುಕತೆಯನ್ನು ಆಡುವ,  ಅಕ್ಕ ತಂಗಿ ಎಲ್ಲರ ನೋಡಿ ಭೋಜನಕೂಟದ  ಯೋಗವಿದೆ.

ಸಿಂಹ ರಾಶಿ : ಚೆನ್ನಾಗಿದೆ,  ಚಂದ್ರ ಶುಕ್ರನ ಸಾರದಲ್ಲಿ ಇರುವುದರಿಂದ  ಅಲಂಕಾರ,  ಮನೆಯಲ್ಲಿ ಜವಾಬ್ದಾರಿ,  ನೀಟ್ ಮಾಡುವುದು, ಇದರ ಪ್ರಭಾವ, ಅಕ್ಕ ಇದ್ದರೆ  ಅಕ್ಕನ ವಿಚಾರದಲ್ಲೂ ಅಥವಾ ಅಕ್ಕನ ಮನೆಯವರ ವಿಚಾರದಲ್ಲೂ ಒಂದು ಸಣ್ಣ ಮನಸ್ತಾಪ .

ಕನ್ಯಾ ರಾಶಿ : ಚಂದ್ರ ಶುಕ್ರನ ಸಾಲರದಲ್ಲಿದ್ದು,  ಶುಕ್ರ ಭಾಗ್ಯದ ಸ್ಥಾನದಲ್ಲಿರುವುದರಿಂದ ಅದ್ಭುತ ಜೀವನ ಕಲರ್ಫುಲ್ ಆಗಿರುತ್ತದೆ,  ಆರೋಗ್ಯವಂತ ಮನಸ್ಸಿದ್ದರೆ ಆರೋಗ್ಯವಂತ ದೇಹವಿರುತ್ತದೆ .  ಆರೋಗ್ಯ ಕೂಡ ಚೆನ್ನಾಗಿರುತ್ತದೆ

 

ತುಲಾ ರಾಶಿ : ಅಂದುಕೊಂಡ ಕೆಲಸಗಳೆಲ್ಲ ಅಚ್ಚುಕಟ್ಟಾಗಿ ನಡೆಯುತ್ತದೆ, ಧೈರ್ಯವಂತರಾಗಿ ಮುಂದಕ್ಕೆ ಹೆಜ್ಜೆ ಹಾಕಿ.

ವೃಶ್ಚಿಕ ರಾಶಿ : ಸಂತೋಷದ ದಿನ,  ತುಂಟತನದ ದಿನ, ತುಂಬಾ ತುಂಟತನ ಒಳ್ಳೆಯದಲ್ಲ,  ಕಂಟ್ರೋಲ್ನಲ್ಲಿ ಇರಿ,  ಅತಿಯಾದ  ಸಿಹಿ ಒಳ್ಳೆಯದಲ್ಲ.

ಧನಸ್ಸು ರಾಶಿ : ತೊಂದರೆ ಏನೂ ಇಲ್ಲ,  ಆತಂಕ ಪಡುವಂಥದ್ದೇನೂ ಇಲ್ಲ,  ಚೆನ್ನಾಗಿದೆ.

 

ಮಕರ ರಾಶಿ : ಸ್ವಲ್ಪ ಹೆಂಡತಿಯ ವಿಚಾರದಲ್ಲಿ,  ಸಂಗಾತಿಯ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಇದ್ದರು,  ಮಧ್ಯಾಹ್ನದ ವೇಳೆಗೆ ಸರಿಹೋಗುತ್ತದೆ.

ಕುಂಭ ರಾಶಿ :  ಅದ್ಭುತವಾದ ದಿನ,  ಅರಮಣಿಯ ದಿನ,  ಅಂದುಕೊಂಡ ಕೆಲಸ ಕಾರ್ಯಗಳೆಲ್ಲ,  ಯೋಜನೆಗಳೆಲ್ಲ,  ಕಾರ್ಯ ರೂಪುಗೊಳ್ಳುವಂತ ಯಶಸ್ವಿ  ದಿನ, ಅದ್ಭುತವಾದ ದಿನ.

ಮೀನ ರಾಶಿ : ಸ್ವಲ್ಪ ತಳಮಳವಿರುತ್ತದೆ,   ಸ್ತ್ರೀ ವಿಚಾರದಲ್ಲಿ,  ಕಲಾವಿದರಾಗಿದ್ದರೆ ಸ್ವಲ್ಪ ಆತಂಕ ತಳಮಳವಿರುತ್ತದೆ.

Advertisement
Share this on...