ಹಲ್ಲು ಉಜ್ಜುವುದು ಕೂಡ ಒಂದು ಕಲೆ ! ಬ್ರಶ್ ಗೆ ಪೇಸ್ಟ್ ಯಾವ ರೀತಿ ಹಾಕಿಕೊಳ್ಳಬೇಕು ….

in ಜ್ಯೋತಿಷ್ಯ 469 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು,  ಅಧಿಕ ಮಾಸೆ, ಶುಕ್ಲ ಪಕ್ಷದ ಷಷ್ಠಿ ತಿಥಿ,  ಅನುರಾಧ ನಕ್ಷತ್ರ,  ನಿಷ್ ಕುಂಭ ಯೋಗ ,  ಕೈಲವ ಕರಣ,  ಸೆಪ್ಟೆಂಬರ್ 22  , ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ  ಬೆಳಗ್ಗೆ 9 ಗಂಟೆ 33 ನಿಮಿಷದಿಂದ 11ಗಂಟೆ 3 ನಿಮಿಷದವರೆಗೂ ಇದೆ.

Advertisement

ಪ್ರತಿನಿತ್ಯ ದಿನಕ್ಕೆ ಎರಡು ಬಾರಿಯಂತೆ ಬೆಳಗ್ಗೆ ಮತ್ತೆ ರಾತ್ರಿ ಊಟ ಆದ ಮೇಲೆ ಬ್ರಷ್ ಅನ್ನು ಮಾಡಬೇಕು. ಬೆಳಗ್ಗೆ ಬ್ರಶ್ ಮಾಡದೇ ಇದ್ದರೆ ನಿಮ್ಮ ಬಾಯಲ್ಲಿರುವ ಕೀಟಾಣುಗಳಿಂದ  ಬೇರೆಯವರಿಗೆ ತೊಂದರೆಯಾಗುತ್ತದೆ.  ರಾತ್ರಿ ವೇಳೆ ಬ್ರಶ್ ಮಾಡದೇ ಇದ್ದರೆ ನಿಮ್ಮ ಆರೋಗ್ಯ ಹಾಳಾಗುತ್ತದೆ. ಬೇವಿನ ಕಡ್ಡಿಯ ಇದ್ದಿಲು, ಉಪ್ಪು, ಲವಂಗದ ಪುಡಿಯನ್ನು ಮಿಕ್ಸ್ ಮಾಡಿ ಅದನ್ನು ಸೇರಿಸಿ ಬೇವಿನ ಕಡ್ಡಿಯಿಂದ ಹಲ್ಲನ್ನು  ಮೃದುವಾಗಿ ತಿಕ್ಕಿ. ಹಲ್ಲುಗಳನ್ನು ಉಜ್ಜುವುದು ಕೂಡ ಒಂದು ರೀತಿಯ ಕಲೆ. ಬ್ರಶ್ಶಿಗೆ ಪೇಸ್ಟ್ ಅನ್ನು ಯಾವ ರೀತಿ ಹಾಕಿಕೊಳ್ಳಬೇಕು ಇನ್ನು ಮುಂತಾದ ವಿಷಯಗಳನ್ನು ಗುರೂಜಿರವರು ತಿಳಿಸಿಕೊಟ್ಟಿದ್ದಾರೆ ಅದನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

Advertisement

 ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚಂದ್ರ ವಿಶೇಷವಾಗಿ ಶನಿ ಸಾರದಲ್ಲಿದ್ದು ಶನಿ ಸೂರ್ಯ ನ ಸಾರದಲ್ಲಿ ಇರುವುದರಿಂದ ನೀವು ಎಷ್ಟು ಕಷ್ಟ ಪಡುತ್ತಿರೋ ಅಷ್ಟು ಫಲ ನಿಮಗೆ ದೊರೆಯುತ್ತದೆ.  ಕಾಸಿಗೆ ತಕ್ಕಂತ ಕಜ್ಜಾಯ. ಹತ್ತಿರದಲ್ಲಿ ವಿಷ್ಣು ದೇವಾಲಯವಿದ್ದರೆ ಹೋಗಿ ಬನ್ನಿ ಮತ್ತೆ ವಿಷ್ಣು ಸಹಸ್ರನಾಮವನ್ನು ಕೇಳಿ ಒಳ್ಳೆಯದಾಗುತ್ತದೆ.

ವೃಷಭ ರಾಶಿ : ಹಿರಿಯರ ವಿಚಾರದಲ್ಲೊಂದು ಭಿನ್ನಾಭಿಪ್ರಾಯ,  ಶಾಂತಚಿತ್ತವಾಗಿ ಇರಿ.

ಮಿಥುನ ರಾಶಿ : ಆಗದ ಕೆಲಸಗಳಲ್ಲೂ ಕೂಡ ಪ್ರಗತಿಯನ್ನು ಕಾಣುವ ಯೋಗ ಇರುವಂತಹ ದಿನ.  ಸರ್ಕಾರಿ ಮತ್ತು ಸ್ವಂತ ಕೆಲಸ ಮಾಡುವ ವವರು ಪ್ರಗತಿ  ಕಾಣುವಂತಹ ದಿನ.

ಕರ್ಕಾಟಕ ರಾಶಿ :  ಚೆನ್ನಾಗಿದೆ ಮಕ್ಕಳ ವಿಚಾರದಲ್ಲೊಂದು ಸಣ್ಣ ಟೆನ್ಷನ್ ಇದೆ ಅದನ್ನು ಬಿಟ್ಟರೆ ಮಿಕ್ಕಂತೆ ಯಾವುದೇ ರೀತಿಯ ತೊಂದರೆ ಇಲ್ಲ.

ಸಿಂಹ ರಾಶಿ : ತಾಯಿಯ ಆರೋಗ್ಯದ ಕಡೆ  ಗಮನ ಕೊಡಿ,  ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸ್ವಲ್ಪ ಒತ್ತಡಕ್ಕೊಳಗಾಗುತ್ತೀರ. ನೀವು ವಿದ್ಯಾರ್ಥಿಗಳಾಗಿದ್ದರೆ ಎಷ್ಟೇ ಓದಿದರೂ ತಲೆಗೆ ಹತ್ತುತ್ತಿಲ್ಲ ಎಂಬ ಗೊಂದಲಕ್ಕೊಳಗಾಗುತ್ತೀರ. ಮಕ್ಕಳಿಗೆ ಬ್ರಹ್ಮ  ಶಂಕರವನ್ನುತಿನ್ನಿಸಿ ಮಕ್ಕಳು ಚುರುಕಾಗುತ್ತಾರೆ.

ಕನ್ಯಾ ರಾಶಿ : ಚೆನ್ನಾಗಿದೆ ಚಂದ್ರ ವಿಶೇಷವಾಗಿ ಅನುರಾಧ ನಕ್ಷತ್ರದಲ್ಲಿದ್ದು ಶನಿ ಪಂಚಮದಲ್ಲಿ ಇರುವುದರಿಂದ ನೀವು ಏನು ಕಷ್ಟಪಟ್ಟಿದ್ದರು ಅದಕ್ಕೆ ಪ್ರತಿಫಲವನ್ನು ಪಡೆಯುವಂತಹ ದಿನ,  ಗೌರವ ಸನ್ಮಾನಗಳು ದೊರೆಯುತ್ತವೆ.

ತುಲಾ ರಾಶಿ : ಮಾಡೋದಾ, ಬೇಡವ ಈ ರೀತಿಯಾದ ಮಂದಗತಿಯ  ಭಾವವಿರುತ್ತದೆ. ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ ಹೊರಗಡೆ ಹೋಗಿ ಎಲ್ಲ ಕೆಲಸವೂ ಸುಲಲಿತವಾಗುತ್ತದೆ.

ವೃಶ್ಚಿಕ ರಾಶಿ : ಇಂದು ಕೆಲಸದ ಮೇಲೆ ಸ್ವಲ್ಪ ಸೋಮಾರಿತನ ಭಾವ ಇರುತ್ತದೆ ಆದ್ದರಿಂದ ಬೆಳಿಗ್ಗೆ ಎದ್ದ  ತಕ್ಷಣ ಜೇನು ತುಪ್ಪವನ್ನು ಸೇವಿಸಿ ಉತ್ತರಾಭಿಮುಖವಾಗಿ ಕುಳಿತುಕೊಂಡು ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿ. ಪ್ರಾಣಾಯಾಮವನ್ನು ಮಾಡುವುದರಿಂದ ನಿಮಗೆ ಚೈತನ್ಯ ತುಂಬಿಸುತ್ತದೆ.

ಧನಸ್ಸು ರಾಶಿ : ಸ್ವಲ್ಪ ಖರ್ಚಾಗುತ್ತದೆ ಅದನ್ನು ಬಿಟ್ಟರೆ ಯಾವುದೇ ರೀತಿಯ ತೊಂದರೆ ಇಲ್ಲ , ಶುಭ ಸುದ್ದಿಯೊಂದು ಬರುತ್ತದೆ.

ಮಕರ ರಾಶಿ : ಚೆನ್ನಾಗಿದೆ ಅಂದುಕೊಂಡ ಕೆಲಸ ಕಾರ್ಯಗಳೆಲ್ಲ ವನ್ನೂ ಕೂಡ ಸಾಧಿಸಿ ಕೊಳ್ಳುತ್ತೀರಾ ಆದರೆ ಸ್ವಲ್ಪ ಸಿಡಿಸಿಡಿ ಎಂದು ಕೋಪಗೊಳ್ಳುತ್ತಿರುತ್ತೀರ.

ಕುಂಭ ರಾಶಿ : ರಾಜಕಾರ್ಯ ಮಹಾ ಕಾರ್ಯಗಳಿಗೆ ಸ್ವಲ್ಪ ಖರ್ಚಾಗುವ ಪ್ರಭಾವ ಇರುವಂತಹ ದಿನವಾದರೂ ನಮಗೆ ಬೇಕಾದ್ದನ್ನು ಸಾಧಿಸಿಕೊಳ್ಳುವಂತಹ ದಿನ.

ಮೀನ ರಾಶಿ : ಪೂರ್ವ ಪುಣ್ಯಾಧಿಪತಿ ಭಾಗ್ಯಸ್ಥಾನದಲ್ಲಿರುವುದರಿಂದ ತಂದೆ ತಾಯಿಯಿಂದ ಸಹಕಾರ ದೊರೆಯುತ್ತದೆ. ಅವರಿಗೆ ಸಂಬಂಧಪಟ್ಟ ವಿಚಾರಗಳಲ್ಲಿ,  ಕೆಲಸ ಕಾರ್ಯಗಳಲ್ಲಿ ಪ್ರಗತಿ ಮತ್ತೆ ತಂದೆ ತಾಯಿಗಳನ್ನು ನೋಡಿಕೊಳ್ಳುವ ಸುಯೋಗ ಕೂಡ ನಿಮಗೆ ದೊರೆಯುತ್ತದೆ.

All Rights reserved Namma Kannada Entertainment.

Advertisement
Share this on...