ravishanker guruji

ಕೊಬ್ಬರಿ ಎಣ್ಣೆ ಬಳಸಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಗೊತ್ತಾ?

in ಜ್ಯೋತಿಷ್ಯ 847 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಶುಕ್ಲ  ಪಕ್ಷದ ದ್ವಾದಶಿ ತಿಥಿ, ಪೂರ್ವಾಭಾದ್ರಾ  ನಕ್ಷತ್ರ, ವ್ಯಾಘಟ ಯೋಗ, ಬಾಲವ ಕರಣ, ಅಕ್ಟೋಬರ್ 28  ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

Advertisement

ಆರೋಗ್ಯಂ ಪರಮ ಭಾಗ್ಯಂ. ಯಾರು ಎಷ್ಟು ದೊಡ್ಡ ಅಧಿಕಾರದಲ್ಲಿದ್ದರು ಎಷ್ಟೇ ಅಂತಸ್ತನ್ನು ಹೊಂದಿದ್ದರೂ ಕೂಡ ಇಷ್ಟು ದೊಡ್ಡ ಗೌರವವನ್ನೂ ಪಡೆದಿದ್ದರು ನಿಮ್ಮ ಬಳಿ ದುಡ್ಡು ಇದ್ದರೂ ಇಲ್ಲದೇ ಇದ್ದರೂ ಅನುಭವಿಸಲು ಆರೋಗ್ಯ ಚೆನ್ನಾಗಿ ಇಲ್ಲದಿದ್ದರೆ ಯಾವುದೇ ಪ್ರಯೋಜನವಿಲ್ಲಾ. ಆರೋಗ್ಯವೇ ಕಲಿಯುಗದ ಪ್ರಪ್ರಥಮ ಧ್ಯೇಯವಾಗಿರಬೇಕು. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ 1ಟೀ ಸ್ಪೂನ್ ನಷ್ಟು ಶುದ್ಧ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಕೊಬ್ಬರಿ ಎಣ್ಣೆಯು ತಾಯಿಯ ಎದೆ ಹಾಲಿನಲ್ಲಿರುವಷ್ಟೇ ಪೋಷಕಾಂಶಗಳನ್ನು  ಹೊಂದಿದೆ. ಈ ರೀತಿ ಸುಮಾರು 6ತಿಂಗಳ ಕಾಲ ಸೇವಿಸಿದ ನಂತರ ನಿಮ್ಮ ಡೈಜೆಸ್ಟ್ ಸಿಸ್ಟಂ, ನರ್ವಸ್ ಸಿಸ್ಟಮ್, ಗ್ಯಾಸ್ಟಿಕ್ ಪ್ರಾಬ್ಲಮ್ಸ್ ನಿವಾರಣೆಯಾಗುತ್ತದೆ. ಶಕ್ತಿರೋಗನಿರೋಧಕ  ಕೂಡ ಹೆಚ್ಚುತ್ತದೆ. ವೈರಸ್ ನ ದಾಳಿಯಿಂದ ಬಳಲುತ್ತಿರುವವರು ಮತ್ತು ವಯಸ್ಸಾದವರು ರೋಗನಿರೋಧಕ ಶಕ್ತಿ ಕೊರತೆ ಇರುವವರು ಶುದ್ಧ ಕೊಬ್ಬರಿ ಎಣ್ಣೆಯನ್ನು ಸೇರಿಸಿ. ಕೊಬ್ಬರಿ ಎಣ್ಣೆ ಚರ್ಮಕ್ಕು ಕೂಡ ಅತ್ಯುತ್ತಮವಾದುದು.  ಪರಿಶುದ್ಧವಾದ ತೆಂಗಿನ ಎಣ್ಣೆ ಯಾವುದೇ ರೀತಿಯ ಸುವಾಸನೆ ಇರುವುದಿಲ್ಲ. ಎಳ್ಳೆಣ್ಣೆ ಯನ್ನು ಸೇವಿಸಿದರೆ  ಹೀಟು,  ಸಾಸಿವೆ ಎಣ್ಣೆ ಯನ್ನ ಸೇವಿಸಿದರೆ ಮಹಾ ಹೀಟು, ಹರಳೆಣ್ಣೆಯನ್ನು ಸೇವಿಸಿದರೆ ತಂಪು ಆದರೆ ಕೊಬರಿ ಎಣ್ಣೆಯನ್ನು ಸೇವಿಸಿದರೆ ತಂಪು ಮತ್ತು ಉಷ್ಣ  ಎರಡೂ ಕೂಡ ಆಗುವುದಿಲ್ಲ. ಶುದ್ಧ ಕೊಬ್ಬರಿ ಎಣ್ಣೆಯನ್ನು ಪ್ರತಿದಿನ ಸೇವಿಸುವುದರಿಂದ ದೇಹ ಹಗುರವೆನಿಸುತ್ತದೆ. ಹೀಗೆ ಪ್ರತಿದಿನ ಕೊಬ್ಬರಿಎಣ್ಣೆಯನ್ನ ಸೇವಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷರಾಶಿ : ಗುರು ಸಾರದಲ್ಲಿ ಚಂದ್ರನಿರುವುದರಿಂದ ಶುಭ ಕಾರ್ಯದಲ್ಲಿ ಪ್ರಗತಿಯ ಸಿಂಚನವಾಗುತ್ತದೆ. ಅದ್ಭುತವಾದ ದಿನ ತೊಂದರೆಯೇನೂ ಇಲ್ಲ ಚೆನ್ನಾಗಿದೆ. ನಿಮ್ಮ ಮಕ್ಕಳ ಕಡೆ ತಲೆಕೆಡಿಸಿಕೊಳ್ಳುತ್ತೀರಾ, ಒಳ್ಳೆಯದೇ ಆಗುತ್ತದೆ ಗಾಬರಿ ಪಡಬೇಡಿ.

ವೃಷಭರಾಶಿ : ಹಣಕಾಸು, ಮಕ್ಕಳು, ಫೀಸು, ಮದುವೆ ಯಾವುದೋ 1ಶುಭ ಕಾರ್ಯದ ಚಿಂತೆಯಲ್ಲಿ ತೊಳಲಾಡುತ್ತಿದ್ದೀರಿ     ತೊಂದರೆಯಿಲ್ಲ ನಿಭಾಯಿಸಿಕೊಂಡು ಹೋಗುತ್ತೀರಾ.

ಮಿಥುನ ರಾಶಿ : ಕೇಂದ್ರಾಧಿಪತಿ ದೋಷ ಇರುವುದರಿಂದ ತುಂಬಾ ಒಳ್ಳೆಯವರಾಗಿ ಇರಬಾರದು. ವ್ಯಾಪಾರ ಮಾಡುವವರು ತುಂಬಾ ಒಳ್ಳೆಯವರಾದರೆ ವ್ಯವಹಾರ ಕೆಟ್ಟು ಹೋಗುತ್ತದೆ.

ಕರ್ಕಾಟಕ ರಾಶಿ : ಗುರುವಿನ ನೆರಳು ಮಕ್ಕಳ ನೆರಳು ಪೀರಾಯರ ನೆರಳಿನಿಂದ ಬರುವ ಯಾವುದೇ 1ಉಪದ್ರವದಿಂದ ನೀವು ಗೆಲ್ಲುತ್ತೀರಿ.

ಸಿಂಹ ರಾಶಿ : ದೂರದ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ ಆಗುತ್ತದೆ ಎಂಬುದನ್ನು ಬಿಟ್ಟರೆ ತೊಂದರೆಗಳೇನು ಇಲ್ಲ ಚೆನ್ನಾಗಿದೆ.

ಕನ್ಯಾ ರಾಶಿ : ದೂರದ ಸ್ಥಳದಿಂದ ಶುಭಸುದ್ದಿಯೊಂದು ಬರುತ್ತದೆ ಸಂಗಾತಿಯ ವಿಚಾರದಲ್ಲಿ ಸಣ್ಣ ಕದಲಿಕೆಯನ್ನೂ ಬಿಟ್ಟರೆ,  ತುಂಬಾ ಹತ್ತಿರದವರಿಗೆ ದುಡ್ಡುಕೊಟ್ಟು ನಾಮ ಆಕಿಸಿಕೊಳ್ಳುವ ಸಂಭವವಿದೆ ಎಚ್ಚರಿಕೆ.

ತುಲಾ ರಾಶಿ : ಗುರು ಸುಕ್ರನ  ಶುಕ್ರ ನೀಚನಾಗಿರುವುದರಿಂದ ಮನೆಯಲ್ಲೇನೋ ಅಸಮಾಧಾನ ದಾಂಪತ್ಯದಲ್ಲಿ ಬಿರುಕು, ಕೋರ್ಟು ಮೆಟ್ಟಿಲು,  ಜಗಳ, ಕಲಹಗಳು ಸಂಭವಿಸುತ್ತದೆ ಎಚ್ಚರಿಕೆ. ಮನೆಯಲ್ಲೊಂದು ಅವಸಾನ ಅಪವಿತ್ರ ಮೈತ್ರಿ ಈ ರೀತಿಯಾದ ತೊಂದರೆಗಳುಂಟಾಗುತ್ತವೆ. ಮನೆಯಲ್ಲೊಂದು ಸ್ವಸ್ತಿಕ  ಮತ್ತೊಂದೆಡೆ ಒಳ್ಳೆಯದಾಗುತ್ತದೆ.

ವೃಶ್ಚಿಕ ರಾಶಿ : ತುಂಬಾ ದಿನಗಳ ನಂತರ  ಭೋಜನ ಓಡಾಟ ಜವಾಬ್ದಾರಿ ಖುಷಿ ಸಂಭ್ರಮದ ದಿನ.

ಧನಸ್ಸು ರಾಶಿ : ಚೆನ್ನಾಗಿದೆ ಗುರು ಸಾರದಲ್ಲಿ ಚಂದ್ರನಿದ್ದು ಗುರು ನಿಮ್ಮ ಮನೆಯಲ್ಲೇ ಇರುವುದರಿಂದ ಒಳ್ಳೆಯದೆ ಆದರೆ ಒಂಟಿ ಗುರು ಇರುವುದರಿಂದ ಇದು ನಿಜವೋ ಇಲ್ಲವೋ ಎಂಬ ಭ್ರಮೆ ಪಡುತ್ತೀರಾ.    ಇದ್ದಾಗ ಅನುಭವಿಸಿ ಇದ್ದಾಗ ಯುಗಾದಿ ಇಲ್ಲದಿದ್ದಾಗ ಶಿವರಾತ್ರಿ.

ಮಕರ ರಾಶಿ : ಒಳ್ಳೆಯ ಕಾರ್ಯಕ್ಕೆ ಗೋಸ್ಕರ ಸ್ವಲ್ಪ ಖರ್ಚಾಗುತ್ತದೆ ಜೊತೆಗೆ ಜವಬ್ದಾರಿ ಗೋಸ್ಕರ ಸ್ವಲ್ಪ ಖರ್ಚಾಗುತ್ತದೆ ಅದನ್ನು ಬಿಟ್ಟರೆ ಯಾವುದೇ ರೀತಿಯ ತೊಂದರೆ ಏನೂ ಇಲ್ಲ ಚೆನ್ನಾಗಿದೆ.

ಕುಂಭ ರಾಶಿ : ದೇವಾಲಯ ಅರ್ಚಕ ಪುರೋಹಿತ ದೇವಕಾರ್ಯ ರಾಜಕಾರ್ಯ ಈ ತರದ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವವರಿಗೆ  ಸಮಾಜದಲ್ಲಿ  ಒಳ್ಳೆಯ ಹೆಸರು ಕೀರ್ತಿ ಪ್ರತಿಷ್ಠೆಗಳು ದೊರೆಯುತ್ತದೆ.

ಮೀನ ರಾಶಿ : ತುಂಬಾ ದಿನದ ನಂತರ ನಿಮ್ಮ ಮನೆಯಲ್ಲಿ ಶುಭಕಾರ್ಯದ ಮಾತುಕತೆ ಸಿಂಚನ, ಸಂಪಾದನೆಯ ಓಟ ಶುರುವಾಗುತ್ತದೆ.

Advertisement
Share this on...