ಈ ರಾಶಿಯವರಿಗಿಂದು ಆಕಸ್ಮಿಕ ಧನ ಲಾಭ !

in ಜ್ಯೋತಿಷ್ಯ 773 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್  ಋತು,  ಅಧಿಕ ಮಾಸೆ,  ಶುಕ್ಲ ಪಕ್ಷದ ತ್ರಯೊದಶಿ ತಿಥಿ,  ಶತಭಿಷಾ ನಕ್ಷತ್ರ, ಶೂಲ ಯೋಗ,  ಕೌಲವ ಕರಣ ಸೆಪ್ಟೆಂಬರ್ 29 ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಸಂಜೆ 4 ಗಂಟೆ 57 ನಿಮಿಷದಿಂದ 6ಗಂಟೆ 41ನಿಮಿಷದವರೆಗೂ ಇದೆ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ :  ಚಂದ್ರ ರಾಹು ಸಾರದಲ್ಲಿದ್ದು ರಾಹು ಕುಜನ ಸಾರದಲ್ಲಿರುವುದರಿಂದ ಇಂಜಿನಿಯರಿಂಗ್, ಟೆಕ್ನಿಷಿಯನ್, ಪೊಲೀಸ್ ಮುಂತಾದ ವೃತ್ತಿಯಲ್ಲಿರುವವರಿಗೆ ಭರ್ಜರಿಯಾದ ಬೇಟೆ. ಸ್ವಲ್ಪ ಉಗ್ರತ್ವ ಹೆಚ್ಚಾಗುತ್ತದೆ ಜಾಗ್ರತೆ.

Advertisement

ವೃಷಭ ರಾಶಿ :  ಭೂಮಿಯ ವಿಚಾರದಲ್ಲಿ ದುಡುಕಬೇಡಿ.  ಸೋದರ ಸೋದರಿಯ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ. ನಿಮ್ಮ ಗಂಡನಿಗೆ  ಬಲವಿಲ್ಲದ ಭಾವ ಧೈರ್ಯವಿಲ್ಲ ಅಳುಕು ಇಂತಹ ಭಾವವಿದ್ದರೆ  ರಾಹು ರಕ್ಷಾ ಕವಚವನ್ನು ಕೈಗೆ ಹಾಕಿಸಿ ಆರೋಗ್ಯದಲ್ಲಿ ಏರುಪೇರಿದ್ದರೆ ಶಂಕರಾಮೃತವನ್ನು ಕುಡಿಸಿ. ಪ್ರತಿ ದಿನ ಗಂಡ ಹೆಂಡತಿಯರಿಬ್ಬರು  ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಒಂದು ಬೊಗಸೆ ಬೆಲ್ಲವನ್ನು ಹಾಕಿ ಬನ್ನಿ.

Advertisement

ಮಿಥುನ ರಾಶಿ : ಚೆನ್ನಾಗಿದೆ ಸ್ವಲ್ಪ ದುಡುಕಿನ ಬುದ್ಧಿ ಇರುವುದರಿಂದ ಯಾವುದೇ ರೀತಿಯ ಇನ್ವೆಸ್ಟ್ ಗಳನ್ನು ದುಡುಕಿ ಮಾಡಬೇಡಿ.

ಕರ್ಕಾಟಕ ರಾಶಿ : ಒಡಹುಟ್ಟಿದವರ ವಿಚಾರದಲ್ಲೊಂದು ಅತೃಪ್ತಿ ಅಸಮಾಧಾನ ಅನಾರೋಗ್ಯದ ಛಾಯೆ.

ಸಿಂಹ ರಾಶಿ : ವಿಶೇಷವಾದ ದಿನ, ಗೆಲುವಿನ ದಿನ,  ಪೊಲೀಸ್ ಇಲಾಖೆ,  ರಕ್ಷಣಾ ಇಲಾಖೆ, ರೈತರು,  ಚರ್ಮ ವ್ಯಾಪಾರಿಗಳು,  ಮಾಂಸ ವ್ಯಾಪಾರಿಗಳು,  ಹೈನುಗಾರಿಕೆ, ಈ ವ್ಯವಹಾರದಲ್ಲಿರುವವರಿಗೆ ಪರಿಶ್ರಮದಿಂದ ಲಾಭ.

ಕನ್ಯಾ ರಾಶಿ : ಆಕಸ್ಮಿಕ ಧನ ಲಾಭ,  ಭೂ ಲಾಭವಿದೆ ಆದರೆ ತಲೆಗೆ ಮದ ಪಿತ್ತ ಏರಿದಂತೆ ಆಡುತ್ತೀರಾ.

ತುಲಾ ರಾಶಿ : ಚೆನ್ನಾಗಿದೆ,  ದೂರದ ಪ್ರಯಾಣದಲ್ಲಿ ಸ್ವಲ್ಪ ಜಾಗ್ರತೆ.

ವೃಶ್ಚಿಕ ರಾಶಿ : ನಿವೇಷ್ಟೇ ಬಲಶಾಲಿಯಾದರು, ಒಂದು ದಿನ ನಿಮ್ಮಷ್ಟೇ ಬಲಶಾಲಿ ಎದುರುಗಡೆ ಇರುವವನು ಆಗುತ್ತಾನೆ ಆದ್ದರಿಂದ ಯಾರನ್ನೂ ತುಳಿಯಲು ಹೋಗಬೇಡಿ.

ಧನಸ್ಸು ರಾಶಿ : ಚೆನ್ನಾಗಿದೆ,  ಭೂಮಿ,  ಮನೆ,  ವ್ಯವಹಾರ, ಕುಟುಂಬ ವೃದ್ಧಿ.

ಮಕರ ರಾಶಿ : ಸ್ವಂತ ವ್ಯವಹಾರಗಳಲ್ಲಿ ಸ್ವಲ್ಪ ಪರಿಶ್ರಮ ಜಾಸ್ತಿ ಮಿಕ್ಕಂತೆ ತೊಂದರೆ ಏನೂ ಇಲ್ಲ.

ಕುಂಭ ರಾಶಿ :  ವಿಪರೀತ ಸೆಟ್ಟಿರುತ್ತದೆ ಅದು ಒಳ್ಳೆಯದಲ್ಲ. ನಾನು ಯಾವಾಗಲೂ ಚಿಟ ಚಿಟ ಎನ್ನುವ ಕೋಪದ ಭಾವವಿದ್ದರೆ ಯಾರೂ ಹತ್ತಿರಕ್ಕೆ ಬರುವುದಿಲ್ಲ. ಹೊರಗೆ ಹೋಗುವಾಗ ಒಂದು ಚಮಚ ಜೇನು ತುಪ್ಪವನ್ನು ಸೇವಿಸಿ.

ಮೀನ ರಾಶಿ : ದುಡುಕಿನ ಬುದ್ಧಿ ಬೇಡ ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆ. ದುಡುಕಿನ ಇನ್ವೆಸ್ಟ್ಮೆಂಟ್ ಬೇಡ,  ಬಾಯಿ ಮಾತಿನ ಬಗ್ಗೆ ಸ್ವಲ್ಪ ಎಚ್ಚರಿಕೆ ಇರಲಿ.

All Rights reserved Namma  Kannada Entertainment.

Advertisement
Share this on...