ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದಾದರೆ ಅವಮಾನ ನಿಮ್ಮ ಜೊತೆಯಲ್ಲೇ ಇರಬೇಕು - Namma Kannada Suddi

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದಾದರೆ ಅವಮಾನ ನಿಮ್ಮ ಜೊತೆಯಲ್ಲೇ ಇರಬೇಕು

in ಜ್ಯೋತಿಷ್ಯ 627 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು,  ಆಶ್ವಯುಜ ಮಾಸೆ, ಶುಕ್ಲ  ಪಕ್ಷದ ತ್ರಯೋದಶಿ  ತಿಥಿ, ಉತ್ತರಾಭಾದ್ರಾ  ನಕ್ಷತ್ರ,  ಹರ್ಷನ  ಯೋಗ, ತೈತುಲ  ಕರಣ, ಅಕ್ಟೋಬರ್ 29 , ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಬೆಳಗ್ಗೆ  6 ಗಂಟೆ 38 ನಿಮಿಷದಿಂದ 8 ಗಂಟೆ 25 ನಿಮಿಷದವರೆಗೂ ಇದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದಾದರೆ ಅವಮಾನ ನಿಮ್ಮ ಜೊತೆಯಲ್ಲೇ ಇರಬೇಕು ಆಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಸಾಮಾನ್ಯ ಬದುಕನ್ನು ಬದುಕಬೇಕು ಎಂದಾದರೆ ಅವಮಾನವನದ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಆದರೆ ಎತ್ತರದ ಸ್ಥಾನ, ಉನ್ನತ ವಾದ ತನ್ನ ಸಾಧಿಸ ಬೇಕು ಎಂದಾದರೆ ಆ ಅವಮಾನವನ್ನು ಜೊತೆಯಲ್ಲಿಟ್ಟುಕೊಂಡು ಸಾಗಬೇಕು ಆಗ ಮಾತ್ರ ನಾವು ಉನ್ನತ ಸ್ಥಾನಕ್ಕೇರಲು ಸಾಧ್ಯ. ಇಂದು ತ್ರಯೋದಶಿ ಪ್ರದೋಷದ ದಿನ ಶಿವನ ಪೂಜೆ ಮಾಡಿಕೊಳ್ಳಿ ಅಂತಹ ದೋಷವಿದ್ದರೂ ಕೂಡ ಪರಿಹಾರವಾಗುತ್ತದೆ.

Advertisement


ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಪರಿಶ್ರಮದಿಂದ ಓಡುವಂತಹ ಭಾಗ ತೊಂದರೆಯೇನೂ ಇಲ್ಲ. ಸ್ವಲ್ಪ ಜಾಗ್ರತೆ , ಥಂಡಿ, ಜ್ವರಗಳ ಬಗ್ಗೆ ಎಚ್ಚರಿಕೆಯಿಂದಿರಿ. ಚಂದ್ರ ಶನಿ ಸಾರದಲ್ಲಿ ಇದ್ದಾನೆ, ಮೂಲ ತ್ರಿಕೋನದಲ್ಲಿ ಕೇತು ಇದ್ದಾನೆ, ಇದು ಇನ್ನಷ್ಟು ಭೂಮಿ ಕಂಪಿಸುವುದು ಪ್ರವಾಹ ಆಗುವುದರ ಸಂಕೇತ.

Advertisement

ವೃಷಭ ರಾಶಿ : ಚೆನ್ನಾಗಿದೆ ಇನ್ನೂ ನಿದ್ರೆಯ ಮತ್ತಿನಲ್ಲೇ ಇದ್ದೇವೆ, ಮಾಡುವುದೋ ಬೇಡವೋ ಎಂಬ ಗೊಂದಲದಲ್ಲಿ ಇರುತ್ತೀರಾ.

Advertisement

ಮಿಥುನ ರಾಶಿ : ಕಷ್ಟಪಟ್ಟು ಕೆಲಸ ಕಾರ್ಯಗಳನ್ನೆಲ್ಲ ಮಾಡಿಕೊಂಡು ಹೋಗುತ್ತೀರಾ.

ಕರ್ಕಾಟಕ ರಾಶಿ : ಇಂದು ಕಾರ್ಯ ವಿಳಂಬವಾಗುತ್ತದೆ ಹಾಗಾಗಿ ಹನುಮಂತನ ಕ್ಷೇತ್ರಕ್ಕೆ ಹೋಗಿ ನವನೀತ ಲೇಪನವನ್ನು ಮಾಡಿಸಿ ಬೆಣ್ಣೆಯನ್ನು ಕೊಟ್ಟುಬನ್ನಿ ಒಳ್ಳೆಯದಾಗುತ್ತದೆ.

ಸಿಂಹ ರಾಶಿ : ದೂರ ಪ್ರಯಾಣ ವಿಳಂಬ ದೂರದ ಕೆಲಸಕಾರ್ಯಗಳು ಸ್ವಲ್ಪ ವಿಳಂಬವಾಗುತ್ತದೆ. ಸ್ವಲ್ಪ ಪರಿಶ್ರಮ ಎನಿಸಿದರೂ ಕೂಡ ಶುಭ ಸುದ್ದಿಯೊಂದನ್ನು ಕೇಳುತ್ತೀರ.

ಕನ್ಯಾ ರಾಶಿ : ಚಂದ್ರ ಶನಿ ಸಾರದಲ್ಲಿದ್ದು,  ಶನಿ ಪಂಚಮದಲ್ಲಿರುವುದರಿಂದ ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳು ರೋಡ್ ಟೆಂಡರ್,ಕಾಂಟ್ರ್ಯಾಕ್ಟ್ , ಭೂಮಿ,ಇಂಜಿನಿಯರಿಂಗ್ ದೊಡ್ಡ ದೊಡ್ಡ ದೊಡ್ಡ ಬಿಲ್ಡಿಂಗ್ಗಳ ಡೆವಲಪ್ಮೆಂಟ್ ಮಾಡುತ್ತಿದ್ದರೆ, ರಿಯಲ್ ಎಸ್ಟೇಟ್ ಬಿಸ್ ನೆಸ್ ಮಾಡುತ್ತಿದ್ದರೆ ಅಭಿವೃದ್ಧಿಯ ದಿನ.

ತುಲಾ ರಾಶಿ : ಶತ್ರುವನ್ನಾದರೂ ಕೂಡ ಮಣಿಸಿ ಎಂಥದ್ದಾದರೂ ಅರಗಿಸಿಕೊಳ್ಳುವ ಗೆದ್ದು ಬರುವ ಛಾತಿ, ಗೌರ್ಮೆಂಟಿಗೆ ಕಟ್ಟಬೇಕಾಗಿರುವ ಟ್ಯಾಕ್ಸ ಗಳನ್ನು ಕಟ್ಟದೇ ಇದ್ದರೆ ನಿಮಗೆ ಅದರಿಂದ ದೊಡ್ಡ ಬರೇ ನಿಮಗೆ.

ವೃಶ್ಚಿಕ ರಾಶಿ : ಚೆನ್ನಾಗಿದೆ ಪರಿಪೂರ್ಣ ಭೋಜನ,  ಹಿರಿಯರ ಸೇವೆ, ಹಿರಿಯರ ಆಶೀರ್ವಾದ , ಸ್ವಲ್ಪ ತೊಳಲಾಟ ಎನಿಸಿದರೂ ಹಿರಿಯರ ಆಶೀರ್ವಾದದಿಂದ ಎಲ್ಲಾ ನಿಧಾನವಾಗಿ ಬಗೆಹರಿಯುತ್ತದೆ.

ಧನಸ್ಸು ರಾಶಿ : ಕ್ಷಾತ್ರ ತೇಜಸ್ಸು, ಪೊಲೀಸ್,  ಟ್ರಾಫಿಕ್,  ಸಿಬಿಐ,  ಸಿಐಡಿ ,ರಕ್ಷಣಾ ಇಲಾಖೆಗಳಲ್ಲಿರುವವರಿಗೆ  ಸ್ವಲ್ಪ ತೊಳಲಾಟ.

ಮಕರ ರಾಶಿ : ಪ್ರಯತ್ನದ ಕೆಲಸಗಳಲ್ಲಿ ಯಶಸ್ಸನ್ನು  ನೋಡುವಂತಹ ದಿನ.  ಪ್ರಯತ್ನಪಡಬೇಕು ಬಾಲಾಜಿ ದೇವಸ್ಥಾನಕ್ಕೆ ತಾಂಬೂಲವನ್ನು ಕೊಟ್ಟು ಪೂಜೆ ಮಾಡಿಸಿ ಅರ್ಚನೆ ಮಾಡಿಸಿ ಒಳ್ಳೆಯದಾಗುತ್ತದೆ.

ಕುಂಭ ರಾಶಿ : ದಣಿದು ಓಡಾಡುತ್ತೀರ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತೀರ.  ಗೆಲ್ಲುತ್ತೀರ. ಚೆನ್ನಾಗಿದೆ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.

ಮೀನ ರಾಶಿ : ಖರ್ಚಿನ ದಿನ,  ಮನೆ ಮತ್ತು ಗಾಡಿಗಾಗಿ ಖರ್ಚುಮಾಡುತ್ತೀರ, ಅತಿಯಾದ ಲೆಕ್ಕಾಚಾರ ಬೇಡ,  ಆಗುವ ಖರ್ಚೆಲ್ಲಾ ಒಳ್ಳೆಯದಕ್ಕೆ ಆಗುತ್ತದೆ.

All Rights reserved Namma  Kannada Entertainment.

Advertisement
Share this on...

Latest from ಜ್ಯೋತಿಷ್ಯ

ಜೀವನದಲ್ಲಿ ಯಶಸ್ಸು ದೊರೆಯಲೆಂದು ಹೆಸರು ಬದಲಿಸಿಕೊಂಡಿದ್ದೀರಾ…ಹಾಗಿದ್ದಲ್ಲಿ ನೀವು ಇದನ್ನು ಓದಲೇಬೇಕು

ಯಾವುದೇ ವಸ್ತುವನ್ನಾಗಲೀ, ವ್ಯಕ್ತಿಯನ್ನಾಗಲೀ ಗುರುತಿಸಲು, ಸಂಬೋಧಿಸಲು ಹೆಸರು ಎನ್ನುವುದು ಬಹಳ ಮುಖ್ಯವಾಗಿದೆ. ಹಿಂದಿನ ಕಾಲದಲ್ಲಿ ಅದರಲ್ಲೂ…

Go to Top