ಈ ರಾಶಿಯವರು ಅತಿಯಾದ ಕ್ಯಾಲ್ಕುಲೇಶನ್ ನಿಂದ ನಷ್ಟ ಅನುಭವಿಸುತ್ತೀರ

in ಜ್ಯೋತಿಷ್ಯ 486 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ವರ್ಷ  ಋತು,  ಭಾದ್ರಪದ ಮಾಸೆ,  ಕೃಷ್ಣ  ಪಕ್ಷದ ತ್ರಯೋದಶಿ ತಿಥಿ,  ಆರಿದ್ರಾ ನಕ್ಷತ್ರ,  ಶಿವ ಯೋಗ,  ಗರಜ ಕರಣ ಸೆಪ್ಟೆಂಬರ್ 15  ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ  ಮಧ್ಯಾಹ್ನ  12 ಗಂಟೆ  55 ನಿಮಿಷದಿಂದ 2ಗಂಟೆ  25 ನಿಮಿಷದವರೆಗೂ ಇದೆ.

Advertisement

ಸೆಪ್ಟೆಂಬರ್ 15ರಂದು ಹುಟ್ಟಿದವರು ಮಹಾ ನಿಸ್ಸಿಮರು. ಎಂತದ್ದಾದರೂ  ಅದನ್ನು ಸಾಧಿಸಿ ಕೊಳ್ಳುವಂತಹ ಶಕ್ತಿ ಅವರಿಗಿರುತ್ತದೆ. ಅಪ್ರತಿಮ ಪಟಿತ್ವ, ಗಟ್ಟಿ, ತಾಕತ್ತು, ಶಕ್ತಿ , ಜೀರ್ಣಿಸಿ ಕೊಳ್ಳುವಂತಹ, ಸಾಧಿಸಿ ಕೊಳ್ಳುವಂತಹ ಶಕ್ತಿ ನಿಮಗಿರುತ್ತದೆ. ಒಂದು ಆತ್ಮಕಾರಕ,  ಐದು ಬುದ್ಧಿ ಕಾರಕ, ಒಂಬತ್ತು ರಕ್ತ ಕಾರಕ,  ಮೂರು ಕೂಡ ಸಮ್ಮಿಳಿತವಾದರೆ  ಧಗಧಗಿಸುವ ಭಾವ ಇರುತ್ತದೆ.   ಕ್ರಿಮಿನಲ್ ಲಾಯರ್, ಸಿಬಿಐ,  ಟೆಕ್ನಿಕಲ್ ಎಡ್, ಸಿಬಿಐ ವಿಜ್ಞಾನಿಗಳು ಯಾರೂ ಮಾಡಲಾಗದಂತಹ ಎಕ್ಸ್ಪೆರಿಮೆಂಟ್ ಗಳನ್ನು ಮಾಡುವ ಶಕ್ತಿ ನಿಮಗಿರುತ್ತದೆ. ನಿಮಗೆ ಯಶಸ್ಸು ಕಟ್ಟಿಟ್ಟು ಬುತ್ತಿ.  ಆದರೆ ಯಾವಾಗಲೂ ಯುದ್ಧ ಮಾಡುವುದು ಒಳ್ಳೆಯದಲ್ಲ. ಸೆಪ್ಟೆಂಬರ್ 15ರಂದು ಹುಟ್ಟಿದವರ ಬಗ್ಗೆ ಇನ್ನೂ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚೆನ್ನಾಗಿದೆ ಆದರೆ ಸ್ವಲ್ಪ ಆತುರದ ಬುದ್ಧಿ. ಈ ಬುದ್ಧಿಯನ್ನು ಕಂಟ್ರೋಲ್ ಮಾಡಿಕೊಳ್ಳಿ ಒಳ್ಳೆಯದಾಗುತ್ತದೆ.

ವೃಷಭ ರಾಶಿ : ಬುಧ ಉಚ್ಚಂಗತ ನಾಗಿರುವುದರಿಂದ ಬುದ್ಧಿ ಉಪಯೋಗಿಸಿ  ಮಾಡುವ ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು.

ಮಿಥುನ ರಾಶಿ : ನಿಮ್ಮ ಲೆಕ್ಕಾಚಾರ ಎಂದು ಸರಿಯಾಗಿರುತ್ತದೆ ಯಶಸ್ಸು ನಿಮಗೆ ಸಿಗುತ್ತದೆ ಆದರೆ ದಿಢೀರ್ ದುಡ್ಡು,   ದಿಢೀರ್ ಹೆಸರು,  ಗೌರವಗಳಿಗಾಗಿ ದುಡುಕುತ್ತಿರಿ ಎಚ್ಚರವಾಗಿರಿ.

ಕರ್ಕಾಟಕ ರಾಶಿ : ಅಸಾಮಾನ್ಯ ಬದುಕು ಚೆನ್ನಾಗಿದೆ. ಅಡ್ವಟೈಸಿಂಗ್ ಮಾರ್ಕೆಟಿಂಗ್ ಈ ರೀತಿಯ ಕೆಲಸ ಮಾಡುವವರಿಗೆ ಅನುಕೂಲಕರವಾದ ದಿನ.

ಸಿಂಹ ರಾಶಿ : ರಾಜಗಾಂಭೀರ್ಯ ನಿಮ್ಮ ಮಾತೇ ಬಂಡವಾಳ ನಿಮಗೆ ಗೆಲುವು ತಂದುಕೊಡುತ್ತದೆ.

ಕನ್ಯಾ ರಾಶಿ : ನಿಮ್ಮ ಮಾತು ನೋಟ ಆಲೋಚನೆ ಎಲ್ಲವೂ ತುಂಟತನದಿಂದ ಇರುತ್ತದೆ.

ತುಲಾ ರಾಶಿ : ಅತಿಯಾದ ಕ್ಯಾಲ್ಕುಲೇಶನ್ ನಿಂದ ನಷ್ಟ ಅನುಭವಿಸುತ್ತೀರ.

ವೃಶ್ಚಿಕ ರಾಶಿ : ಚೆನ್ನಾಗಿದೆ ಅಂದರೆ ಬೇರೆಯವರು ನಮ್ಮನ್ನು ತಳ್ಳಲು ಪ್ರಯತ್ನಿಸುತ್ತಾರೆ ಎಚ್ಚರಿಕೆ.

ಧನಸ್ಸು ರಾಶಿ : ಚಿಕ್ಕ ಚಿಕ್ಕ ಸಂಪಾದನೆಯಲ್ಲಿ ಖುಷಿ ಪಡುವಂತಹ ದಿನ . ಚಿಕ್ಕ ಚಿಕ್ಕ ದರಲ್ಲಿ ಇರುವ ಖುಷಿ ಬೇರೆ ಯಾವುದರಲ್ಲೂ ಇಲ್ಲ.

ಮಕರ ರಾಶಿ : ಚಿಲ್ಲರೆ ವ್ಯಾಪಾರ,  ಕಿರಾಣಿ ವ್ಯಾಪಾರ,  ಕಮಿಷನ್ ಏಜೆಂಟ್,  ಇಂತಹ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅನುಕೂಲಕರ ದಿನ.

ಕುಂಭ ರಾಶಿ : ಫೈನಾನ್ಷಿಯಲ್ ಅಡ್ವೈಸರ್,  ಟೆಕ್ನಿಕಲ್ ಅಡ್ವೈಸರ್, ಜ್ಯೋತಿಷ್ಯ ಪ್ರವಚನ ಗುರುಗಳಾಗಿದ್ದರೆ ಅನುಕೂಲಕರವಾಗಿರುವಂಹ ದಿನ.

ಮೀನ ರಾಶಿ : ಚೆನ್ನಾಗಿದೆ,  ಸ್ವಲ್ಪ ಎತ್ತಿಡುವಂತಹ ಲೆಕ್ಕಾಚಾರ ಮಾಡುತ್ತೀರಿ. ಎಲ್ಲವೂ ಶೂನ್ಯ ತುಂಬಾ ಲೆಕ್ಕಾಚಾರಕ್ಕೆ ಎತ್ತಿಡಲು ನಿಂತು ಕೊಳ್ಳಬೇಡಿ.

All Rights reserved Namma Kannada Entertainment.

Advertisement
Share this on...