ಈ ರಾಶಿಯವರಿಗಿಂದು ಆದಾಯದಲ್ಲಿ ಅಭಿವೃದ್ಧಿ..

in ಜ್ಯೋತಿಷ್ಯ 71 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು ಆಷಾಢ ಮಾಸೆ  ಶುಕ್ಲ ಪಕ್ಷದ ಪಂಚಮಿ ತಿಥಿ,  ಪೂರ್ವಭಾದ್ರ ನಕ್ಷತ್ರ,  ಸೌಭಾಗ್ಯ ಯೋಗ,  ತೈತುಲಕರ್ಣ ಜುಲೈ 10  ಶುಕ್ರ ವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ ಉಲ್ಲೇಖ ಮಾಡಿಲ್ಲ.

Advertisement

ರೋಗ ನಿರೋಧಕ ಶಕ್ತಿ :

Advertisement

ಜಂಕ್ ಫುಡ್ ಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಬರುವುದಿಲ್ಲ ಬದಲಾಗಿ ರೋಗಗಳು ಹೆಚ್ಚಾಗುತ್ತವೆ. ಭಯವೇ ಅರ್ಧದಷ್ಟು ಮನುಷ್ಯನನ್ನು ಸಾಯಿಸುತ್ತದೆ,  ಕಾಯಿಲೆಗಳನ್ನು ಹೆಚ್ಚಿಸುತ್ತದೆ.  ದೇಹದಲ್ಲಿ ಕೆಟ್ಟ ಅಣುಗಳು ಮತ್ತು ಒಳ್ಳೆಯ ಅಣುಗಳು ಎರಡೂ ಇರುತ್ತವೆ.  ನಾವು ಒಳ್ಳೆಯದನ್ನು ಮಾಡುತ್ತಾ ಹೋದರೆ ಒಳ್ಳೆಯ ಅಣುಗಳು ಹೆಚ್ಚಾಗುತ್ತಾ ಹೋಗುತ್ತವೆ. ಬೌದ್ಧಿಕವಾಗಿ,  ಸೈದ್ಧಾಂತಿಕವಾಗಿ,  ವೈದಾಂತಿಕವಾಗಿ  ಸ್ಟ್ರಾಂಗ್ ಇರುವವರಿಗೆ ಯಾವುದೇ ಕಾಯಿಲೆಗಳು ಬಾಧಿಸುವುದಿಲ್ಲ. ಮಕ್ಕಳಿಗೆ  ಯಾವುದೇ ರೀತಿಯ ಕಪಟ ಮೋಸ ಏನು ಗೊತ್ತಿಲ್ಲ ನಾಳೆ ಬಗ್ಗೆ ಚಿಂತೆಯಿಲ್ಲ. ಅಮ್ಮನ ಕೈ ತುತ್ತು ತಿನ್ನಬೇಕು ಅಪ್ಪ ಅಮ್ಮನ ಜೊತೆಯಲ್ಲಿರಬೇಕು ಅನ್ನುವುದಷ್ಟೆ ಮಕ್ಕಳಲ್ಲಿ ಇರುತ್ತದೆ. ಮಕ್ಕಳು ಯಾವುದೇ ದ್ವೇಷ ಕೋಪವಿಲ್ಲದೆ ಯಾವಾಗಲೂ  ನಗುತ್ತಾ ಇರುತ್ತಾರೆ . ಅದೇ ರೀತಿ ನಾವು ನಮ್ಮ ಜೀವನದಲ್ಲಿ ನಾಳೆಯ ಬಗ್ಗೆ ಚಿಂತೆಯನ್ನು ಬಿಟ್ಟು ಒಳ್ಳೆಯದನ್ನು ಯೋಚಿಸುತ್ತಾ ಜೀವನವನ್ನು ಸಾಗಿಸಿದರೆ ಆರೋಗ್ಯವಾಗಿರುತ್ತೇವೆ.  ದಿನದಲ್ಲಿ ಕನಿಷ್ಠ ಪಕ್ಷ  ಅರ್ಧ ಗಂಟೆಯಾದರೂ ಮನಸಾರೆ  ನಕ್ಕರೆ ಬಿಪಿ,  ಶುಗರ್ ಇನ್ನೂ ಮುಂತಾದ ಹಲವು ಕಾಯಿಲೆಗಳು ಇದ್ದರೂ ಕೂಡ ಅದು 50% ನಷ್ಟು ಕಡಿಮೆಯಾಗುತ್ತದೆ .  ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯಿರಿ ಆಗ ನಿಮ್ಮೊಳಗೇ  ಇರುವ  ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿ ತಾನಾಗಿಯೇ ಹೆಚ್ಚಾಗುತ್ತದೆ. ಮಕ್ಕಳ ಜತೆ ಪೇಂಟಿಂಗ್,  ಡ್ಯಾನ್ಸಿಂಗ್ ಮಾಡುವ ಮೂಲಕ ಖುಷಿ ಖುಷಿಯಾಗಿ ಆರೋಗ್ಯವಾಗಿ ಇರಿ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ .

Advertisement

Advertisement

ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಗುರು ಸಾರದಲ್ಲಿ ಚಂದ್ರ ಇರುವುದರಿಂದ ಧರ್ಮಬದ್ಧವಾಗಿ,  ನ್ಯಾಯಬದ್ಧವಾಗಿ ಮಾಡುವಂತಹ ಕೆಲಸ ಕಾರ್ಯದಲ್ಲಿ ಅಭಿವೃದ್ಧಿ , ಮನಸ್ಸನ್ನು ಸಮಾಧಾನವಾಗಿ ಇಟ್ಟುಕೊಳ್ಳಿ, ಯಾವುದೇ ಸಮಸ್ಯೆಯೂ ಹೆಚ್ಚು ಕಾಲ ಇರುವುದಿಲ್ಲ, ಆದ್ದರಿಂದ ಯಾರೂ ಗಾಬರಿಗೆ  ಒಳಗಾಗಬೇಡಿ.

ವೃಷಭ ರಾಶಿ : ಟೀಚಿಂಗ್,  ಕನ್ಸಲ್ಟೆಂಟ್, ಈ ಕ್ಷೇತ್ರದಲ್ಲಿ ಇರುವವರಿಗೆ ಸ್ವಲ್ಪ ಪರಿಶ್ರಮ ವಾದರೂ ಪರಿಶ್ರಮಕ್ಕೆ ತಕ್ಕ ಬೆಲೆ ಚೆನ್ನಾಗಿದೆ.

ಮಿಥುನ ರಾಶಿ : ಕುಟುಂಬದಲ್ಲಿ ಒಂದು ಶುಭ ಕಾರ್ಯ.  ಶುಭಕಾರ್ಯದ ಚಿಂತನೆ ಮಾಡುತ್ತಿದ್ದರೆ ಒಂದು ಒಳ್ಳೆಯ ಸುದ್ದಿಯನ್ನು ಕೇಳುವಿರಿ . ಮನೆಯಲ್ಲಿ ಹೊಸದಾಗಿ ಮದುವೆಯಾಗಿದ್ದರೆ ಮಗುವಿನ ಆಗಮನದ ಸಂಭ್ರಮ.

ಕರ್ಕಾಟಕ ರಾಶಿ : ಗುರು ಸಾರದಲ್ಲಿ ಇರುವುದರಿಂದ ಮನೆ,  ಕುಟುಂಬ, ಖರ್ಚು, ಕೋರ್ಟ್ ವಿಷಯಗಳಲ್ಲಿ  ಸ್ವಲ್ಪ ತೊಳಲಾಟ, ಮಾನಸಿಕವಾಗಿ ಒತ್ತಡಕ್ಕೊಳಗಾಗುತ್ತೀರಾ,   ಗಣಪತಿಯ ಅಷ್ಟೋತ್ತರ  ಮಾಡಿ ಒಳ್ಳೆಯದಾಗುತ್ತದೆ .

ಸಿಂಹ ರಾಶಿ : ಚಂದ್ರ ಗುರು ಸಾರದಲ್ಲಿದ್ದು ಗುರು  ವಿಶೇಷವಾಗಿ ಸೂರ್ಯನ ಸಾರದಲ್ಲಿ ಪಂಚಮದಲ್ಲಿದ್ದಾನೆ. ಅಧಿಕಾರ ಯೋಗ , ನಿಮ್ಮ ಅರ್ಹತೆಗೆ ತಕ್ಕಂತೆ ಸ್ಥಾನ ಸಿಗುವಂತಹ ಯೋಗ, ಸಮಾಧಾನದ ದಿನ ಆದರೆ ಹತ್ತಿರದವರಿಂದ ಒಂದು ಸಣ್ಣ ನೋವು.

ಕನ್ಯಾ ರಾಶಿ : ಹೊಂದಾಣಿಕೆಯ ಧಾವಂತದ ಚಿಂತೆಯ ದಿನ,  ತಿಂಡಿಯನ್ನು ತಿನ್ನುವ ಮೊದಲು ಸ್ವಲ್ಪ ತಿಂಡಿಯನ್ನು ನಾಯಿಗೊ ಪಕ್ಷಿಗೊ ಹಾಕಿ ನಂತರ ತಿನ್ನಿ.

 

ತುಲಾ ರಾಶಿ : ಚೆನ್ನಾಗಿದೆ,  ಆದರೆ ಮಕ್ಕಳ ವಿಚಾರದಲ್ಲಿ ಒಂದು ಸಣ್ಣ ನೋವು , ಮಕ್ಕಳಿಗೆ ನೀರಿನ ಗುಣ ಎಲ್ಲದಕ್ಕೂ ಬಹುಬೇಗ ಹೊಂದಿಕೊಳ್ಳುತ್ತವೆ. ಆದ್ದರಿಂದ ಒತ್ತಡ  ಮಾಡಿ ಕೊಳ್ಳಬೇಡಿ.

ವೃಶ್ಚಿಕ ರಾಶಿ : ಚೆನ್ನಾಗಿದೆ ಶುಭ ಕಾರ್ಯಗಳಲ್ಲಿ ಪ್ರಗತಿ , ಯಾವುದೋ ಒಂದು ರೀತಿಯಲ್ಲಿ ಧನದ  ಅಭಿವೃದ್ಧಿಯಾಗುವುದರ  ಸಂಕೇತ, ಕುಟುಂಬದಲ್ಲಿ ಒಂದು ಶುಭ ಸುದ್ದಿ.

ಧನಸ್ಸು ರಾಶಿ : ಚಂದ್ರ  ಗುರು ಸಾರದಲ್ಲಿದ್ದು ಆ ಗುರು ಸೂರ್ಯನ ಸಾರದಲ್ಲಿ ಇರುವುದರಿಂದ ಆ ಸೂರ್ಯ ನಿಮ್ಮನ್ನು ನೇರವಾಗಿ ನೋಡುತ್ತಿರುವುದರಿಂದ ಸ್ವಂತ ಕಾರ್ಯ,  ಧಾರ್ಮಿಕ ಕಾರ್ಯ,  ಅಭಿವೃದ್ಧಿ ಕಾರ್ಯ ಗಳಲ್ಲಿ ಹೆಜ್ಜೆ ಇಡುವಂಥವರಿಗೆ ಇನ್ನಷ್ಟು ಅಭಿವೃದ್ಧಿಯ ಸಂಕೇತ.

ಮಕರ ರಾಶಿ : ನಿಮಗೂ ಗುರುವಿಗೂ ಸ್ವಲ್ಪ ಆಗೋಲ್ಲ,  ಚಂದ್ರ  ಗುರು ಸಾರದಲ್ಲಿ ಇರುವುದರಿಂದ ಹಣಕಾಸಿನ ಮೂಲದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೀರಿ,  ಆದಾಯ ಸಾಕಾಗುವುದಿಲ್ಲ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೀರಿ ಆದ್ದರಿಂದ ಪ್ರತಿನಿತ್ಯ ಇಪ್ಪತ್ತೈದು  ನಿಮಿಷ ಒಂದು ಜಪಮಾಲೆಯನ್ನು ತೆಗೆದುಕೊಂಡು ಓಂ ಗಂ ಗಣಪತಯೇ ನಮಃ ಎಂದು ಜಪ ಮಾಡಿ , 108 ಅಥವಾ  120 ಅಥವಾ  180 ದಿನಗಳ ಕಾಲ ಈ ಮಂತ್ರವನ್ನು ಪಠಿಸಿ ಆತಂಕ ಪಡುವುದು ಬೇಡ ಒಳ್ಳೆಯದಾಗುತ್ತದೆ.

ಕುಂಭ ರಾಶಿ : ಗುರುವಿಗೂ ನಿಮಗೂ ಸಮಾನಾಂತರ,  ಗುರು ಜ್ಞಾನಕಾರಕ , ಶನಿ ಕರ್ಮಕಾರಕ, ಇಬ್ಬರೂ ವಕ್ರವಾಗಿ ಇರುವುದರಿಂದ ಸ್ವಲ್ಪ ಫಾಸ್ಟ್ ಆಗಿ ಓಡುವ ಪ್ರಭಾವ, ನಿಧಾನಿಸಿ  ಆತುರ ಬೇಡ,   ಆದಾಯದಲ್ಲಿ ಅಭಿವೃದ್ಧಿಯಾಗುತ್ತದೆ.

ಮೀನ ರಾಶಿ : ಸ್ವಲ್ಪ ಖರ್ಚಿನ ದಿನ, ಆತಂಕವೇನೂ ಬೇಡ ಆದಾಯಕ್ಕೆ ತಕ್ಕಂತೆ ಖರ್ಚು.

All Rights reserved Namma Kannada Entertainment.

Advertisement
Share this on...