ಈ ರಾಶಿಯವರು ಮೋಸದ ಜಾಲಕ್ಕೆ ಒಳಗಾಗುತ್ತೀರಾ..ಜಾಗೃತೆ

in ಜ್ಯೋತಿಷ್ಯ 120 views

ನಾಳೆ ಆಷಾಢ ಶುಕ್ರವಾರ ಲಕ್ಷ್ಮೀ ದೇವಿಗೆ ಶುಚಿಯಾಗಿ ಇರುವುದು ತುಂಬಾ ಇಷ್ಟ. ಹಾಗಾಗಿ ಮೊದಲು ನಾವು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು. ದುಃಖ ನೋವು ಜಗಳ ಕೋಪ ಮುನಿಸು ಎಲ್ಲವನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ಪೂಜೆಯನ್ನು ಮಾಡಿದರೆ  ಪ್ರತಿಫಲ ದೊರೆಯುವುದಿಲ್ಲ. ಗೃಹ ಲಕ್ಷ್ಮಿಯು ಮನೆಯನ್ನು ಶುಚಿಗೊಳಿಸಿ ಸ್ವಲ್ಪ ಗೋಮಯವನ್ನು ತಂದು ಇಟ್ಟು, ತುಪ್ಪದಿಂದ ಮಾಡಿದ  ನೈವೇದ್ಯವನ್ನು ಇಟ್ಟು , ಒಂದು ಸ್ಪೂನ್ ಆದರೂ ತುಪ್ಪವನ್ನು ಹಾಕಿ ಶುದ್ಧ ಮನಸ್ಸಿನಿಂದ  ದೀಪವನ್ನು ಹಚ್ಚಿ ,  ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಮನಸ್ಸಿನಲ್ಲಿ ಕೆಟ್ಟ ಯೋಚನೆ,  ದ್ವೇಷ,  ಕೋಪದಿಂದ  ಪೂಜೆ ಮಾಡಬಾರದು. ಕಳಸವೇನಾದರೂ ಚೆಲ್ಲಿದರೆ ದುರಂತವಾಗುತ್ತದೆ. ಕಳಸದಲ್ಲಿ ಇಟ್ಟಂತಹ ಕಾಯಿ ಮೊಳಕೆ ಹೊಡೆದರೆ ಅದು ಶುಭದ ಸಂಕೇತ. ಆ ಕಾಯಿ ಕೊಳೆತರೆ ಅದು ಅಶುಭ.

Advertisement


 ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ರಾಹು ನಕ್ಷತ್ರ ಚಂದ್ರ ಸ್ವಲ್ಪ ಜಾಗೃತರಾಗಿರಿ, ಏನೋ ಒಂದು ಎಳೆದಾಟ,  ಭೀತಿ, ಆತಂಕ, ಭಯ  ಆವರಿಸುವುದು, ತೊಂದರೆಗಳ ಸರಮಾಲೆ ಅಪ್ಪಳಿಸುವ ಸೂಚನೆ ಇದೆ ಜಾಗರೂಕರಾಗಿರಿ. ದುರ್ಗಾ ಸ್ತುತಿಯನ್ನು ಪಠಿಸಿ,  ಸಂಧ್ಯಾ ಕಾಲದಲ್ಲಿ ತುಪ್ಪದ ದೀಪವನ್ನು ಹಚ್ಚಿ ಇದು ಸರ್ವ ಕಷ್ಟಗಳನ್ನು ನಿವಾರಣೆ ಮಾಡುತ್ತದೆ.

Advertisement

ವೃಷಭ ರಾಶಿ : ಚೆನ್ನಾಗಿದೆ,  ಪ್ರಬಲ ವಿರೋಧಿಗಳು ಕೂಡ ಇದ್ದಾರೆ, ಯಾರದೋ ಒಂದು ಪ್ರಯೋಗಕ್ಕೆ ಅಂದರೆ ಮೋಸದ ಜಾಲಕ್ಕೆ ಒಳಗಾಗುತ್ತೀರ ಜಾಗೃತೆ , ಯೋಚಿಸಿ ಚಿಂತಿಸಿ ಹೆಜ್ಜೆ ಇಡಿ.

Advertisement

ಮಿಥುನ ರಾಶಿ : ಬಲವಿದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇದೆ. ಭೂಮಿ ವ್ಯವಹಾರ ಟ್ರಾನ್ಸ್ ಪೋರ್ಟೇಷನ್  ವ್ಯವಹಾರಗಳಲ್ಲಿ ಇರುವವರಿಗೆ ಸ್ವಲ್ಪ ಒತ್ತಡ.

 

ಕರ್ಕಾಟಕ ರಾಶಿ : ಚಂದ್ರ ರಾಹು ಸಾರದಲ್ಲಿ ಅಷ್ಟಮದಲ್ಲಿ ಇರುವುದರಿಂದ ಸ್ವಲ್ಪ ಹುಳಿ ಆದರೂ ಆ ರಾಹು ಕುಜನ ಸಾರದಲ್ಲಿ ಇರುವುದರಿಂದ ಮಲಗಲು ಅಗುವುದಿಲ್ಲ,  ಕೂರಲು ಆಗುವುದಿಲ್ಲ, ಮಾಡುವ ಕೆಲಸದಲ್ಲಿ ಏಕಾಗ್ರತೆ ಇರುವುದಿಲ್ಲ, ಕುಟುಂಬದ ಯಜಮಾನ ಅಥವಾ ಯಜಮಾನಿಗೆ ಆರೋಗ್ಯದ ವಿಚಾರದಲ್ಲೂ ಅಥವಾ ಯಾವುದೋ ಒಂದು ರೀತಿಯ ಅಶುಭ ಸುದ್ದಿಯನ್ನು ಕೇಳುವಿರಿ ಆದ್ದರಿಂದ  ಎಂಟು ದೀಪಗಳನ್ನು ಹಚ್ಚಿ ಮನೆಯ ಹೊರಗೆ  ಎಂಟು ದಿಕ್ಕಿನಲ್ಲಿ ಇಡಿ.

ಸಿಂಹ ರಾಶಿ : ಚೆನ್ನಾಗಿದೆ,  ಯಾರನ್ನೂ ನಂಬಬೇಡಿ,  ನಂಬಿಕೆ ದ್ರೋಹ ಒಂದು  ಉಂಟು.

ಕನ್ಯಾ ರಾಶಿ : ತೀರಾ  ಅವಸರ ಬೇಡ,  ನಿಧಾನವಾಗಿ ಹೆಜ್ಜೆ ಇಡಿ.

ತುಲಾ ರಾಶಿ : ಅನ್ಯಾಯದ ಪರಮಾವಧಿ,  ವಿರೋಧಿಗಳೊಂದಿಗೆ ವಾದ ವಿವಾದಗಳಿಗೆ ಇಳಿಯುತ್ತೀರಾ, ಸಂಗಾತಿಯೊಂದಿಗೆ ಕಿರಿಕಿರಿ , ಒಂದು ಬೊಗಸೆ ಉದ್ದು , ಒಂದು ಬೊಗಸೆ ರವೆ,  ಒಂದು ಬೊಗಸೆ ಹುರುಳಿ, ಸ್ವಲ್ಪ ಬೆಲ್ಲ ಹದಿನಾರು ರೂಪಾಯಿಗಳನ್ನು ನವಗ್ರಹದ ಅರ್ಚಕರಿಗೆ ಕೊಟ್ಟು ಆಶೀರ್ವಾದ ಪಡೆದುಕೊಳ್ಳಿ ಸ್ವಲ್ಪ ಸಮಾಧಾನವಾಗುತ್ತದೆ.

ವೃಶ್ಚಿಕ ರಾಶಿ : ವಿರೋಧಿಗಳಿಲ್ಲ,  ಗೆಲುವು ನಿಮ್ಮದೇ , ಒಳ್ಳೆಯ ದಾರಿಯಾಗುತ್ತದೆ. ಗುರು ನಿಮ್ಮ ಮನೆಗೆ ಬರುತ್ತಿದ್ದಾನೆ.

ಧನಸ್ಸು ರಾಶಿ : ಹೇಗಾದರೂ ಬದುಕುವೆ ಎಂಬುದನ್ನು ಬಿಟ್ಟು,  ನಿಯಮ ಕಟ್ಟುಪಾಡಿನಲ್ಲಿ ಬದುಕಿ ಒಳ್ಳೆಯದಾಗುತ್ತದೆ. ಅಧರ್ಮ ತುಂಬಾ ದಿನ ನಡೆಯುವುದಿಲ್ಲ ಎಚ್ಚರಿಕೆ.

ಮಕರ ರಾಶಿ : ಕುಟುಂಬ,  ಉದ್ಯೋಗ ಇವೆರಡರಲ್ಲಿ ಯಾವುದಾದರೂ ಒಂದರಲ್ಲಿ ಅಸಹನಾ,  ಆರೋಪ,  ತೊಳಲಾಟ. ಅಂಬಾಭವಾನಿಯ ಜಪ ಮಾಡಿ ದೇವಿ ಕಾಪಾಡುತ್ತಾಳೆ.

ಕುಂಭ ರಾಶಿ : ಒಂದು ರೀತಿಯ ಆತಂಕ,  ಸುಸ್ತು,  ದಣಿವು,  ಆದರೂ ನಿಭಾಯಿಸಿಕೊಂಡು ಹೋಗುತ್ತೀರಾ,  ತೊಂದರೆ, ಗಾಬರಿ ಏನೂ ಇಲ್ಲ,  ಆದರೆ ದುಡುಕಿ ಮಾತಾಡುವ ಸಂಭವವಿರುತ್ತದೆ ಎಚ್ಚರಿಕೆ.  ಯಾವುದಕ್ಕೂ ಕಮಿಟ್  ಆಗಬೇಡಿ .

ಮೀನ ರಾಶಿ : ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಿ,  ಆತಂಕ ಏನೂ ಇಲ್ಲ, ಯಾವುದೇ ಒಂದು ಡೋಂಗಿ ಮಾತು,  ಅಡ್ಡದಾರಿಗಳಿಗೆ ಸಿಲುಕುವ ಸಂಭವವಿರುತ್ತದೆ ಎಚ್ಚರಿಕೆ.

All Rights reserved Namma Kannada Entertainment.

Advertisement
Share this on...