ಥಂಡಿ ಇದ್ದವರಿಗೆ ದೇಹ ಬಿಸಿ ಮಾಡಿಕೊಳ್ಳಲು ಈ ಮುದ್ರೆ ಉಪಯುಕ್ತ…

in ಜ್ಯೋತಿಷ್ಯ 246 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ ದ್ವಾದಶ ತಿಥಿ, ಅನುರಾಧ ನಕ್ಷತ್ರ,  ಸಾಧ್ವಿ ಯೋಗ,  ಬಾಲವ ಕರಣ, ಜುಲೈ 02   ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ  ಬೆಳಗ್ಗೆ 7 ಗಂಟೆ,   5 ನಿಮಿಷದಿಂದ,  9 ಗಂಟೆ,  39 ನಿಮಿಷದವರೆಗೂ ಇದೆ. ದ್ವಾದಶಿ 2 ಗಂಟೆಯಿಂದ 35 ನಿಮಿಷಕ್ಕೆ ಮುಗಿಯುತ್ತದೆ, ತ್ರಯೋದಶಿ ಆರಂಭವಾಗುತ್ತದೆ. ತ್ರಯೋದಶಿ ಪ್ರದೋಶಿ ಕಾಲದಲ್ಲಿ ಶಿವ ಪೂಜೆ,  ಸ್ವಯಂಪಾಕ, ಅನ್ನದಾನ, ವಸ್ತ್ರದಾನ ಮಾಡಿ. ಇದು ಸರ್ವಶ್ರೇಷ್ಠ ಶಿವನ ಕೃಪೆಗೆ ಪಾತ್ರರಾಗುತ್ತೀರಿ .

Advertisement

ಥಂಡಿ ಇದ್ದವರಿಗೆ ದೇಹವನ್ನು ಬಿಸಿ ಮಾಡಿಕೊಳ್ಳಲು ಈ ಮುದ್ರೆ :
ಆದಷ್ಟೂ ಎಲ್ಲರೂ ಬಿಸಿಬಿಸಿ ಊಟ ಮಾಡಿ,  ಬಿಸಿ ಬಿಸಿ ನೀರನ್ನು ಕುಡಿಯಿರಿ,  ಪ್ರತಿ ಅರ್ಧ ಗಂಟೆಗೊಮ್ಮೆ ಬಿಸಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಆದಷ್ಟು ತಣ್ಣೀರನ್ನು ಕುಡಿಯುವುದನ್ನು ಕಡಿಮೆ ಮಾಡಿ,  ಯಾವಾಗಲೂ ಜೇಬಿನಲ್ಲಿ ಒಂದು ಹ್ಯಾಂಡ್ ಸ್ಯಾನಿಟೈಸರ್  ಇಟ್ಟುಕೊಳ್ಳಿ, ಅರ್ಧ ಗಂಟೆಗೆ ಒಮ್ಮೆ ಸ್ಯಾನಿಟೈಸರ್ ನಿಂದ ಕೈಗಳನ್ನು ತೊಳೆದುಕೊಳ್ಳಿ, ಹಸ್ತಾಮೃತವನ್ನು ಶಂಕರ ಅಮೃತ ತೆಗೆದುಕೊಂಡವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಥಂಡಿ ಇದ್ದವರಿಗೆ ದೇಹವನ್ನು ಬಿಸಿ ಮಾಡಿಕೊಳ್ಳಲು ಗುರೂಜಿರವರು ಈ ಮುದ್ರೆಯನ್ನು ತಿಳಿಸಿಕೊಡುತ್ತಿದ್ದಾರೆ , ಈ ಮುದ್ರೆಯ ಸಹಾಯದಿಂದ ದೇಹವು ತೂಕವನ್ನು ಕೂಡ ಕಳೆದುಕೊಳ್ಳುತ್ತದೆ. ಪಿಸ್ತೂಲ,  ಪೈಲ್ಸ್ , ಅಪೆಂಡಿಸ್, ಅಲ್ಸರ್,  ತೊಂದರೆ ಇರುವವರು ಈ ಮುದ್ರೆಯನ್ನು ಹಾಕಬಾರದು, ತುಂಬಾ ಉಷ್ಣ ಬಾಧೆ ಇರುವವರು ಪಿರಿಯಡ್ಸ್ ಪ್ರಾಬ್ಲಂ ಇರುವವರು ಈ ಮುದ್ರೆಯನ್ನು ಹಾಕಬಾರದು. ಗಂಟಲಿನ  ಪ್ರಾಬ್ಲಂ,  ವೀಜಿಂಗ್ ಪ್ರಾಬ್ಲಂ, ತುಂಬಾ ಕಫ,  ಕೆಮ್ಮು, ಡಸ್ಟ್ ಅಲರ್ಜಿ  ಇರುವವರು,  ಅದರಲ್ಲೂ ಅರುವತ್ತು ವರ್ಷ ದಾಟಿದ ವರು , ಹದಿನೈದು ವರ್ಷದ ಒಳಗಿನ ಮಕ್ಕಳ ಕೈಯಲ್ಲಿ ನಿತ್ಯ  ಈ ಮುದ್ರೆಯನ್ನು ಮಾಡಿಸಿ. ಈ ಮುದ್ರೆಯನ್ನು ಶಿವ ಮುದ್ರೆ ಅಥವಾ ಲಿಂಗಮುದ್ರೆ ಎಂದು ಕರೆಯುತ್ತಾರೆ. ಈ ಮುದ್ರೆಯನ್ನು ಪ್ರತಿನಿತ್ಯ ಐದು ನಿಮಿಷಗಳ ಕಾಲ ಹಾಕಿ.

Advertisement

Advertisement

ಜನವರಿ,  ಡಿಸೆಂಬರ್ , ಅಕ್ಟೋಬರ್,  ಜೂನ್,  ಜುಲೈನಲ್ಲಿ ಹುಟ್ಟಿದವರಿಗೆ ಸ್ವಲ್ಪ ಕಫ ವಾತಾದ ಪ್ರಕೃತಿ ಇರುತ್ತದೆ. ಸಂಖ್ಯೆ ಎಂಟರಲ್ಲಿ ಹುಟ್ಟಿದವರು ಅನುರಾಧ ನಕ್ಷತ್ರ,  ಪುಷ್ಯ ನಕ್ಷತ್ರ , ಉತ್ತರಾ ಪಾದ  ನಕ್ಷತ್ರ , ಶನಿ ನಕ್ಷತ್ರ , ರಾಹು ನಕ್ಷತ್ರ, ಆರಿದ್ರಾ ನಕ್ಷತ್ರ ಸ್ವಾತಿ ನಕ್ಷತ್ರ ಶತಭಿಷ ನಕ್ಷತ್ರದಲ್ಲಿ ಹುಟ್ಟಿದವರು , ಬುಧನ ನಕ್ಷತ್ರ ,ಜೇಷ್ಠ ನಕ್ಷತ್ರ,  ಆಶ್ಲೇಷ ನಕ್ಷತ್ರ , ರೇವತಿ ನಕ್ಷತ್ರ ಚಂದ್ರ ನಕ್ಷತ್ರದಲ್ಲಿ ಹುಟ್ಟಿದವರು , ರೋಹಿಣಿ ನಕ್ಷತ್ರ, ಹಸ್ತಾ ನಕ್ಷತ್ರ,  ಶ್ರವಣ ನಕ್ಷತ್ರ, ಕೇತು ನಕ್ಷತ್ರದಲ್ಲಿ ಹುಟ್ಟಿದವರು,  ಅಶ್ವಿನಿ ನಕ್ಷತ್ರ,  ಮಖಾ ನಕ್ಷತ್ರ  ,ಮೂಲಾ ನಕ್ಷತ್ರದವರಿಗೆ ಬಹುಬೇಗ ಥಂಡಿ ಯಾಗುತ್ತದೆ ಈ ಮುದ್ರೆಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ

Advertisement

ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ.

ಮೇಷ ರಾಶಿ : ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಿ, ಕಷ್ಟಪಟ್ಟರೂ ಗುರುತಿಸುವವರಿಲ್ಲ ಎಂಬ ಪರದಾಟ ವಿಷ್ಣು ಸಹಸ್ರನಾಮವನ್ನು ಕೇಳಿ.

ವೃಷಭ ರಾಶಿ : ಎರಡರಷ್ಟು ಕಷ್ಟ ಪಡುತ್ತೀರಾ ಫಲಿತಾಂಶ ಒಂದರಷ್ಟಿರುತ್ತದೆ,

ಮಿಥುನ ರಾಶಿ : ಮನಸಿನಲ್ಲಿ ಸ್ವಲ್ಪ ಗಲಿಬಿಲಿ ಆತಂಕವಿರುತ್ತದೆ ಬಿಟ್ಟರೆ ಇನ್ನ್ಯಾವುದೇ ತೊಂದರೆ ಇಲ್ಲ .

 

ಕರ್ಕಾಟಕ ರಾಶಿ : ಏನೋ ಒಂದು ಭೀತಿ,  ಆತಂಕ, ಮಕ್ಕಳ ವಿಚಾರದಲ್ಲಿ, ಮನೆಯ ವಿಚಾರದಲ್ಲಿ, ಪಂಚಮ ಸ್ಥಾನದಲ್ಲಿ ಪೂರ್ವಪುಣ್ಯ ಸ್ಥಾನದಲ್ಲಿ ಚಂದ್ರ ನೀಚ , ಒಂದು ರೀತಿಯ ಬಾಧೆ ಒಂದು ಬೊಗಸೆ ಯಷ್ಟು ಅಕ್ಕಿಯನ್ನು ತೆಗೆದುಕೊಂಡು ಪಾಯಸ  ಮಾಡಿ 5 ಜನ ಬಡವರಿಗೆ ಮಕ್ಕಳಿಗೆ ಹಂಚಿ  ಸೇವಿಸಿ ಆತಂಕ ದೂರವಾಗುತ್ತದೆ.

ಸಿಂಹ ರಾಶಿ : ವ್ಯಯಾಧಿಪತಿ ಸುಖ ಭಾವದಲ್ಲಿ ಇರುವುದರಿಂದ ಸುಖಕ್ಕಾಗಿ ಸ್ವಲ್ಪ ಖರ್ಚಾಗುತ್ತದೆ , ಮಿಕ್ಕಂತೆ ಏನೂ ತೊಂದರೆ ಇಲ್ಲ ಖರ್ಚು ಬರುತ್ತಿದೆ ಎಂದರೆ ಆದಾಯವೂ ಕೂಡ  ಬರುತ್ತದೆ.

ಕನ್ಯಾ ರಾಶಿ : ಕನ್ಯಾ ರಾಶಿಗೆ ರಾಜಯೋಗ,  ಚಂದ್ರ ಬಲವಾಗಿ ಇರಬಾರದು, ಗುರು ಬಲವಾಗಿರಬಾರದು, ನೀವು ಅಂದುಕೊಂಡ ಕಾರ್ಯಗಳು ನೆರವೇರುತ್ತದೆ,  ಯಶಸ್ಸು, ಕೀರ್ತಿ  ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

 

ತುಲಾ ರಾಶಿ : ಕೌಟುಂಬಿಕ ವಿಚಾರದಲ್ಲಿ ಸ್ವಲ್ಪ ಅಸಮಾಧಾನವನ್ನು ಬಿಟ್ಟರೆ, ಉದ್ಯೋಗ ಪರ್ವದಲ್ಲಿ ಏನೂ ತೊಂದರೆ ಇಲ್ಲ,

ವೃಶ್ಚಿಕ ರಾಶಿ : ನಿಮ್ಮ ಮೇಲೆಯೇ ನಿಮಗೆ ಇಂದು ನಂಬಿಕೆ ಇರುವುದಿಲ್ಲ , ಆದಷ್ಟು ಶಿವಪೂಜೆ ಮಾಡಿ ಓಂ ನಮಃ ಶಿವಾಯ ಎಂದು ಪುಸ್ತಕದಲ್ಲಿ ಬರೆಯಿರಿ, ಜಪ ಮಾಡಿಕೊಳ್ಳಿ ಯಾವುದೋ ಒಂದು ವಿಚಾರಕ್ಕೆ ಮನಸ್ಸಿಗೆ ನೋವುಂಟಾಗುತ್ತದೆ ಗಣಪತಿ ಪೂಜೆಯನ್ನು ಮಾಡಿ,  ಗಣಪತಿಯೇ ನಮಃ  ಎಂದು  ಹೇಳಿಕೊಳ್ಳಿ ವಿಘ್ನಗಳೆಲ್ಲ ನಿವಾರಣೆಯಾಗುತ್ತದೆ.

ಧನಸ್ಸು ರಾಶಿ : ಶುಭ ಸುದ್ದಿಯೊಂದನ್ನು ಕೇಳುತ್ತೀರಿ,  ಉದ್ಯೋಗದ ನಿಮಿತ್ತ, ಅನ್ ಎಕ್ಸ್ಪೆಕ್ಟೆಡ್ ಆಗಿ ಒತ್ತಡ ಕೂಡ ಉಂಟಾಗುತ್ತದೆ.

 

ಮಕರ ರಾಶಿ : ಒಳ್ಳೆಯ ಒಂದು ಯೋಗವಿದೆ. ಒಂದು ಅದೃಷ್ಟ ಬಂದೊದಗುವುದು.

ಕುಂಭ ರಾಶಿ : ಗುರುಗಳು,  ಲಾಯರ್,  ಅಡ್ವೈಸರ್   ವೃತ್ತಿಗೆ ಸಂಬಂಧಪಟ್ಟಂತೆ ಒಳ್ಳೆಯದಾಗುತ್ತದೆ, ಒಳ್ಳೆಯದನ್ನು ಮಾಡಿದರೆ ಒಳ್ಳೆಯ ಸುದ್ದಿ ,  ಕೆಟ್ಟದ್ದನ್ನು ಮಾಡಿದರೆ ಕೆಟ್ಟ ಸುದ್ದಿ ಬರುತ್ತದೆ ,

ಮೀನ ರಾಶಿ : ಪೂರ್ವ ಪುಣ್ಯಾ ಧಿಪತಿ ಭಾಗ್ಯ ಸ್ಥಾನದಲ್ಲಿದ್ದು,  ಭಾಗ್ಯಾಧಿಪತಿ ನಿಮ್ಮ ಮನೆಯಲ್ಲಿಯೇ ಇರುವುದರಿಂದ ಮಿಲಿಟರಿ,  ಪೊಲೀಸ್ , ರಕ್ಷಣಾ ವಿಭಾಗದಲ್ಲಿ ಮುಂದೆ ಹೆಜ್ಜೆ ಇಡುತ್ತಿದ್ದರೆ ಪ್ರಗತಿಯ ದಿನ, ಚೆನ್ನಾಗಿದೆ ಒಳ್ಳೆಯ ದಿನ .

Advertisement
Share this on...