ಮಹಾಲಯ ಅಮವಾಸ್ಯೆ – ಪಿತೃಪಕ್ಷ ಆಚರಣೆ ಹೀಗೆ ಮಾಡಿ

in ಜ್ಯೋತಿಷ್ಯ 438 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ವರ್ಷ  ಋತು,  ಭಾದ್ರಪದ ಮಾಸೆ,  ಕೃಷ್ಣ ಪಕ್ಷದ ಮಹಾಲಯ ಅಮವಾಸ್ಯೆ,  ಪೂರ್ವಫಾಲ್ಗುಣಿ ನಕ್ಷತ್ರ,  ಶುಭ ಯೋಗ, ನಾಗವಾಂಕ್ ಕರಣ ಸೆಪ್ಟೆಂಬರ್ 17  ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ. ಮಹಾಲಯ ಅಮಾವಾಸ್ಯೆ ದಿನ ಹಿರಿಯರಿಗೆ ಗವಿಸ್ಸು, ಹಿರಿಯರ ಹೆಸರಿನಲ್ಲಿ ಪಿಂಡ ಮುಖೇನ,  ಅರ್ಘ್ಯ ಮುಖೇನ, ನಿಮ್ಮಿಂದ ನಾವಿದ್ದೇವೆ,  ನಾವು ಏನನ್ನಾದರೂ ಪಡೆದುಕೊಂಡಿದ್ದೇವೆ, ಎಲ್ಲವೂ ನಿಮ್ಮಿಂದಲೇ ಬಂದಿರುವುದು ಎಂಬ ಸಂಕಲ್ಪವನ್ನು ಮಾಡಿಕೊಂಡು ಹಿರಿಯರಿಗೆ ಬಹುದೊಡ್ಡ ಗೌರವ ಸನ್ಮಾನವನ್ನು ಸಲ್ಲಿಸುವಂತಹ  ದಿನ. ದೈವ ಪೂಜೆಯನ್ನು ತಪ್ಪಿಸಿದರೂ,  ದೈವ ಶಾಪಕ್ಕೆ ಒಳಗಾದರೆ ಅದನ್ನು ಪೂರ್ಣವಾಗಿ ಪರಿಹಾರ ಮಾಡಿಕೊಳ್ಳಬಹುದು. ಗುರು ಶಾಪವೇನಾದರು ತಟ್ಟಿದರೆ ಅವನ ಜೀವನ ನರಕವೇ ಸರಿ. ಬೀದಿಯಲ್ಲಿ ತಂದು ನಿಲ್ಲಿಸಿಬಿಡುತ್ತದೆ ಮಕ್ಕಳೊಂದು ಕಡೆ,  ತಂದೆ ತಾಯಿಗಳೊಂದು ಕಡೆ ಇರಬೇಕಾಗುತ್ತದೆ. ಕೋರ್ಟ್‌  ಮೆಟ್ಟಿಲನ್ನೇರುವುದು,  ತಂದೆ ತಾಯಿಗಳಿಂದ ಅವಮಾನವನ್ನು ಅನುಭವಿಸುವುದು,  ಮಕ್ಕಳಿಂದ ಅವಮಾನವನ್ನು ಅನುಭವಿಸ ಬೇಕಾಗುತ್ತದೆ.

Advertisement

Advertisement

ದೈವ ಶಾಪ ಮತ್ತು ಗುರು ಶಾಪಕ್ಕಿಂತ ಪಿತೃ ಶಾಪ ಬಹಳ ದೊಡ್ಡದು. ಆದ್ದರಿಂದಲೇ ಈ ಹದಿನೈದು ದಿನಗಳ ಕಾಲ ಪಿತೃ ಗಳನ್ನು ನೆನೆದು ಪೂಜೆ ಮಾಡಿ ಗೌರವವನ್ನು ಸಲ್ಲಿಸುತ್ತೇವೆ. ದೈವ  ಕಾರ್ಯಕ್ಕಿಂತಲೂ ಕೂಡ ಪಿತೃ  ಕಾರ್ಯ ಸರ್ವಶ್ರೇಷ್ಠವಾದುದು. ಗುರುವಿಗೂ ಮೀರಿದ ಕಾರ್ಯವಿದು. ಭಗವಂತ ಎಂದಿಗೂ ಅವಕಾಶಗಳನ್ನು ತಪ್ಪಿಸುವುದಿಲ್ಲ. ಒಂದು ವೇಳೆ ಅವಕಾಶ ತಪ್ಪಿದ್ದೆ ಆದಲ್ಲಿ  ಬದಲಿಗೆ ಅದಕ್ಕಿಂತ ಮಿಗಿಲಾದ ಅವಕಾಶವನ್ನು ನೀಡುವುದಕ್ಕಾಗಿ ಮಾತ್ರ. ಪತ್ರಗಳು ಈ ದಿನಗಳಲ್ಲಿ ತಮ್ಮ ಕುಟುಂಬ ಹೇಗಿದೆ ಹೇಗೆ ಬದುಕುತ್ತಿದ್ದಾರೆ ಎಂದು ನೋಡಿಕೊಂಡು ಹೋಗಲು ಬರುತ್ತಾರೆ. ಇಂದು ಸ್ನಾನ ಮಾಡಿ ಹಿರಿಯರನ್ನು ನೆನೆದು ದೀಪವನ್ನು ಹಚ್ಚಿ. ಏನನ್ನಾದರೂ ಅಡುಗೆ ಮಾಡಿ ನೈವೇದ್ಯ ಇಡಿ. ಆ ಕೊಳಕ್ಕೆ ಧರ್ಮಕ್ಕೆ ಯಾವ ರೀತಿ ಹಿಂದಿನ ಕಾಲದಿಂದ ಮಾಡಿಕೊಂಡು ಬಂದಿರುತ್ತಾರೆ ಆ ರೀತಿಯಾಗಿ ಅಡುಗೆಯನ್ನು ಮಾಡಿ ನೈವೇದ್ಯೆ ಇಡಿ.

Advertisement

Advertisement

ಒಂದು ಎಲೆಯ ಊಟವನ್ನ ಮನೆಯ ಮೇಲೆ ಹಿರಿಯರಿಗೆ ಇಡಿ. ಮತ್ತೊಂದು ಎಲೆಯ ನೋಟವನ್ನು ಅರಸರಿಗೆ ತಿನ್ನಿಸಿ ಮತ್ತೊಂದು ಎಳೆಯ ಊಟವನ್ನು ಮನೆ ಮಂದಿಗೆಲ್ಲ ಪ್ರಸಾದವನ್ನು ಕೊಟ್ಟು ಮನೆಯ ಗೃಹಲಕ್ಷ್ಮಿ ಊಟ ಮಾಡಬೇಕು. ಮೂರು ಜನಕಾಗುವಷ್ಟು ಊಟವನ್ನು ಪೊಟ್ಟಣ ಕಟ್ಟಿಕೊಂಡು ಹೋಗಿ ಮೂರು ಜನ ಬಡವರಿಗೆ ಕೊಡಿ. ಪೂರ್ವಕ್ಕೆ ಮುಖ ಮಾಡಿ ಅಡಿಕೆಯನ್ನು ಮಾಡಿ ನಾವು ಆ ಅಡುಗೆಯನ್ನು ದಕ್ಷಿಣದ ಕಡೆಗೆ ಮುಖ ಮಾಡಿ ಇಟ್ಟರೆ ಇದರಿಂದ ಹಿರಿಯರು ಸಂಪ್ರೀತಿ ಗೊಳ್ಳುತ್ತಾರೆ ಜತೆಗೆ ಯ#ಮ ಸಂಪ್ರೀತಿ ಗೊಳ್ಳುತ್ತಾನೆ.

ಸಹೋದರ ಸಹೋದರಿಯರು ಎಲ್ಲರೂ ಒಟ್ಟುಗೂಡಿ ಪಿತೃಗಳಿಗೆ ಪೂಜೆಯನ್ನು ಸಲ್ಲಿಸಬೇಕು ಆಗ ಮಾತ್ರ ಪಿತೃಗಳು ಸಂಪ್ರೀತ ರಾಗುತ್ತಾರೆ. ಇಂದು ವಿಶೇಷವಾದ ಸ್ವಯಂ ಪಾಕ  ದಾನವನ್ನು  ಬಡ ಬ್ರಾಹ್ಮಣ ಆಚಾರ್ಯರಿಗೆ ಅಥವಾ  ಕಡು ಬಡವರೊಬ್ಬರಿಗೆ ದಾನ ಮಾಡಿ. ಈ ದಾನದಲ್ಲಿ ಇರುವ ವಸ್ತುಗಳು ಮತ್ತು ಅದನ್ನು ಹೇಗೆ ಕೊಡಬೇಕು ಎಂಬುದನ್ನು  ತಿಳಿದುಕೊಳ್ಳಲು ಈ ಮೇಲಿನ ವಿಡಿಯೋವನ್ನು ನೋಡಿ.

All Rights reserved Namma Kannada Entertainment.

Advertisement
Share this on...