ಈ ಎಲ್ಲಾ ಸಮಸ್ಯೆಗಳಿಗೆ ಮಜ್ಜಿಗೆಯು ರಾಮಬಾಣ

in ಜ್ಯೋತಿಷ್ಯ 515 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್  ಋತು,  ಅಧಿಕ ಮಾಸೆ,  ಶುಕ್ಲ ಪಕ್ಷದ ಸಪ್ತಮಿ  ತಿಥಿ,   ಜೇಷ್ಠ ನಕ್ಷತ್ರ,  ಪ್ರೀತಿ ಯೋಗ,  ಗರಜ ಕರಣ, ಸೆಪ್ಟೆಂಬರ್ 23  , ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ  ಬೆಳಗ್ಗೆ 9 ಗಂಟೆ 56 ನಿಮಿಷದಿಂದ 11ಗಂಟೆ 29 ನಿಮಿಷದವರೆಗೂ ಇದೆ.

Advertisement

ಸಾಮಾನ್ಯವಾಗಿ ಪಿತ್ತ,  ಅಸಿಡಿಟಿ, ತಲೆಭಾರ, ತೂಕ ಹೆಚ್ಚಾಗಿರುವುದು, ತೂಕ  ಕಡಿಮೆಯಾಗುವುದು, ಮನಸ್ಸಿನ ಶಕ್ತಿ ದೇಹದ ಶಕ್ತಿ ಕಡಿಮೆಯಾಗುವುದಕ್ಕೆ ಪ್ರಮುಖ ಕಾರಣ ನಾವು ಊಟವನ್ನು ತಿನ್ನುವ ರೀತಿ. ಊಟವನ್ನು ದಿನದ ಮೂರು ಬಾರಿಯು ಕೈನಲ್ಲೇ ತಿನ್ನುವುದರಿಂದ ಎಲ್ಲ ಸಮಸ್ಯೆಗಳಿಂದ  ದೂರವಿರಬಹುದು. ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ಶಕ್ತಿ ನಮ್ಮ ಮುಷ್ಟಿ ಗಿದೆ.  ಊಟದ ಕೊನೆಯಲ್ಲಿ ಸ್ವಲ್ಪವಾದರೂ ಮಜ್ಜಿಗೆ ಅನ್ನವನ್ನು ಸೇವಿಸಿ ಮಜ್ಜಿಗೆಯು ಮಂಡಿ ನೋವಿಗೆ ರಾಮಬಾಣ, ಅಲ್ಲದೆ ಕಣ್ಣಿನ ಶಕ್ತಿಯನ್ನು ಹೆಚ್ಚಿಸುತ್ತದೆ.  ಪಿತ್ತವನ್ನು ಕಡಿಮೆ ಮಾಡುತ್ತದೆ. ಮಜ್ಜಿಗೆ ತಿನ್ನುವುದರಿಂದ ಶೀತವಾಗುತ್ತದೆ ಎನ್ನುವವರು ಒಗ್ಗರಣೆಯನ್ನು ಮಾಡಿ ಸೇವಿಸಿ.  ಮಜ್ಜಿಗೆಯ ಜೊತೆ ಸ್ವಲ್ಪ ಮೆಂತ್ಯ ಕಾಳಿನ ಪುಡಿಯನ್ನು ಸೇರಿಸಿ ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಮಜ್ಜಿಗೆಗೆ ತಲೆ ಭಾರವನ್ನು ನಿಯಂತ್ರಿಸುವ ಶಕ್ತಿಯಿದೆ.

Advertisement

ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ಕೂಡ ಇದೆ. ಮಜ್ಜಿಗೆಯು ಮೂಳೆಗಳಿಗೆ ಶಕ್ತಿಯನ್ನು ನೀಡುತ್ತದೆ ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಯೌವನವನ್ನು ಕಾಪಾಡುವಂತಹ ಶಕ್ತಿ,  ಬೆನ್ನು ಬಾಗದ ಇರುವಂತೆ ಮಾಡುವ ಶಕ್ತಿ ಮಜ್ಜಿಗೆಗೆ ಇದೆ. ಹಲ್ಲುಗಳಿಗೆ ಗಟ್ಟಿಯಾಗಿ ಇರುವಂತೆ ಶಕ್ತಿಯನ್ನು ಮಜ್ಜಿಗೆ ಕೊಡುತ್ತದೆ. ಕೈನಲ್ಲಿ ಊಟವನ್ನು ತಿನ್ನುವುದರಿಂದ ಐದು ತತ್ವಗಳನ್ನು  ಬ್ಯಾಲೆನ್ಸ್ ಮಾಡುತ್ತದೆ.  ಅಗ್ನಿ ತತ್ವ,  ವಾಯು ತತ್ವ,  ಆಕಾಶ ತತ್ವ , ಸೂರ್ಯ ತತ್ವ, ಜಲ ತತ್ವ  ಈ ಎಲ್ಲಾ ತತ್ವ ಗಳನ್ನು ಬ್ಯಾಲನ್ಸ್ ಮಾಡುವ ಶಕ್ತಿ ನಮ್ಮ ಕೈಯಲ್ಲೇ ಇದೆ. ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

Advertisement

 ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಜ್ಯೇಷ್ಠಾ ನಕ್ಷತ್ರದಲ್ಲಿ ಚಂದ್ರ ಇರುವುದರಿಂದ ಬುಧ ನಿಮ್ಮನ್ನು ನೇರವಾಗಿ ನೋಡುತ್ತಿರುವುದರಿಂದ ಟೆಕ್ನಿಕಲ್ ಲೈನ್ ಇಂಜಿನಿಯರಿಂಗ್ ಈ ರೀತಿಯಾದ ಕೆಲಸಗಳಲ್ಲಿ ಇರುವವರಿಗೆ ಪ್ರಗತಿಯ ದಿನ.

ವೃಷಭ ರಾಶಿ : ಕಸ್ಟಮರ್ ಸರ್ವೀಸ್ ಲಾಯರ್ ಅಡ್ವೈಸರ್ ಈ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ವಿಶೇಷವಾದ ಅನುಕೂಲ.

ಮಿಥುನ ರಾಶಿ : ಚಂದ್ರ ಬುಧ ನ ಸಾರದಲ್ಲಿದ್ದು ಬುಧ ಕುಜನ ಸಾರದಲ್ಲಿ ಇರುವುದರಿಂದ ಆಟೋ ಮೊಬೈಲ್,  ಇಂಜಿನಿಯರಿಂಗ್ ಇಂಡಸ್ಟ್ರಿ,  ಕನ್ಸ್ಟ್ರಕ್ಟಿಂಗ್ ಇಂಡಸ್ಟ್ರಿ, ಇಲ್ಲಿಯ ವಿಭಾಗದಲ್ಲಿ ಕೆಲಸ ಮಾಡುವವರು ಪ್ರಗತಿ ಕಾಣುವಂತಹ ದಿನ.

ಕರ್ಕಾಟಕ ರಾಶಿ : ಕುಜ ವಕ್ರವಾಗಿ ಇರುವುದರಿಂದ ವಕ್ರಗತಿ ಯಾಗಿಯೇ ಭೂಮಿಯನ್ನು ಪಡೆಯುವುದು ಮನೆ ಪಡೆಯುವುದು ಫ್ಲಾಟ್ ಪಡೆಯುವುದು ಯಾವುದಾದರೂ ನಿಮ್ಮ ಆಸ್ತಿ ಕೋರ್ಟಿನ ಕೇಸಿನಲ್ಲಿ ಇದ್ದರೆ ಶುಭ ಸುದ್ದಿಯೊಂದನ್ನು ಕೇಳುವ ಸಂಭವವಿದೆ.

ಸಿಂಹ ರಾಶಿ : ಬುಧ ಕುಜನ ಸಾಲರದಲ್ಲಿದ್ದು  ಕುಜ ಭಾಗ್ಯಾಧಿಪತಿ ಸ್ಥಾನದಲ್ಲಿರುವುದರಿಂದ ಅಧಿಕಾರ ಅಂತಸ್ತು ಗೌರವ ನೆಮ್ಮದಿಯ ದಿನ.

ಕನ್ಯಾ ರಾಶಿ : ಅಲ್ಪ ಕೋಪಿಷ್ಠ ರಾಗಿರುತ್ತೀರ ವಾಗ್ ದೋಷವಿದೆ ಸಿಡಿಮಿಡಿ ಗೊಳ್ಳುತ್ತೀರಾ  ಬಿಟ್ಟರೆ ಮಿಕ್ಕಂತೆ ಆದ ರೀತಿ ಬಂದರೆ ಇಲ್ಲ.

ತುಲಾ ರಾಶಿ : ಯಾರೋ ನಿಮಗೆ ಭೂಮಿಯ ವಿಚಾರದಲ್ಲೂ ಅಥವಾ ವ್ಯವಹಾರ ವಿಚಾರದಲ್ಲೂ ಟೋಪಿ ಹಾಕುವ ಸಂಭವವಿದೆ. ಪಾರ್ಟ್ನರ್  ಮತ್ತು ಸ್ನೇಹಿತರ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದಿರಿ.

ವೃಶ್ಚಿಕ ರಾಶಿ : ಅಷ್ಟಮಾಧಿಪತಿ ಭಾವದಲ್ಲಿ ಚಂದ್ರನಿದ್ದು ಅಷ್ಟಮಾಧಿಪತಿ  ವ್ಯಯ ಭಾಗದಲ್ಲಿರುವುದರಿಂದ ಕುಟುಂಬದ ವಿಚಾರದಲ್ಲಿ ಮನೆಯವರ ವಿಚಾರದಲ್ಲಿ ಉದ್ಯೋಗದ ವಿಚಾರದಲ್ಲಿ ಸರ್ಪ್ರೈಸ್ ಗುಡ್ ನ್ಯೂಸ್ ಇದೆ.  ದುಡ್ಡು ಕಾಸನ್ನು ತಕ್ಕಮಟ್ಟಿಗೆ ನೋಡುವಂತಹ ದಿನ.

ಧನಸ್ಸು ರಾಶಿ : ಸ್ನೇಹಿತರು ಮತ್ತು ಆತ್ಮೀಯರ ಮುಖಾಂತರ ಮಾಡುವ ಕೆಲಸ ಕಾರ್ಯಗಳಲ್ಲಿ ವಿಶೇಷ ಪ್ರಗತಿಯನ್ನು ಕಾಣುವಂತಹ ದಿನ. ಅನ್ ಎಕ್ಸ್ಪೆಕ್ಟೆಡ್ ಖರ್ಚುಗಳು ಬರುತ್ತವೆ.  ತಾಯಿಯ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ.

ಮಕರ ರಾಶಿ : ಚೆನ್ನಾಗಿದೆ ಭಾಗ್ಯಾಧಿಪತಿ ದಶಮ ಸ್ಥಾನದಲ್ಲಿದ್ದು, ದಶಮ ಧಿಪತಿ ಲಾಭದಲ್ಲಿ ರುವುದರಿಂದ ನೀವು ಮಾಡುವ ಸರಕಾರ ಕಾರ್ಯಗಳೆಲ್ಲಾ ಯಶಸ್ಸು ಕಾಣುತ್ತೀರಿ.

ಕುಂಭ ರಾಶಿ : ಪೂರ್ವ ಪುಣ್ಯಾ ಧಿಪತಿ ಭಾಗ್ಯ ಸ್ಥಾನದಲ್ಲಿದ್ದು, ಆ ಭಾಗ್ಯಾಧಿಪತಿಯ  ಪ್ರಭಾವದಲ್ಲಿ  ಪೂರ್ವ ಪುಣ್ಯಾದಿ ಪತಿಯ ಸ್ಥಾನದಲ್ಲಿ ಚಂದ್ರ ಇರುವುದರಿಂದ ಚೆನ್ನಾಗಿದೆ.  ಸಿಬಿಐ ಕ್ರೈಂ ವಿಭಾಗದಲ್ಲಿ, ಟೆಕ್ನಿಕಲ್ ವಿಭಾಗದಲ್ಲಿ ಕಲಾವಿದರಾಗಿದ್ದರೆ ಅನುಕೂಲಕರವನ್ನು ನೋಡುವಂತಹ ದಿನ.

ಮೀನ ರಾಶಿ : ಸ್ವಲ್ಪ ಯಜಮಾನರು ಯಜಮಾನರ ಸೋದರರು,  ಯಜಮಾನಿಯ ಸೋದರಿಯರ ನಡುವೆ ಸ್ವಲ್ಪ ಮನಸ್ತಾಪ ವಾಗ್ವಾದ ಉಂಟು ಅದನ್ನು ಬಿಟ್ಟರೆ ಮಿಕ್ಕಂತೆ ಯಾವುದೇ ರೀತಿಯ ತೊಂದರೆ ಇಲ್ಲ.

All Rights reserved Namma Kannada Entertainment.

Advertisement
Share this on...