ಈ ರಾಶಿಯವರಿಗಿಂದು ಆತಂಕ ಗಲಿಬಿಲಿ ಹೆಚ್ಚಾಗಿರುತ್ತದೆ… ಎಚ್ಚರಿಕೆ

in ಜ್ಯೋತಿಷ್ಯ 125 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ ಅಷ್ಟಮಿ  ತಿಥಿ, ರೇವತಿ  ನಕ್ಷತ್ರ, ಸುಕರ್ಮ ಯೋಗ,  ಕೌಲವ  ಕರಣ   ಜುಲೈ  13    ಸೋಮವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ  ಬೆಳಗ್ಗೆ 8 ಗಂಟೆ,  38 ನಿಮಿಷದಿಂದ,  10  ಗಂಟೆ,  20 ನಿಮಿಷದವರೆಗೂ ಇದೆ.

Advertisement

ಪಂಚಭೂತ ತತ್ವಗಳು :
ಪಂಚಭೂತ ತತ್ವ ಗಳು ನಮ್ಮಲ್ಲಿಯೇ ಇದೆ.  ಭೂಮಿ ತತ್ವ,  ಆಕಾಶ ತತ್ವ , ಜಲ ತತ್ವ,  ವಾಯು ತತ್ವ,  ಅಗ್ನಿತತ್ವ , ಈ  ಐದು ಪಂಚಭೂತ ತತ್ವಗಳ ಆಧಾರದ ಮೇಲೆ ನಮ್ಮ ದೇಹದ ಸ್ಥಿತಿ ಇರುತ್ತದೆ. ಇವುಗಳಲ್ಲಿ ವಾತ,  ಪಿತ್ತ,  ಕಫ  ಎಂಬ ಮೂರು ವಿಧವಾದ ಜನರುಗಳು ಇದ್ದೇವೆ.

Advertisement

ವಿಶೇಷವಾಗಿ ಇಂದು ವಾತ ತತ್ವ ದ ಜನರ ಬಗ್ಗೆ ಉಲ್ಲೇಖವನ್ನು ಗುರೂಜಿ ರವರು ನೀಡುತ್ತಿದ್ದಾರೆ. ಮಾನಸಿಕವಾಗಿ ತುಂಬಾ  ಚುರುಕಾಗಿರುತ್ತಾರೆ,  ಸೃಜನಶೀಲರಾಗಿರುತ್ತಾರೆ , ವಾತ  ಪ್ರಕೃತಿಯ ವ್ಯಕ್ತಿಗಳು ಇರುವುದರಲ್ಲೇ ಹೊಸತೊಂದನ್ನು ಮಾಡುವವರಾಗಿರುತ್ತಾರೆ. ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಳ್ಳುವ ಶಕ್ತಿ ಇವರಿಗೆ ಇರುತ್ತದೆ . ಅವರು ಮಾಡುವ ಕ್ರಿಯೇಟಿವಿಟಿಗಳು ಸರಿಯಾಗಿದೆಯಾ ಇಲ್ಲವಾ ಎಂಬ ಗೊಂದಲವಿರುತ್ತದೆ . ಈ ರೀತಿಯ ತತ್ವ  ಇರುವವರು ಪ್ರಾಣಾಯಾಮವನ್ನು ಮಾಡುವುದು ಒಳ್ಳೆಯದು. ಪರ್ವತಾಸನ,  ಶಿರಸಾಸನ, ಅರ್ಧ ಮತ್ಸ್ಯಾಸನ , ಜ್ಞಾನ ಮುದ್ರೆ ಮಾಡಿ. ವಾತ ಪ್ರಕೃತಿ  ಇರುವವರು  ಬ್ರಹ್ಮ ಶಂಕರವನ್ನು ಕುಡಿಯುವುದು ಒಳ್ಳೆಯದು ಅದು ನಿಮ್ಮ ವಾತವನ್ನು ಬ್ಯಾಲೆನ್ಸ್ ಮಾಡುತ್ತದೆ. ಮಕ್ಕಳಿಗೆ ಬ್ರಹ್ಮ ಶಂಕರವನ್ನು ತಿನ್ನಿಸಿ.

Advertisement

Advertisement

 

ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಸ್ವಲ್ಪ ಗಲಿಬಿಲಿಯ ದಿನ , ಚಂದ್ರ ಬುಧನ ಸಾರದಲ್ಲಿದ್ದು ಕುಜನು ಜೊತೆಗೆ ಸೇರಿರುವುದರಿಂದ ಒಂದು ಕಡೆ ಕುಳಿತುಕೊಳ್ಳಲು ಬಿಡುವುದಿಲ್ಲ ಅದರಲ್ಲೂ ರಕ್ಷಣಾ ಇಲಾಖೆ ಮತ್ತು ಪೊಲೀಸ್ ಇಲಾಖೆಯಲ್ಲಿ ಇರುವವರಿಗೆ  ಅವಘಡದ ಸೂಚನೆ ಉಲ್ಬಣಗೊಳ್ಳುತ್ತದೆ. ಅಷ್ಟಮಿಯಾಗಿರುವುದರಿಂದ ಆತಂಕ ಗಲಿಬಿಲಿ ಹೆಚ್ಚಾಗಿರುತ್ತದೆ ಎಚ್ಚರಿಕೆ.

ವೃಷಭ ರಾಶಿ : ಕಾಸಿಗೆ  ತಕ್ಕಂತ ಕಜ್ಜಾಯ,  ಪರವಾಗಿಲ್ಲ,  ಆದರೂ ಗಲಿಬಿಲಿ ಸ್ವಲ್ಪ ಜಾಸ್ತಿನೇ ಇರುತ್ತದೆ  ಪ್ರಾಣಾಯಾಮ ಮಾಡಿ.

ಮಿಥುನ ರಾಶಿ : ಬುಧ ವಕ್ರ ವಾಗಿರುವುದರಿಂದ ನಿಮ್ಮ ಮೇಲೆ ಅಪನಂಬಿಕೆಯ ಭಾವ , ಒಂದು ಸ್ಪೂನ್ ಶುದ್ಧ ಜೇನು ತುಪ್ಪ ಸೇವಿಸಿ.

ಕರ್ಕಾಟಕ ರಾಶಿ : ಚೆನ್ನಾಗಿದೆ,  ಮಾಡುವ ಕೆಲಸದಲ್ಲಿ ತುಂಬಾ ಕ್ರಿಯೇಟಿವಿಟಿ ಆಗಿ ಮಾಡಿ ಅದನ್ನು ನಿಭಾಯಿಸಿಕೊಂಡು ಹೋಗುವ ಅದ್ಭುತವಾದ ದಿನ.

ಸಿಂಹ ರಾಶಿ : ಆತುರ ಬೇಡ,  ನಿಧಾನವಾಗಿ ಯೋಚಿಸಿ ಮಾಡಿ.

ಕನ್ಯಾ ರಾಶಿ : ವಾರದ ಪೂರ್ತಿ ಚೈತನ್ಯವಾಗಿರುವಂತಹ  ಅದ್ಭುತವಾದ ದಿನ.

ತುಲಾ ರಾಶಿ : ಯೋಗ್ಯತೆಗೆ ತಕ್ಕಂಥ ಫಲ.

ವೃಶ್ಚಿಕ ರಾಶಿ : ಹಣಕಾಸಿನ ವಿಷಯದಲ್ಲಿ ಸ್ವಲ್ಪ ತೊಳಲಾಟ , ಮನೆ,  ವ್ಯವಹಾರ ಎರಡನ್ನೂ ನಿಭಾಯಿಸುವ ತೊಳಲಾಟವಿರುತ್ತದೆ, ವಿಷ್ಣು ಸಹಸ್ರನಾಮವನ್ನು ಕೇಳಿ.

ಧನಸ್ಸು ರಾಶಿ : ಚೆನ್ನಾಗಿದೆ, ತೊಂದರೆ ಏನೂ ಇಲ್ಲ,  ಬುಧ ವಕ್ರ ಆಗಿರುವುದರಿಂದ ತಲೆ ಕೆಡಿಸಿ ನಿಮ್ಮನ್ನು ಹಳ್ಳಕ್ಕೆ ತಳ್ಳುತ್ತಾರೆ.  ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರ.

ಮಕರ ರಾಶಿ : ಯಾರಾದರೂ ನಿಮ್ಮನ್ನು ಹುಬ್ಬಿಸಿ ಅಟ್ಟಕ್ಕೇರಿಸಿ ತಳ್ಳುತ್ತಾರೆ ಎಚ್ಚರಿಕೆ.

ಕುಂಭ ರಾಶಿ : ಮಾತು ಬಲ್ಲವನಿಗೆ ಜಗಳವಿಲ್ಲ, ನಿಮ್ಮ ಮಾತೆ  ನಿಮಗೆ ವಿಜಯ ಪ್ರಾಪ್ತಿ.

ಮೀನ ರಾಶಿ : ವಿಪರೀತ ಮಾತು ಮನೆ ತೂತು. ಮಾತು  ಆಲೋಚನೆ ಹಿತಮಿತವಾಗಿರಲಿ.

All Rights reserved Namma Kannada Entertainment.

Advertisement
Share this on...