ಎಷ್ಟೇ ದುಡಿದರೂ ಹಣ ಉಳಿಯುತ್ತಿಲ್ಲ ಎನ್ನುವವರು ಹೀಗೆ ಮಾಡಿ…

in ಜ್ಯೋತಿಷ್ಯ 795 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್  ಋತು,  ಅಧಿಕ ಮಾಸೆ,ಶುಕ್ಲ  ಪಕ್ಷದ ದ್ವಿತಿಯ ತಿಥಿ,  ಹಸ್ತಾ ನ   ಕ್ಷತ್ರ,  ಬ್ರಹ್ಮ ಯೋಗ,  ಕೌಲವ ಕರಣ,  ಸೆಪ್ಟೆಂಬರ್  19 , ಶನಿವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ ಉಲ್ಲೇಖ ಮಾಡಿಲ್ಲ .

Advertisement

ನಮ್ಮ ದಿನ ನಿತ್ಯದ  ಜೀವನದಲ್ಲಿ  ಮಹರ್ಷಿಗಳು,  ದೇವರ್ಷಿಗಳು    ಋಷಿಗಳು ನಮಗೆ ಹಲವಾರು ರೀತಿಯ ವಿಚಾರಧಾರೆಗಳನ್ನು ಸಂಸ್ಕಾರಗಳನ್ನು ಧ್ಯಾನಗಳನ್ನು ಪೂಜೆಗಳನ್ನು ನೈವೇದ್ಯಗಳನ್ನು ಆರತಿಗಳನ್ನು ಹಲವಾರು ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ. ಯಾವ ಯಾವ ಕಾರ್ಯಕ್ಕೆ ಯಾವ ನೈವೇದ್ಯ,  ಯಾವ್ಯಾವ ಕಾರ್ಯಕ್ಕೆ ಯಾವ ಪೂಜೆ, ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಎಷ್ಟೇ ದುಡಿದರೂ ಹಣ ಉಳಿಯುತ್ತಿಲ್ಲ ಎನ್ನುವವರು ಮನೆಯಲ್ಲಿ ಒಂದು ಗಣೇಶನ ವಿಗ್ರಹವನ್ನು ತಂದಿಟ್ಟುಕೊಳ್ಳಿ. ಪ್ರತಿನಿತ್ಯ ಸಂಧ್ಯಾಕಾಲದಲ್ಲಿ ಮಕ್ಕಳ ಕೈಯಲ್ಲಿ ನೈವೇದ್ಯವನ್ನು  ಇಟ್ಟು ಪೂಜೆ ಮಾಡಿಸಿ ಇದು ಸರ್ವಶ್ರೇಷ್ಠ. ಸಕ್ಕರೆಯಿಂದ, ಹಾಲಿನಿಂದ ಇಲ್ಲವೇ ಜೇನು ತುಪ್ಪದಿಂದ ಅಭಿಷೇಕವನ್ನು ಮಾಡಿ ಜೊತೆಗೆ ಗರಿಕೆಯನ್ನು ಇಪ್ಪತ್ತೊಂದು ಬಾರಿ ಸಮರ್ಪಿಸುತ್ತಾ ಗರಿಕೆಯಿಂದ ಅಭಿಷೇಕ ಮಾಡಿ. ಗಣೇಶ ಅಷ್ಟೋತ್ತರವನ್ನು ಹೇಳಿ ನಂತರ ಆ ತೀರ್ಥವನ್ನು ತೆಗೆದುಕೊಳ್ಳಿ.  ಗರಿಕೆಯನ್ನು ತೊಳೆದು ಒರೆಸಿ ಒಂದು ಕವರ್ನಲ್ಲಿ ಹಾಕಿ ದುಡ್ಡು ಇಡುವ ಕ್ಯಾಸ್ ಬಾಕ್ಸ ಜಾಗದಲ್ಲಿ ಇಡಿ. ಇದರಿಂದ ನಿಮಗೆ ಎಂದೂ ದುಡ್ಡಿನ ಸಮಸ್ಯೆ ಉಂಟಾಗುವುದಿಲ್ಲ, ಅದರ ಜೊತೆಗೆ ನಿಮಗೆ ಯಾರೋ  ಕೊಡಬೇಕಾದ ಅಲ್ಪ ಸ್ವಲ್ಪ  ಹಣವನ್ನು ಕೊಡದೇ ಸತಾಯಿಸುತ್ತಾ ಇದ್ದರೆ ಅಂತಹ ಹಣ ಕೂಡ ನಿಮಗೆ ಸಲೀಸಾಗಿ ಬರುತ್ತದೆ.  ನೀವು  ನ್ಯಾಯಯುತವಾಗಿ  ಧರ್ಮಯುತವಾಗಿ ಕಷ್ಟಪಟ್ಟಂತಹ ದುಡ್ಡು ನಿಲ್ಲುವಂತಹ ಸದಾವಕಾಶವನ್ನು ಭಗವಂತ ನಿಮಗೆ ಮಾಡಿಕೊಡುತ್ತಾನೆ. ಈ ರೀತಿ ಪೂಜೆ ಮಾಡುವುದರಿಂದ ಮನೆಯಲ್ಲಿ ಸದಾಕಾಲ ದುಡ್ಡು ಉಳಿಯುತ್ತದೆ.

Advertisement

Advertisement

ನಿಮ್ಮ ರಾಶಿ ಫಲದ  ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚಂದ್ರ ಹಸ್ತಾ ನಕ್ಷತ್ರದಲ್ಲಿ ಇರುವುದರಿಂದ ನಿಮಗೆ ಒಂದು ಸರ್ಪ್ರೈಸ್ ಇದೆ. ನಿಮಗೆ ಇಂದು ಪಾರ್ಟಿಯ ದಿನವಾಗಿರುತ್ತದೆ. ಖುಷಿ ಮತ್ತು ಸಂಭ್ರಮದ ದಿನ.  ದೂರದಿಂದ ಒಂದು ಶುಭ ಸುದ್ದಿಯೊಂದು ಬರುತ್ತದೆ. ಮನಸ್ಸು,  ಆತ್ಮ,  ಜ್ಞಾನ,  ಎಲ್ಲವನ್ನು ಉಪಯೋಗಿಸಿಕೊಂಡು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇದೆ.

ವೃಷಭ ರಾಶಿ : ತಂದೆ ತಾಯಿಯ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ.  ಮಕ್ಕಳಲ್ಲೊಂದು ಸಣ್ಣ ಜಟಾಪಟಿ.

ಮಿಥುನ ರಾಶಿ : ಚೆನ್ನಾಗಿದೆ,  ತೊಂದರೆ ಏನೂ ಇಲ್ಲ,  ಆದರೆ ಚಂದ್ರ ಮತ್ತು ಬುಧ ಒಟ್ಟಿಗೆ ಸೇರಿರುವುದರಿಂದ ಸ್ವಲ್ಪ ತಳಮಳ.  ಮನಸ್ಸಿನ ಮಾತು ಕೇಳಬೇಕಾ ಬುದ್ಧಿ ಮಾತು ಕೇಳಬೇಕೆಂಬ ತಳಮಳದ ಪ್ರಭಾವವಿರುತ್ತದೆ.

ಕರ್ಕಾಟಕ ರಾಶಿ : ಚೆನ್ನಾಗಿದೆ ಧೈರ್ಯಂ ಸರ್ವರ್ಥ ಸಾಧನಂ ಎಂಬಂತೆ ಧೈರ್ಯದಿಂದ ಮುನ್ನುಗ್ಗಿ ಮಾಡುವಂತಹ ಎಲ್ಲ ಕೆಲಸ ಕಾರ್ಯಗಳಲ್ಲಿ ವಿಶೇಷ ಪ್ರಗತಿಯನ್ನು ಕಾಣುವಂತಹ ವಿಶೇಷವಾದ ದಿನ.

ಸಿಂಹ ರಾಶಿ : ತುಂಬಾ ದಿನಗಳ ನಂತರ ತೃಪ್ತಿದಾಯಕ ಊಟ, ಆತ್ಮೀಯರೊಡನೆ ಒಡನಾಟ ಸುತ್ತಾಟ.

ಕನ್ಯಾ ರಾಶಿ : ಮನಸ್ಸಿನ ಮಾತು ಕೇಳಲ್ಲ ಬುದ್ಧಿ ಮಾತು ಕೇಳಲ್ಲ ಎಂಬ ಗೊಂದಲ ಇರುತ್ತದೆ.  ಅಂತಹ ಸಂದರ್ಭದಲ್ಲಿ ತಟಸ್ಥವಾಗಿರುವುದು ಒಳ್ಳೆಯದು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.  ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗಿ ಇನ್ವೆಸ್ಟ್ ಮಾಡಲು ಹೋಗಬೇಡಿ ಸ್ವಲ್ಪ ನಿಧಾನಿಸಿ.

ತುಲಾ ರಾಶಿ : ದೂರದ ಸ್ಥಳದಿಂದ ಸಪ್ರೈಸ್ ಗುಡ್ ನ್ಯೂಸ್ ಒಂದಿದೆ   ಪ್ರಯಾಣದಿಂದ  ಸ್ವಲ್ಪ ಬಳಲಿಕೆ ಅದನ್ನು ಬಿಟ್ಟರೆ ಮಿಕ್ಕಂತೆ ಯಾವುದೇ ರೀತಿಯ ತೊಂದರೆಯಿಲ್ಲ.

ವೃಶ್ಚಿಕ ರಾಶಿ : ಮಾಡುವ ಕೆಲಸ ಕಾರ್ಯಗಳಲ್ಲಿ ಶುಭವನ್ನು ಪಡೆಯುವಂತಹ ದಿನ. ಲಾಭ ಸ್ಥಾನದಲ್ಲಿ ಲಾಭಾಧಿಪತಿಯಾದ ಸೂರ್ಯನ ಇರುವುದರಿಂದ ಸಹಿಸಲಾರದ  ಕಡೆಯಿಂದಲೂ ಲಾಭಗಳು ಬರುತ್ತವೆ.

ಧನಸ್ಸು ರಾಶಿ : ಉದ್ಯೋಗದ ವಿಚಾರದಲ್ಲಿ ಸ್ವಲ್ಪ ಒತ್ತಡವಿರುತ್ತದೆ.  ಯಾವುದೇ ರೀತಿಯ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ ತಟಸ್ಥವಾಗಿರಿ. ಸ್ವಲ್ಪ ವಿಳಂಬವಾದರೂ ನಮ್ಮ ಯೋಗ್ಯತೆಗೆ ತಕ್ಕಂತೆ ಪ್ರತಿಫಲ ದೊರಕೆ ದೊರಕುತ್ತದೆ.

ಮಕರ ರಾಶಿ : ಹತ್ತಿರದವರಿಂದ,  ಆತ್ಮೀಯರಿಂದ,  ಸ್ನೇಹಿತರಿಂದ,  ತಂದೆಯ ಕಡೆಯಿಂದ, ಸೋದರಿ ಕಡೆಯಿಂದ ಶುಭ ಸುದ್ದಿಯೊಂದು ಬರುವಂತಹ ಶುಭ ದಿನ.

ಕುಂಭ ರಾಶಿ :  ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಿ ಮಿಕ್ಕಂತೆ ಯಾವುದೇ ರೀತಿಯ ತೊಂದರೆಯಿಲ್ಲ. ಥ್ರೊಟ್ ವಾಟರ್ ಇನ್ಫೆಕ್ಷನ್ ಗಳು,  ಡಸ್ಟ್ ಅಲರ್ಜಿಗಳಾಗುವ ಸಂಭವವಿದೆ ಎಚ್ಚರಿಕೆ.

ಮೀನ ರಾಶಿ : ಮಕ್ಕಳ ವಿಚಾರದಲ್ಲೊಂದು ಶುಭ ಸುದ್ದಿಯೊಂದನ್ನು ಪಡೆಯುವಂತಹ ಅದ್ಭುತವಾದ ದಿನ. ಚೆನ್ನಾಗಿದೆ,  ವಿಶೇಷಕರವಾದ ದಿನ ಗೆಲುವು ನಿಮ್ಮದೇ. ಏನು ಯೋಚಿಸಬೇಡಿ ಧೈರ್ಯವಾಗಿ ಮುನ್ನುಗ್ಗಿ. ಕಲಾಕಾರರು ಶುಭ ಸುದ್ದಿಯೊಂದನ್ನು ಪಡೆಯುವಂತಹ ಅದ್ಭುತವಾದ ದಿನ.

All Rights reserved Namma Kannada Entertainment.

Advertisement
Share this on...