ರಾಹುವಿನ ಆಗಮನದಿಂದ ಆಗುವ ಫಲಗಳು

in ಜ್ಯೋತಿಷ್ಯ 858 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್  ಋತು,  ಅಧಿಕ ಮಾಸೆ, ಶುಕ್ಲ ಪಕ್ಷದ ಅಷ್ಟಮಿ  ತಿಥಿ,  ಮೂಲ ನಕ್ಷತ್ರ,  ಸೌಭಾಗ್ಯ ಯೋಗ,  ಭದ್ರಂಕ್ ಕರಣ ಸೆಪ್ಟೆಂಬರ್ 24  ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ  ಬೆಳಗ್ಗೆ 11 ಗಂಟೆ 49 ನಿಮಿಷದಿಂದ 1 ಗಂಟೆ 24 ನಿಮಿಷದವರೆಗೂ ಇದೆ.

Advertisement

ಮೇಷ ರಾಶಿಯವರಿಗೆ ರಾಹುವಿನ ಆಗಮನದಿಂದ ಆಗುವ ಫಲಗಳು

Advertisement

ಗುರು ಚೆನ್ನಾಗಿದ್ದಾನೆ ಸೂರ್ಯನು ಚೆನ್ನಾಗಿದ್ದಾನೆ ಆದ್ದರಿಂದ  ಗಾಬರಿಯಾಗಬೇಡಿ. ನಿಮ್ಮ ರಾಶಿಯ ಅಧಿಪತಿ ಕುಜ ಉಗ್ರವಾಗಿ ಇರುವುದರಿಂದ ಸ್ವಲ್ಪ ತಳಮಳ ವಿರುತ್ತದೆ. ರಾಹು  ಕುಜನ ಭಾವದಲ್ಲಿ ಬಂದಿರುವುದರಿಂದ ತೊಂದರೆ ಇಲ್ಲ ಆದರೆ ಚರ್ಮದ ಮೇಲೆ ಕಪ್ಪು ಮಚ್ಚೆಗಳು ಬಂಗು ಬಂದರೆ ಅದು ರಾಹು ಕೇತುಗಳ ಪ್ರಭಾವ. ರಾಹು ಪ್ರಭಾವಕ್ಕೆ ಒಳಗಾದರೆ ವಿಪರೀತವಾದ ಆಸೆ ವಿಪರೀತವಾದ ಕೋಪ ನಿರಾಸೆಗಳು ಆಗುತ್ತವೆ. ರಾಹು ಕುಟುಂಬ ಸ್ಥಾನದಲ್ಲಿದ್ದು ಶನಿ ವಕ್ರವಾಗಿದ್ದಾನೆ. ವೃತ್ತಿಯಲ್ಲಿ ಅನೈತಿಕವಾಗಿ ಸಂಪಾದನೆ ಮಾಡಲು ಹೋಗುವುದು ಮತ್ತು ಅದಕ್ಕೆ ದಂಡವನ್ನು ಅನುಭವಿಸುವಂತಹ ಸಂಭವ ಉಂಟಾಗುತ್ತದೆ. ಏನೋ ಒಂದು ರೀತಿ ಆತಂಕದಿಂದ ನಿಮ್ಮ ಮೇಲೆ ನಿಮಗೆ ನಂಬಿಕೆ ಇರುವುದಿಲ್ಲ. ಪರಿಶ್ರಮ ಜಾಸ್ತಿ ಆದರೆ ರಾಹುವಿನಿಂದ  ಅತ್ಯುತ್ತಮ ಮಟ್ಟಕ್ಕೆ ತಲುಪುತ್ತೀರ. ಯಾರನ್ನು ನಂಬುವುದಿಲ್ಲ ಅನುಮಾನದಿಂದ ನೋಡುತ್ತೀರಾ ಹಿಂದೆ ಅನುಭವಿಸಿದ  ಪೆಟ್ಟಿನಿಂದಾಗಿ. ಸ್ವಸ್ತಿಕ ಶಕ್ತಿ ಯಂತ್ರವನ್ನು ಮನೆಯಲ್ಲಿ ತಂದಿಡಿ ಪೂಜಿಸಿ.   ಕಡಿಮೆ ಎಂದರೆ ಇಪ್ಪತ್ತೊಂದು ದಿನವಾದರೂ ಮಡಿಯಿಂದ ಬ್ರಹ್ಮಚರ್ಯ  ಪಾಲಿಸಿ ಮತ್ತು ಮಾಂಸಾಹಾರವನ್ನು ತ್ಯಜಿಸಿ. ನಿಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಈ ರೀತಿಯಾದ ದಾನವನ್ನು ಮಾಡಿ. ದಾನದ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

Advertisement

 ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಮೇಷರಾಶಿ ಅವರು ಮುಖ್ಯವಾಗಿ ಜಾಗ್ರತೆಯಿಂದ ಇರಿ.  ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ. ಯಾವುದೇ ರೀತಿಯ ಮುಖ್ಯ ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳಬೇಡಿ.

ವೃಷಭ ರಾಶಿ : ಚೆನ್ನಾಗಿದೆ ಆದರೆ ಸ್ವಲ್ಪ ಆನ್ ಈಸಿ ಫೀಲಿಂಗ್ ಉಂಟಾಗುತ್ತದೆ. ರಾಮರ ದೇವಾಲಯದಲ್ಲಿ ದೀಪವನ್ನು ಹಚ್ಚಿ ಹೋಗಿ ಒಳ್ಳೆಯದಾಗುತ್ತದೆ.

ಮಿಥುನ ರಾಶಿ : ಚೆನ್ನಾಗಿದೆ ಆದರೆ ಎದುರು ಕಡೆ ಇರುವ ವ್ಯಕ್ತಿಯಲ್ಲಿ ಏನೋ ಲೋಪದೋಷಗಳಿವೆ ಎಚ್ಚರಿಕೆಯಿಂದಿರಿ,  ದುಡುಕಬೇಡಿ.

ಕರ್ಕಾಟಕ ರಾಶಿ : ಚೆನ್ನಾಗಿದೆ ತೊಂದರೇನೂ ಇಲ್ಲ. ಚಂದ್ರ  ವಿಶೇಷವಾಗಿರುವುದರಿಂದ  ಸ್ವಲ್ಪ ಖರ್ಚಿನ ದಿನವಾಗಿರುತ್ತದೆ. ದೊಡ್ಡ ದೊಡ ಪಾಠಗಳು ಸಮಾರಂಭಗಳಿಗೆ ಹೋಗುವ ಸಂಭವ ಜೊತೆಗೆ, ಬೇಗ ಇನ್ಫೆಕ್ಷನ್ ಗಳಾಗುವ ಸಂಭವವಿದೆ ಎಚ್ಚರಿಕೆ. ರಾಹುವಿನ ಪ್ರಭಾವದಿಂದ ಭೂಮಿಯ ವಿಚಾರದಲ್ಲಿ ದಿಢೀರ್ ಎಂದು ಒಳ್ಳೆಯದಾಗುತ್ತದೆ.

ಸಿಂಹ ರಾಶಿ : ಚೆನ್ನಾಗಿದೆ ಚಂದ್ರ ಕೇತು ಸಾರದಲ್ಲಿ ಇರುವುದರಿಂದ  ವಿಶೇಷವಾಗಿ ವೈರಾಗ್ಯದ ಕಡೆಗೆ ವಾಲುತ್ತೀರಿ. ಕೇರಳಕ್ಕೆ ಬೆಲ್ಲ ಬಾಳೆಹಣ್ಣನ್ನು ಕಳಿಸಿ ಪಂಚಾಮೃತವನ್ನು ತಯಾರಿಸಿ ಯಾದರೂ ಯಾರಾದರೂ ಐದು ಜನಕ್ಕೆ ಕೊಡಿ ಒಳ್ಳೆಯದಾಗುತ್ತದೆ. ಇದರಿಂದ ತುಂಬ ಬಲಾಡ್ಯ ಬಲ ಬರುತ್ತದೆ.

ಕನ್ಯಾ ರಾಶಿ : ಭಾಗ್ಯ ಸ್ಥಾನಕ್ಕೆ ರಾಹು,  ಪಂಚಮದಲ್ಲಿ ಶನಿ,  ಸುಖ ಭಾವದಲ್ಲಿ ಗುರು, ಕಾಣದ ಖರ್ಚು ಬರುತ್ತದೆ ಜತೆಗೆ ಆದಾಯವೂ ಕೂಡ ಬರುತ್ತದೆ.

ತುಲಾ ರಾಶಿ : ಚಂದ್ರ ಕೇತು ಸಾರದಲ್ಲಿ ಇರುವುದರಿಂದ ಸ್ವಲ್ಪ ಒಡಹುಟ್ಟಿದವರ ವಿಚಾರದಲ್ಲೊಂದು ತೊಳಲಾಟ ಅವರ ಕಡೆ ಗಮನ ಕೊಡಿ.

ವೃಶ್ಚಿಕ ರಾಶಿ : ಕೇತು ನಿಮ್ಮ ಮನೆಗೆ ಉಚ್ಚಂಗತ,  ತುಂಬ ದೊಡ್ಡ  ಧಾರ್ಮಿಕ ಕಾರ್ಯ,  ವೈದಿಕ ಕಾರ್ಯ ,ವನ್ನು ನಡೆಸಲು  ಬಂದಿದ್ದಾನೆ. ಒಳ್ಳೆಯದೇ ಆಗುತ್ತದೆ.  ಆದರೆ ಸ್ವಲ್ಪ ಗಾಬರಿ ಆತಂಕವಿರುತ್ತದೆ ಅದನ್ನು ನಿವಾರಿಸಿಕೊಳ್ಳಲು ದುರ್ಗಾ ದೇವಿಗೆ ದೀಪವನ್ನು ಹಚ್ಚಿ. ಗಣೇಶನ ದರ್ಶನ ಮಾಡಿ ಬನ್ನಿ.

ಧನಸ್ಸು ರಾಶಿ : ಚೆನ್ನಾಗಿದೆ ನೀವು ಏನೂ ಮಾಡುವುದಿಲ್ಲ, ತುಂಬ  ಸೋಮಾರಿಗಳಾಗಿರುತ್ತೀರ. ಬೇರೆಯವರಿಗೆ ಪ್ರಚೋದಿಸಿ ಅವರ ಕೈಯಲ್ಲಿ ಕೆಲಸ ಮಾಡಿಸಿ  ಅವರಿಂದ ಬಯ್ಯಿಸಿ ಕೊಳ್ಳುತ್ತೀರ.

ಮಕರ ರಾಶಿ : ಚೆನ್ನಾಗಿದೆ ಪ್ರಯಾಣದಲ್ಲಿ ಸ್ವಲ್ಪ ಬಳಲಿಕೆ ಬಿಟ್ಟರೆ ಯಾವುದೇ ರೀತಿಯ ತೊಂದರೆ ಇಲ್ಲ ಅದ್ಭುತವಾದಂತಹ ದಿನ.

ಕುಂಭ ರಾಶಿ : ಧರ್ಮಕಾರ್ಯ ದಾನ ಕಾರ್ಯ ನಿಮ್ಮಿಂದ ಬೇರೆಯವರಿಗೆ ಒಳ್ಳೆಯದನ್ನು ಮಾಡಿಸುವಂತ ಕಾರ್ಯವನ್ನು ನಡೆಸುತ್ತಾನೆ.

ಮೀನ ರಾಶಿ : ಚೆನ್ನಾಗಿದೆ ಉದ್ಯೋಗದ ವಿಚಾರದಲ್ಲಿ ಕುಟುಂಬದ ವಿಚಾರದಲ್ಲಿ ಮಗುವನ್ನು ಮಾಡಿಕೊಳ್ಳುವ ವಿಚಾರದಲ್ಲಿ,  ವೃತ್ತಿ ಯನ್ನು ಬದಲಾಯಿಸುವ ವಿಚಾರ,  ಸ್ವಂತ ಮನೆ ಅಂತ ಉದ್ಯೋಗದ ವಿಚಾರದಲ್ಲಿ ಇದ್ದರೆ ಅದ್ಭುತವಾದ ಬದಲಾವಣೆಯನ್ನು ಕಾಣುವಂತಹ ದಿನ.

All Rights reserved Namma Kannada Entertainment.

Advertisement
Share this on...