ರಾಹು ದೋಷ ಪರಿಹಾರ

in ಜ್ಯೋತಿಷ್ಯ 1,240 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್  ಋತು, ಅಧಿಕ ಮಾಸೆ,  ಶುಕ್ಲ ಪಕ್ಷದ ಚತುರ್ದಶಿ ತಿಥಿ, ವಿಶಾಕ ನಕ್ಷತ್ರ,  ವೈದೃತಿ ಯೋಗ,  ಭದ್ರಂಕ್ ಕರಣ,   ಸೆಪ್ಟೆಂಬರ್ 21 ,    ಸೋಮವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ  ಮದ್ಯಾಹ್ನ  12ಗಂಟೆ 45 ನಿಮಿಷದಿಂದ 2 ಗಂಟೆ  13 ನಿಮಿಷದವರೆಗೂ ಇದೆ.

Advertisement

ನಮ್ಮ ಹಿರಿಯರು ಋಷಿ ಮುನಿಗಳು ಯಾವ ದೇವರಿಗೆ ಯಾವ  ಪೂಜೆಯನ್ನು ಮಾಡಬೇಕು. ಸಂಕಲ್ಪವನ್ನು ಮಾಡಬೇಕು. ಯಾವ ದೇವರಿಗೆ ಯಾವ ಪುಷ್ಪವನ್ನು ಅರ್ಪಿಸಬೇಕು. ಯಾವ  ದೇವರಿಗೆ ಯಾವ ನೈವೇದ್ಯವನ್ನು ಇಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ.  ಯಾರಿಗಾದರೂ ನೆನ್ನೆಯ ಬಗ್ಗೆ ನಾಳೆಯ ಬಗ್ಗೆ ನೆನೆಸಿಕೊಂಡು ಭಯ ಆಗುತ್ತಿರುತ್ತದೆ ಅದೇ ರಾಹು ಛಾಯೆ.  ಸಾಧ್ಯವಾದರೆ ಪ್ರತಿದಿನ ಪಾರಿಜಾತ ಹೂವನ್ನು ತೆಗೆದುಕೊಂಡು ಬರಬೇಕು. ಸಾಧ್ಯವಾಗದಿದ್ದರೆ  ಕನಿಷ್ಠ ಪಕ್ಷ ತಿಂಗಳಲ್ಲಿ ಎರಡು ಸಂಕಷ್ಟ,  ಎರಡು ಷಷ್ಟಿ, ನಾಲ್ಕು ಮಂಗಳವಾರ ಬರುತ್ತದೆ ಆ ಎಂಟು ದಿನವೂ ಕೂಡ ಹತ್ತಿರದಲ್ಲಿ ರುವಂತಹ ಸುಬ್ರಹ್ಮಣ್ಯ ದೇವಸ್ಥಾನ ಅಥವಾ ನಾಗರ ಕಟ್ಟೆಗೆ ಹೋಗಿ ಒಂಬತ್ತು ಪಾರಿಜಾತ ಹೂವುಗಳು ಅಥವಾ ಒಂದು ಬಟ್ಟಲು ಹೂವುಗಳನ್ನು ಅರ್ಪಿಸಿ ಪೂಜೆ ಮಾಡಿ ಬನ್ನಿ. ಕಾಳಸರ್ಪ ದೋಷ, ಪಂಚಮ ರಾಹು ದೋಷ,  ಅಷ್ಟಮ ರಾಹು ದೋಷ, ರಾಹು ಕೇತು ದೋಷ,  ರಾಹು ನಿಮ್ಮ ಲಗ್ನದ ದೋಷ, ಈ ದೋಷಗಳಿಗೆ ಒಳಗಾಗಿದ್ದರೆ ಈ ದೋಷ ಗಳಿಗೊಂದು ಅಡ್ಡಗೋಡೆ ಯಾಗುತ್ತದೆ ಪೂಜೆ. ಯಾರು ತುಂಬಾ ಹೆಚ್ಚಾಗಿ ಕಪ್ಪು ಬಟ್ಟೆ ಧರಿಸುತ್ತೀರಾ ಮತ್ತು ಜನರ ಮುಂದೆ ಮಾತನಾಡಲು ಭಯ ಪಡುತ್ತೀರಾ , ವಿಪರೀತ ಮಾತನಾಡುವುದು ಹೆಚ್ಚಾಗಿ ಕನ್ನಡಿ ಮುಂದೆ ನಿಂತು ಕೊಳ್ಳುವುದು ರಾಹು ದೋಷ. ರಾಹು ದೋಷ ಮತ್ತು ಅದರ ಪರಿಹಾರದ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

Advertisement

 ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚಂದ್ರ ಗುರು ಸಾರದಲ್ಲಿರುವುದರಿಂದ ಚೆನ್ನಾಗಿದೆ.  ತ್ತಲೇ ಮೇಲೆ ಬಂಡೆ ಬೀಳುವಂತಹ ತೊಂದರೆಯಾದರೂ ಕೂಡ ಇದು ತಪ್ಪುತ್ತದೆ.

ವೃಷಭ ರಾಶಿ : ಮಕ್ಕಳು ಸಾಲಭಾದೆಯಿಂದ ಬಳಲುವ ಸಂಭವವಿದೆ ಎಚ್ಚರಿಕೆ.

ಮಿಥುನ ರಾಶಿ : ಯಾರನ್ನಾದರೂ ನಂಬಿ ದುಡ್ಡು ಕೊಟ್ಟು ಕಳೆದುಕೊಳ್ಳುತ್ತೀರ. ಮಕ್ಕಳಿಗಾಗಿ ವಿಪರೀತ ಖರ್ಚು ಮಾಡುವ ತಲೆ ಭಾರವಿರುತ್ತದೆ.

ಕರ್ಕಾಟಕ ರಾಶಿ : ಕೆಲವೊಮ್ಮೆ ಗುರಿಯನ್ನು ತಲುಪಲು ನೇರ ದಾರಿಯಲ್ಲಿ ಹೋದರೆ ಆಗುವುದಿಲ್ಲ. ಅಡ್ಡ ದಾರಿಯಲ್ಲಿ ಹೋಗಬೇಕಾಗುತ್ತದೆ.

ಸಿಂಹ ರಾಶಿ : ಗೌರವ,  ಸನ್ಮಾನ,  ಹೆಸರು,  ಕೀರ್ತಿ,  ಮಕ್ಕಳ ವಿಚಾರ ದಲ್ಲೊಂದು ಪ್ರತಿಷ್ಠೆಯ ದಿನ.

ಕನ್ಯಾ ರಾಶಿ : ಸುಖ ಅನ್ನುವ ವಿಚಾರದಲ್ಲೊಂದು ವೃದ್ಧಿ ಆದರೆ ನೀವು ಸುಖವಾಗಿ ಇರುವುದಿಲ್ಲ.  ನಿಮ್ಮಿಂದ ಎಲ್ಲ ಸುಖವಾಗಿರುತ್ತಾರೆ. ಗಂಧದ ಬರದಂತೆ ನೀವು.

ತುಲಾ ರಾಶಿ : ಸ್ವಲ್ಪ ತಂದೆ ತಾಯಿ ವಿಚಾರದಲ್ಲೊಂದು ಮಾತು ಬರುತ್ತದೆ.

ವೃಶ್ಚಿಕ ರಾಶಿ : ಒಳ್ಳೆಯ ಕಾರ್ಯಗಳಿಗಾಗಿ ಮನೆತನ ಕ್ಕೋಸ್ಕರ ಮನೆಯವರಿಗಾಗಿ ಸ್ವಲ್ಪ ಖರ್ಚಾಗುತ್ತದೆ.

ಧನಸ್ಸು ರಾಶಿ : ಚೆನ್ನಾಗಿದೆ ಬುದ್ಧಿ ಮೇದಸ್ಸನ್ನು ಉಪಯೋಗಿಸಿ ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಆದರೂ ಸ್ವಲ್ಪ ಅಳುಕಿರುತ್ತದೆ. ಗಣಪತಿ ಅನುಷ್ಠಾನವನ್ನು ಮಾಡಿಕೊಳ್ಳಲು ಕಡಿಮೆಯಾಗುತ್ತದೆ.

ಮಕರ ರಾಶಿ : ತುಂಬಾ ದಿನಗಳ ನಂತರ ಖರ್ಚು ಮಾಡುವ ಸೌಭಾಗ್ಯ ಬಂದಿದೆ ಮಾಡಿ. ಉದ್ಯೋಗದ ವಿಚಾರದಲ್ಲಿ ಒಳ್ಳೆಯ ಸುದ್ದಿಯನ್ನು ಕೇಳುವಂತಹ ಶುಭಯೋಗವಿದೆ.

ಕುಂಭ ರಾಶಿ : ಚೆನ್ನಾಗಿದೆ ಲಾಭ ಸ್ಥಾನದಲ್ಲಿ ಗುರು ಇರುವುದರಿಂದ ಧರ್ಮಕಾರ್ಯ ದಾನ ಕಾರ್ಯ ಅನಾಥಾಶ್ರಮ ಸಂಸ್ಕಾರ ನ್ಯಾಯಬದ್ಧ ಜೀವನ ಧರ್ಮ ಬದ್ಧ ಜೀವನದಲ್ಲಿ ಪ್ರಗತಿ ಕಾಣುವಂತಹ ದಿನ.

ಮೀನ ರಾಶಿ : ಸ್ವಲ್ಪ ಜಿಪುಣ ಸ್ವಭಾವ ನೆಮ್ಮದಿ ಬದುಕು ಕಟ್ಟಿಕೊಳ್ಳುವ ಶಕ್ತಿ ನಿಮಗಿರುತ್ತದೆ.

All Rights reserved Namma Kannada Entertainment.

Advertisement
Share this on...