ರಾಹುವಿನ ಆಗಮನ : ಈ ರಾಶಿಯವರು ವಕ್ರಗತಿಯಿಂದಾದರೂ ಭೂಮಿ ಅಥವಾ ವಾಹನವನ್ನು ಪಡೆಯುತ್ತೀರಿ

in ಜ್ಯೋತಿಷ್ಯ 1,043 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಶುಕ್ಲ ಪಕ್ಷದ ದಶಮಿ  ತಿಥಿ, ಉತ್ತರಾಷಾಢ  ನಕ್ಷತ್ರ, ಅತಿಗಂಡ ಯೋಗ,  ತೈತುಲ ಕರಣ ಸೆಪ್ಟೆಂಬರ್ 25  ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಮಧ್ಯಾಹ್ನ 12 ಗಂಟೆ 47 ನಿಮಿಷದಿಂದ 2 ಗಂಟೆ 27 ನಿಮಿಷದವರೆಗೂ ಇದೆ.

Advertisement

ಮಿಥುನ ರಾಶಿಗೆ ರಾಹುವಿನ ಆಗಮನದಿಂದಾಗುವ ಫಲಾನುಫಲಗಳು :
ತಾಯಿ,  ತಾಯಿ  ಸಮಾನರಾದ ಅತ್ತೆ,  ಚಿಕ್ಕಮ್ಮ, ದೊಡ್ಡಮ್ಮ ಮುಂತಾದವರ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಒಂದು ವಾರ ಅಥವಾ ಹತ್ತು ದಿನಗಳ ಒಳಗಾಗಿ ಭೂಮಿ ಅಥವಾ ವಾಹನವನ್ನು ವಕ್ರಗತಿಯಿಂದಾದರೂ ಸರಿ ನೀವು ಪಡೆಯುತ್ತೀರಿ. ಪರದೇಶ ಪರಸ್ಥಳದ ಸುತ್ತಾಟ,  ದೈವಶಕ್ತಿಯ ಅನುಗ್ರಹ,  ದೇವಿ ಕ್ಷೇತ್ರಗಳ ಅನುಗ್ರಹ, ದೇವಿ ಕ್ಷೇತ್ರಗಳ ದರ್ಶನಕ್ಕೆ ಅವಕಾಶ ದೊರೆಯುತ್ತದೆ.  ಮಾತೃಗಳ ವಿಚಾರ ದಲ್ಲೊಂದು ದೊಡ್ಡ ಬದಲಾವಣೆ ಆಗುತ್ತದೆ. ಆರೋಗ್ಯ ತುಂಬಾ ಹಾಳಾಗಿದ್ದರೆ ಅವರು ಚೇತರಿಸಿಕೊಂಡು ಬಿಡುತ್ತಾರೆ,  ಇಲ್ಲವೇ ಚೆನ್ನಾಗಿದ್ದವರ ಆರೋಗ್ಯ ಹಾಳಾಗಿ ಬಿಡುತ್ತದೆ. ತಾಯಿಗೆ ಹತ್ತಿರವಾಗಿದ್ದವರು ಅವರ ವಿರುದ್ಧವಾಗಿ ನಿಲ್ಲಬಹುದು,  ಅಥವಾ ತಾಯಿಗೆ ದೂರವಿದ್ದವರು ಹತ್ತಿರವಾಗಬಹುದು. ದೂರದ ಪ್ರಯಾಣ ಮಾಡುವ ಸುಯೋಗ ಉಂಟು. ಬಂಗಾರವನ್ನು ಕೊಂಡುಕೊಳ್ಳುವ ಸಹಯೋಗವಿಲ್ಲದೆ ಪುತ್ರ ಸಂತಾನ ಆಗುವ ಯೋಗ ಕೂಡ ಇದೆ.  ರಾಜಕೀಯದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಸ್ಥಾನವನ್ನು ಕಳೆದುಕೊಳ್ಳಬಹುದು, ಅಥವಾ ಯಾವ ಸ್ಥಾನದಲ್ಲೂ  ಇಲ್ಲದೇ ಇದ್ದರೆ ಉನ್ನತ   ಸ್ಥಾನವನ್ನು  ಪಡೆದುಕೊಳ್ಳುತೀರ. ಸರಕಾರಿ ಮಟ್ಟದ ಕೆಲಸ ಕಾಂಟ್ರಾಕ್ಟರ್ ಮುಂತಾದ ಕೆಲಸಗಳಲ್ಲಿ ಬೆಳವಣಿಗೆಯಾಗುವ ಶುಭಯೋಗವಿದೆ. ಎಂತಹ ಶತ್ರುಗಳಿದ್ದರು ಕೂಡ ನಿಮ್ಮಿಂದ ದೂರವಾಗುತ್ತಾರೆ ಹೃದಯಕ್ಕೆ  ಸಂಬಂಧಪಟ್ಟಂತೆ ಸಮಸ್ಯೆಗಳೇನಾದರೂ ಇದ್ದರೆ ಅದರ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಿ. ಇನ್ನೂ ಹೆಚ್ಚಿನ ಮಾಹಿತಿಯನ್ನು ತೆಗೆದುಕೊಳ್ಳಲು ಈ ಕೆಳಗಿನ ವಿಡಿಯೋ ವನ್ನು ನೋಡಿ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚೆನ್ನಾಗಿದೆ ಚಂದ್ರ ಸೂರ್ಯನ ಸಾರದಲ್ಲಿದ್ದ ಸೂರ್ಯನೂ ಕೂಡ ಸೂರ್ಯನ  ಸಾರದಲ್ಲಿ ಇರುವುದರಿಂದ ಅಧಿಕಾರ ಮಟ್ಟ ಉನ್ನತ ಸ್ಥಾನ ಎಲ್ಲವು ದೊರೆಯುವಂತಹ, ಉನ್ನತ ಮಟ್ಟದ ಅಧಿಕಾರ ಮತ್ತು ಜವಾಬ್ದಾರಿ ದೊರೆಯುವಂತಹ ದಿನ. ನಿಷ್ಠೆಯಿಂದ ಮುಂದೆ ನುಗ್ಗಿ ಫಲ ಮತ್ತು ಗೆಲುವು ಎರಡೂ ನಿಮ್ಮದು.

ವೃಷಭ ರಾಶಿ : ಚೆನ್ನಾಗಿದೆಯೇ ತಂದೆ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ ಅವರ ಜೊತೆ ವಾದಕ್ಕೆ ಇಳಿಯಬೇಡಿ ಅವರ ಮಾತಿಗೂ ಸ್ವಲ್ಪ ಬೆಲ ಕೊಡಿ.

ಮಿಥುನ ರಾಶಿ : ಆಕಸ್ಮಿಕ ಧನಯೋಗ ಕೀರ್ತಿ ಪ್ರತಿಷ್ಠೆ ದೊರೆಯುತ್ತದೆ ಆದರೆ ಸ್ವಲ್ಪ ಹುಡುಕುತ್ತೀರ ಪಿತ್ತ ಹೆಚ್ಚಿರುತ್ತದೆ. ಸಜ್ಜಾ ಅಥವಾ ಕಾಮಕಸ್ತೂರಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ಕುಡಿಯಿರಿ ಇದರಿಂದ ಪಿತ್ತ ಕಡಿಮೆಯಾಗುತ್ತದೆ.

ಕರ್ಕಾಟಕ ರಾಶಿ : ಸರ್ಕಾರಿ ಮಟ್ಟದ ಮತ್ತು ಸ್ವಂತ ವ್ಯವಹಾರಗಳಲ್ಲಿ ಪ್ರಗತಿ ಆದರೆ ಸಂಗಾತಿಯೊಡನೆ ಒಂದು ಸಣ್ಣ ಎಳೆ ದಾಟವಿರುತ್ತದೆ.

ಸಿಂಹ ರಾಶಿ : ನಂದೇ ನಾನೇ ಎಂದು ಯುದ್ಧಕ್ಕಿಳಿದು ಬಿಡುತ್ತೀರ.

ಕನ್ಯಾ ರಾಶಿ : ಚೆನ್ನಾಗಿದೆ ಯಾವುದೇ ರೀತಿಯ ತೊಂದರೆ ಇಲ್ಲ ಆದರೆ ಸ್ವಲ್ಪ ಉಷ್ಣ ಬಾಧೆಯಿಂದ ನರಳುತ್ತೀರ  ತಂಪಾಗುವಂತೆ ಎಳನೀರನ್ನು ಸೇವಿಸಿ. ಅದರಲ್ಲೂ ಹೆಣ್ಣು ಮಕ್ಕಳು ಕಪ್ಪನ್ನು ಎಡ ಉಬ್ಬಗೆ ಸ್ವಲ್ಪ ಹಚ್ಚಿ ಹೊರಗೆ ಹೋಗಿ,  ನಿಮಗೆ ಬಹಳ ಬೇಗ ದೃಷ್ಟಿಯಾಗುತ್ತದೆ. ಗಂಡು ಮಕ್ಕಳು ಬಲಗೈಗೆ ರಾಹು ರಕ್ಷೆಯನ್ನು ಅಥವಾ ಪಂಚಲೋಹದ ಕಡಗವನ್ನು ಧರಿಸುವುದು ಒಳ್ಳೆಯದು.

ತುಲಾ ರಾಶಿ :  ಚೆನ್ನಾಗಿದೆ ಆದರೆ ಸ್ವಲ್ಪ ಖರ್ಚಿನ ದಿನಕರ್ ಖರ್ಚನ್ನು ನಿಭಾಯಿಸಿಕೊಂಡು ಕೂಡ ಹೋಗುತ್ತಿರ.

ವೃಶ್ಚಿಕ ರಾಶಿ :  ಎಂತಹ ಸಂಕಷ್ಟವಿದ್ದರೂ, ಎಂತಹ ಸಮಯದಲ್ಲೂ ಅದರಿಂದ ಬಿಡಿಸಿಕೊಂಡು ಹೊರಗೆ ಬರುವಂತಹ ಶಕ್ತಿ ನಿಮಗಿದೆ.

ಧನಸ್ಸು ರಾಶಿ : ಚೆನ್ನಾಗಿದೆ ಉದ್ಯೋಗದ ನಿಮಿತ್ತ ವ್ಯವಹಾರದಲ್ಲೇ ಮತ್ತ ಕುಟುಂಬದ ನಿಮಿತ್ತ ಒಂದು ಸುದ್ದಿಯೊಂದನ್ನು  ಕೇಳುತ್ತೀರಾ.  ಸ್ವಲ್ಪ ಆತಂಕ ಪಡುತ್ತೀರಾ ಆಗದ ಕೆಲಸಗಳಲ್ಲೂ ಕೂಡ ಯಶಸ್ವಿ ಕಾಣುವಂತಹ ದಿನ.

ಮಕರ ರಾಶಿ : ಆತಂಕ ಬೇಡ ತೊಂದರೆಯೇನೂ ಇಲ್ಲ ಆಕಸ್ಮಿಕವಾಗಿ ಭೂ ಯೋಗ ಧನಯೋಗ ಗಳಾಗುವ ಸಂಭವವಿದೆ.

ಕುಂಭ ರಾಶಿ : ಶತ್ರುಗಳಿಗೆ ಬಲ ಕಡಿಮೆ ಆದಷ್ಟು ನಮಗೆ ಬಲು  ಜಾಸ್ತಿಯಾಗುತ್ತದೆ.  ಮುಂದಕ್ಕೆ ಹೆಜ್ಜೆ ಹಾಕಿ ಯಾವುದೇ ರೀತಿಯ ತೊಂದರೆ ಇಲ್ಲ.

ಮೀನ ರಾಶಿ : ಕೊಡುವುದು ತೆಗೆದುಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ, ಸಂಗಾತಿಯ ಜೊತೆ ಸಣ್ಣ ಪುಟ್ಟ ಕಿರಿಕಿರಿ ಉಂಟಾಗುವ ಸಂಭವವಿದೆ ಆದ್ದರಿಂದ ಅವರ ಜತೆ ಶಾಂತವಾಗಿರಿ ಸ್ವಲ್ಪ ಬಿಟ್ಟುಕೊಡಿ.ಮಿಕ್ಕಂತೆ ಯಾವುದೇ ರೀತಿಯ ತೊಂದರೆ ಇಲ್ಲ.

All Rights reserved Namma  Kannada Entertainment.

Advertisement
Share this on...