ಈ ರಾಶಿಯವರಿಗೆ ರಾಹು ವಿಜಯಯಾತ್ರೆಯಾಗಿ ಬಂದಿದ್ದಾನೆ

in ಜ್ಯೋತಿಷ್ಯ 880 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಶುಕ್ಲ ಪಕ್ಷದ ಏಕಾದಶಿ ತಿಥಿ,ಶ್ರವಣ ನಕ್ಷತ್ರ, ಸುಕರ್ಮ  ಯೋಗ,  ವನಿಜ ಕರಣ, ಸೆಪ್ಟೆಂಬರ್ 27, ಬಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ ಬೆಳಗ್ಗೆ  9 ಗಂಟೆ 49 ನಿಮಿಷದಿಂದ 11 ಗಂಟೆ 31 ನಿಮಿಷದವರೆಗೂ ಇದೆ.

Advertisement

ಹನ್ನೊಂದನೇ ಮನೆಗೆ ಕರ್ಕಾಟಕ ರಾಶಿಗೆ ರಾಹು ವಿಜಯ ಯಾತ್ರೆಯಾಗಿ ಬಂದು ನಿಂತಿದ್ದಾನೆ. ಪಂಚಮ ಸ್ಥಾನದಲ್ಲಿ ವಿಶೇಷವಾಗಿ ಕೇತು ಕುಳಿತಿದ್ದಾನೆ. ಭೂಮಿ ಮನೆ ಪಡೆದುಕೊಳ್ಳುತ್ತೀರಿ. ನಿಮ್ಮ ಶತ್ರುಗಳ ಕೂಡ ನಿಮ್ಮ ಮುಂದೆ ತಲೆತಗ್ಗಿಸುತ್ತಾರೆ. ಶುಕ್ರ ನಿಮ್ಮ ಮನೆಯಲ್ಲೇ ಇರುವುದರಿಂದ ಭೋಗವನ್ನು ಪಡೆಯುತ್ತೀರಿ,  ಬಂಗಾರವನ್ನು ಪಡೆಯುತ್ತಿರಿ,  ಅಧಿಕಾರವನ್ನು ಕೂಡ ಪಡೆಯುತ್ತೀರಿ. ಗುರು ಸ್ವಲ್ಪ ವಕ್ರವಾಗಿ ರುವುದರಿಂದ ಮನಸ್ಸಿಗೆ ಕಸಿವಿಸಿಯಾಗುತ್ತದೆ ಆದ್ದರಿಂದ ಗುರುಶಾಂತಿ ಮಾಡಿಸಿಕೊಳ್ಳಿ ಜತೆಗೆ ಗಣೇಶನ ಕ್ಷೇತ್ರಗಳಿಗೆ ಹೋಗಿ ಪೂಜೆ ಸಲ್ಲಿಸಿ. ಅಧಿಕವಾಗಿ ಖರ್ಚಾಗುವ ಸಂಭವವಿದೆ ಅದನ್ನು ಅನೈತಿಕವಾಗಿ ಖರ್ಚು ಮಾಡುವುದರ ಬದಲು ಧಾರ್ಮಿಕ ಕಾರ್ಯಗಳಿಗೆ ಖರ್ಚು ಮಾಡಲು ಬಳಸಿಕೊಳ್ಳಿ. ನಿತ್ಯ ವಿನಾಯಕನ ಆರಾಧನೆಯನ್ನು ಮಾಡಿ ಗುರು ಸೇವೆಯನ್ನು ಮಾಡಿ. ಗುರುವಾರದಂದು ರಾಮರ ದೇವಸ್ಥಾನಕ್ಕೆ ಕಾಬೂಲ್ ಕಡಲೆಯನ್ನು ಕೊಟ್ಟು ಬನ್ನಿ. ಅನ್ನುವ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚೆನ್ನಾಗಿದೆ ವಾಹನ,  ಭೂಮಿ,  ಪ್ರೀತಿ,  ಪ್ರೇಮ,  ಭೋಜನ ಕೂಟ ಎಲ್ಲವೂ ಇರುವಂತಹ ದಿನ.

ವೃಷಭ ರಾಶಿ : ಅತ್ತೆ ಸೊಸೆ ಅತ್ತಿಗೆ ನಾದಿನಿ ಅಕ್ಕ ತಂಗಿ ಇಂಥವರ ವಿಷಯದಲ್ಲಿ ಸ್ವಲ್ಪ ತಳಮಳ, ಮಿಕ್ಕಂತೆ ಯಾವುದೇ ರೀತಿಯ ತೊಂದರೆ ಇಲ್ಲ.

ಮಿಥುನ ರಾಶಿ : ಖರ್ಚು ಸ್ವಲ್ಪ ಜಾಸ್ತಿ ಆಕಸ್ಮಿಕವಾಗಿ ದೂರದಿಂದ ಶುಭ ಸುದ್ದಿಯೊಂದನ್ನು ಕೇಳುತ್ತೀರಾ. ತಾಯಿ ಇಲ್ಲವೇ ಹೆಂಡತಿಯ ಅಕ್ಕ ತಂಗಿ ಇಲ್ಲವೇ ಗಂಡನ ಅಕ್ಕ ತಂಗಿ ವಿಚಾರದಲ್ಲಿ ಸ್ವಲ್ಪ ಆರೋಗ್ಯದ ಸಮಸ್ಯೆ ಇದೆ.

ಕರ್ಕಾಟಕ ರಾಶಿ : ಚೆನ್ನಾಗಿದೆ ಸ್ವಲ್ಪ ಅಲಂಕಾರ ಮಾಡಿಕೊಳ್ಳುವಂತಹ ದಿನ.

ಸಿಂಹ ರಾಶಿ : ಚೆನ್ನಾಗಿದೆ ಓಡಾಟ ಸುತ್ತಾಟ ಭಾನುವಾರದ ಬಾಡೂಟ ಮೂರು ಕೂಡ ನಿಮಗೆ ಇಂದು ಇದೆ.

ಕನ್ಯಾ ರಾಶಿ : ಮಕ್ಕಳ ವಿಚಾರದಲ್ಲಿ ಸ್ತ್ರೀಯ ವಿಚಾರದಲ್ಲಿ ಸೋದರಿಯ ವಿಚಾರದಲ್ಲೊಂದು ತಳಮಳ.

ತುಲಾ ರಾಶಿ : ಚೆನ್ನಾಗಿದೆ, ಆದರೆ ಸೋಮವಾರದ ರೀತಿಯಲ್ಲಿ ಸ್ವಲ್ಪ ತಳಮಳಗೊಳ್ಳುತ್ತೀರ.

ವೃಶ್ಚಿಕ ರಾಶಿ : ಪೂರ್ತಿ ದಿನ ಭಾನುವಾರದ ಛಾಯೆ ಓಡಾಟ ಸುತ್ತಾಟ ಆಕಸ್ಮಿಕ ದೈವದರ್ಶನ ಗುರು ದರ್ಶನವನ್ನು ಪಡೆಯುವಂತಹ ಸುಯೋಗದ ದಿನ.

ಧನಸ್ಸು ರಾಶಿ : ಕುಟುಂಬದವರ ವಿಚಾರದಲ್ಲೊಂದು ತಳಮಳ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ಅದನ್ನು ಬಿಟ್ಟರೆ ಯಾವ ರೀತಿಯ ತೊಂದರೆ ಇಲ್ಲ. ಬೆಳಗ್ಗೆ ತುಳಸಿಕಟ್ಟೆಯ ಹತ್ತಿರ ದೀಪವನ್ನು ಹಚ್ಚಿ ಜೊತೆಗೆ ತುಳಸಿ ದೊಡ್ಡ ಪತ್ರೆ ಗರಿಕೆ ಬೇವಿನ ಎಲೆಗಳನ್ನು ಸೇರಿಸಿ ಅರೆದು ಅದನ್ನು ಸೇವಿಸಿ ಇದರಿಂದ ಎಲ್ಲಾ ಇನ್ಫ್ಲೇಷನ್ ಗಳು ಕೂಡ ದೂರಾಗುತ್ತವೆ.

ಮಕರ ರಾಶಿ : ಚೆನ್ನಾಗಿದೆ ಗಂಡ ಹೆಂಡತಿ  ಜೊತೆ ಹತ್ತಿರದವರ ಜೊತೆ ಹೊರಗಡೆ ಓಡಾಡುವ   ಸಂಭವ ಇದೆ.

ಕುಂಭ ರಾಶಿ : ಸರ್ಪ್ರೈಸ್ ಗುಡ್ ನ್ಯೂಸ್ ಓಡಾಟ ಸುತ್ತಾಟ ಅನುಬಂಧದ ದಿನ. ತುಂಬದ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ ಮಿಕ್ಕಂತೆ ಆದ ರೀತಿಯ ತೊಂದರೆ ಇಲ್ಲ.

ಮೀನ ರಾಶಿ : ಅದ್ಭುತವಾದ ದಿನ ಇಂದು ಬಂಗಾರ ವಾಹನ ಮುಂತಾದ ಅವುಗಳನ್ನು ಖರೀದಿಸುವ ಇಂತಹ ಅದೃಷ್ಟದ ದಿನ.

All Rights reserved Namma  Kannada Entertainment.

Advertisement
Share this on...