ಈ ರಾಶಿಯವರು ಏನನ್ನು ಸಾಧಿಸಲು ಹೊರಟಿರುವಿರಿ ಅದನ್ನು ಸಾಧಿಸಲು ಅನುಕೂಲಕರವಾದ  ದಿನ..

in ಜ್ಯೋತಿಷ್ಯ 121 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ ಷಷ್ಠಿ  ತಿಥಿ,  ಉತ್ತರ ಭಾದ್ರಾ  ನಕ್ಷತ್ರ,  ಶೋಬಿನಿ ಯೋಗ, ವನಿಜ ಕರಣ ಜುಲೈ 11   ಶನಿವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ ಬೆಳಗ್ಗೆ ಬ್ರಾಹ್ಮಿ ಕಾಲದಲ್ಲಿ ಬರುವುದರಿಂದ ಅದನ್ನು ಉಲ್ಲೇಖ ಮಾಡಿಲ್ಲ.

Advertisement

ಪ್ರತಿ ದಿನ ಇಪ್ಪತ್ತೈದು  ನಿಮಿಷಗಳ ಕಾಲ ಧ್ಯಾನ ಮಾಡಿ. ನನಗೆ ಶಕ್ತಿಯಿದೆ,  ಏನನ್ನಾದರೂ ಸಾಧಿಸಬಲ್ಲೆ,  ಯಾವುದಕ್ಕೂ ಹೆದರುವುದಿಲ್ಲ ಎನ್ನುವುದನ್ನು  ಮನಸ್ಸಿನಲ್ಲಿ ತುಂಬಿಸಿಕೊಳ್ಳಿ ಆನಂದವನ್ನು  ಹುಡುಕುವುದು  ಬ್ರಹ್ಮತ್ವದಲ್ಲಿ ಅಲ್ಲ, ಇರುವುದರಲ್ಲೇ ಆನಂದವನ್ನು ಹುಡುಕಿ. ಆಗಲೇ ನಮ್ಮ ಮನಸ್ಸಿಗೊಂದು ಶಕ್ತಿ . ಅದುವೇ ನಿತ್ಯ ಆರೋಗ್ಯದ ಶಕ್ತಿ.

Advertisement

 

Advertisement

Advertisement

 ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ :  ಚಂದ್ರ ಶನಿ ಸಾರದಲ್ಲಿರುವುದರಿಂದ ಈ ರಾಶಿಯವರಿಗೆ ಬಹುಬೇಗ ಥಂಡಿಯಾಗುತ್ತದೆ ಆದ್ದರಿಂದ ಶಿವ ಅಥವಾ ಲಿಂಗ ಮುದ್ರೆಯನ್ನು ಮಾಡಿ, ಯಾವುದೇ ರೀತಿಯ ದುಶ್ಚಟಗಳ ಅಭ್ಯಾಸ ಮಾಡಬೇಡಿ.

ವೃಷಭ ರಾಶಿ : ಇವತ್ತಿನ ದಿನ ಕೆಲಸ ಕಾರ್ಯಗಳೆಲ್ಲ ನಿಧಾನವಾಗಿ ಆರಂಭವಾಗುತ್ತದೆ, ಆದರೂ ನಿಮ್ಮ ಗುರಿಯನ್ನು ತಲುಪುತ್ತೀರ.

ಮಿಥುನ ರಾಶಿ : ಶನಿ ತತ್ವ  ಅಳುಕು ತತ್ವ,  ಆತಂಕವೇನೂ ಇಲ್ಲ. ನಿಮ್ಮ ತೃಪ್ತಿಗಾಗಿ ಕೆಲಸ ಮಾಡಿ ಬೇರೆ ಅವರ ತೃಪ್ತಿಗೋಸ್ಕರ ಕೆಲಸ ಮಾಡಬೇಡಿ,  ನಿಮಗೆ ಇನ್ಕ್ರಿಮೆಂಟ್,  ಪ್ರಮೋಶನ್ ಸಿಗುತ್ತದೆ.

ಕರ್ಕಾಟಕ ರಾಶಿ : ಹಿರಿಯರ ಆರೋಗ್ಯದಲ್ಲಿ ಒಂದು ಸಣ್ಣ ವ್ಯತ್ಯಾಸ ಅದನ್ನು ಬಿಟ್ಟರೆ ಪರಿಶ್ರಮಕ್ಕೆ ತಕ್ಕಂತೆ ಫಲ.

ಸಿಂಹ ರಾಶಿ :  ರಾಜ ಗಾಂಭೀರ್ಯ , ನಿಮ್ಮ ಕರ್ತವ್ಯವನ್ನು ನೀವು ಮಾಡಿ ಪ್ರತಿಫಲವನ್ನು ದೇವರಿಗೆ ಬಿಡಿ .

ಕನ್ಯಾ ರಾಶಿ : ಪೆಟ್ರೋಲ್, ಲಿಕ್ಕರ್,   ಗ್ಯಾಸ್ , ಆಟೋ ಮೊಬೈಲ್ ಕ್ಷೇತ್ರದಲ್ಲಿ ಇರುವವರಿಗೆ ಸ್ವಲ್ಪ ಏರುಪೇರು.

ತುಲಾ ರಾಶಿ : ಸ್ವಲ್ಪ ಇನ್ಫೆಕ್ಷನ್ ಪ್ರಭಾವವಿರುತ್ತದೆ . ಚಂದ್ರ,  ಕುಜನ ಪ್ರಭಾವವಿರುತ್ತದೆ ಟ್ರಾವೆಲಿಂಗ್ ಕ್ಷೇತ್ರದಲ್ಲಿ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಇರಿ .

ವೃಶ್ಚಿಕ ರಾಶಿ : ಯಾವುದಕ್ಕೂ ತಲೆ ಕೆಡಿಸಿ ಕೊಳ್ಳುವುದಿಲ್ಲ. ಸೋಮಾರಿತನ,  ಕಫ ಪ್ರಕೃತಿ,  ದೈಹಿಕವಾಗಿ ಮತ್ತು ಮಾನಸಿಕವಾಗಿ ಸೋಮಾರಿಗಳಾಗಿರುತ್ತಾರೆ, ಸುಖ ಪುರುಷರು ಇಂದು. ಬೆಳಗ್ಗೆ ಎದ್ದ ತಕ್ಷಣ ಒಂದು ಸ್ಪೂನ್  ತೆಂಗಿನೆಣ್ಣೆಯನ್ನು ಸೇವಿಸಿ, ಇದು ಮೆಟೊ ಪಾಲೀಸ್ಂ ಅನ್ನು  ಹೆಚ್ಚಿಸುತ್ತದೆ,  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಧನಸ್ಸು ರಾಶಿ : ಅನ್ನದ ಮನೆಯಲ್ಲಿ ಸುಖದ ಭಾವದಲ್ಲಿ ಚಂದ್ರ ಸೂರ್ಯನ ಸಾರದಲ್ಲಿರುವುದರಿಂದ ಹುಳಿ ತತ್ತ್ವಕ್ಕೆ ನೀವು ದಾಸರು,  ಚಿತ್ರಾನ್ನ,  ಮೊಸರನ್ನ,  ಪ್ರಿಯರು, ಹಿತಮಿತವಾಗಿ ತಿನ್ನಿ .

ಮಕರ ರಾಶಿ : ಕಾರ್ಯಕ್ಷೇತ್ರದಲ್ಲಿ ಏನನ್ನೂ ಸಾಧಿಸಲು ಹೊರಟಿರುವಿರಿ ಅದನ್ನು ಸಾಧಿಸಲು  ಅನುಕೂಲಕರವಾದ  ದಿನ.

ಕುಂಭ ರಾಶಿ : ಎರಡು ಪಟ್ಟು ಕೆಲಸ, ಎರಡು ಪಟ್ಟು ಭಾರ,  ಎರಡು ಪಟ್ಟು ಹೊರೆ  ಅನ್ನುವಂತಹ ಭಾವ ಆದರು ನಿಭಾಯಿಸಿಕೊಂಡು ಹೋಗುವಂತಹ ಅದ್ಭುತವಾದ ದಿನ .

ಮೀನ ರಾಶಿ : ಮೀನ ರಾಶಿಯವರು ದೆವ್ವದ ಜಾತಿಯವರು, ರಾತ್ರಿ ಬೇಗ ಮಲಗುವುದಿಲ್ಲ, ನೀರಿಗೆ ತುಳಸಿ ಎಲೆ ಒಂದು ಚಿಟಿಕೆ ಅಷ್ಟು ಅರಿಶಿಣವನ್ನು ಹಾಕಿ ಕುದಿಸಿ ಕುಡಿಯಿರಿ ಇದರಿಂದ ಗಂಟಲಿನ ಕೆರೆತ ನಿವಾರಣೆಯಾಗುತ್ತದೆ .

All Rights reserved Namma Kannada Entertainment.

Advertisement
Share this on...