ಇಂದಿನಿಂದಲೆ ಗ್ರಹಣದ ಪ್ರಭಾವ… ಜಾಗ್ರತೆಯಿಂದಿರಿ…

in ಜ್ಯೋತಿಷ್ಯ 156 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಜೇಷ್ಠ ಮಾಸೆ,  ಕೃಷ್ಣ ಪಕ್ಷದ ಚತುರ್ದಶಿ ತಿಥಿ ,  ರೋಹಿಣಿ ನಕ್ಷತ್ರ,  ಶೂಲಯೋಗ  ಶಕುನಿಕರಣ, ಜೂನ್ 20 ಶನಿವಾರದ  ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ .  ಇಂದು ಅಮೃತ ಕಾಲ  ಬೆಳಿಗ್ಗೆ 8 ಗಂಟೆ 38 ನಿಮಿಷದಿಂದ,  10 ಗಂಟೆ 20 ನಿಮಿಷ ದವರೆಗೆ ಇದೆ. ಇಂದು ಜಾಗರೂಕವಾಗಿರಿ,  ಗ್ರಹಣದ ಪ್ರಭಾವ ಎರಡು ದಿನಗಳ ಹಿಂದಿನಿಂದಲೆ  ಇರುತ್ತದೆ.  ಸೂರ್ಯಗ್ರಹಣ – ಮನೆಯಲ್ಲಿ ತುಂಬ ವಯಸ್ಸಾದ ಹಿರಿಯರಿದ್ದರೆ ಅವರ ಆರೋಗ್ಯದ ಕಡೆ ಗಮನ ಕೊಡಿ.

Advertisement

ಗ್ರಹಣದ ಬಗ್ಗೆ ಗುರೂಜಿರವರು ಮಾರ್ಮಿಕವಾಗಿ ಏನು ಹೇಳಿದ್ದಾರೆ ಬನ್ನಿ ನೋಡೋಣ… ಸರ್ಕಾರದ ಅನ್ನ ತಿಂದು ಸರ್ಕಾರಕ್ಕೆ ಮೋಸ ಮಾಡಿ ಬದುಕು ಕಟ್ಟಿಕೊಂಡಿರುವವರು, ದುರ್ಲಾಭ ಮಾಡಿರುವವರು,  ಕೋಟಿ ಕೋಟಿಯಷ್ಟು ಹಣವನ್ನು ಲೂಟಿ  ಮಾಡಿರುವವರು,  ಖಂಡಿತವಾಗಿ ಶೂಲಕ್ಕೆ ಏರಿಸಲ್ಪಡುತ್ತಾರೆ . ಅಧಿಕಾರಿ ವರ್ಗ ಇನ್ನಷ್ಟು ಹಣದ ದಾಹಕ್ಕೆ ಒಳಗಾಗುತ್ತಾರೆ. ಹಲವಾರು ಯೋಜನೆಗಳನ್ನು ಕೂಡ ರೂಪಗೊಳಿಸುತ್ತಾರೆ. ನಮಗೆ ಸ್ವಾತಂತ್ರ್ಯ ಬಂದು ಎಪ್ಪತ್ತು ಮೂರು ವರ್ಷಗಳು ಕಳೆದರೂ ಕೂಡ ಶ್ರೀಮಂತ ಶ್ರೀಮಂತರಾಗಿಯೇ ಬಡವ ಬಡವನಾಗಿಯೇ ಉಳಿದಿದ್ದಾನೆ ಇದೇ ಗ್ರಹಣ ಎಂದು ಗುರೂಜಿ ರವರು ಹೇಳಿದ್ದಾರೆ. ಸೂರ್ಯ  ಎಂದರೆ ಆತ್ಮ,  ಆತ್ಮದ ಮಾತನ್ನು ಕೇಳಿ ಮುಂದೆ  ಹೆಜ್ಜೆ ಆಕಿ. ಆತ್ಮಕ್ಕಿಂತ ಶುದ್ಧವಾದುದು ಬೇರೆ ಯಾವುದೂ ಇಲ್ಲ. ಯಾವುದು ಸರಿ,  ಯಾವುದು ತಪ್ಪು,  ಯಾವುದನ್ನು ಬದಲಾಯಿಸಿಕೊಳ್ಳಬೇಕು ಎಂಬುದನ್ನು ನಮ್ಮ ಆತ್ಮವೇ ನಮಗೆ ತಿಳಿಸಿ ಹೇಳುತ್ತಿರುತ್ತದೆ ಅದರ ಮಾತನ್ನು ಕೇಳಿ ನಡೆದುಕೊಳ್ಳುವುದು ಒಳಿತು.

Advertisement

Advertisement

ಬೇರೆಯವರನ್ನು ನಂಬಿ ಅವರ ಮಾತುಗಳನ್ನು ಕೇಳುವುದೆ ಗ್ರಹಣ. ಕರೋನ  ಹೆಚ್ಚಾಗಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಮಾಸ್ಕ್  ಧರಿಸೋದು,  ಪದೇ ಪದೇ ಹ್ಯಾಂಡ್ ವಾಸ್ ಮಾಡುವುದು,  ಸೋಶಿಯಲ್ ಡಿಸ್ಟೆನ್ಸ್ ಮೇಂಟೇನ್ ಮಾಡುವುದು,  ಸಮಸ್ಯೆಗಳು ಬಂದ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು , ಇವುಗಳನ್ನು ಮಾಡದೇ ಇರುವುದೆ ಗ್ರಹಣ. ಈ ರೀತಿಯಾದ ತಪ್ಪುಗಳಿಂದ ಸಾಂಕ್ರಾಮಿಕ ರೋಗವಾದ ಕರೋನಾ ಹೆಚ್ಚಾಗುವ ಮೂಲಕ ದೇಶವು  ಮೊದಲನೇ ಸ್ಥಾನಕ್ಕೆ ತಲುಪುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಜಾಗರೂಕವಾಗಿ ಇರಿ,  ಅಲ್ಲದೆ ಆತ್ಮದ ಶುದ್ಧಿ ಮಾಡಿಕೊಳ್ಳಿ , ಆತ್ಮದ ಮಾತನ್ನು ಕೇಳಿ.  ಮನೆಯನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿ ಇಟ್ಟುಕೊಳ್ಳಿ  ಮತ್ತು ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ  ಹೊರಗೆ ಹೋಗಿ ಮನೆಗೆ ಬಂದಾಗ ಕೈ ಮತ್ತು ಕಾಲುಗಳನ್ನು ಸ್ವಚ್ಛಗೊಳಿಸಿ, ಅಲ್ಲದೆ ಊಟ ಮಾಡುವ ಮೊದಲು ಊಟದ ಕಡೆಗೂ ಗಮನ ವಹಿಸಿ ಒಳ್ಳೆಯ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಿ  ಎಂದು ಗುರೂಜಿ ಅವರು ಹೇಳುತ್ತಾರೆ.

Advertisement

 

ನಿಮ್ಮ ರಾಶಿಗಳ ಫಲ ಹೀಗಿದೆ.

ಮೇಷ ರಾಶಿ : ದಿನ ಚೆನ್ನಾಗಿದೆ ಸುಖಕಾರಕ,  ಉಚ್ಚಂಗತ,  ಸುಖದ ವೃದ್ಧಿ,  ಉದ್ಯೋಗ ವೃದ್ಧಿ , ಶನಿವಾರ ಆದ್ದರಿಂದ ಸುತ್ತಾಟ ಆದಷ್ಟು ಕಡಿಮೆ ಮಾಡಿ.

ವೃಷಭರಾಶಿ : ಹಾಲು, ಬೆಣ್ಣೆ ,ತುಪ್ಪ ,ಮೊಸರು,  ಹೈನುಗಾರಿಕೆ ಈ ರೀತಿಯ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಅಭಿವೃದ್ಧಿ.

ಮಿಥುನ ರಾಶಿ : ಇನ್ಫೆಕ್ಷನ್ ಗಳು ಇದ್ದರೆ ಸ್ವಲ್ಪ ಎಚ್ಚರಿಕೆ ವಹಿಸಿ , ಚಂದ್ರ ನಕ್ಷತ್ರ ಗ್ರಹಣದ  ಹತ್ತಿರವಿರುವುದರಿಂದ  ತಂದೆ, ತಾಯಿ, ಅಜ್ಜ, ಅಜ್ಜಿ,  ಅತ್ತೆ,  ಮಾವ, ಮುಂತಾದ  ಹಿರಿಯರ ಆರೋಗ್ಯದ ಬಗ್ಗೆ ತಲ್ಲಣ,  ಸ್ವಲ್ಪ ಗಾಬರಿ ಕೂಡ.

ಕರ್ಕಾಟಕ ರಾಶಿ : ಸಮೃದ್ಧಿಯ ದಿನ, ಹಾಲು ಉಕ್ಕಿದ ಹಾಗೆ,  ಸಿಹಿ ಉಕ್ಕಿದ ಹಾಗೆ  ಪ್ರಭಾವ , ಯಾವುದೋ  ಒಂದು ದೊಡ್ಡದಾದ ಕೆಲಸ ಕಾರ್ಯಗಳು ಸಿದ್ಧಿಸುವಂತಹ ದಿನ.

ಸಿಂಹ ರಾಶಿ : ಖರ್ಚು ವೃದ್ಧಿಗೋಸ್ಕರ  ಸ್ವಂತ ವ್ಯವಹಾರ ಕೆಲಸ ಮಾಡುವವರಿಗೆ ಸ್ವಲ್ಪ ಪಡಿಪಾಟಲಿನ ದಿನ,  ಆದರೆ ಅನುಕೂಲವಾಗುತ್ತದೆ.

 

ಕನ್ಯಾ ರಾಶಿ : ಚಂದ್ರ ಬಲವಿದ್ದು ನಿಮಗೆ ತಲೆ ಕೆಡಿಸುವಂತಹ  ದಿನ,  ಕೋಪಗೊಳ್ಳುವ ಮತ್ತು ಮನಸ್ಸು ಚಂಚಲಗೊಳ್ಳುವ ದಿನ , ಮನೆಯಲ್ಲಿ ದುರ್ಗಾದೇವಿಯ ಮತ್ತು ಗಣೇಶನ ವಿಗ್ರಹವಿದ್ದರೆ ಅದಕ್ಕೆ ಹಾಲು ಜೇನು ಮತ್ತು ತುಪ್ಪವನ್ನು ಸೇರಿಸಿ ಅಭಿಷೇಕ ಮಾಡಿ ಆ ತೀರ್ಥವನ್ನು ಸೇವಿಸಿ  ಒಳ್ಳೆಯದು,  ದುರ್ಗಾ ಸಪ್ತಾಶ್ವ ,  ಸ್ಕಂದ ಕವಚ,  ಗಣಪತಿ ಅಷ್ಟೋತ್ತರ ಕೇಳಿ ಸ್ವಲ್ಪ ಮನಸ್ಸಿಗೆ ಸಮಾಧಾನ ಸಿಗುತ್ತದೆ.

ತುಲಾ ರಾಶಿ : ದಶಮಾಧಿಪತಿ ಚಂದ್ರ ಅಷ್ಟಮದಲ್ಲಿ ಇರುವುದರಿಂದ  ವಿಪರೀತ ರಾಜಯೋಗ ಉಂಟು,  ಚೆನ್ನಾಗಿದೆ  ಆದರೂ ಏನೋ ಒಂದು ತಳಮಳ,  ನಿಮ್ಮನ್ನು ಒಂಟಿಯಾಗಿ ಕರೆದುಕೊಂಡು ಹೋಗಿ  ಬಿಟ್ಟಂತೆ, ಮುಜುಗರ ಅನ್ನಿಸುವ  ದಿನ, ಮಿಕ್ಕಂತೆ ತೊಂದರೆ ಇಲ್ಲ.

ವೃಶ್ಚಿಕ ರಾಶಿ : ಭಾಗ್ಯಾಧಿಪತಿ ವೃದ್ಧಿ ಚೆನ್ನಾಗಿದೆ,  ಅಧಿಕಾರ,  ಅಂತಸ್ತು, ನೆಮ್ಮದಿ, ಸುತ್ತಾಟ , ಸಂಭ್ರಮ,  ಖುಷಿ  ಎಲ್ಲವನ್ನೂ ನೋಡುವಂತಹ ಅದ್ಭುತವಾದ ದಿನ .

ಧನಸ್ಸು ರಾಶಿ : ದಿಢೀರ್ ಎಂದು ಒಂದು ಶುಭ ಸುದ್ದಿಯನ್ನು ಕೇಳುವಿರಿ,  ಉದ್ಯೋಗ ನಿಮಿತ್ತ,  ಕುಟುಂಬ ನಿಮಿತ್ತ , ಒಂದು ಶುಭ  ಸುದ್ದಿಯನ್ನು  ಕೇಳುವಿರಿ.

ಮಕರ ರಾಶಿ : ಪಾರ್ಟನರ್ ಶಿಪ್ ನಲ್ಲಿ ಸ್ನೇಹಿತರು,  ಆಪ್ತರ,  ಜೊತೆಯಲ್ಲಿ ಮಾಡುವಂಥ ವ್ಯವಹಾರಗಳಲ್ಲಿ ವಿಶೇಷ ಅನುಕೂಲವನ್ನು ನೋಡುವ  ಅದ್ಭುತವಾದ ದಿನ,  ಚೆನ್ನಾಗಿದೆ.

ಕುಂಭ ರಾಶಿ : ವಂಶವೃದ್ಧಿ, ಮಾಡುತ್ತಿರುವ ಎಲ್ಲಾ  ಕೆಲಸ ಕಾರ್ಯಗಳಲ್ಲಿ ವೃದ್ಧಿ,  ಸುಖ ಕಾರಕ ಸುಖ ಭಾವದಲ್ಲೆ ಇದ್ದಾನೆ , ಶುಕ್ರನ ಜೊತೆಯಲ್ಲಿ ಕುಳಿತ್ತಿದ್ದಾನೆ,  ಅತ್ತೆ ,ಅಮ್ಮ  ಅತ್ತಿಗೆ,  ಇಂಥ ಹಿರಿಯರ ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಿ .

ಮೀನ ರಾಶಿ : ಪರಮೋಚ್ಚ ದಿನ,  ಇಂದು ಕುಣಿದಾಡಿಸುವಂತ ದಿನ, ನೀವು ನಡೆದಿದ್ದೇ ದಾರಿ,  ಮುಟ್ಟಿದ್ದೆಲ್ಲ ಚಿನ್ನ , ಮನಸ್ಸು ಉಲ್ಲಾಸಭರಿತವಾಗಿರುವಂತಹ ದಿನ. ಧೈರ್ಯ, ಉತ್ಸಾಹ,  ಸಂತೋಷ , ಖುಷಿ, ಕೊಡುವಂತಹ ದಿನ. ಅಂದುಕೊಂಡಿದ್ದೆಲ್ಲಾ ಡಬ್ಬಲ್  ಆಗುವಂತಹ ದಿನ.

Advertisement
Share this on...