ಈ ರಾಶಿಯವರಿಗಿಂದು ಕಷ್ಟ ಪಟ್ಟಿರುವುದಕ್ಕೆ ಪ್ರತಿಫಲ ನೋಡುವ ದಿನ

in ಜ್ಯೋತಿಷ್ಯ 103 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ ಸಪ್ತಮಿ ತಿಥಿ,  ಪೂರ್ವಭಾದ್ರ ನಕ್ಷತ್ರ,  ಅತಿಗಂಡ ಯೋಗ, ಬಾಲವ ಕರಣ ಜುಲೈ 12 ಭಾ ನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.

Advertisement

ಬಕೆಟ್ ನೀರಿಗೆ ತುಳಸಿ , ಅರಿಶಿನ,  ಸ್ವಲ್ಪ ಗರಿಕೆಯನ್ನು ಹಾಕಿ ಅದರಿಂದ ಕಾಲು ತೊಳೆದು ಕೊಂಡು ಮನೆಯೊಳಗೆ ಬನ್ನಿ. ತರಕಾರಿಗಳನ್ನು ಕೂಡ ಈ  ನೀರಿನಲ್ಲಿ ತೊಳೆದ  ನಂತರ ಬಳಸಿ. ಮಕ್ಕಳ ಮನಸ್ಸಿನಲ್ಲಿರುವ ಭಯ ಗೊಂದಲವನ್ನು ದೂರ  ಮಾಡಲು ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ. ಫ್ರೆಂಡ್ ಅಂತೆ ಅವರ ಜೊತೆಯಲ್ಲಿ  ಇರಿ. ಮಕ್ಕಳಿಗೆ ಮಾನಸಿಕವಾಗಿ ಧೈರ್ಯವನ್ನು ತುಂಬುವ ಕೆಲಸ ಮಾಡಿ ಆದಷ್ಟು ಅವರ ಜೊತೆ ಕಾಲವನ್ನು ಕಳೆಯಿರಿ.
ಇದರಿಂದ ಮಕ್ಕಳ ಮನಸ್ಸಿನಲ್ಲಿರುವ ಅಸ್ವಸ್ಥತೆ ನಿವಾರಣೆಯಾಗುತ್ತದೆ.

Advertisement

ಇಂದು ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದಂತಹ ದಿನ. ಪ್ರತಿಷ್ಠಾಪಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಆಷಾಢ ಮಾಸದ ಸಪ್ತಮಿಯ ದಿನವನ್ನು ಚಾಮುಂಡೇಶ್ವರಿಯ ವರ್ಧಂತ್ಯೋತ್ಸವ  ಎಂದು ಆಚರಿಸಲಾಗುತ್ತದೆ. ಮನಸ್ಸಿನಲ್ಲಿಯೇ  ಚಾಮುಂಡೇಶ್ವರಿ ತಾಯಿಯನ್ನು ನೆನೆಸಿಕೊಂಡು ಪೂಜೆ ಮಾಡಿ ಐದು ಜನ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಪ್ರಸಾದವನ್ನು ನೀಡಿ ಒಳ್ಳೆಯದಾಗುತ್ತದೆ .

Advertisement

Advertisement

 

ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಚೆನ್ನಾಗಿದೆ ಸ್ವಲ್ಪ ಗಲಿಬಿಲಿ ಆದರೂ ದಿನದ ಅಂತ್ಯಕ್ಕೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತೀರಾ. ದುಡುಕಬೇಡಿ,  ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.

ವೃಷಭ ರಾಶಿ : ಪ್ಲಾನ್ ಮಾಡಿಕೊಳ್ಳುವುದನ್ನು ಬಿಡಿ ಇದರಿಂದ ಮನಸ್ಸಿಗೆ ಒಂದು ಪೆಟ್ಟಾಗುತ್ತದೆ. ನಾವೊಂದು ನೆನೆದರೇ ದೈವವೊಂದು ಬಗೆದಿತ್ತು ಎಂಬಂತಾಗುತ್ತದೆ.

ಮಿಥುನ ರಾಶಿ : ಚೆನ್ನಾಗಿದೆ, ಭಾನುವಾರದ ಬಾಡೂಟ ಮಾಡುವಂತಹ ದಿನ.

 

ಕರ್ಕಾಟಕ ರಾಶಿ : ಕಷ್ಟ ಪಟ್ಟಿರುವುದಕ್ಕೆ ಪ್ರತಿಫಲವನ್ನು ನೋಡುವಂತಹ ದಿನ .

ಸಿಂಹ ರಾಶಿ : ಚಾಕಚಕ್ಯತೆ,  ಬುದ್ಧಿವಂತಿಕೆ ಎರೆಡನ್ನು ಮೇಳೈಸಿಕೊಂಡು ಹೆಜ್ಜೆ ಹಾಕುವಂತಹ ದಿನ.

ಕನ್ಯಾ ರಾಶಿ : ಮಾತು ಸೊಗಸು ಆಲೋಚನೆಯೂ  ಸೊಗಸು ಹಿತಾಮಿತಿಯಲ್ಲಿ ಇಂದು ಇರುತ್ತೀರಿ.

ತುಲಾ ರಾಶಿ :  ಸೂಪರ್, ಚೆನ್ನಾಗಿದೆ ,  ಗಲಿಬಿಲಿ ಹಿರಿಯರ ಜೊತೆ ಸ್ವಲ್ಪ ಕಿರಿಕ್ ಅನ್ನು ಮಾಡಿಕೊಳ್ಳುತ್ತೀರಾ. ಹಿರಿಯರು ಇಲ್ಲದೆ ನಾವು ಬರಲು ಸಾಧ್ಯವಿಲ್ಲ ಹಾಗಾಗಿ ಅವರೊಂದಿಗೆ ವಾದ ವಿವಾದ ಬೇಡ. ನಮ್ಮನ್ನು ಗೆದ್ದರೂ ಸರಿದಾರಿಗೆ ತರಲು ಹೇಳುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಅವರು ಮಾಡುವುದೆಲ್ಲ ನಮಗಾಗಿಯೇ .

 

ವೃಶ್ಚಿಕ ರಾಶಿ : ಪರಿಪೂರ್ಣ ಊಟ, ಚೆನ್ನಾಗಿದೆ,  ಅಲಂಕಾರ ಪ್ರಿಯರು,  ಆಕರ್ಷಕ ವೈವಿಧ್ಯಮಯ ಜೀವನ ನಿಮ್ಮದು.

ಧನಸ್ಸು ರಾಶಿ : ಸ್ವಲ್ಪ ಆತುರ ಪಡುತ್ತೀರಾ ನಿಧಾನಿಸಿ , ಯಾವುದೇ ಲೆಕ್ಕಾಚಾರವನ್ನು ಮಾಡಲು ಹೋಗಬೇಡಿ .

ಮಕರ ರಾಶಿ : ಚೆನ್ನಾಗಿದೆ,  ಬುದ್ಧಿವಂತಿಕೆ ಮತ್ತು ಆಲೋಚಿಸಿ ಮಾಡುವ ಕೆಲಸ ಕಾರ್ಯಗಳಲ್ಲಿ ವಿಶೇಷ ಪ್ರಗತಿಯ ದಿನ.

 

ಕುಂಭ ರಾಶಿ : ಲೆಕ್ಕಾಚಾರಗಳು ಯೋಜನೆಗಳನ್ನು ಹಾಕಿಕೊಂಡಿದ್ದರೆ ಅದಕ್ಕೆ ತಕ್ಕಂತೆ ಫಲ ದೊರೆಯುತ್ತದೆ. ಹಸುವಿಗೆ ಒಂದು ಐದು ಬಾಳೆಹಣ್ಣನ್ನು ತಿನಿಸಿ . ಎಳೆದಾಟ ಭಯ ಕಡಿಮೆಯಾಗುತ್ತದೆ .

ಮೀನ ರಾಶಿ : ವಿದ್ಯಾರ್ಥಿಗಳಿಗೆ ಸ್ವಲ್ಪ ಟೆನ್ಷನ್, ಮಿಕ್ಕಂತೆ ತೊಂದರೆ ಇಲ್ಲ.

All Rights reserved Namma Kannada Entertainment.

Advertisement
Share this on...