ಈ ರಾಶಿಯವರಿಗಿಂದು ಹತ್ತಿರದವರಿಂದ ನೋವಿದೆ.. ಎಚ್ಚರಿಕೆ

in ಜ್ಯೋತಿಷ್ಯ 60 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ ನವಮಿ  ತಿಥಿ,  ಅಶ್ವಿನಿ ನಕ್ಷತ್ರ, ಧೃತಿ ಯೋಗ, ಗರಜ ಕರಣ  ಜುಲೈ 14  ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ  ಬೆಳಗ್ಗೆ ಬೇಗ ಬರುವುದರಿಂದ ಉಲ್ಲೇಖ ಮಾಡಿಲ್ಲ.

Advertisement

 ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಆತಂಕ,  ಭಯ,  ಆರೋಗ್ಯ,  ಮತ್ತು ಮಾನಸಿಕವಾಗಿ,  ವ್ಯಾವಹಾರಿಕವಾಗಿ ತೊಳಲಾಟ,  ಓಂ ದೂಮ್  ದುರ್ಗೈ ನಮಃ ಎಂದು ಕಣ್ಮುಚ್ಚಿ ಒಂದು ಐದು ನಿಮಿಷವಾದರೂ ಜಪ ಮಾಡಿ, ಧೈರ್ಯ ಬರುತ್ತದೆ,  ಧೈರ್ಯಂ ಸರ್ವರ್ಥ ಸಾಧನಂ.

Advertisement

ವೃಷಭ ರಾಶಿ : ಹಿರಿಯರ ಆರೋಗ್ಯದ ಕಡೆ ಹೆಚ್ಚು ಗಮನ  ವಹಿಸಿ.

Advertisement

 

ಮಿಥುನ ರಾಶಿ : ವ್ಯಾವಹಾರಿಕವಾಗಿ ಮಾನಸಿಕವಾಗಿ ಆಂತರಿಕವಾಗಿ  ತೊಳಲಾಟವಿರುತ್ತದೆ . ಶಿವನ ಜಪ ಮಾಡಿ ಸುಮಾರು ಐದು ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಿ ಒಳ್ಳೆಯದಾಗುತ್ತದೆ.

ಕರ್ಕಾಟಕ ರಾಶಿ : ಇದ್ದೂ ಇಲ್ಲದಂತಹ ಭಾವ , ನಿಮ್ಮ ಕೆಲಸವನ್ನು ನೀವು ನಿಮ್ಮ ಪಾಡಿಗೆ ಮಾಡಿ.

ಸಿಂಹ ರಾಶಿ : ತಂದೆಯ ಹಿರಿಯರ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.

ಕನ್ಯಾ ರಾಶಿ :  ಗಮ್ಯಕ್ಕೋಸ್ಕರ ನಿಧಾನಿಸಿ ಕಾಯಿರಿ ನಿಮ್ಮ ಯೋಗ್ಯತೆಗೆ ತಕ್ಕಂತೆ ಪ್ರತಿಫಲ ದೊರೆತೆ  ದೊರೆಯುತ್ತದೆ.

 

ತುಲಾ ರಾಶಿ : ಹತ್ತಿರದವರಿಂದ ನೋವಿದೆ ಎಚ್ಚರಿಕೆ,  ನೀವು ನೋವು ಕೊಡಲು ಹೋಗಬೇಡಿ.

ವೃಶ್ಚಿಕ ರಾಶಿ : ಒಂದು ಸರ್ಪ್ರೈಸ್ ಆಗುವಂತಹ ದಿನ ಒಳ್ಳೆಯದೇ ಆಗುತ್ತದೆ.

ಧನಸ್ಸು ರಾಶಿ : ಮಕ್ಕಳ ವಿಚಾರ ದಲ್ಲೊಂದು ಸಣ್ಣ ಕದಲಿಕೆ , ಗಾಬರಿ , ನೀವು ನಿಮ್ಮ ಮಕ್ಕಳ ಮೇಲೆ ನಂಬಿಕೆ ಇಡಿ ಒಳ್ಳೆಯದಾಗುತ್ತದೆ.

ಮಕರ ರಾಶಿ : ವಿದ್ಯಾರ್ಥಿಗಳಿಗೆ ತೊಳಲಾಟ,  ಹಿರಿಯರ ಆರೋಗ್ಯದಲ್ಲಿ ತೊಳಲಾಟ,  ಮನೆಯವರ ಜತೆ ಊಟ ಮಾಡಿ ಮನೆ ಅವರ ಜೊತೆಗೆ ಹೆಚ್ಚು ಸಮಯ ಕಳೆಯಿರಿ.

ಕುಂಭ ರಾಶಿ :  ಒಡಹುಟ್ಟಿದವರ ವಿಚಾರದಲ್ಲಿ ಒಂದು ಸಣ್ಣ ಅಸಮಾಧಾನ , ವಿಸ್ಫೋಟ.

ಮೀನ ರಾಶಿ : ಕುಟುಂಬ ಮತ್ತು ವ್ಯವಹಾರಗಳೆರಡನ್ನೂ ಬ್ಯಾಲೆನ್ಸ್ ಮಾಡಲು ಹೆಣಗಾಡುತ್ತೀರ.

All Rights reserved Namma Kannada Entertainment.

Advertisement
Share this on...