ಇಂದು ಕುಜ ರಾಹು ಪ್ರಭಾವ ಕಡಿಮೆ ಮಾಡಲು ಹೀಗೆ ಮಾಡಿ…

in ಜ್ಯೋತಿಷ್ಯ 119 views

ಇಂದು ಆಷಾಢ ಮಂಗಳವಾರ ಕುಜ ಮತ್ತು ರಾಹುವಿನ ಸಂಧಿ ಇದೆ. ಶೇರ್ ಮಾರ್ಕೆಟ್,  ಆಟೋ ಮೊಬೈಲ್ಸ್, ದವಸ ಧಾನ್ಯ,  ಪೆಟ್ರೋಲ್, ಲೇಬರ್ ಡಿಪಾರ್ಟ್ಮೆಂಟ್, ಟೀಚಿಂಗ್ ಡಿಪಾರ್ಟ್ಮೆಂಟ್,  ಬ್ಯಾಂಕಿಂಗ್ ಎಲ್ಲ ವ್ಯವಸ್ಥೆಗಳ ಮೇಲೆ ಮಾಯದ ಮೋಡ ಆವರಿಸಿರುವ ಪ್ರಭಾವವಿದೆ. ಒಂದು ಬೊಗಸೆ ಬೆಲ್ಲ,  ಒಂದು ಬೊಗಸೆ ತೋಗರಿ,  ಒಂದು ಬೊಗಸೆ ರವೆ, ಹದಿನಾರು ರುಪಾಯಿ, ಮೂರನ್ನೂ ಬೇರೆ ಬೇರೆಯಾಗಿ ಕೆಂಪು ವಸ್ತ್ರದಲ್ಲಿ ಕಟ್ಟಿ ಸುಬ್ರಹ್ಮಣ್ಯ ದೇವಸ್ಥಾನ ಅಥವಾ ಹನುಮಂತನ ದೇವಸ್ಥಾನದ ಅರ್ಚಕರಿಗೆ ಅಥವಾ ಯಾರಾದರೂ ಬಡವರಿಗೆ ದಾನ ಮಾಡಿ ಇದರಿಂದ ಕುಜ ರಾಹುವಿನ ಪ್ರಭಾವ ಕಡಿಮೆಯಾಗುತ್ತದೆ.

Advertisement

Advertisement

ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚೆನ್ನಾಗಿದೆ,  ಸ್ವಲ್ಪ ಉದ್ಯೋಗದಲ್ಲಿ ಪರಿಶ್ರಮವಿರುತ್ತದೆ. ಶ್ರಮ ಎಂದುಕೊಳ್ಳುವ ಬದಲು ಪ್ರೀತಿಯಿಂದ ಕೆಲಸ ಮಾಡಿ. ಕಷ್ಟಪಟ್ಟು ಮಾಡುವುದಕ್ಕಿಂತ ಇಷ್ಟಪಟ್ಟು ಮಾಡಿ ಫಲ ದೊರೆಯುತ್ತದೆ .

Advertisement

ವೃಷಭ ರಾಶಿ :  ಹಿರಿಯರ ಸಹಕಾರ ಸಹಯೋಗ ಸಿಗುವಂತಹ ಅದ್ಭುತವಾದ ದಿನ. ಅವರ ನೆರಳಿನಿಂದ ಎಂಥ ಕಷ್ಟ ಬಂದರೂ ಅದರಿಂದ ಹೊರಬರುವ ಶಕ್ತಿ ಇರುತ್ತದೆ.

ಮಿಥುನ ರಾಶಿ : ಗಲಿಬಿಲಿ,  ಆತಂಕ,  ಶುಭ ಸುದ್ದಿಯೊಂದು ಕೇಳಿ ಬರುತ್ತದೆ. ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಿ . ಗುರು ಕೇಂದ್ರದಲ್ಲಿ ಕುಳಿತಿರುವುದರಿಂದ ದೋಷವಿದೆ ಹಾಗಾಗಿ ಬೇಗ ಥಂಡಿ ಯಾಗುತ್ತದೆ.

ಕರ್ಕಾಟಕ ರಾಶಿ : ಅಂದುಕೊಂಡ ಕೆಲಸ ಕಾರ್ಯಗಳೆಲ್ಲ ತೃಪ್ತಿದಾಯಕ .

ಸಿಂಹ ರಾಶಿ : ಪರಿಶ್ರಮವೂ ಫಲದಾಯಕ.

ಕನ್ಯಾ ರಾಶಿ : ಮಕ್ಕಳ ವಿಚಾರದಲ್ಲೊಂದು ಗಲಿಬಿಲಿ,  ವೃತ್ತಿಯ ವಿಚಾರದಲ್ಲಿ  ಕಳೆದುಕೊಳ್ಳುವ ಭೀತಿ , ಏನನ್ನೂ ಕಳೆದುಕೊಳ್ಳುವುದಿಲ್ಲ. ಲೌಕಿಕ ಯೋಚನೆಯನ್ನು ಬಿಡಿ.

ತುಲಾ ರಾಶಿ : ತಾಯಿಯ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಗಮನ ಕೊಡಿ. ಮಿಕ್ಕಂತೆ ಏನೂ ಸಮಸ್ಯೆ ಇಲ್ಲ .

ವೃಶ್ಚಿಕ ರಾಶಿ : ತಂದೆ,  ತಾಯಿ, ಹಿರಿಯರ ಸೌಕರ್ಯ,  ಸೌಭಾಗ್ಯ,  ಆಶೀರ್ವಾದ  ಎಲ್ಲವೂ ದೊರೆಯುತ್ತದೆ. ಚೆನ್ನಾಗಿದೆ,  ಎಲ್ಲ ಕಾರ್ಯಗಳು ಯಶಸ್ವಿಯಾಗುತ್ತದೆ.  ತುಂಬ ತೃಪ್ತಿದಾಯಕ ದಿನ .

ಧನಸ್ಸು ರಾಶಿ : ಆತಂಕದ ಛಾಯೆ,  ಭಯ,  ಆತಂಕ  ಬಿಟ್ಟು ಮುಂದೆ ಹೋಗಿ, ಗೆಲುವು ನಿಮ್ಮದೆ, ದೇವರ ಮನೆಯಲ್ಲಿ  ಒಂದು ಪುಟ್ಟದಾದ ದೀಪವನ್ನು  ಹಚ್ಚಿ.

ಮಕರ ರಾಶಿ : ಅನ್ ಎಕ್ಸ್ಪೆಕ್ಟೆಡ್ ಶುಭ ಸುದ್ದಿ ಬರುತ್ತದೆ,  ಆದರೂ ಅದು ನಿಜವೋ ಸುಳ್ಳೋ ಎಂದು ಗಾಬರಿಗೊಳ್ಳುತ್ತೀರ, ಒಳ್ಳೆಯದೇ ಆಗುತ್ತದೆ.

ಕುಂಭ ರಾಶಿ : ಅಂದುಕೊಂಡ ಕೆಲಸ ಕಾರ್ಯಗಳೆಲ್ಲವೂ ಸುಗಮವಾಗಿ ನಡೆಯುತ್ತದೆ. ಅದ್ಭುತವಾದ ದಿನ ಜವಾಬ್ದಾರಿಯನ್ನು ಎಲ್ಲವನ್ನೂ ತಲೆಯ ಮೇಲೆ ಎಳೆದುಕೊಳ್ಳಬೇಡಿ. ಬೇರೆಯವರಿಗೂ  ಆ ಜವಾಬ್ದಾರಿಯನ್ನು ಹಂಚಿ.

ಮೀನ ರಾಶಿ : ಅದ್ಭುತವಾದ ದಿನ, ಇಂದು ಐನೂರು ರೂಗಳಿಗೆ ಕೆಲಸ ಮಾಡು ಎಂದರೆ ಐದು ಸಾವಿರ ರೂಗಳಷ್ಟು ಕೆಲಸ ಮಾಡುವ ಶಕ್ತಿ ಇರುತ್ತದೆ

All Rights reserved Namma Kannada Entertainment.

Advertisement
Share this on...