ಆಷಾಢ ಮಾಸದ ಲಕ್ಷ್ಮಿ ಪೂಜೆ…

in ಜ್ಯೋತಿಷ್ಯ 303 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ  ಚತುರ್ಥಿ ತಿಥಿ, ಆಶ್ಲೇಷ  ನಕ್ಷತ್ರ,  ಹರ್ಷನ ಯೋಗ, ಭದ್ರಾಂಕರಣ , ಜೂನ್ 25  ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ  ಬೆಳಗ್ಗೆ 10 ಗಂಟೆ,  53  ನಿಮಿಷದಿಂದ, ಮಧ್ಯಾಹ್ನ  12 ಗಂಟೆ,  6 ನಿಮಿಷದವರೆಗೂ ಇದೆ.

Advertisement

ಆಷಾಢ ಮಾಸದ ಲಕ್ಷ್ಮಿ ಪೂಜೆ  :ಯಾವುದೋ ಒಂದು ಕಾರಣ ನಿಮಿತ್ತ ಎಲ್ಲರಿಗೂ  ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡುವ ಯೋಗ ಮತ್ತು ಯೋಗ್ಯತೆಯನ್ನು ಭಗವಂತ ನಮಗೆ  ಕೊಟ್ಟಿರುವುದಿಲ್ಲ, ಅಂಥವರಿಗೆ ಆಷಾಢ ಮಾಸದ ಲಕ್ಷ್ಮಿ ಪೂಜೆ ವಿಶೇಷ ಬಲವನ್ನು ತಂದುಕೊಡುತ್ತದೆ. ವರಮಹಾಲಕ್ಷ್ಮಿ  ಪೂಜೆ ಹೇಗೆ ಮಾಡುತ್ತಾರೋ ಅದೇ ರೀತಿ ಒಂದು ಕಳಸವನ್ನು ಶುಕ್ರವಾರ ಪ್ರತಿಷ್ಠಾಪನೆ ಮಾಡಿ. ಲಕ್ಷ್ಮಿ ಎಂದರೆ ಮಡಿ,  ಮಡಿ ಇಲ್ಲದೇ ಏನೂ ಕೂಡ ನಡೆಯುವುದಿಲ್ಲ , ಲಕ್ಷ್ಮಿ ತುಂಬಾ ಶುದ್ಧ,  ಲಕ್ಷ್ಮಿಯನ್ನು ಯೌವ್ವನ ಪೂರ್ವಕವಾಗಿ ನೋಡುತ್ತೇವೆ , ದುರ್ಗೆಯನ್ನು ವಿಶೇಷವಾಗಿ ಮುತ್ತೈದೆ ಸ್ಥಾನಕ್ಕೆ ನೋಡುತ್ತೇವೆ , ಸರಸ್ವತಿಯನ್ನು ಯೌವನಕ್ಕೆ  ಮೊದಲಿನ ರೂಪವಾಗಿ  ಸ್ತ್ರೀ  ಮಾತೆಯಾಗಿ ನೋಡುತ್ತೇವೆ, ಆದ್ದರಿಂದಲೇ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಚುರುಕಾಗಿರುತ್ತಾರೆ ಸರಸ್ವತಿಯ ಅನುಗ್ರಹ ಜಾಸ್ತಿ , ಹದಿನಾರನೇ ವಯಸ್ಸಿನವರೆಗೂ ಹೆಚ್ಚಾಗಿ ಎಲ್ಲವನ್ನೂ ಗ್ರಹಿಸಿ ಕೊಳ್ಳುತ್ತಿರುತ್ತಾರೆ, ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗಿರುತ್ತದೆ, ಬಾಲ್ಯದಲ್ಲಿ ಮುಗ್ಧತಾ ಕಣ್ಣಿನಲ್ಲಿ ಸೌಂದರ್ಯವಿರುತ್ತದೆ ಆದ್ದರಿಂದಲೇ ಮಕ್ಕಳನ್ನು ಮುದ್ದಾಡಬೇಕೆನ್ನುವ  ಮನಸ್ಸಾಗುತ್ತದೆ, ಸರಸ್ವತಿ ತತ್ತ್ವ,  ಭಾವ ಎಲ್ಲಿ ಹೆಚ್ಚಾಗಿರುತ್ತದೆ ಅಲ್ಲಿ ಸರಸ್ವತಿ ಶಕ್ತಿ ಹೆಚ್ಚಾಗಿರುತ್ತದೆ.

Advertisement

 

Advertisement

Advertisement

ಹದಿನಾರನೇ ವಯಸ್ಸು ದಾಟಿದ ಮೇಲೆ ಮದುವೆಯಾಗುವವರೆಗೆ ಅಂದರೆ ಇಪ್ಪತ್ತ್ನಾಲ್ಕು ವರ್ಷದವರೆಗೆ ಲಕ್ಷ್ಮಿ ತತ್ವ,  ತುಂಬಾ ಕೋಪ,  ಸಿಟ್ಟು , ನಾನು ದೊಡ್ಡವಳ ಅಥವಾ ಚಿಕ್ಕ ಮಗುವ ಎಂಬ ಒಂದು ಕನ್ಫ್ಯೂಷನ್ ಇರುತ್ತೆ , ಡಿಸ್ಟೆನ್ಸ್ ಮೇಂಟೇನ್ ಮಾಡುತ್ತೇವೆ, ಮುಗ್ಧತೆ,  ಚೆಲ್ಲುತನ ಕಡಿಮೆಯಾಗುತ್ತದೆ,  ಯೋಚನಾ ಶಕ್ತಿ ಜಾಸ್ತಿಯಾಗುತ್ತದೆ. ಈ ರೀತಿಯ ಪ್ರಭಾವದಲ್ಲಿರುತ್ತಾರೆ,  ಈ ವಯಸ್ಸಿನಲ್ಲಿ ಲಕ್ಷ್ಮಿ ತತ್ವ ಹೆಚ್ಚಾಗಿರುತ್ತದೆ.  ಲಕ್ಷ್ಮಿ ಎಂದರೆ ಬಂಗಾರ , ಲಕ್ಷ್ಮಿ ತಾನಾಗಿಯೇ ಒಲಿದು ಬಂದರೆ ಒಳ್ಳೆಯದು,  ಇಲ್ಲವೇ ನಾವೇ ತೆಗೆದುಕೊಂಡರೆ ಅದು ಕಳ್ಳತನವಾಗುತ್ತದೆ , ಲಕ್ಷ್ಮಿ ಪೂಜೆ ಮಾಡುವವರು ಮೊದಲ ನಿಯಮವೆಂದರೆ  ಪಾತಿವ್ರತ್ಯ  ಧರ್ಮದಲ್ಲಿ ಇರಬೇಕು , ಮನಸ್ಸಿನಲ್ಲಿ ಯಾವುದೇ ರೀತಿಯ ಕ್ಷೋಭೆಗೆ ಒಳಗಾಗಬಾರದು, ಕೆಟ್ಟದ್ದನ್ನು  ಯೋಚಿಸಬಾರದು,  ಗಂಡನ ಮೇಲೆ ಅನುಮಾನವನ್ನು  ಇಟ್ಟುಕೊಂಡು ಲಕ್ಷ್ಮಿ ಪೂಜೆ ಮಾಡಿದರೆ ಅದು ವ್ಯರ್ಥ , ವಿಷ್ಣುಗೆ ಅವಮಾನವಾಯಿತು ಅಂದುಕೊಂಡಿದ್ದರಿಂದ ಲಕ್ಷ್ಮಿ  ಮತ್ತು ವಿಷ್ಣು ಸ್ವಲ್ಪ ಕಾಲ ದೂರಾಗುವಂತೆ ಆಗಿದ್ದು.

 

ಯಾವ ಸ್ತ್ರೀ ಶೋಭೆ ಗೊಳಗಾಗಿರುತ್ತಾರೊ,  ಯಾವ ಸ್ತ್ರೀ ಸದಾಕಾಲ  ಕಣ್ಣೀರಿಡುತ್ತಿರುತ್ತಾರೊ,   ಕೋಪ ಮಾಡಿಕೊಂಡಿರುತ್ತಾರೊ,   ದುಃಖದಲ್ಲಿ ಇರುತ್ತಾರೊ, ಅದರಲ್ಲೂ ದ್ರಾವಿಡ ಪ್ರಾಂತ್ಯವಾದ ಕರ್ನಾಟಕದ  ಸ್ತ್ರೀಯರಿಗೆ ಕೋಪ ಸ್ವಲ್ಪ ಜಾಸ್ತಿ,  ಇಲ್ಲಿರುವ  ಸ್ತ್ರೀಯರಲ್ಲಿ ಬದ್ಧತೆ ಕೂಡ ಜಾಸ್ತಿ , ಲಕ್ಷ್ಮಿ ಪೂಜೆ ಮಾಡುವಾಗ ಒಂದೊತ್ತು  ಉಪವಾಸವಿರಬೇಕು,  ಫಲಾಹಾರ ಮಾತ್ರ ಸೇವಿಸಬೇಕು,  ನಾಳೆ ಆಷಾಢ ಶುಕ್ರವಾರ ದಿಂದಲೇ ಈ ಎಲ್ಲಾ ನಿಯಮಗಳನ್ನು ಅಳವಡಿಸಿಕೊಂಡು  ಪೂಜೆಯನ್ನು ಪ್ರಾರಂಭಿಸಬಹುದು. ಮನಸ್ಸಲ್ಲಿ ಯಾವುದೇ ಕಲ್ಮಶವಿಲ್ಲದೆ, ಹುಟ್ಟಿದ ಮನೆಯವರು, ಒಡ  ಹುಟ್ಟಿದ ಮನೆಯವರು, ಗಂಡನ ಮನೆಯವರೆಲ್ಲರ ಶ್ರೇಯಸ್ಸನ್ನು ನೆನೆದು ಕಳಸವನ್ನು ಸ್ಥಾಪಿಸಬೇಕು.  ಲಕ್ಷ್ಮಿ ಪ್ರತಿಷ್ಠಾಪನೆ ಮಾಡಿದ ಮೇಲೆ ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತದೆ  ಆ ವಿಧಾನವನ್ನು ನಾಳಿನ ಸಂಚಿಕೆಯಲ್ಲಿ ತಿಳಿಸಲಾಗುತ್ತದೆ. ಲಕ್ಷ್ಮಿ ದೇವಿ ತುಪ್ಪದ ಅನ್ನದ ಪ್ರಿಯೆ ಆದ್ದರಿಂದ ಲಕ್ಷ್ಮಿ ಪೂಜೆ ಮಾಡುವಾಗ ತುಪ್ಪದ ದೀಪವನ್ನು ಹಚ್ಚಬೇಕು, ಲಕ್ಷ್ಮಿ ಪೂಜೆ ಮಾಡುವವರು ಕಾಟನ್ ಸೀರೆಯನ್ನು ಧರಿಸಿಕೊಳ್ಳಬೇಕು,  ಇಲ್ಲವೇ ಅಂ ಚಿರುವ ಶುದ್ಧ ರೇಷ್ಮೆ ಸೀರೆ ಧರಿಸಿಕೊಂಡು ಪೂಜೆ ಮಾಡಬೇಕು.

 

ನಿಮ್ಮ ರಾಶಿಗಳ ಫಲ ಹೀಗಿದೆ.

ಮೇಷ ರಾಶಿ : ಚೆನ್ನಾಗಿದೆ,  ಪರವಾಗಿಲ್ಲ,  ಚಂದ್ರ ಬುಧನ ಸಾರದಲ್ಲಿದ್ದು ,  ಬುಧ ವಕ್ರವಾಗಿದ್ದಾನೆ ಮನೆಯವರ ವಿಚಾರದಲ್ಲಿ,  ಒಡಹುಟ್ಟಿದವರ ವಿಚಾರದಲ್ಲಿ , ಒಂದು ಎಳೆದಾಟ ನಡೆಯುತ್ತದೆ ಎಚ್ಚರಿಕೆ, ನಮ್ಮವರೇ ಎಂದು ಅದನ್ನು ಬೆಳೆಯಲು ಬಿಡಬೇಡಿ,  ಅಮ್ಮನ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ.

ವೃಷಭ ರಾಶಿ: ಅತಿಯಾದ ಬುದ್ಧಿ  ಒಳ್ಳೆಯದಲ್ಲ , ತುಂಬಾ ಬುದ್ಧಿ ಉಪಯೋಗಿಸಿ ಎಡವಟ್ಟು ಮಾಡಿಕೊಳ್ಳಬೇಡಿ ಎಚ್ಚರಿಕೆ.

ಮಿಥುನ ರಾಶಿ: ಆತುರಗಾರನಿಗೆ ಬುದ್ಧಿ ಮಟ್ಟ, ಅವಸರದಲ್ಲಿ ಏನನ್ನೋ  ಮಾಡಿಕೊಳ್ಳುತ್ತೀರಿ ಎಚ್ಚರಿಕೆ, ಕನ್ಫ್ಯೂಷನ್ ಮಾಡಿ ಇನ್ವೆಸ್ಟ್ ಮಾಡುವುದರಲ್ಲಿ ತಲೆ ಕೆಡಿಸುತ್ತಾರೆ ಎಚ್ಚರಿಕೆ.

 

ಕರ್ಕಾಟಕ ರಾಶಿ: ಶಾರ್ಟ್ ಕಟ್ನಲ್ಲಿ ಸ್ವಲ್ಪ ದುಡ್ಡು ಬರುತ್ತದೆ,  ಆದರೆ ಯಾವಾಗಲೂ ಶಾರ್ಟ್ ಕಟ್ ಬಳಸುವುದು ಒಳ್ಳೆಯದಲ್ಲ,  ಕೆಲವೊಂದು ಸಮಯದಲ್ಲಿ ಮಾತ್ರ ಇದ್ದರೆ ಒಳ್ಳೆಯದು.

ಸಿಂಹ ರಾಶಿ: ಜಾಣತನದಿಂದ ಮಾಡುವಂಥ ಕೆಲಸ ಕಾರ್ಯಗಳಲ್ಲಿ ವಿಶೇಷವಾದ ಲಾಭವಿರುತ್ತದೆ , ಪ್ರಗತಿ ಕಾಣುವಂತಹ  ಒಳ್ಳೆಯ ಫಲವಿದೆ .

ಕನ್ಯಾ ರಾಶಿ : ತುಂಟತನ,  ಅಲಂಕಾರ , ವ್ಯಕ್ತಿತ್ವ,  ಜಿಮ್ , ತುಂಬಾ ಜೋರಾಗಿರುತ್ತದೆ , ಚೆನ್ನಾಗಿದೆ .

ತುಲಾ ರಾಶಿ: ಅಕೌಂಟಿಂಗ್,  ಬ್ಯಾಂಕಿಂಗ್,   ಟೀಚಿಂಗ್, ಫೈನಾನ್ಷಿಯಲ್ ಅಡ್ವೈಸರ್  ಮುಂತಾದ ಲೈನ್ ನಲ್ಲಿ ಇರುವವರಿಗೆ ಪ್ರಗತಿಯನ್ನು ಕಾಣುವಂತಹ ದಿನ.

ವೃಶ್ಚಿಕ ರಾಶಿ :  ಸ್ವಲ್ಪ ಅಳುಕು,  ಇರುವ ದುಡ್ಡನ್ನು ಸ್ವಲ್ಪ ಬ್ಯಾಲೆನ್ಸ್ ಮಾಡುವ ವಿಚಾರದಲ್ಲಿ ಸ್ವಲ್ಪ ಕೊತಕೊತ  ಎನ್ನುತ್ತಿರುತ್ತೀರಿ,  ಯಾವಾಗಲೂ ಮೈಗ್ರೇನ್ ತಲೆ ಬಾರ ವಿರುತ್ತದೆ , ಪ್ರತಿ ದಿನ ಕಿತ್ತಲೆ ಹಣ್ಣನ್ನು ಸೇವನೆ ಮಾಡುವುದರಿಂದ ನೇರವಾಗಿ ಒಳ್ಳೆಯದು. ಪೃಥ್ವಿ ತತ್ತ್ವವು ಉಂಗುರದ ಬೆರಳು ಮತ್ತು ಹೆಬ್ಬೆರಳು ಎರಡನ್ನು ಸೇರಿಸಿ, ಎರಡು ಕೈಗಳ  ಎರಡು  ಬೆರಳುಗಳನ್ನು ಹಣೆಯ ಕುಂಕುಮ ವಿಡುವ ಜಾಗದಲ್ಲಿ ಇಟ್ಟುಕೊಳ್ಳಿ ಇದರಿಂದ ತಲೆಭಾರ,  ಮೈಗ್ರೇನ್,  ಕಡಿಮೆಯಾಗುತ್ತದೆ , ತುಂಬಾ ಒತ್ತಡದ ದಿನ,  ಯಾವಾಗಲೂ ಒತ್ತಡವನ್ನು ತಲೆಯಿಂದ ತೆಗೆದು ಹಾಕುವುದು ಒಳ್ಳೆಯದು . ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊ ನೋಡಿ

 

ಧನಸ್ಸು ರಾಶಿ: ಅಡ್ಡ  ದಾರಿಯಲ್ಲಿ ಸ್ವಲ್ಪ ಹೋಗುತ್ತೀರಿ,  ಅಡ್ಡದಾರಿಯಲ್ಲಿ ಹೋಗುವ ಬದಲು ಗೊತ್ತಿರುವ ದಾರಿಯಲ್ಲಿ  ಹೋಗುವುದು,  ಸಂಪಾದನೆ ಮಾಡುವುದು ಒಳ್ಳೆಯದು.

ಮಕರ ರಾಶಿ : ಮಾತು ಬುದ್ಧಿ ಚಾಣಾಕ್ಷತನದಿಂದ ಸಂಪಾದನೆ ಮಾಡುವ ಪ್ರಭಾವ ಇರುತ್ತದೆ , ಚೆನ್ನಾಗಿದೆ, ಅನ್ ಎಕ್ಸ್ಪೆಕ್ಟೆಡ್  ಖರ್ಚುಗಳು ಕೂಡ ಆಗುತ್ತವೆ.

ಕುಂಭ ರಾಶಿ : ತುಂಬಾ ಬುದ್ಧಿವಂತರಾಗಿ ಮಾತನಾಡಬೇಡಿ,  ಮೌನವಾಗಿ ಇಂದು ಇರಿ  ಅದೆ ಒಳ್ಳೆಯದು , ಎಲ್ಲವನ್ನೂ ಎಲ್ಲರ ಬಗ್ಗೆ ತಿಳಿದುಕೊಳ್ಳುವುದು ಕಷ್ಟ ಜಾಗೃತರಾಗಿರಿ.

 

ಮೀನ ರಾಶಿ : ಸಂಪಾದನೆ,  ದುಡಿಮೆಯ ವಿಚಾರದಲ್ಲಿ ಸ್ವಲ್ಪ ತಳಮಳ ಇರುವಂತಹ ದಿನ, ಒತ್ತಾಯ ಮಾಡುವ ಬಗ್ಗೆ ತಲೆಕೆಡಿಸಿಕೊಳ್ಳುವ ನಿಮಗೆ ಇವತ್ತು ಸ್ವಲ್ಪ ಖರ್ಚಾಗುತ್ತದೆ,  ಆ ಖರ್ಚು ಒಳ್ಳೆಯದಕ್ಕೆ ಆಗುತ್ತದೆ ಚಿಂತಿಸಬೇಡಿ.

Advertisement
Share this on...