ಈ ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರದಿಂದಿರಿ !

in ಜ್ಯೋತಿಷ್ಯ 138 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ ತೃತೀಯ ತಿಥಿ, ಪುಷ್ಯ  ನಕ್ಷತ್ರ,  ವ್ಯಾಗಟ ಯೋಗ, ಗರಜ ಕರಣ, ಜೂನ್ 24  ಬುಧವಾರದ  ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ 6 ಗಂಟೆ 52 ನಿಮಿಷದಿಂದ 8  ಗಂಟೆ 22  ನಿಮಿಷದವರೆಗೆ ಇರುತ್ತದೆ.  ಜೀವನದಲ್ಲಿ ಮೌಲ್ಯಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ವ್ಯಕ್ತಿಯ ಹಿಂದೆ  ಹೆಸರಿದೆ, ದುಡ್ಡಿದೆ ಎನ್ನುವ ಕಾರಣಕ್ಕಾಗಿ ಅವರ ಹಿಂದೆ ಹೋಗುವ ಬದಲು ವ್ಯಕ್ತಿತ್ವದ ಹಿಂದೆ ಹೋಗುವುದು ಒಳ್ಳೆಯದು . ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು,  ಕೆಟ್ಟ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳ ಬಾರದು. ಯಾವಾಗಲೂ ಮನುಷ್ಯ ನುಡಿದಂತೆ ನಡೆದುಕೊಳ್ಳುವುದು ಒಳ್ಳೆಯದು.

Advertisement

 

Advertisement

Advertisement

ನಿಮ್ಮ ರಾಶಿಗಳ ಫಲ ಹೀಗಿದೆ:

Advertisement

ಮೇಷ ರಾಶಿ : ಪುಷ್ಯ ಎಂದರೆ ಭರತನ ನಕ್ಷತ್ರ, ಮೇಷ ರಾಶಿಗೆ ಪಾಲ್ಗುಣವೆ,  ಒಂದು ಒಳ್ಳೆಯ ಅದ್ಭುತವಾದ ದಿನ.

ವೃಷಭ ರಾಶಿ: ಒಂದು ಸ್ವಲ್ಪ ಹುಳಿ,  ಒಡಹುಟ್ಟಿದವರ ವಿಚಾರಕ್ಕೆ ಸಂಬಂಧಿಸಿದಂತೆ ಆತಂಕಪಡುತ್ತೀರಿ,  ಕೆಲಸ ಉದ್ಯೋಗಕ್ಕೆ ಸಂಬಂಧಪಟ್ಟಂತೆ ತೊಳಲಾಟವಿರುತ್ತದೆ,  ಆದರೆ ಒಂದು ಬೊಗಸೆಯಷ್ಟು ಎಳ್ಳೆಣ್ಣೆ,  ಒಂದು  ಬೊಗಸೆಯಷ್ಟು ಎಳ್ಳು,  ಒಂದೊಂದು  ಬೊಗಸೆಯಷ್ಟು ಮೂರು ತರಹದ ಬೇಳೆಕಾಳುಗಳನ್ನು ಒಂದು ಚಿಕ್ಕ ಚಿಕ್ಕ ಪ್ಯಾಕೆಟ್ಗಳನ್ನಾಗಿ ಮಾಡಿ ಅದನ್ನು ಬಡವರಿಗೆ ದಾನ ಮಾಡಿ, ಇದರಿಂದ ತುಂಬಾ ಒಳ್ಳೆಯದಾಗುತ್ತದೆ.

ಮಿಥುನ ರಾಶಿ: ಪ್ರಯಾಣದಲ್ಲಿ ಸ್ವಲ್ಪ ವಿಳಂಬ,   ವಾಟರ್ ಇನ್ಫೆಕ್ಷನ್,  ಥ್ರೋಟ್ ಇನ್ ಫೆಕ್ಷನ್, ಜಾಗೃತರಾಗಿರಿ, ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಈ ರೀತಿಯ ಇನ್ಫೆಕ್ಷನ್ ಗಳು ಬಹಳಷ್ಟು ಕಡಿಮೆಯಾಗುತ್ತದೆ. ಬ್ರಹ್ಮ ಶಂಕರವನ್ನು ಸೇವಿಸುವುದು ಈ ಎಲ್ಲ ಸಮಸ್ಯೆಗಳಿಗೆ ತುಂಬಾ ಒಳ್ಳೆಯದು.

 

ಕರ್ಕಾಟಕ ರಾಶಿ: ಏನೋ ಒಂದು ರೀತಿಯ ಮನೋವೇದನೆ,  ಎಲ್ಲ ಇದೇ ಅನುಭವಿಸಲು ಆಗುವುದಿಲ್ಲ ಎಂಬ ಭಾವನೆ, ಏನೂ ಆಗುವುದಿಲ್ಲ ಯಾರಿಗೆ ಯಾವಾಗ ಏನು ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ ಆದ್ದರಿಂದ ಚಿಂತಿಸುವ ಅಗತ್ಯವಿಲ್ಲ . ಒಳ್ಳೆಯದಾಗುತ್ತದೆ.

ಸಿಂಹ ರಾಶಿ: ಸ್ವಲ್ಪ ದೂರದ ವಿಚಾರದಲ್ಲಿ ಪರಿಶ್ರಮ,  ದೂರದ ಕೆಲಸ,  ದೂರದ  ಬಂದು, ದೂರದ ದೇಶ,  ಪರಸ್ಥಳ, ಈ ವಿಚಾರದಲ್ಲಿ ಸ್ವಲ್ಪ ಆತಂಕವಾಗುತ್ತದೆ ಮಿಕ್ಕಂತೆ ಯಾವುದೇ ರೀತಿಯ ತೊಂದರೆಯಿಲ್ಲ,  ಸ್ವಲ್ಪ ಖರ್ಚಿನ ದಿನ,  ಹಿರಿಯರ ಆರೋಗ್ಯವನ್ನು ನೋಡಿಕೊಳ್ಳಿ .

ಕನ್ಯಾ ರಾಶಿ : ಚೆನ್ನಾಗಿದೆ ಪ್ರಯತ್ನಕ್ಕೆ ತಕ್ಕಂತೆ ಫಲವನ್ನು ನೋಡುವ ದಿನ, ಗೌರವ,  ಸನ್ಮಾನ,  ಖುಷಿಯನ್ನು ಕೊಡುವಂತಹ ದಿನ.

ತುಲಾ ರಾಶಿ: ಉದ್ಯೋಗದ ನಿಮಿತ್ತ ಸ್ವಲ್ಪ ಪರಿಶ್ರಮದ ದಿನ ಎಂದೆನಿಸುತ್ತದೆ,  ಯಾವುದನ್ನು ತಲೆ ಹಚ್ಚಿಕೊಳ್ಳದೆ ನಿಮ್ಮ ಕೆಲಸವನ್ನು ನೀವು ಸರಿಯಾಗಿ ಮಾಡಿಕೊಂಡು ಹೋಗಿ.

 

ವೃಶ್ಚಿಕ ರಾಶಿ : ಪರಿಶ್ರಮಕ್ಕೆ ತಕ್ಕಂತೆ ಬೆಲೆ , ಡಬ್ಬಲ್ ಪರಿಶ್ರಮಕ್ಕೆ ಡಬಲ್ ಇನ್ಕಮ್ ದೊರೆಯುವಂತಹ ದಿನ .

ಧನಸ್ಸು ರಾಶಿ : ದೂರದ ಊರು,  ದೂರದ ಸ್ಥಳದ  ವಿಚಾರದಲ್ಲಿ ಸ್ವಲ್ಪ ತೊಳಲಾಟ , ಒಂದು ಸರ್ಪ್ರೈಸ್ ಕೂಡ ಉಂಟು,  ಒಂದು ಶುಭ  ಸುದ್ಧಿಯೂ ಕೂಡ ಉಂಟು.

ಮಕರ ರಾಶಿ : ತಿಳಿದೇ ಇರುವವರ ಮೂಲಕ ಒಂದು ಒಳ್ಳೆಯ ಮಾರ್ಗದರ್ಶನವಾಗುತ್ತದೆ ಒಂದು ದಾರಿಯಾಗುತ್ತದೆ,  ಒಂದು  ಸಿಹಿ ಸುದ್ದಿಯನ್ನು ಕೇಳುವಂತಹ ಒಂದು ಶುಭ ಯೋಗ , ಯಾರೋ ಒಬ್ಬರು ನಿಮ್ಮ ಸಹಾಯಕ್ಕೆ ನಿಂತುಕೊಳ್ಳುತ್ತಾರೆ ಚೆನ್ನಾಗಿದೆ ,

ಕುಂಭ ರಾಶಿ: ಆರೋಗ್ಯದ ಕಡೆ ಸ್ವಲ್ಪ ಸಮಯ ಕೊಡಿ , ಮನಸ್ಸು ಸ್ವಲ್ಪ ಚಂಚಲಗೊಳ್ಳುತ್ತದೆ,  ಆದರೂ ಒಂದು ಶುಭ ಸುದ್ದಿಯಿದೆ ,ಕೆಲಸದ ನಿಮಿತ್ತ,  ಉದ್ಯೋಗದ ನಿಮಿತ್ತ,  ಪ್ರಯಾಣದ ನಿಮಿತ್ತ,  ಒಂದು ಒಳ್ಳೆಯ ಶುಭ ಸುದ್ದಿಯಿದೆ.

ಮೀನ ರಾಶಿ : ಹಾಲು ತುಪ್ಪ ಬೆಣ್ಣೆ ಎಲ್ಲವೂ ಉಕ್ಕಿ ಹರಿದಂತ  ಒಂದು ದಿನ , ತಾಯಿಯ ಆರೋಗ್ಯದ ಕಡೆಗೆ ಗಮನ ವಹಿಸಿ , ವಯಸ್ಸಾದ ಅತ್ತೆ,  ಮಾವ,  ತಂದೆ,  ತಾಯಿ, ಗಳಿದ್ದರೆ ಸ್ವಲ್ಪ ಕಿಟಿಕಿಟಿ ಎನ್ನುತ್ತಿರುತ್ತಾರೆ , ದೊಡ್ಡವರು ಬೈದರೆ ಅದು  ಆಶೀರ್ವಾದ ಎಲ್ಲವೂ ನಮ್ಮ ಒಳ್ಳೆಯದಕ್ಕೆ ಎಂದು ಭಾವಿಸಿ.

Advertisement
Share this on...