ಈ ರಾಶಿಯವರಿಗಿಂದು ಸ್ತ್ರೀಯರೊಂದಿಗೆ ಒಂದು ಸಣ್ಣ ಜಟಾಪಟಿ…

in ಜ್ಯೋತಿಷ್ಯ 88 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ  ದಶಮಿ ತಿಥಿ,  ಭರಣಿ ನಕ್ಷತ್ರ,  ಶೂಲ ಯೋಗ,  ವನಿಜ ಕರಣ  ಜುಲೈ 15  ,   ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ  ಬೆಳಗ್ಗೆ 11 ಗಂಟೆ,   24 ನಿಮಿಷದಿಂದ,  1 ಗಂಟೆ,  10 ನಿಮಿಷದವರೆಗೂ ಇದೆ.

Advertisement

ನಾಳೆಯಿಂದ ದಕ್ಷಿಣಾಯಣ ಆರಂಭ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ದಿನದಲ್ಲಿ ಎಂಟು ಗಂಟೆ ನಿದ್ದೆ ಮಾಡಬೇಕು.  ಸರಿಯಾಗಿ ನಿದ್ದೆ ಮಾಡದಿದ್ದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಸತತವಾಗಿ ಎಪ್ಪತ್ತೆರಡು ಗಂಟೆಗಳ ಕಾಲ ನಿದ್ದೆ ಮಾಡದೇ ಕೆಲಸ ಮಾಡಿದರೆ ಮನುಷ್ಯ ಹುಚ್ಚನಾಗುತ್ತಾನೆ. ಒಂದು ವಾರಗಳ ಕಾಲ ಸತತವಾಗಿ ನಿದ್ದೆ ಮಾಡಿದರೂ ಕೂಡ ನಿದ್ದೆ ಪರಿಪೂರ್ಣವಾಗುವುದಿಲ್ಲ ಅಲ್ಲದೇ ರೋಗ ನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ.  ತುಂಬಾ ನೀರು ಕುಡಿಯಬೇಕಾಗುತ್ತದೆ.    ಅಲ್ಲದೆ ಪ್ರೋಟಿನ್ ಇರುವ  ಆಹಾರವನ್ನು ಸೇವಿಸಬೇಕಾಗುತ್ತದೆ. ಇಂದು ರಾಹುಕಾಲದಲ್ಲಿ ದೀಪವನ್ನು ಹಚ್ಚಿ,  ಸಂಧ್ಯಾಕಾಲದಲ್ಲಿ ಮನೆಯ ಹೊಸ್ತಿಲ ಬಳಿ ದೀಪವನ್ನು ಹಚ್ಚಿ,  ಸಂಧ್ಯಾ ಕಾಲದಲ್ಲಿ ಹಚ್ಚುವ ದೀಪ  ಸಕಲ ದೋಷಗಳನ್ನು ನಿವಾರಿಸುತ್ತದೆ.

Advertisement

Advertisement

 

Advertisement

ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಚೆನ್ನಾಗಿದೆ,  ನಿಮಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ ಆದರೆ ಕಲಾವಿದರಿಗೆ ಸ್ವಲ್ಪ ಫಲ ಕಡಿಮೆ ಇರುತ್ತದೆ.

ವೃಷಭ ರಾಶಿ : ಚೆನ್ನಾಗಿದೆ,  ಇಂದು ಸ್ವಲ್ಪ ಖರ್ಚು ಜಾಸ್ತಿ.

ಮಿಥುನ ರಾಶಿ :  ಲಾವಣ್ಯ,  ರೂಪ,  ಗತ್ತು, ತೂಕ ಎಲ್ಲವೂ ಇಂದು ಅದ್ಭುತ.

 

ಕರ್ಕಾಟಕ ರಾಶಿ : ತುಂಬಾ ದಿನದ ನಂತರ ಅಲಂಕಾರ ಮಾಡಿಕೊಳ್ಳುತ್ತೀರಾ ನೀವು ಎಷ್ಟು ಖುಷಿಯಾಗಿ ಇರುತ್ತಿರೊ ಅಷ್ಟು ಖುಷಿಯನ್ನು ಹಂಚುತ್ತೀರ.

ಸಿಂಹ ರಾಶಿ : ಚೆನ್ನಾಗಿದೆ, ಗತ್ತು,  ತೂಕ , ವ್ಯವಸ್ಥೆ ಬದ್ಧವಾಗಿ ನಡೆದುಕೊಳ್ಳುವಂತಹ ದಿನ.

ಕನ್ಯಾ ರಾಶಿ :  ಪ್ರಬುದ್ಧರಾಗಿರುತ್ತೀರ,  ಸರ್ಪ್ರೈಸ್ ಮತ್ತು ಶಾಪಿಂಗ್ ಕೂಡ ಇರುತ್ತದೆ.

ತುಲಾ ರಾಶಿ : ಚೆನ್ನಾಗಿದೆ ನೀವು ಅಂದುಕೊಂಡ ಕೆಲಸ ಕಾರ್ಯಗಳಿಂದ  ಪ್ರತಿಫಲ, ಕೆಲಸ,  ಯೋಗ್ಯತೆಗೆ ತಕ್ಕಂತೆ ಪ್ರತಿಫಲ ದೊರೆಯುವ ಅದೃಷ್ಟದ ದಿನ.

ವೃಶ್ಚಿಕ ರಾಶಿ : ಸೊಂಟ ನೋವು ,  ಮಂಡಿ ನೋವು ಇರುತ್ತದೆ ತುಪ್ಪವನ್ನು ಸೇವಿಸಿ. ಪದ್ಮಾಸನ ಹಾಕಿ ಕುಳಿತುಕೊಳ್ಳಿ,  ಇಲ್ಲವೇ ವಜ್ರಾಸನ ಹಾಕಿ ಕುಳಿತುಕೊಳ್ಳಿ .

ಧನಸ್ಸು ರಾಶಿ : ತೀರಾ ತುಂಟತನ ಒಳ್ಳೆಯದಲ್ಲ,  ಹಾಗೆಯೇ ತೀರಾ ದ್ವೇಷ , ಪ್ರೀತಿ , ನಿದ್ದೆ , ಇವುಗಳು ಕೂಡ ಒಳ್ಳೆಯದಲ್ಲ. ಎಲ್ಲವೂ ಹಿತ ಮಿತವಾಗಿರಬೇಕು.

ಮಕರ ರಾಶಿ : ಚೆನ್ನಾಗಿದೆ,  ಯೋಗ್ಯತೆಗೆ ತಕ್ಕಂತ ಕೆಲಸ ಮತ್ತು ಅದರ ಪ್ರತಿಫಲವನ್ನು ಇಂದು ನೀವು ನೋಡುತ್ತೀರಿ.

ಕುಂಭ ರಾಶಿ : ಇಂದು ಯಶಸ್ಸಿನ ಕೀರ್ತಿ ನಿಮ್ಮದಾಗುತ್ತದೆ.

ಮೀನ ರಾಶಿ : ಇಂದು  ಸ್ತ್ರೀಯರೊಂದಿಗೆ ಒಂದು ಸಣ್ಣ ಜಟಾಪಟಿ,  ಜೀವನದಲ್ಲಿ ಸಣ್ಣ ಪುಟ್ಟ ಜಗಳವಿರಬೇಕು,  ಆದರೆ ಜೀವನವೇ ಜಗಳವಾಗಬಾರದು. ಯೋಚನೆ ಇರಬೇಕು ಆದರೆ ಯೋಚನೆಯೇ ದಿನಪೂರ್ತಿ ಆಗಬಾರದು ಯೋಚನೆಯಿಂದಲೇ ದಿನಪೂರ್ತಿ ಹಾಳಾಗುತ್ತದೆ.

All Rights reserved Namma Kannada Entertainment.

Advertisement
Share this on...