ರಾತ್ರೋರಾತ್ರಿ ಸಾಮಾನ್ಯನನ್ನು ಕೋಟ್ಯಾಧೀಶ್ವರನನ್ನಾಗಿ ಮಾಡುವ ಶಕ್ತಿ

in ಜ್ಯೋತಿಷ್ಯ 646 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಶುಕ್ಲ ಪಕ್ಷದ ನವಮಿ  ತಿಥಿ,   ಪೂರ್ವಾಷಾಢ ನಕ್ಷತ್ರ,  ಶೋಭನಾ ಯೋಗ,  ಬಾಲವ ಕರಣ, ಸೆಪ್ಟೆಂಬರ್ 25  , ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ ಮಧ್ಯಾಹ್ನ 1 ಗಂಟೆ 38 ನಿಮಿಷದಿಂದ 3 ಗಂಟೆ 16 ನಿಮಿಷದವರೆಗೂ ಇದೆ.

Advertisement

ರಾತ್ರೋರಾತ್ರಿ ಸಾಮಾನ್ಯ ಮನುಷ್ಯನನ್ನು ಕೋಟ್ಯಾಧೀಶ್ವರ ನನ್ನಾಗಿ ಮಾಡುವ ಶಕ್ತಿ ರಾಹುವಿಗೆ ಇದೆ. ರಾಹು ಶುಕ್ರ ಶನಿಯ ಪರಿಚಾಯ ನಡೆದರೆ ಅಲ್ಲೊಂದು ವಿಸ್ಮಯ ನಡೆಯುತ್ತದೆ. ಯಾರ ಜಾತಕದಲ್ಲಿ ರಾಹು ಶುಕ್ರ ಶನಿಯ ಪರಿಚಾಯವಿದ್ದರೆ ಅವರಿಗೆ ಅಖಂಡ ಲಕ್ಷ್ಮಿ ಯೋಗವಿರುತ್ತದೆ. ರಾಹು ವೃಷಭರಾಶಿಯ ವಳ್ಳಿಯ ಮನೆಗೆ ಅಂದರೆ ಲಕ್ಷ್ಮಿಯ ಇನ್ನೊಂದು ರೂಪದ ಮನೆಗೆ ಹುಚ್ಚಂಗತನಾಗಿ ಬಂದಿದ್ದಾನೆ. ವೃಷಭ ರಾಶಿಯವರಿಗೆ ಸೌಭಾಗ್ಯ ತಂದುಕೊಡುತ್ತಾನೆ. ಗುರು ಅಷ್ಟಮದಲ್ಲಿರುವುದರಿಂದ ನವೆಂಬರ್ ನಂತರ  ಶನಿ ಮತ್ತು ಗುರು ಕದಲಿಕೆಯಿಂದ ಲಕ್ಷ್ಮೀ ರೂಪವಾಗಿ ನಿಮಗೆ ಬಂದು ಬದುಕನ್ನು ಕಟ್ಟಿಸಿ ಕೊಡುವಂತಹ ಸುಯೋಗವಿದೆ. ಅಖಂಡ ಸಾಮ್ರಾಜ್ಯ ಯೋಗವನ್ನು ವೃಷಭ ರಾಶಿಯವರಿಗೆ ರಾಹು ತಂದು ಕೊಡುತ್ತಾನೆ. ಅಕ್ರಮವಾಗಿ ಅನ್ಯಾಯ ಮಾರ್ಗದಿಂದ ದುಡ್ಡನ್ನು ಸಂಪಾದನೆ ಮಾಡಿದ್ದೇ ಆದಲ್ಲಿ ಕೊಟ್ಟಿರುವಂತಹ ಈ ಎಲ್ಲಾ ಯೋಗವನ್ನು ಕಿತ್ತುಕೊಳ್ಳುವಂತಹ ಶಕ್ತಿ ರಾಹುವಿಗೆ ಇದೆ.  ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ನೋಡಿ.

Advertisement

&;

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚನ್ನಾಗಿದೆ, ಸುತ್ತಾಟ ಖುಷಿ ಸಂಭ್ರಮದ ದಿನ. ದೈವ ದರ್ಶನ ಬೋಗ ಭೋಜನ.

ವೃಷಭ ರಾಶಿ : ಬುದ್ಧಿ ಉಪಯೋಗಿಸಿ ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಕಲಾದೇವಿಯ ಆಶೀರ್ವಾದ ದೊರೆಯುತ್ತದೆ.

ಮಿಥುನ ರಾಶಿ : ಸಂಗಾತಿಯ ಜೊತೆ ಆತ್ಮೀಯರ ಜೊತೆ ಸ್ನೇಹಿತರ ಜೊತೆ ಸುತ್ತಾಟ,  ಒಡನಾಟ, ಹಳೆಯ ಆತ್ಮೀಯರನ್ನು,  ಸ್ನೇಹಿತರನ್ನು ಭೇಟಿ ಮಾಡುವಂಥ ಸುಯೋಗ.

ಕರ್ಕಾಟಕ ರಾಶಿ : ಸೊಂಟ ನೋವು ಹೊಟ್ಟೆ ನೋವುಗಳಿಗೆ ತಲೆ ಕೆಡಿಸಿಕೊಳ್ಳುತ್ತೀರಿ, ಸ್ತ್ರೀಯರೊಡನೆ ಸ್ವಲ್ಪ ಕಿರಿಕಿರಿ,  ಮಿಕ್ಕಂತೆ ಯಾವುದೇ ರೀತಿಯ ತೊಂದರೆ  ಇಲ್ಲ.

ಸಿಂಹ ರಾಶಿ : ಚೆನ್ನಾಗಿದೆ ತೊಂದರೆ ಏನೂ ಇಲ್ಲ , ಸ್ವಲ್ಪ ಖರ್ಚು ವೆಚ್ಚಗಳು ಜಾಸ್ತಿ ಕುಟುಂಬಕ್ಕೋಸ್ಕರ.

ಕನ್ಯಾ ರಾಶಿ : ನಿಮ್ಮ ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆ,  ಶುಭ ಸುದ್ದಿಯನ್ನು ಕೇಳುತ್ತೀರಾ,  ಶುಭ ವ್ಯಕ್ತಿಗಳ ಆಗಮನವಾಗಲಿದೆ. ಇಲ್ಲವೆ ನೀವೇ ಬೇರೊಬ್ಬರಿಗೆ ಶುಭವಾಗುತ್ತೀರ,  ನಿಮ್ಮ ಮಾತು ತೂಕ ಗತ್ತು ಎಲ್ಲವೂ ಎತ್ತರ ಸ್ಥಾನದಲ್ಲಿರುತ್ತದೆ.

ತುಲಾ ರಾಶಿ : ಹಾಲು,ಹಣ್ಣು , ಬಟ್ಟೆ, ಟ್ರಾವೆಲ್ಸ್,  ಟೂಲ್ಸ್,  ವೆಹಿಕಲ್ಸ್ ಈ ರೀತಿಯ ವ್ಯವಹಾರಗಳಲ್ಲಿ ಕಷ್ಟಪಟ್ಟು ಬೆಳವಣಿಗೆಯನ್ನು ನೋಡುವಂತಹ ದಿನ ಸುಖವಿದೆ.

ವೃಶ್ಚಿಕ ರಾಶಿ : ಅಪರೂಪಕ್ಕೆ ಅಲಂಕಾರ ಮಾಡಿಕೊಳ್ಳುವಂತಹ ಯೋಗವಿರುವ ದಿನ.

ಧನಸ್ಸು ರಾಶಿ : ನೀವು ಪಾಯಸವನ್ನು ತಿನ್ನುತ್ತಿದ್ದರು ಪಕ್ಕದಲ್ಲಿದ್ದ ಗಂಜಿಯನ್ನು ನೋಡುವ ಬಾವ ನಿಮ್ಮದು.

ಮಕರ ರಾಶಿ : ತಂದುಕೊಂಡಿರುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಮತ್ತು ಕೈ ತುಂಬಾ ದೊಡ್ಡ ಸಿಗಲಿದೆ.

ಕುಂಭ ರಾಶಿ : ಪೂರ್ಣ ಕುಂಭ ಯೋಗಿ ಸಂಭ್ರಮ ಎಲ್ಲವೂ ಇರುವಂತಹ ದಿನ ನಿಂತರೆ ಸ್ವಲ್ಪ ಸೊಂಟ ನೋವಿನ ಸಮಸ್ಯೆ ಇರುತ್ತದೆ. ಶಂಖ ಮುದ್ರೆ ಹಾಕಿ ಇದರಿಂದ ಸೊಂಟ ನೋವು ಸ್ಟ್ರಿಪ್ ಡಿಸ್ಕ್ ನಂತ  ಎಲ್ಲಾ ರೀತಿಯ ನೋವುಗಳು ನಿವಾರಣೆಯಾಗುತ್ತದೆ.

ಮೀನ ರಾಶಿ : ಚೆನ್ನಾಗಿದೆ ಸ್ತ್ರೀಯರಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಟೀಚರ್  ಟ್ರೈನಿಂಗ್ನಲ್ಲಿ ಇರುವಂಥವರಿಗೆ ವಿಶೇಷವಾದ ಪ್ರಗತಿಯನ್ನು ಕಾಣುವ ದಿನ.

All Rights reserved Namma  Kannada Entertainment.

Advertisement
Share this on...