ಈ ರಾಶಿಯವರಿಗಿಂದು ಯೋಗ್ಯತೆಗೆ ಮೀರಿದಂತಹ ಫಲ !

in ಜ್ಯೋತಿಷ್ಯ 70 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಆಷಾಢ ಮಾಸೆ,  ಶುಕ್ಲ ಪಕ್ಷದ ತೃತೀಯ  ತಿಥಿ,  ಧನಿಷ್ಠ ನಕ್ಷತ್ರ, ಪ್ರೀತಿ ಯೋಗ,  ಭದ್ರಾಂಕರಣ ಜುಲೈ  8 ,ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.   ಇಂದು ಅಮೃತ ಕಾಲ  ಮಧ್ಯಾಹ್ನ  2 ಗಂಟೆ,   17 ನಿಮಿಷದಿಂದ,  3 ಗಂಟೆ,  58  ನಿಮಿಷದವರೆಗೂ ಇದೆ.

Advertisement

ನಿಮ್ಮ ರಾಶಿಗಳ ಫಲದ  ಬಗ್ಗೆ ಮಾಹಿತಿ ಹೀಗಿದೆ.

Advertisement

ಮೇಷ ರಾಶಿ : ಚಂದ್ರ  ಧನಿಷ್ಠಾ ನಕ್ಷತ್ರದ ಪ್ರಭಾವದಲ್ಲಿ ಇದ್ದಾನೆ . ಚೆನ್ನಾಗಿದೆ ಆದರೆ ಸ್ವಲ್ಪ ಒದ್ದಾಟ, ಒತ್ತಡ ,  ಪರಿಶ್ರಮ ಜಾಸ್ತಿ. ಒಂದು ಬೊಗಸೆ ಎಳ್ಳೆಣ್ಣೆಯನ್ನು ಹನುಮ ದೇವಸ್ಥಾನಕ್ಕೆ ದಾನ ಕೊಡಿ ಒಳ್ಳೆಯದಾಗುತ್ತದೆ.

Advertisement

ವೃಷಭ ರಾಶಿ : ಪರವಾಗಿಲ್ಲ,  ಎಲ್ಲಿ ನಿಧಾನವಾಗಿ ಇರಬೇಕು ಅಲ್ಲಿ ಅವಸರ ಮಾಡುತ್ತೀರಿ,  ಎಲ್ಲಿ ಬೇಗ ಮಾಡಬೇಕು ಅಲ್ಲಿ ನಿಧಾನ ಮಾಡುತ್ತೀರಿ.

Advertisement

ಮಿಥುನ ರಾಶಿ :  ಪ್ರಯತ್ನದಲ್ಲಿ ಜಯ,  ವಿಪರೀತ ಕೋಪ ಕ್ರೋಧ ಬರುತ್ತೆ , ತುಂಬಾ ಸ್ಪೀಡಾಗಿ ಕೆಲಸ ಮಾಡುವವರು ಮತ್ತು ಗಾಡಿ ಓಡಿಸುವವರು ಸ್ವಲ್ಪ ಜಾಗ್ರತೆ.

ಕರ್ಕಾಟಕ ರಾಶಿ : ಅಂದುಕೊಂಡಿರುವ ಕೆಲಸ ಕಾರ್ಯಗಳಲ್ಲಿ ಪ್ರಗತಿ,  ಸ್ವಲ್ಪ ಪ್ರಯಾಸದ ದಿನ.

ಸಿಂಹ ರಾಶಿ : ವಿಪರೀತ ಕೋಪ ಸಿಡುಕು ದುಡುಕು ಬಿಡುತ್ತೀರಿ ಎಚ್ಚರ . ಭೂಮಿ ಮನೆ ಕಟ್ಟುವುದು,  ತೆಗೆದುಕೊಳ್ಳುವುದು  ಸ್ವಲ್ಪ ನಿಧಾನಿಸಿ.

ಕನ್ಯಾ ರಾಶಿ : ಆತುರ, ಗಾಯ,  ಪೆಟ್ಟು  ಜಗಳವಾಡುವ ಸಂಭವವಿರುತ್ತದೆ . ಮನೆಯಲ್ಲಿ ಮೂರು ಇಂಚಿನ ದೀಪವನ್ನು ಹಚ್ಚಿ ಪೂಜೆ ಮಾಡಿ .

ತುಲಾ ರಾಶಿ : ಮುರಿದು ಹೋದ ವಿಗ್ರಹಗಳೇ ಇದ್ದರೆ ಅದನ್ನು ಮನೆಯಿಂದ ಹೊರಗೆ ತೆಗೆದು ದೇವಸ್ಥಾನಕ್ಕೆ ಕೊಟ್ಟುಬಿಡಿ .

ವೃಶ್ಚಿಕ ರಾಶಿ : ಚೆನ್ನಾಗಿದೆ , ಭೂಮಿ,  ಮನೆ,  ಆಳು ಕಾಳು, ಜಮೀನನ್ನು ಮಾರುವುದು ಕೊಳ್ಳುವುದು ಮಾಡುತ್ತಿದ್ದರೆ ಯಶಸ್ವಿಯಾಗುತ್ತೀರಿ ಆದರೆ ಮೇಜರ್ ಇನ್ವೆಸ್ಟ್ಮೆಂಟ್ ಬೇಡ .

ಧನಸ್ಸು ರಾಶಿ : ಅದ್ಭುತವಾದ ದಿನ,  ಪೊಲೀಸ್ ಇಲಾಖೆ,  ರಕ್ಷಣಾಇಲಾಖೆಯಲ್ಲಿ ಇರುವವರಿಗೆ ಒಂದು ಬಿರುಸಾದ ಜವಾಬ್ದಾರಿಯನ್ನು ತಂದೊಡ್ಡುತ್ತದೆ ಎಚ್ಚರಿಕೆ, ಕುತಂತ್ರಿಗಳಿಂದ ಎಚ್ಚರವಾಗಿರಿ.

 

ಮಕರ ರಾಶಿ : ವಿಪರೀತ ಬಲವಿರುತ್ತದೆ,  ಬಲವನ್ನು ಎಲ್ಲಿ ಹೇಗೆ ಎಷ್ಟು ಬಳಸಬೇಕೋ ಅಷ್ಟನ್ನು ಮಾತ್ರ ಬಳಸಬೇಕು ಎಚ್ಚರಿಕೆ.

ಕುಂಭ ರಾಶಿ : ಅಂದುಕೊಂಡ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಮುಂದಕ್ಕೆ ತೆಗೆದುಕೊಂಡು ಹೋಗುವಂತಹ ದಿನ. ಬಿರುಸಾದ ಮಾತು,  ಫಾಸ್ಟ್ ಆಗಿ ಗಾಡಿ ಓಡಿಸುವುದು,  ಕರೆಂಟ್,  ನೀರು,  ಬೆಂಕಿ ಇವುಗಳಿಂದ ದೂರವಿರಿ ಎಚ್ಚರವಾಗಿರಿ .

ಮೀನ ರಾಶಿ : ಚೆನ್ನಾಗಿದೆ,  ಚಂದ್ರ ಕುಜನ ಸ್ಥಾನದಲ್ಲಿ , ಪೂರ್ವ ಪುಣ್ಯ ಧಿಪತಿ ಸ್ಥಾನದಲ್ಲಿ ಕುಜ ಇರುವುದರಿಂದ ಲಾಭಕರ , ಯೋಗ ಕರ, ಭೂಮಿ,  ಮನೆ , ನಿಮ್ಮ ಯೋಗ್ಯತೆಗೆ ಮೀರಿದಂತಹ ಫಲವನ್ನು ಕೊಡುವಂತಹ ದಿನ.

All Rights reserved Namma Kannada Entertainment.

Advertisement
Share this on...