ಹೆಸರಿನಲ್ಲೇನಿದೆ ಎನ್ನುವವರು ಇದನ್ನು ಓದಿ..ಕನ್ನಡ ಖ್ಯಾತನಟರ ನಿಜ ಹೆಸರುಗಳು ಹೀಗಿವೆ..!

in ಮನರಂಜನೆ 423 views

ಡಾ. ರಾಜ್​ಕುಮಾರ್, ಡಾ. ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್, ನವರಸ ನಾಯಕ ಜಗ್ಗೇಶ್, ಶಂಕರ್ ನಾಗ್, ಅನಂತ್​​ನಾಗ್​ ಜಗ್ಗೇಶ್​​, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಾಕಿಂಗ್​ ಸ್ಟಾರ್ ಯಶ್​​​​ ಇವರೆಲ್ಲಾ ಕನ್ನಡ ಚಿತ್ರರಂಗದ ಖ್ಯಾತ ನಟರು, ಇದು ಚಿಕ್ಕಮಗುವಿಗೂ ಗೊತ್ತು. ಈ ಹೆಸರುಗಳು ಕನ್ನಡ ಚಿತ್ರರಂಗ ಇರುವವರೆಗೂ ಅಜರಾಮರವಾಗಿರುತ್ತದೆ. ಆದರೆ ಈ ಹೆಸರುಗಳೆಲ್ಲಾ ಅವರ ನಿಜವಾದ ಹೆಸರುಗಳಲ್ಲ ಎಂಬುದು ನಿಮಗೆ ಗೊತ್ತಾ, ಈ ನಟರ ನಿಜ ಹೆಸರೇ ಬೇರೆ.

Advertisement

 

Advertisement

Advertisement

 

Advertisement

ವರನಟ ಡಾ. ರಾಜ್​​​ಕುಮಾರ್ ಕನ್ನಡ ಚಿತ್ರರಂಗದ ಹಿರಿಯ ನಟರು, ರಾಜ್​​ಕುಮಾರ್ ಎಂಬ ಹೆಸರು ಕೋಟ್ಯಂತರ ಕನ್ನಡಿಗರ ಮನದಲ್ಲಿ ಅಚ್ಚ ಹಸಿರಾಗಿ ಉಳಿದಿದೆ. ಆದರೆ ರಾಜ್​​ಕುಮಾರ್ ಮೊದಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಿ ಮುತ್ತುರಾಜ್​​. ಗುಬ್ಬಿ ವೀರಣ್ಣ ಅವರ ಗುಬ್ಬಿ ಡ್ರಾಮಾ ಕಂಪನಿಯಲ್ಲಿ ಧೀರ್ಘ ಕಾಲ ಕೆಲಸ ಮಾಡುತ್ತಿದ್ದ ಅಣ್ಣಾವ್ರು 1954 ರಲ್ಲಿ ‘ಬೇಡರ ಕಣ್ಣಪ್ಪ’ ಚಿತ್ರದಿಂದ ರಾಜ್​​ಕುಮಾರ್ ಆದರು. ಆ ಚಿತ್ರದ ನಿರ್ದೇಶಕ ಹೆಚ್​.ಎಲ್​. ಸಿಂಹ ಮುತ್ತುಸ್ವಾಮಿ ಅವರನ್ನು ರಾಜ್​​ಕುಮಾರ್ ಆಗಿ ಬದಲಿಸಿದರು. ಇದೀಗ ನಟಸಾರ್ವಭೌಮ, ರಾಜ್​ಕುಮಾರ್ ಆಗಿ ಜನರ ಮನಸ್ಸಲ್ಲಿ ಮುದ್ರೆಯೊತ್ತಿದ್ದಾರೆ

 

‘ನಾಗರಹಾವು’ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ಡಾ. ವಿಷ್ಣುವರ್ಧನ್​​​​​ ಇಂದು ಕೋಟ್ಯಾಂತರ ಅಭಿಮಾನಿಗಳ ಕಣ್ಮಣಿ. ವಿಷ್ಣುಗೆ ಮಹಿಳಾ ಅಭಿಮಾನಿಗಳು ಕೂಡಾ ಹೆಚ್ಚಾಗಿದ್ದಾರೆ. ಈ ಸಾಹಸಸಿಂಹನ ಮೊದಲ ಹೆಸರು ಸಂಪತ್ ಕುಮಾರ್. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಸಂಪತ್ ಕುಮಾರ್ ಅವರ ಹೆಸರನ್ನು ವಿಷ್ಣುವರ್ಧನ್ ಆಗಿ ಬದಲಿಸಿದರು. ಸಂಪತ್ ಕುಮಾರ್ ಅವರ ಅದೃಷ್ಟವೋ, ಜನರ ಪ್ರೀತಿಯೋ ಇಂದು ಅವರು ಅಭಿನಯ ಭಾರ್ಗವ ವಿಷ್ಣುವರ್ಧನ್ ಆಗಿ ಜನರ ಆರಾಧ್ಯ ದೈವ ಎನಿಸಿದ್ದಾರೆ. ವಿಷ್ಣು ಅವರ ಆಪ್ತ ಸ್ನೇಹಿತ ರೆಬಲ್ ಸ್ಟಾರ್ ಅಂಬರೀಶ್ ಮೂಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರ್​ನಾಥ್​. ಇವರ ಹೆಸರನ್ನು ಕೂಡಾ ಅಂಬರೀಶ್ ಎಂದು ಬದಲಿಸಿದ್ದು ಪುಟ್ಟಣ್ಣ ಕಣಗಾಲ್ ಅವರೇ.

 

ಸ್ಯಾಂಡಲ್​​ವುಡ್​​​ನಲ್ಲಿ ಎವರ್​​​​ಗ್ರೀನ್​​ ಹೀರೋ ಎಂದೇ ಖ್ಯಾತರಾದ ಅನಂತ್ ನಾಗ್ ಮೊದಲ ಹೆಸರು ಅನಂತ್ ನಾಗರಕಟ್ಟೆ. ಆದರೆ ಸಂಕಲ್ಪ ಚಿತ್ರದಲ್ಲಿ ನಟಿಸುವಾಗ ಅವರ ಹೆಸರನ್ನು ನಿರ್ದೇಶಕ ಪಿ.ವಿ. ನಂಜರಾಜ ಅರಸ್​​​​​​​​ ಅವರ ಹೆಸರನ್ನು ಅನಂತ್ ನಾಗ್ ಎಂದು ಬದಲಿಸಿದರು. ಅಣ್ಣನಂತೆ ತಮ್ಮ ಕೂಡಾ ನಾಗರಕಟ್ಟೆ ಶಂಕರ ಎಂಬ ಹೆಸರನ್ನು ಶಂಕರ್ ನಾಗ್ ಎಂದು ಬದಲಿಸಿಕೊಂಡರು. ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್ ಮೊದಲ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ. ಆದರೆ ಆನಂದ್ ಚಿತ್ರದ ಸಮಯದಲ್ಲಿ ಅಪ್ಪನ ಹೆಸರನ್ನು ಜೊತೆಗೆ ಸೇರಿಸಿಕೊಂಡು ಶಿವಣ್ಣ ತಮ್ಮ ಹೆಸರನ್ನು ಶಿವ ರಾಜ್​​ಕುಮಾರ್ ಎಂದು ಬದಲಿಸಿಕೊಂಡರು. ಇವರ ತಮ್ಮ ಪವರ್ ಸ್ಟಾರ್ ಪುನೀತ್ ರಾಜ್​​​​ಕುಮಾರ್ ಮೂಲ ಹೆಸರು ಲೋಹಿತ್. ಆದರೆ ಜಾತಕದ ಪ್ರಕಾರ ಆ ಹೆಸರು ಸರಿ ಬರುವುದಿಲ್ಲ ಎಂಬ ಕಾರಣಕ್ಕೆ ಪಾರ್ವತಮ್ಮ ರಾಜ್​​ಕುಮಾರ್ ಲೋಹಿತ್ ಹೆಸರನ್ನು ಪುನೀತ್ ರಾಜ್​​ಕುಮಾರ್ ಎಂದು ಬದಲಿಸಿದರು.

 

 

ಇನ್ನು ನವರಸನಾಯಕ ಜಗ್ಗೇಶ್ ಈ ಮುನ್ನ ಈಶ್ವರ್ ಗೌಡ ಆಗಿದ್ದರು, ನಂತರ ಸಿನಿಮಾಗೆ ಬಂದ ಮೇಲೆ ಜಗ್ಗೇಶ್ ಶಿವಲಿಂಗಪ್ಪ ಎಂದು ಬದಲಿಸಿಕೊಂಡರು ಈಗ ಅವರು ಜಗ್ಗೇಶ್ ಎಂದೇ ಫೇಮಸ್. ಇವರು ಮಾತ್ರವಲ್ಲ ಸುದೀಪ್ ಮೊದಲ ಹೆಸರು ದೀಪು, ಆದರೆ ಸಿನಿರಂಗಕ್ಕೆ ಎಂಟ್ರಿ ನೀಡುತ್ತಿದ್ದಂತೆ ಹೆಸರನ್ನು ಸುದೀಪ್ ಎಂದು ಬದಲಿಸಿಕೊಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್​​​​ಗೆ ಅವರ ಅಪ್ಪ-ಅಮ್ಮ ಪ್ರೀತಿಯಿಂದ ಇಟ್ಟಿದ್ದ ಹೆಸರು ಹೇಮಂತ್ ಕುಮಾರ್. ಆದರೆ ಮೆಜೆಸ್ಟಿಕ್ ಚಿತ್ರಕ್ಕಾಗಿ ಹೇಮಂತ್ ದರ್ಶನ್ ಆದರು ಎಂಬುದು ಆಪ್ತರ ಮಾತು. ಧಾರಾವಾಹಿಗಳಲ್ಲಿ ನಟಿಸುವಾಗ ನವೀನ್ ಕುಮಾರ್ ಗೌಡ ಆಗಿದ್ದವರು ಸಿನಿಮಾದಲ್ಲಿ ಅವಕಾಶ ದೊರೆಯುತ್ತಿದ್ದಂತೆ ಯಶ್ ಆದರು. ಈಗ ಅವರು ಅಭಿಮಾನಿಗಳ ಪ್ರೀತಿಯ ರಾಕಿಂಗ್ ಸ್ಟಾರ್. ಇನ್ನು ಶ್ರೀಮುರಳಿ ಮೂಲ ಹೆಸರು ಮುರುಳಿ. ಆದರೆ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆಯುತ್ತಿದ್ದಂತೆ ಶ್ರೀಮುರಳಿ ಎಂದು ಹೆಸರು ಬದಲಿಸಿಕೊಂಡರು.

 

 

ಇನ್ನು ಪ್ರಣಯರಾಜ ಎಂದೇ ಹೆಸರಾದ ಶ್ರೀನಾಥ್ ಮೊಲದ ಹೆಸರು ನಾರಾಯಣ ಸ್ವಾಮಿ. ಮೈಸೂರಿನಲ್ಲಿ ಹುಟ್ಟಿ ಬೆಳೆದ ನಾರಾಯಣ ಸ್ವಾಮಿ, ಎಸ್​​​ಲೆಎ ಚಾರಿ ನಿರ್ದೇಶನದ ಮಧುರ ಮಿಲನ ಚಿತ್ರದ ವೇಳೆ ಶ್ರೀನಾಥ್ ಆಗಿ ಬದಲಾದರು.ಒಟ್ಟಿನಲ್ಲಿ ಹೆಸರು ಬದಲಾವಣೆಯಿಂದಲೋ, ಪ್ರತಿಭೆಯಿಂದಲೋ ಅಥವಾ ಅದೃಷ್ಟದಿಂದಲೋ ಇವರೆಲ್ಲಾ ಇಂದು ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

Advertisement
Share this on...