ಜ್ಯೂನಿಯರ್ ರಾಕಿಭಾಯ್ ದರ್ಶನಕ್ಕೆ ರೆಡಿಯಾಗಿ.. ಹೇಗಿದ್ದಾರೆ ಗೊತ್ತಾ ಮರಿ ರಾಜಾಹುಲಿ…?

in ಮನರಂಜನೆ 65 views

ಸ್ಯಾಂಡಲ್ ವುಡ್ ನ ರಾಕಿಂಗ್ ಕಪಲ್ ಮನೆಗೆ ಜ್ಯೂನಿಯರ್ ಯಶ್ ಆಗಮಿಸಿ ಇಂದಿಗೆ ಆರು ತಿಂಗಳು ಪೂರ್ಣಗೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಜ್ಯೂನಿಯರ್ ಯಶ್ ದರ್ಶನ ಆಗಲಿದೆ. ಯಶ್ ಅಭಿಮಾನಿಗಳಲ್ಲಿ ನೆಚ್ಚಿನ ನಟನ ಪುತ್ರನನ್ನು ನೋಡೋಕೆ ಸಾಕಷ್ಟು ಕುತೂಹಲ ಇದ್ದು ಹೇಗಿದ್ದಾನೆ ಮರಿ ರಾಜಹುಲಿ ಅಂತ ನೋಡೋಕೆ ಅಭಿಮಾನಿಗಳು ಕಾಯಬೇಕಿದೆ. ಯಶ್ ದಂಪತಿ ಮಕ್ಕಳ ಫೋಟೋವನ್ನ ರಿವೀಲ್ ಮಾಡಲು ಬಹಳ ಚೂಜಿ಼ಯಾಗಿರುತ್ತಾರೆ. ಈ ಹಿಂದೆ ಮಗಳ ಫೋಟೋವನ್ನು ಕೂಡ ಬಹಳ ದಿನಗಳ ಬಳಿಕ ರಿವೀಲ್ ಮಾಡಿದರು. ಇದೇ ರೀತಿ ಜ್ಯೂನಿಯರ್ ಫೋಟೋ ಕೂಡ ರಿವೀಲ್ ಮಾಡಲಿದ್ದಾರೆ. ಆ ಕುರಿತು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಫೋಟೋವನ್ನು ಶೇರ್ ಮಾಡಿ ಮಾಹಿತಿಯನ್ನು ಕೊಟ್ಟಿರುವ ರಾಧಿಕಾ ಪಂಡಿತ್ ನೀವು ಕಾಯುತ್ತಿದ್ದ ಆ ಕ್ಷಣ ಬಂದಿದೆ. ನಾಳೆ ಜ್ಯೂನಿಯರ್ ಯಶ್ ಗೆ ಆರು ತಿಂಗಳು ಪೂರ್ಣಗೊಳ್ಳಲಿದ್ದು ನಿಮಗೆ ಶುಭಾಶಯ ತಿಳಿಸಲು ಆತ ಸಿದ್ಧನಾಗಿದ್ದು ನೀವು ಸಿದ್ದರಾಗಿರಿ ಅಂತ ಹೇಳಿದ್ದಾರೆ. ಸದ್ಯ ರಾಧಿಕಾ ಪಂಡಿತ್ ರವರು ಶೇರ್ ಮಾಡಿರುವ ಫೋಟೋದಲ್ಲಿ ಐರಾ ಯಶ್ ತನ್ನ ಸಹೋದರನೊಂದಿಗೆ ಇರುವುದನ್ನ ಕಾಣಬಹುದು ಆದರೆ ಜ್ಯೂನಿಯರ್ ಯಶ್ ರನ್ನ ಫೋಟೋದಲ್ಲಿ ರಿವೀಲ್ ಮಾಡಿಲ್ಲ.

Advertisement

 

Advertisement
View this post on Instagram

 

Advertisement

The moment all of u were waiting for.. Yes tomorrow, Junior turns 6 months!! He will be ready to greet u all.. are u guys ready for him!! ? #nimmaRP #radhikapandit P.S : Thanks Amrita for this memorable shoot! @mommyshotsbyamrita

Advertisement

A post shared by Radhika Pandit (@iamradhikapandit) on

ಇತ್ತ ರಾಧಿಕಾರವರು ನೀಡಿದ ಸಿಹಿ ಸುದ್ದಿಗೆ ಅಭಿಮಾನಿಗಳು ಸಂತಸಗೊಂಡಿದ್ದ ಕುತೂಹಲದಿಂದ ಕಾಯುತ್ತಿರುವುದಾಗಿ ಕಮೆಂಟ್ ಮಾಡಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡುವ ರಾಧಿಕಾಪಂಡಿತ್ ಲಾಕ್ ಡೌನ್ ಸಮಯದಲ್ಲಿ ತಾವು ಗಮನಿಸಿದ ಒಳ್ಳೆಯ ವಿಷಯವೊಂದನ್ನ ಇತ್ತೀಚೆಗೆ ಹಂಚಿಕೊಂಡಿದ್ದರು. ಈ ಲಾಕ್ ಡೌನ್ ಸಮಯದಲ್ಲಿ ನಾವು ಗಮನಿಸಿದ ಒಂದು ಒಳ್ಳೆಯ ವಿಚಾರವೇನೆಂದರೆ ಅನೇಕ ಜನ ತಮ್ಮ ಮನೆಯಿಂದ ಹೊರಬಂದು ತಮ್ಮ ಮನೆಯ ಟೆರೆಸ್ ಮತ್ತು ಬಾಲ್ಕನಿಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಒಂದು ವೇಳೆ ಈ ಲಾಕ್ ಡೌನ್ ಇಲ್ಲದಿದ್ದರೆ ಟೆರೆಸ್ ಮತ್ತು ಬಾಲ್ಕನಿಗಳನ್ನು ಜನರು ನಿರ್ಲಕ್ಷಿಸಿದ್ದರು ಅಂತ ತಿಳಿಸಿದ್ದರು.

– ಸುಷ್ಮಿತಾ

Advertisement
Share this on...