amrutha prems daughter

ಚಿತ್ರರಂಗಕ್ಕೆ ಬರಲು ಸಜ್ಜಾಗುತ್ತಿದ್ದಾರಾ ಖ್ಯಾತ ಕನ್ನಡ ನಟನ ಮುದ್ದು ಪುತ್ರಿ…?

in ಮನರಂಜನೆ/ಸಿನಿಮಾ 1,005 views

ಕಲಾವಿದರ ಮಕ್ಕಳು ಕಲಾವಿದರಾಗುವುದು ಸಾಮಾನ್ಯವಾಗಿದೆ. ಚಿತ್ರರಂಗದಲ್ಲಿ ಖಳನಟನಾಗಿ, ಪೋಷಕ ನಟರಾಗಿ ಮಿಂಚಿದ ಬಹಳಷ್ಟು ನಟರ ಮಕ್ಕಳು ಇಂದು ಸ್ಟಾರ್ ನಟರಾಗಿ ಮಿಂಚುತ್ತಿರುವುದು ನಿಮಗೆ ತಿಳಿದ ವಿಚಾರ. ಕೆಲವೊಮ್ಮೆ ಕಲಾವಿದರ ಮಕ್ಕಳು ಫೋಟೋಶೂಟ್​ನಿಂದಲೋ, ಸಿನಿಮಾಗೆ ಬಂದಾಗಲೋ ಅವರಿಗೆ ಇಷ್ಟು ಸುಂದರವಾದ ಮಕ್ಕಳಿರುವ ವಿಚಾರ ತಿಳಿಯುತ್ತದೆ. ಅದೇ ರೀತಿ ನೆನಪಿರಲಿ ಪ್ರೇಮ್ ತಮ್ಮ ಪುತ್ರಿಯ ಫೋಟೋವನ್ನು ಕಳೆದ ವರ್ಷ ತಮ್ಮ ಸೋಷಿಯಲ್ ಮೀಡಿಯಾಗೆ ಷೇರ್ ಮಾಡಿದಾಗಲೇ ಪ್ರೇಮ್​ಗೆ ಇಷ್ಟು ದೊಡ್ಡ ಮಗಳಿದ್ದಾಳೆ ಎಂಬುದು ಬಹಳಷ್ಟು ಜನರಿಗೆ ತಿಳಿದದ್ದು. ಕಳೆದ ವರ್ಷ ಪ್ರೇಮ್ ಪುತ್ರಿ ಅಮೃತ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಡಿಸ್ಟಿಂಕ್ಷನ್​ನಿಂದ ಪಾಸ್ ಆದಾಗ, ಈ ಸಂತೋಷದ ವಿಚಾರವನ್ನು ಪ್ರೇಮ್​​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದರ ಜೊತೆಗೆ ಕೆಲವು ದಿನಗಳ ನಂತರ ತಮ್ಮ ಪುತ್ರಿಯ 18 ನೇ ವರ್ಷದ ಬರ್ತ್​ಡೇ ಸೆಲಬ್ರೇಷನ್ ಫೋಟೋಗಳನ್ನು ಕೂಡಾ ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ ಪ್ರೇಮ್ ಮಗಳು ಇಷ್ಟು ಸುಂದರವಾಗಿದ್ದಾಳಾ ಎಂದು ಅನೇಕ ಮಂದಿ ಆಶ್ಚರ್ಯಪಟ್ಟರು.

Advertisement

Advertisement

ಇದೀಗ ಪ್ರೇಮ್ ಪುತ್ರಿ ಅಮೃತ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಪ್ರೇಮ್ ಪುತ್ರಿ ಅಮೃತ ಸುಂದರವಾದ ಫೋಟೋಶೂಟ್​​ ಮಾಡಿಸಿದ್ದು ಈ ಫೋಟೋಗಳು ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗುತ್ತಿದೆ. ಪ್ರೇಮ್ ಪತ್ನಿ ಜ್ಯೋತಿ, ಮಗಳ ಮುದ್ದಾದ ಫೋಟೋಶೂಟ್ ಮಾಡಿಸಿದ್ದಾರೆ. ಮುಂದೆ ನಿಂತು ಮಗಳಿಗೆ ಮೇಕಪ್ ಮಾಡಿ, ಕಾಸ್ಟ್ಯೂಮ್ ಸೆಲೆಕ್ಟ್ ಮಾಡಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಜ್ಯೋತಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಮೃತ ಫೋಟೋ ನೋಡಿದವರು ವಾವ್ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಮಗಳು ಸ್ಯಾಂಡಲ್​ವುಡ್​​​ಗೆ ಬರಬಹುದು ಎನ್ನುತ್ತಿದ್ದಾರೆ.

Advertisement

ಪ್ರೇಮ್ ಕೂಡಾ ಮಗಳನ್ನು ಹೊಗಳುವ ಮೂಲಕ ಆಕೆಯ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೆಣ್ಣು ಮಕ್ಕಳು ತಂದೆಗೆ ದೇವತೆ ಇದ್ದಂತೆ. ದೇವತೆಯನ್ನು ಪಡೆಯುವ ಅದೃಷ್ಟ ಎಲ್ಲರಿಗೂ ದೊರೆಯುವುದಿಲ್ಲ. ನನ್ನ ಅದೃಷ್ಟ ದೇವತೆಗೆ ಅಭಿನಂದನೆಗಳು ಎಂದು ಪ್ರೇಮ್ ಟ್ವೀಟ್ ಮಾಡಿದ್ದಾರೆ. ಮಗಳನ್ನು ಪ್ರೇಮ್ ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಈ ವಾಕ್ಯಗಳೇ ಸಾಕ್ಷಿ. ಪ್ರೇಮ್​ಗೆ ಪುತ್ರಿ ಮಾತ್ರವಲ್ಲ ಏಕಾಂತ್ ಎಂಬ ಪುತ್ರ ಕೂಡಾ ಇದ್ದಾರೆ. ಪತ್ನಿ ಜ್ಯೋತಿ, ಪುತ್ರಿ ಅಮೃತ ಹಾಗೂ ಪುತ್ರ ಏಕಾಂತ್ ಜೊತೆಗೆ ಪ್ರೇಮ್ ಬೆಂಗಳೂರಿನಲ್ಲಿ ಸಂತೋಷದ ಜೀವನ ನಡೆಸುತ್ತಿದ್ದಾರೆ.

Advertisement

ಪ್ರಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಪ್ರೇಮ್ ನಂತರ ನೆನಪಿರಲಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಈ ಚಿತ್ರ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತು. ನಂತರ ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ, ಚಾರ್ ಮಿನಾರ್, ದಳಪತಿ ಚಿತ್ರಗಳಲ್ಲಿ ಪ್ರೇಮ್ ನಟಿಸಿದರು. ಸದ್ಯಕ್ಕೆ ಪ್ರೇಮ್ ಪ್ರೇಮಮ್ ಪೂಜ್ಯಂ ಚಿತ್ರದಲ್ಲಿ ಬ್ಯುಸಿ ಇದ್ದಾರೆ.

Advertisement
Share this on...