ಕೊನೆಗೂ ಹಲವು ದಿನಗಳ ಕನಸು ನನಸಾಗುತ್ತಿದೆ ಎಂದ ಟಾಲಿವುಡ್ ಯಂಗ್ ರೆಬಲ್ ಸ್ಟಾರ್

in ಮನರಂಜನೆ/ಸಿನಿಮಾ 66 views

ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ಪ್ರಭಾಸ್, ಕೊರೊನಾ ಲಾಕ್ ಡೌನ್ ಬಳಿಕ ಒಂದರಮೇಲೊಂದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದೀಗ ಮತ್ತೊಂದು ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಪ್ರಭಾಸ್ ಅವರ 21ನೇ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಕೂಡ ಅಭಿನಯಿಸಲಿದ್ದಾರಂತೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಪ್ರಭಾಸ್, ತನ್ನ ಹಲವು ದಿನಗಳ ಕನಸು ನನಸಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಪ್ರಭಾಸ್ ರಾಧೆ ಶ್ಯಾಮ್ ಹಾಗೂ ಆದಿಪುರುಷ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಎರಡೂ ಸಿನಿಮಾಗಳು ಭಾರೀ ನಿರೀಕ್ಷೆ ಹುಟ್ಟಿಸಿದೆ. ಇನ್ನು ರಾಧಾಕೃಷ್ಣ ನಿರ್ದೇಶನದ ರಾಧೆ ಶ್ಯಾಮ್ ಚಿತ್ರದ ಫಸ್ಟ್ ಲುಕ್ ರಿಲೀಸ್​​​ ಆಗಿದ್ದು, ಚಿತ್ರಪ್ರೇಮಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಪ್ರಭಾಸ್ ಅವರ ಈ ಎರಡು ಹೊಸ ಚಿತ್ರಗಳ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಲ್ಲಿರುವಾಗಲೇ ಇದೀಗ ಪ್ರಭಾಸ್ ಅವರ ಮತ್ತೊಂದು ಹೊಸ ಚಿತ್ರದ ಬಗ್ಗೆ ಮಾಹಿತಿ ಸಿಕ್ಕಿದೆ.

Advertisement

Advertisement

ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಪ್ರಭಾಸ್ ಅವರ ಈ ಹೊಸ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹೊರ ಬರುತ್ತಿದ್ದಂತೆಯೇ ಅಭಿಮಾನಿಗಳಿಗೆ ಸಪ್ರೈಸ್ ಗಳ ಮೇಲೆ ಸಪ್ರೈಸ್ ಸಿಕ್ಕಿದೆ. ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ಜೊತೆ ಹೊಸ ಚಿತ್ರದಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಇದೀಗ ಈ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಬಿಗ್ ಬಿ ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು. ವೈಜಯಂತಿ ಮೂವೀಸ್‍ನ 50ನೇ ಚಿತ್ರ ಇದಾಗಿದ್ದು, ಬಿಗ್ ಬಜೆಟ್‍ನಲ್ಲಿ ಸಿನಿಮಾ ಮಾಡಲಾಗುತ್ತಿದೆ.

Advertisement

ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆಯಂತೆ. ಈ ಕುರಿತು ವಿಡಿಯೋವೊಂದನ್ನು ಪ್ರಭಾಸ್ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಲೆಜೆಂಡ್ ಇಲ್ಲದೇ ಲೆಜೆಂಡರಿ ಸಿನಿಮಾ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸುವ ಮೂಲಕ ಅಮಿತಾಬ್ ಅವರ ಹಳೆ ಫೋಟೋಗಳನ್ನು ತೋರಿಸಲಾಗಿದೆ. ಇದೇ ವೇಳೆ ಬಾಲಿವುಡ್ ಬಿಗ್ ಬಿ ಅಮಿತಾಭ್​ ಬಚ್ಚನ್​ ಅವರೊಂದಿಗೆ ನಟಿಸಬೇಕೆಂದು ನನ್ನ ಹಲವು ದಿನಗಳ ಕನಸು. ಆ ಕನಸು ಇದೀಗ ನನಸಾಗುತ್ತಿದೆ ಎಂದು ಪ್ರಭಾಸ್ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಮಿತಾಭ್​ ಅವರನ್ನು ಹಾಗೂ ದೀಪಿಕಾ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿವುದಾಗಿ ಹೇಳಿದ್ದಾರೆ.

Advertisement

ಅಮಿತಾಬ್ ಬಚ್ಚನ್ ಅವರಿಗೆ ತೆಲುಗಿನಲ್ಲಿ ಇದು ಮೂರನೇ ಚಿತ್ರ. ಈ ಹಿಂದೆ ಮನಂ ಹಾಗೂ ಸೈರಾ ನರಸಿಂಹ ರೆಡ್ಡಿ ಚಿತ್ರಗಳಲ್ಲಿ ಬಿಗ್ ಬಿ ಅಭಿನಯಿಸಿದ್ದರು. ಪ್ರಭಾಸ್ ಅವರ ಈ ಹೊಸ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಪೌರಾಣಿಕ ಕಥಾ ಹಂದರವನ್ನೂ ಚಿತ್ರ ಒಳಗೊಂಡಿದೆ ಎನ್ನಲಾಗುತ್ತಿದೆ ಹಾಗಾಗಿ ಚಿತ್ರದ ಬಗ್ಗೆ ಹಾಗೂ ಬಿಗ್ ಬಿ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇಮ್ಮಡಿಗೊಂಡಿದೆ.

Advertisement
Share this on...