ಇತ್ತೀಚೆಗಷ್ಟೇ ನಾನು ದೊಡ್ಮನೆಯಿಂದ ಹೊರಬಂದೆ ಎಂದೆನಿಸುತ್ತಿದೆ ಎಂದ ಚಂದನಾ ಅನಂತಕೃಷ್ಣ

in ಮನರಂಜನೆ/ಸಿನಿಮಾ 3,591 views

ನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ನ ಹೊಸ ಸೀಸನ್ ಆರಂಭಕ್ಕೆ ಕೌಂಟ್ ಡೌನ್ ಆರಂಭವಾಗಿದೆ! ಇನ್ನು ಎರಡೇ ದಿನಗಳಲ್ಲಿ ಹೊಸ ಸೀಸನ್ ಶುರುವಾಗಲಿದೆ. ಕಳೆದ ವರ್ಷ ಪ್ರಸಾರ ಕಾಣಬೇಕಿದ್ದ ಬಿಗ್ ಬಾಸ್ ಸೀಸನ್ 8 ಕೊರೊನಾ ವೈರಸ್ ಹಾವಳಿಯಿಂದಾಗಿ ಮುಂದೆ ಹೋಯಿತು. ಇದೀಗ ಇದೇ ವಾರಾಂತ್ಯದಲ್ಲಿ ಬಿಗ್ ಬಾಸ್ ನ ಹೊಸ ಸೀಸನ್ ನ ಅದ್ದೂರಿ ಒಪನಿಂಗ್ ನಡೆಯಲಿದೆ. ಇನ್ನು ಇದರ ಜೊತೆಗೆ ಈ ಬಾರಿ ಸ್ಪರ್ಧಿಗಳಾಗಿ ದೊಡ್ಮನೆಯೊಳಗೆ ಯಾರೆಲ್ಲಾ ಕಾಲಿಡಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಸಹಜವಾಗಿ ಮೂಡಿದೆ. ಅವರು ಹೋಗಬಹುದಾ, ಇವರು ಹೋಗಬಹುದಾ ಎಂಬ ಕುತೂಹಲಗಳಿಗೆಲ್ಲಾ ಇದೇ ವಾರಾಂತ್ಯದಲ್ಲಿ ಬ್ರೇಕ್ ಸಿಗಲಿದೆ. ಬಿಗ್ ಬಾಸ್ ನ ಹೊಸ ಸೀಸನ್ ಆರಂಭವಾಗುತ್ತಿರುವುದಕ್ಕೆ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ನಿರೂಪಕಿ ಚೈತ್ರಾ ವಾಸುದೇವನ್ ಸಂತಸ ವ್ಯಕ್ತಪಡಿಸಿದ್ದರು. ಇದೀಗ ಇದರ ಬೆನ್ನಲ್ಲೇ ಮತ್ತೋರ್ವ ನಟಿ, ನಿರೂಪಕಿ ಚಂದನಾ ಅನಂತಕೃಷ್ಣ ಕೂಡಾ ಹೊಸ ಸೀಸನ್ ನ್ನು ನೋಡಲು ಕಾಯುತ್ತಿದ್ದಾರೆ.

Advertisement

Advertisement

“ಒಮ್ಮೊಮ್ಮೆ ಸಮಯ ಅದು ಹೇಗೆ ಕಳೆಯುತ್ತದೆ ಎಂದು ಅನ್ನಿಸಿಬಿಡುತ್ತದೆ. ಯಾಕೆಂದರೆ ಬಿಗ್ ಬಾಸ್ ಸೀಸನ್ 7 ಕಳೆದು ವರ್ಷಗಳಾಗುತ್ತಾ ಬಂತು. ಆದರೆ ನಾನು ಇತ್ತೀಚೆಗಷ್ಟೇ ದೊಡ್ಮನೆಯಿಂದ ಹೊರಗೆ ಬಂದಿದ್ದೇನೆ ಎಂದು ಅನಿಸುತ್ತಿದೆ. ಬಿಗ್ ಬಾಸ್ ಸೀಸನ್ 7 ಮುಗಿದು ವರ್ಷವಾಯಿತು ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಇನ್ನು ಈ ವಾರಾಂತ್ಯದಲ್ಲಿ ಬಿಗ್ ಬಾಸ್ ನ ಹೊಸ ಸೀಸನ್ ಕೂಡಾ ಆರಂಭವಾಗುತ್ತಿದೆ. ಅಂದ ಹಾಗೇ ನಾನು ಭಾಗವಹಿಸಿದ ಸೀಸನ್ ನ ಆರಂಭದಲ್ಲಿ ನಾನು ಹೇಗಿದ್ದೆ, ಮೊದಲ ದಿನ ಪಯಣ ಹೇಗಿತ್ತು ಎಂಬುದನ್ನೆಲ್ಲಾ ಇದೀಗ ನಾನು ನೆನಪಿಸಿಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾರೆ ಚಂದನಾ ಅನಂತಕೃಷ್ಣ.

Advertisement

“ಬಿಗ್ ಬಾಸ್ ಹೊಸ ಸೀಸನ್ ನ ಆರಂಭಕ್ಕೆ ನಾನು ಕಾತರಳಾಗಿದ್ದೇನೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಈ ಸೀಸನ್ ನ ಸ್ಪರ್ಧಿಗಳ ಬಗ್ಗೆ ತಿಳಿಯಲು ನಾನು ತುಂಬಾ ಕಾತರದಿಂದ ಕಾಯುತ್ತಿದ್ದೇನೆ. ಈಗಾಗಲೇ ಹೊಸ ಸೀಸನ್ ನ ಪ್ರೋಮೋಗಳು ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಜೊತೆಗೆ ಆ ಪ್ರೋಮೋ ಲುಕ್ಸ್ ಕೂಡಾ ಭರವಸೆ ನೀಡಿದೆ. ಕಿಚ್ಚ ಸುದೀಪ್ ಅವರ ನಿರೂಪಣೆ ನೋಡಿ ಕಣ್ತುಂಬಿಸಿಕೊಳ್ಳುವುದೇ ಕಿರುತೆರೆ ವೀಕ್ಷಕರಿಗೆ ಹಬ್ಬ ಎಂದಿದ್ದಾರೆ ಚಂದನಾ.

Advertisement

“ಬಿಗ್ ಬಾಸ್ ನನ್ನ ಜೀವನದ ಅತ್ಯಂತ ಸುಂದರ ಜರ್ನಿ. ಅದರ ಬಗ್ಗೆ ಒಂದೆರಡು ಮಾತುಗಳಲ್ಲಿ ವಿವರಿಸಲು ತುಂಬಾ ಕಷ್ಟ. ಒಂದು ವೇಳೆ ಬಿಗ್ ಬಾಸ್ ಗೆ ಮತ್ತೊಮ್ಮೆ ಹೋಗುವ ಅವಕಾಶ ಸಿಕ್ಕರೆ ನಾನಂತೂ ಕಣ್ಣು ಮುಚ್ಚಿ ಒಪ್ಪುತ್ತೇನೆ. ಯಾಕೆಂದರೆ ಇಂತಹ ಸುವರ್ಣಾವಕಾಶವನ್ನು ಯಾರು ಕಳೆದುಕೊಳ್ಳುವುದಿಲ್ಲ. ಮಾಜಿ ಸ್ಪರ್ಧಿಗಳು ಯಾರೇ ಆಗಿದ್ದರೂ ಸರಿ, ಮತ್ತೆ ಆ ಮನೆಗೆ ತೆರಳಲು ಇಷ್ಟಪಡುತ್ತಾರೆ. ಅದು ಕೇವಲ ಐದತ್ತು ನಿಮಿಷಕ್ಕೆ ಆದರೂ ಸರಿ. ಒಟ್ಟಾರೆಯಾಗಿ ಹೋಗಬೇಕು ಅಷ್ಟೇ! ನಾನು ಮನೆಯೊಳಗೆ ತೆರಳಲು ಸಿದ್ದಳಾಗಿರುವೆ” ಎಂದು ಬಿಗ್ ಬಾಸ್ ಜರ್ನಿ, ಮನೆಯ ಬಗ್ಗೆ ಹೇಳುತ್ತಾರೆ ಚಂದನ ಅನಂತಕೃಷ್ಣ.
– ಅಹಲ್ಯಾ

Advertisement