ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಸಂತೋಷ ಮತ್ತು ಸಮೃದ್ಧಿಗೆ ಹೀಗೆ ಮಾಡಿ…

in ಕನ್ನಡ ಮಾಹಿತಿ/ಜ್ಯೋತಿಷ್ಯ 262 views

ಬೆಂಗಳೂರಿನಂತಹ ಮಹಾನಗರಗಳಲ್ಲಿ ಹಾಗೂ ಅನೇಕ ನಗರಗಳಲ್ಲಿ ವಾಸಿಸುತ್ತಿರುವ ಜನರಿಗೆ ಸ್ವಂತ ಮನೆ ಇರುವುದಿಲ್ಲ. ಆದ್ದರಿಂದ ಅವರು ಬಾಡಿಗೆ ಮನೆಯಲ್ಲಿ ವಾಸಿಸುವುದು ಅನಿವಾರ್ಯ. ಬಾಡಿಗೆ ಮನೆಯಾದರೂ ಕೆಲವರು ಅದನ್ನೇ ಸ್ವಂತ ಮನೆ ಎನ್ನುವಷ್ಟುಅಚ್ಚುಕಟ್ಟಾಗಿ ಇಟ್ಟುಕೊಂಡಿರುತ್ತಾರೆ. ಆದರೆ ಬಾಡಿಗೆ ಮನೆಯಲ್ಲಿ ನೀವು ಸ್ವಚ್ಛತೆಗೆ ಎಷ್ಟು ಗಮನಕೊಡುತ್ತೀರೋ, ಅಷ್ಟೇ ಪ್ರಾಮುಖ್ಯತೆಯನ್ನು ವಾಸ್ತುಗೂ ಕೊಡಬೇಕು. ಏಕೆಂದರೆ ವಾಸ್ತುವನ್ನುಅನುಸರಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಯಾವಾಗಲೂ ನಿಮ್ಮ ಮನೆಯಲ್ಲಿಯೇ ಇರುತ್ತದೆ. ಹಾಗಾದರೆ ಬಾಡಿಗೆ ಮನೆಯಲ್ಲಿದ್ದಾಗ ನಾವು ಯಾವ ಕ್ರಮಗಳನ್ನು ಅನುಸರಿಸಬಹುದು ನೋಡೋಣ ಬನ್ನಿ.
ಪೂಜಾ ಗೃಹ ಎಲ್ಲಿರಬೇಕು?
ಯಾವಾಗಲೂ ಬಾಡಿಗೆ ಮನೆಯಲ್ಲಿ ಈಶಾನ್ಯ ಮೂಲೆಯಲ್ಲಿ ಪೂಜಾ ಗೃಹವನ್ನು ಮಾಡಿ. ವಾಸ್ತು ಪ್ರಕಾರ ಈ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಈ ಕಾರಣಕ್ಕಾಗಿ ನೀವು ಸರಿಯಾದ ದಿಕ್ಕಿನಿಂದಾಗಿ ಸಂಪತ್ತನ್ನು ಪಡೆಯುತ್ತೀರಿ.

Advertisement

 

Advertisement

Advertisement

ಗೃಹೋಪಯೋಗಿ ವಸ್ತುಗಳನ್ನು ಈ ದಿಕ್ಕಿನಲ್ಲಿಡಿ
ಭಾರೀ ಗೃಹೋಪಯೋಗಿ ವಸ್ತುಗಳನ್ನು ಯಾವಾಗಲೂ ನೈರುತ್ಯ ದಿಕ್ಕಿನಲ್ಲಿ ಇಡಬೇಕು ಎಂದು ಹೇಳಲಾಗುತ್ತದೆ.

Advertisement

ಮಲಗುವ ದಿಕ್ಕು ಹೀಗಿರಲಿ
ನೆನಪಿನಲ್ಲಿಡಿ. ಅದು ಬಾಡಿಗೆ ಮನೆ ಆಗಿರಲಿ ಅಥವಾ ನಿಮ್ಮ ಸ್ವಂತ ಮನೆಯಾಗಿರಲಿ, ಮಲಗುವ ದಿಕ್ಕು ಯಾವಾಗಲೂ ಸರಿಯಾಗಿರಬೇಕು. ಅಂದರೆ ವಾಸ್ತು ಪ್ರಕಾರ ಮಲಗುವಾಗ ತಲೆ ಯಾವಾಗಲೂ ದಕ್ಷಿಣ ದಿಕ್ಕಿನಲ್ಲಿರಬೇಕು ಮತ್ತು ಪಾದಗಳು ಉತ್ತರ ದಿಕ್ಕಿನಲ್ಲಿರಬೇಕು . ನಿದ್ರೆಗೆ ಸರಿಯಾದ ದಿಕ್ಕು ವ್ಯಕ್ತಿಯ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಸಂಜೆ ದೀಪ ಹಚ್ಚಿಡಿ
ಮನೆಯಲ್ಲಿ ಪ್ರತಿ ಮೂಲೆಯಲ್ಲೂ ಸಂಜೆ ದೀಪ ಹಚ್ಚಿಡಬೇಕು ಎಂದು ಹೇಳಲಾಗುತ್ತದೆ. ಈ ಮೂಲಕ ಎಲ್ಲಿಯೂ ಕತ್ತಲೆ ಬರದಂತೆ ನೋಡಿಕೊಳ್ಳಿ. ಇದರೊಂದಿಗೆ ಮನೆಯ ವಾಸ್ತು ದೋಷಗಳನ್ನು ಕಡಿಮೆ ಮಾಡಲು ಉಪ್ಪು ನೀರನ್ನು ಬಳಸಬೇಕು.

ನೀರಿನ ಮೂಲವು ಈ ಮೂಲೆಯಲ್ಲಿರಬೇಕು
ಮನೆಯ ನೈರುತ್ಯ ದಿಕ್ಕಿನಲ್ಲಿ ಯಾವುದೇ ನೀರಿನ ಮೂಲ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ನೈರುತ್ಯ ದಿಕ್ಕಿನಲ್ಲಿರುವ ನೀರಿನ ಮೂಲದಿಂದಾಗಿ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ನೀರಿನ ಮೂಲವು ಈಶಾನ್ಯ ಮೂಲೆಯಲ್ಲಿರಬೇಕು.

ಉತ್ತರ ದಿಕ್ಕಿನಲ್ಲಿ ಹಣದ ಪೆಟ್ಟಿಗೆ
ಮನೆಯಲ್ಲಿರುವ ಹಣದ ಪೆಟ್ಟಿಗೆ ಕೂಡ ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಹಣದ ಪೆಟ್ಟಿಗೆ ಯಾವಾಗಲೂ ಉತ್ತರ ದಿಕ್ಕಿನಲ್ಲಿ ತೆರೆಯಬೇಕು.

Advertisement
Share this on...