ಲಾಕ್ ಡೌನ್ ಮುಗಿಯುತ್ತಿದ್ದಂತೆ ಈ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರಂತೆ ಆರ್’ಜಿವಿ…!!

in ಸಿನಿಮಾ 11 views

ಸಮಕಾಲೀನ ವಿಷಯಗಳ ಕುರಿತು ಚಿತ್ರಗಳನ್ನು ನಿರ್ಮಿಸುವ ಭಾರತದ ಕೆಲವೇ ಕೆಲವು ನಿರ್ದೇಶಕರಲ್ಲಿ ರಾಂ ಗೋಪಾಲ್ ವರ್ಮಾ ಕೂಡ ಒಬ್ಬರು. ಇತರ ನಿರ್ದೇಶಕರು ಆ ವಿಷಯಗಳ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಅಥವಾ ಚರ್ಚೆಗಳನ್ನು ನಡೆಸುತ್ತಿದ್ದರೆ, ಆರ್ಜಿವಿ ಮಾತ್ರ ಮುಲಾಜಿಲ್ಲದೆ ಚಿತ್ರದ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡುಬಿಡುತ್ತಾರೆ.

Advertisement

 

Advertisement

Advertisement

 

Advertisement

ಇದೀಗ ಕೊರೊನಾ ವೈರಸ್ ಪ್ರಪಂಚದಾದ್ಯಂತ ವ್ಯಾಪಿಸಿರುವ ಕಾರಣ ಹಲವಾರು ದೇಶಗಳು ಲಾಕ್ಡೌನ್ ಆಗಿವೆ. ಇದನ್ನೆಲ್ಲಾ ಗಮನಿಸಿರುವ ಆರ್ಜಿವಿ ಕೊರೊನಾ ಮೇಲೆ ಚಲನಚಿತ್ರವನ್ನು ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹೌದು. ಆರ್ಜಿವಿ ಕೊರೊನಾ ಬಗ್ಗೆ ಚಿತ್ರವನ್ನು ಮಾಡುತ್ತಿದ್ದು, ಟಿವಿ ಚಾನೆಲ್ ಸಂದರ್ಶನವೊಂದರಲ್ಲಿ, ಈ ಬಗ್ಗೆ ಕೇಳಿದಾಗ ಅವರೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

 

 

ಸ್ಕ್ರಿಪ್ಟ್ ಕೆಲಸ ಈಗಾಗಲೇ ಮುಗಿದಿದೆ ಎಂದು ಹೇಳಿರುವ ಆರ್ಜಿವಿ, ಚಿತ್ರವನ್ನು ವೇಗವಾಗಿ ಪೂರ್ಣಗೊಳಿಸಿ, ಲಾಕ್ ಡೌನ್ ಆದ ತಕ್ಷಣ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರಂತೆ. ಚಿತ್ರವು ಹೇಗೆ ಇರಲಿದೆ ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ, ಆದರೆ ಅದು ಶೀಘ್ರದಲ್ಲೇ ತೆರೆಗೆ ಬರಲಿದೆ. ಆರ್ ಜಿವಿ ತಮ್ಮ ಚಿತ್ರದಿಂದ ಪ್ರೇಕ್ಷಕರನ್ನು ಮೆಚ್ಚಿಸಬಹುದು ಅಥವಾ ಇಲ್ಲದಿರಬಹುದು. ಆದರೆ ಅವರು ಖಂಡಿತವಾಗಿಯೂ ಆಸಕ್ತಿದಾಯಕ ಪ್ರೋಮೋಗಳು ಮತ್ತು ಆಕರ್ಷಕ ಕೊರೊನಾ ಹಾಡುಗಳೊಂದಿಗೆ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಹೇಳುತ್ತವೆ ಮೂಲಗಳು.

 

 

ಅಲ್ಲಿಗೆ ಇದು ಕೊರೊನಾ ವೈರಸ್’ಗೆ ಸಂಬಂಧಿಸಿದ ಭಾರತದ ಮೊದಲ ಚಿತ್ರವಾಗಲಿದೆ. ಏಕೆಂದರೆ ಬೇರೆ ಯಾವುದೇ ಚಿತ್ರ ನಿರ್ಮಾಪಕರು ಚಿತ್ರ ಮಾಡುವಲ್ಲಿ ಅಷ್ಟು ಸ್ಪೀಡ್ ಇಲ್ಲ. ಹಾಗೆಯೇ ಇನ್ನೂ ಅನೇಕ ಚಿತ್ರ ನಿರ್ಮಾಪಕರು ಕೋವಿಡ್ -19 ಚಿತ್ರ ಮಾಡಲು ಯೋಜಿಸುತ್ತಿರಬಹುದು. ಆದರೆ ಆರ್ಜಿವಿ ಚಿತ್ರವು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಲಿದೆ. ಇತ್ತೀಚೆಗಷ್ಟೇ ವರ್ಮಾ” ಚೀನಾದ ವೈದ್ಯರು ಮತ್ತು ಆರೋಗ್ಯ ಅಧಿಕಾರಿಗಳು ಕೊರೊನಾ ವೈರಸ್ ಅನ್ನು ಗುರುತಿಸುವ ಮೊದಲು, ಎರಡು ವರ್ಷಗಳ ಹಿಂದೆ ಈ ಬಗ್ಗೆ ನಾನು ಮುನ್ಸೂಚನೆ ನೀಡಿದ್ದೆ” ಎಂದು ಟ್ವೀಟ್ ಮಾಡಿದ್ದರು.

 


ಅಷ್ಟೇ ಅಲ್ಲ, 2018 ರಲ್ಲೇ ‘ವೈರಸ್ ‘ ಹೆಸರಿನ ಚಲನಚಿತ್ರವನ್ನು ಮುಂದಿನ ಚಿತ್ರವೆಂದು ಘೋಷಿಸಿದ್ದೆ. ಆದರೆ ಆ ಚಿತ್ರ ಕಾರಣಾಂತರಗಳಿಂದ ಸೆಟ್ಟೇರಿಲ್ಲ. ಆದರೆ ‘ವೈರಸ್’ ಚಿತ್ರದ ಕಥಾವಸ್ತುವು ಪ್ರಸ್ತುತ ಪರಿಸ್ಥಿತಿಗೆ ಹೋಲುತ್ತದೆ ಎಂದು ತಿಳಿಸಿದ್ದರು.

Advertisement
Share this on...