ರಿಷಬ್ ಹುಟ್ಟುಹಬ್ಬಕ್ಕೆ ಶುಭಾಷಯಗಳ ಮಹಾಪೂರ : ತಯಾರಾಯ್ತು ಸಿಡಿಪಿ !?

in ಮನರಂಜನೆ/ಸಿನಿಮಾ 25 views

ಕನ್ನಡ ಚಿತ್ರರಂಗದಲ್ಲಿ ತಮ್ಮದೆ ಆದ ವಿಭಿನ್ನ ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿರುವ ನಿರ್ದೇಶಕ ಮತ್ತು ನಟ ಎಂದರೆ ಅದು ರಿಷಬ್ ಶೆಟ್ಟಿ. ರಿಕ್ಕಿ, ಕಿರಿಕ್ ಪಾರ್ಟಿ, ಕಾಸರಗೂಡು ಹೀಗೇ ಸಾಲು ಸಾಲು ಹಿಟ್ ಸಿನಿಮಾಗಳನ್ನು  ನಿರ್ದೇಶನವನ್ನು ಮಾಡಿರುವ ರಿಷಬ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಗಳಿಸಿದ್ದಾರೆ. ಇದರ ಜೊತೆ ಬೆಲ್ ಬಾಟಂ ಎಂಬ ಸೂಪರ್ ಹಿಟ್ ಸಿನಿಮಾದಲ್ಲಿ ಅಭಿನಯಿಸಿ ಪರಿಪೂರ್ಣ ‍ನಾಯಕರಾಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಪುಟ್ಟಣ್ಣ ಅವರ ಹಾದಿಯಲ್ಲೇ ಕಥಾಸಂಗಮ ಎಂಬ ಸಿನಿಮಾಗೆ ನಿರ್ಮಾಣವನ್ನು ಸಹ ಮಾಡಿದ್ದಾರೆ. ಅಬ್ಬಾ ಇವರೊಬ್ಬರು ಅಸಾಧ್ಯ ಪ್ರತಿಭೆ ಎಂದರೆ ತಪ್ಪಾಗಲಾರದು. ಇದೀಗ ಈ ನಟ, ನಿರ್ದೇಶಕ, ನಿರ್ಮಾಪಕ ೩೭ ನೇ ವಂಸಂತಕ್ಕೇ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಹಾಗೂ ಚಿತ್ರರಂಗದ ಗಣ್ಯರಿಂದ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

Advertisement

Advertisement

ಮಹಾಮಾರಿ ಕೊರೋನಾದಿಂದ ಇಡೀ ದೇಶದ ವ್ಯವಸ್ತೆಯೇ ಹದಗೆಟ್ಟಿದ್ದು, ರಿಷಬ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಭರ್ಜರಿಯಾಗಿ ಆಚರಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಅಭಿಮಾನಿಗಳು  ಸಾಮಾಜಿಕ ಜಾಲತಾಣಗಳ ಮೂಲಕ ಅವರ ಅಭಿಮಾನಿಗಳು  ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವನ್ನೇ  ಹರಿಸುತ್ತಿದ್ದಾರೆ. ಅಲ್ಲದೆ ಕಾಮನ್ ಡಿಪಿ ಮೂಲಕ ತಮ್ಮ ನೆಚ್ಚಿನ ನಟನಿಗೆ ಸರ್ಪ್ರೈಸ್ ನೀಡಿದ್ದು, ನಿರ್ದೇಶಕ ಕೃಷ್ಣ ಎರಡು ದಿನ ಮೊದಲೇ ಈ ಕಾಮನ್ ಡಿಪಿಯನ್ನು ಬಿಡುಗಡೆಗೊಳಿಸುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.

Advertisement

Advertisement

ಖ್ಯಾತ ನಿರ್ದೇಶಕ ಕೃಷ್ಣ ಅವರು  ಸಿಡಿಪಿ ಚಿತ್ರವನ್ನು ಟ್ವೀಟ್ ಮಾಡಿ ಶುಭಾಶಯದ ಸಾಲುಗಳನ್ನು  ಬರೆದಿದ್ದಾರೆ. ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಸಿಡಿಪಿ ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವಾಗಿದೆ. ಅಡ್ವಾನ್ಸ್ ಹ್ಯಾಪಿ ಬರ್ತ್‍ಡೇ ಟು ಆಕ್ಟರ್, ಡೈರೆಕ್ಟರ್, ಪ್ರೊಡ್ಯೂಸರ್ ಎಂದು ಬರೆದಿದ್ದಾರೆ. ಇದೀಗ ಅವರ ಹುಟ್ಟುಹಬ್ಬದ ಕಾಮನ್ ಡಿಪಿ  ಸಾಮಾಜಿಕ ಜಾಲತಾಣಗಳಲ್ಲಿ  ಸಖತ್ ವೈರಲ್ ಆಗಿದ್ದು, ಕೇವಲ ರಿಷಬ್ ಶೆಟ್ಟಿ ಅಭಿಮಾನಿಗಳು ಮಾತ್ರವಲ್ಲ, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಕೂಡ ಸಿಡಿಪಿ  ಯನ್ನು ಹಂಚಿಕೊಂಡು  ಶುಭ ಕೋರಿದ್ದಾರೆ.

ಅಲ್ಲದೆ ಸ್ಯಾಂಡಲ್ ವುಡ್ ಸಿನಿಮಾ ರಂಗದ ತಾರಾ ಬಳಗವೇ ರಿಷಬ್ ಶೆಟ್ಟಿ ಅವರ  ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದು, ನವರಸನಾಯಕ ಜಗ್ಗೇಶ್  ಅವರು ಕೂಡ ಟ್ವೀಟರ್ ಖಾತೆಯಲ್ಲಿ  ಹಾರೈಸಿದ್ದಾರೆ. ನಲ್ಮೆಯ ಯುವ ಮಿತ್ರ ರಿಷಬ್ ಹುಟ್ಟುಹಬ್ಬದ ಶುಭಾಶಯಗಳು, ಗಾಡ್ ಬ್ಲೆಸ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ರಿಷಬ್ ಪ್ರತಿಕ್ರಿಯಿಸಿ, ಥ್ಯಾಂಕ್ಯೂ ಅಣ್ಣಯ್ಯ ಎಂದಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಹವಾ ಕ್ರಿಯೇಟ್ ಮಾಡುವ ಮೂಲಕ ರಿಷಬ್ ಶೆಟ್ಟಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ.

ಇದೀಗ ರಿಷಬ್ ಶೆಟ್ಟಿ ಅವರು ಖ್ಯಾತ ನಿರ್ಮಾಪಕರಾದ  ಸಂದೇಶ್ ನಾಗರಾಜ್  ಅವರ ಜೊತೆ ಕೈ ಜೋಡಿಸಿದ್ದು, ಹರಿಕಥೆ ಅಲ್ಲ ಗಿರಿಕಥೆ ಚಿತ್ರಚನ್ನು ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಮುಹೂರ್ತ ಕೂಡ ಇತ್ತೀಚೆಗಷ್ಟವ ನೆರವೇರಿದ್ದು,  ಚಿತ್ರೀಕರಣ ಆರಂಭವಾಗಬೇಕಿದೆ. ಇದರ ನಡುವೆಯೇ ಚಿತ್ರದ ನಾಯಕಿಯ ಹುಡುಕಾಟದಲ್ಲಿ ಸಿನಿಮಾ ತಂಡ ನಿರತರಾಗಿದ್ದಾರೆ.  ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ರಿಷಬ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವಿಡಿಯೋ ಕಳುಹಿಸುವಂತೆ ಮನವಿ ಮಾಡಿದ್ದಾರೆ.

Advertisement
Share this on...