ರಿಷಬ್ ಶೆಟ್ಟಿ ದೊಡ್ಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಿಷಬ್ ಶೆಟ್ಟಿಯವರು ಹೀರೋ ಚಿತ್ರೀಕರಣದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದು, ಈ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ಚಿತ್ರೀಕರಣಕ್ಕೆ ಬಳಸಲಾಗುವ ಪೆಟ್ರೋಲ್ ಬಾಂ’ಬ್ ಸಿ’ಡಿದು ಆ’ಪ’ತ್ತಿನಿಂದ ಪಾರಾಗಿ ಬಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಿಷಬ್ ಶೆಟ್ಟಿ ನಾಯಕನಾಗಿ ಪಾತ್ರ ನಿರ್ವಹಿಸುತ್ತಿರುವ ಹೀರೋ ಸಿನಿಮಾದ ಚಿತ್ರೀಕರಣದ ವೇಳೆ ಈ ಅ’ವ’ಘ’ಡ ಸಂಭವಿಸಿತ್ತು . ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರಿನ ಸಮೀಪದಲ್ಲಿ ಹೀರೊ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರೀಕರಣದ ವೇಳೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಪ್ರಾಣಪಾಯದಿಂದ ಪಾರಾದ ಘಟನೆ ಸಂಭವಿಸಿದೆ.ಚಿತ್ರದಲ್ಲಿ ಬರುವ ಸಾಹಸ ದೃಶ್ಯವನ್ನು ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಪೆಟ್ರೋಲ್ ಬಾಂ’ಬ್ ಅನ್ನು ಬಳಸಲಾಗಿತ್ತು. ರಿಷಬ್ ಶೆಟ್ಟಿ ಮತ್ತು ನಾಯಕಿ ಗಾನವಿ ಒಳಗೊಂಡ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು.ಮೊದಲ ಬಾರಿ ಬಾಂ’ಬ್ ಸಿಡಿಸಿದಾಗ ಯಾವುದೇ ರೀತಿಯ ಹಾನಿ ಸಂಭವಿಸಿರಲಿಲ್ಲ. ಆದರೆ ಇನ್ನೊಮ್ಮೆ ಬಾಂಬ್ ಸಿಡಿಸಿದಾಗ ರಿಷಬ್ ಶೆಟ್ಟಿಯ ಬೆನ್ನು ಮತ್ತು ತಲೆಯ ಭಾಗಕ್ಕೆ ಬೆಂಕಿ ತಗುಲಿದೆ. ಇದರಿಂದ ಅವರ ಕೂದಲು ಸ್ವಲ್ಪ ಪ್ರಮಾಣದಲ್ಲಿ ಸುಟ್ಟಿದೆ. ಬೆನ್ನಿಗೆ ಸ್ವಲ್ಪ ಗಾಯವಾಗಿದೆ ಹೊರತುಪಡಿಸಿ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ.
ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತೆಗೆದುಕೊಳ್ಳಬೇಕಾದ ಎಲ್ಲಾ ಮುಂಜಾಗ್ರತ ಕ್ರಮವನ್ನು ಹೀರೊ ಚಿತ್ರತಂಡ ತೆಗೆದುಕೊಂಡಿತ್ತು. ಈ ಕಾರಣದಿಂದಾಗಿ ರಿಷಬ್ ಶೆಟ್ಟಿಗೆ ಅಷ್ಟೇನೂ ಅಪಾಯ ಸಂಭಾವಿಸಿಲ್ಲ.ಕೂದಲೆಳೆಯಲ್ಲಿ ಅವರು ಭಾರಿ ಗಂಡಾಂತರದಿಂದ ಪಾರಾಗಿದ್ದಾರೆ.ರಿಷಬ್ ಶೆಟ್ಟಿಗೆ ಅವರದ್ದೇ ಆದ ಅಭಿಮಾನಿಗಳಿದ್ದಾರೆ.ನಟರಾಗಿಬೆಲ್ ಬಾಟಮ್,ತುಗ್ಲಕ್, ರಿಕ್ಕಿ, ಉಳಿದವರು ಕಂಡಂತೆ ಮುಂತಾದ ಉತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೂ ನಿರ್ದೇಶಕರರಾಗಿ ರಿಕ್ಕಿ, ಕಿರಿಕ್ ಪಾರ್ಟಿ, ಬೆಲ್ ಬಾಟಮ್ ನಂತಹ ಹಿಟ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಹೀಗೆ ಒಂದಲ್ಲ ಇನ್ನೊಂದು ರೀತಿಯಲ್ಲಿ ಕನ್ನಡ ಸಿನಿ ಅಭಿಮಾನಿಗಳಿಗೆ ಮನೋರಂಜನೆ ನೀಡುತ್ತಾ ಬಂದಿದ್ದಾರೆ ಕುಂದಾಪುರ ಮೂಲದ ರಿಷಬ್ ಶೆಟ್ಟಿಯವರು.ಅವರ ನಿರ್ದೇಶನದ ಸಿನಿಮಾಗಳು ಹೊಸತನದಿಂದ ಕುಡಿರುವುದರ ಜೊತೆಗೆ ಸಿನಿಮಾ ರಸಿಕರಲ್ಲಿ ಕುತೂಹಲ ಮೂಡಿಸುತ್ತದೆ.
ಹೀಗೆ ಸದಾ ಒಂದು ಕೆಲಸದಲ್ಲಿ ತೊಡಗಿರುವ ರಿಷಬ್ ಶೆಟ್ಟಿ ಅವರು ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಹೀರೊ ಚಿತ್ರತಂಡದ ಜೊತೆ ಸೇರಿ ತಮ್ಮ ಸಿನಿಮಾವನ್ನು ಇಲ್ಲೇ ಹತ್ತಿರವಿರುವ ಸುಂದರ ಸ್ಥಳಗಳಲ್ಲಿ ಚಿತ್ರೀಕರಣವನ್ನು ಮಾಡುವುದರ ಮೂಲಕ ಹೀರೊ ಸಿನಿಮಾ ರೆಡಿ ಮಾಡಿದ್ದಾರೆ.ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ‘ಹೀರೊ ‘ಚಿತ್ರದ ಟೀಸರ್ ಕನ್ನಡ ಸಿನಿ ರಸಿಕರಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಹೆಚ್ಚಿನ ಕುತೂಹಲ ಕೇರಳಿಸುವಂತೆ ಮಾಡಿದೆ. ಕಿರುತೆರೆಯಿಂದ ಬಂದ ಖ್ಯಾತ ನಾಯಕಿ ಈ ಚಿತ್ರದಲ್ಲಿ ಗಾನವಿ ರಿಷಬ್ ಶೆಟ್ಟಿಗೆ ನಾಯಕಿಯಾಗಿ ಮಿಂಚಿದ್ದಾರೆ. ರಿಷಬ್ ಶೆಟ್ಟಿಯ ಅಭಿಮಾನಿಗಳು ಚಿತ್ರ ತೆರೆಗೆ ಬಂದು ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ಇತಿಹಾಸ ಸೃಷ್ಟಿಯಾಗಬಹುದೇ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.