ತೊದಲು ಮಾತೇ ತಳಿರು-ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ…!

in News/ಕನ್ನಡ ಮಾಹಿತಿ 96 views

ವರ್ಷದ ಹಿಂದೆ ಈ ಪುಟ್ಟ ಕಂದನ ಜೊತೆ ನನ್ನಲೋಬ್ಬ ಅಪ್ಪನ್ನು ಹುಟ್ಟಿದ. ಇದನ್ನು ಹೇಳುವ ಮೂಲಕ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿಯವರು ತನ್ನ ಮುದ್ದು ಮಗನ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. ಚಂದನವನದ ಕಿಲಾಡಿ ನಿರ್ದೇಶಕ ರಿಷಬ್ ಶೆಟ್ಟಿಯವರ ಪುತ್ರ ರಣವೀದ್ ಶೆಟ್ಟಿ ಹುಟ್ಟಿ ಒಂದು ವರ್ಷವಾಗಿದೆ. ಲಾಕ್ ಡೌನ್ ಮಧ್ಯೆಯೂ ಮಗನ ಹುಟ್ಟು ಹಬ್ಬಕ್ಕಾಗಿ ವಿಶೇಷವಾದ ವಿಡಿಯೋವೊಂದನ್ನು ತಯಾರು ಮಾಡಿರುವ ರಿಷಬ್ ಅದನ್ನು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡು ವಿಶ್ ಮಾಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ರಿಷಬ್ ವರ್ಷದ ಹಿಂದೆ ಹುಟ್ಟಿದ ಈ ಪುಟ್ಟ ಕಂದನ ಜೊತೆ ನನ್ನಲೊಬ್ಬ ಅಪ್ಪನ್ನು ಹುಟ್ಟಿದ್ದ. ಅಂದಿನಿಂದ ಇಂದಿನವರೆಗೂ ನಿತ್ಯ ಹಬ್ಬದಂತಿರುವ ಇವನ ಮುಗ್ದತೆ ಮನೆಗೆ ದೀಪ, ತೋದಲು ಮಾತೆ ತಳಿರು-ತೋರಣ, ಹಾಲುಗಲ್ಲದ ನಗು ಹೋಳಿಗೆ ಹೂರಣ, ಮೊದಲ ವರ್ಷ ತುಂಬಿದ ಸಡಗರದಲ್ಲಿ ನಿಮ್ಮೆಲ್ಲರ ಆಶೀರ್ವಾದ ಇವನಿಗಿರಲ್ಲಿ ಎಂದು ಬರೆದುಕೊಂಡಿದ್ದಾರೆ.

Advertisement

 

Advertisement

 

 

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರು ಕೂಡ ಸ್ನೇಹಿತ ರಿಷಬ್ ಶೆಟ್ಟಿ ಮಗನ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ್ದು ರಣವೀದ್ ಜೊತೆ ಇರುವ 2 ಮುದ್ದು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಹ್ಯಾಪಿ ಬರ್ತಡೇ ಎಂದು ಬರೆದು 3 ಮುತ್ತು ಕೊಡುವ ಎಮೋಜಿಗಳನ್ನ ಹಾಕಿದ್ದಾರೆ. ಇದರ ಜೊತೆಗೆ ರಿಷಬ್ ಅವರ ಸಾವಿರಾರು ಅಭಿಮಾನಿಗಳು ರಣವಿದ್ ಹುಟ್ಟುಹಬ್ಬಕ್ಕೆ ಟ್ವಿಟರ್ ಮೂಲಕ ಶುಭಕೋರಿದ್ದಾರೆ.

 

 

ಸದ್ಯ ಲಾಕ್ ಡೌನ್ ಸಮಯವನ್ನು ತಮ್ಮ ಮಗ ಹಾಗೂ ಮಡದಿಯ ಜೊತೆ ಕಾಲ ಕಳೆಯುತ್ತಿರುವ ರಿಷಬ್ ಇತ್ತೀಚೆಗಷ್ಟೇ ತಮ್ಮ ಮಗನಿಗೆ ಎಣ್ಣೆ ಹಚ್ಚುತ್ತಿರುವ ಕ್ಯೂಟ್ ಫೋಟೋವೊಂದನ್ನು ಹಂಚಿಕೊಂಡಿದ್ದರು. ಊರುರೇ ಕಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನು ಹಿಂದೆ ಬಿಟ್ಟು ಹುಟ್ಟೂರಿನಲ್ಲಿ ನಾನು ಬೆಳೆದಿದ್ದ ಮನೆಯಲ್ಲಿ ಮಗರಾಯನಿಗೆ ಮಜ್ಜನ ನೀಡುವ ನೆಮ್ಮದಿನೇ ಬೇರೆ. ಒಟ್ಟಾರೆಯಾಗಿ ಎಲ್ಲರ ತರ ನಮ್ಮದು ವರ್ಕ್ ಫ್ರಮ್ ಹೋಂ ಜೋರಾಗಿಯೇ ನಡೆಯುತ್ತಿದೆ ಎಂದು ಬರೆದುಕೊಂಡಿದ್ದರು.

 

 

ರಿಷಬ್ ಶೆಟ್ಟಿಯವರು 2017 ಫೆಬ್ರವರಿ 9 ರಂದು ಪ್ರಗತಿಯವರನ್ನು ಮದುವೆಯಾಗಿದ್ದರು. ರಿಕ್ಕಿ ಚಿತ್ರದ ಸಮಯದಲ್ಲಿ ಭೇಟಿಯಾಗಿದ್ದ ಇಬ್ಬರಿಗೆ ನಂತರ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಬಳಿಕ ಇಬ್ಬರೂ ಪ್ರೇಮ ಬಲೆಯಲ್ಲಿ ಸಿಲುಕಿ ಇಬ್ಬರ ಮನೆಯವರಿಗೂ ತಿಳಿಸಿ ಪರಸ್ಪರ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು. ಈ ಜೋಡಿಗೆ 2019 ಏಪ್ರಿಲ್ 7 ರಂದು ಗಂಡು ಮಗು ಜನಿಸಿತು. ಈ ಮಗುವಿಗೆ ರಣವೀದ್ ಶೆಟ್ಟಿ ಎಂದು ಹೆಸರಿಟ್ಟಿದ್ದರು.

– ಸುಷ್ಮಿತಾ

Advertisement
Share this on...