ಹೊಸ ಚಿತ್ರದ ಮುಹೂರ್ತ ನೆರವೇರಿಸಿದ ಚಾಲೇಂಜಿಂಗ್ ಸ್ಟಾರ್ ’ರಾಬರ್ಟ್’ ಬಗ್ಗೆ ಹೇಳಿದ್ದೇನು…?

in ಮನರಂಜನೆ/ಸಿನಿಮಾ 64 views

ಕೊರೊನಾ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಚಿತ್ರರಂಗ ನಿಧಾನವಾಗಿ ಪುನರಾರಂಭಗೊಳ್ಳುತಿದ್ದು, ಕಂಗೆಟ್ಟಿದ್ದ ಸಿನಿ ಕಾರ್ಮಿಕರು, ಕಲಾವಿದರು, ನಿರ್ದೇಶಕರು, ನಿರ್ಮಾಪಕರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅರ್ಧಕ್ಕೆ ನಿಂತಿದ್ದ ಹಲವಾರು ಚಿತ್ರಗಳು ಮತ್ತೆ ಆರಂಭವಾಗಿದ್ದು, ಒಂದೊಂದೆ ಹೊಸ ಚಿತ್ರಗಳ ಮುಹೂರ್ತ ಕೂಡ ಶುರುವಾಗಿದೆ. ಅಂದಹಾಗೇ ಚಾಲೇಂಜಿಂಗ್ ಸ್ಟಾರ್ ದರ್ಶನ್ ಬರೋಬ್ಬರಿ 8 ತಿಂಗಳ ಬಳಿಕ ಮೊದಲಬಾರಿಗೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ನ ಹೊಸ ಚಿತ್ರವೊಂದರ ಮುಹೂರ್ತ ನೆರವೇರಿಸಿದ್ದಾರೆ. ದರ್ಶನ್ ತಮ್ಮ ಆಪ್ತ ಧ್ರುವನ್ ಅವರ ಭಗವಾನ್ ಶ್ರೀಕೃಷ್ಣಪರಮಾತ್ಮ ಸಿನಿಮಾದ ಮುಹೂರ್ತ ನೆರವೇರಿಸಿದರು. ಹೌದು. ಬೆಂಗಳೂರಿನ ಆರ್.ಆರ್.ನಗರದ ಷಣ್ಮುಖ ದೇವಸ್ಥಾನದಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ದರ್ಶನ್ ಪಾಲ್ಗೊಂಡಿದ್ದರು. ಲಾಕ್ ಡೌನ್ ನಂತರ 8 ತಿಂಗಳ ಬಳಿಕ ಮತ್ತೆ ಶೂಟಿಂಗ್ ಆರಂಭವಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.

Advertisement

Advertisement

ಕೊರೊನಾ ಲಾಕ್ ಡೌನ್ ನಿಂದಾಗಿ ಒಂದೇ ರೀತಿಯ ಟಿಫಿನ್ ತಿಂದು ಬೇಜಾರಾಗಿದೆ. ಹಾಗಾಗಿ ತಿಂಡಿ ತಿನ್ನುವುದನ್ನೇ ನಿಲ್ಲಿಸಿಬಿಟ್ಟಿದ್ದೇವೆ. ಇಡ್ಲಿ, ವಡೆ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಶೂಟಿಂಗ್ ಆರಂಭವಾದ್ರೆ ನಾಲ್ಕು ರೀತಿಯ ಟಿಫನ್ ಸಿಗುತ್ತೆ. ಎಂಟು ತಿಂಗಳ ಬಳಿಕ ಚಿತ್ರೀಕರಣ, ಚಿತ್ರರಂಗ ಒಂದೊಂದೇ ಆರಂಭವಾಗುತ್ತಿರುವುದು ಖುಷಿ ತಂದಿದೆ.

Advertisement

ಕೊರೊನಾ ಸೋಂಕು ಒಬ್ಬರಿಗೆ ಇಬ್ಬರಿಗೆ ಮಾತ್ರವಲ್ಲ ಇಡೀ ಪ್ರಪಂಚಕ್ಕೆ ತೊಂದರೆಯುಂಟುಮಾಡಿದೆ. ಇನ್ನು ಎಲ್ಲಾ ಥಿಯೇಟರ್ ಗಳು ಓಪನ್ ಆಗಿ ಎಲ್ಲವೂ ಸರಿಹೋದ ಮೇಲೆ ಬಹುನಿರೀಕ್ಷಿತ ರಾಬರ್ಟ್ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

Advertisement

Advertisement
Share this on...