ಲಾಕ್ ಡೌನ್ ಬಿಕ್ಕಟ್ಟು, ಜೀವನೋಪಾಯಕ್ಕಾಗಿ ಮೀನು ಮಾರುತ್ತಿದ್ದಾರೆ ಈ ನಟ !

in ಮನರಂಜನೆ/ಸಿನಿಮಾ 55 views

ಲಾಕ್ ಡೌನ್ ಪ್ರಪಂಚದಾದ್ಯಂತ ಜನರ ಕೆಲಸದ ಮೇಲೆ ಪರಿಣಾಮ ಬೀರಿದೆ. ಮತ್ತೆ ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಖಿನ್ನತೆ ಅನೇಕರನ್ನು ಕಾಡುತ್ತಿದೆ. ನಟರು ಮತ್ತು ನಿರ್ದೇಶಕರು ಕೆಲಸವಿಲ್ಲದೆ ಹೆಣಗಾಡುತ್ತಿದ್ದಾರೆ. ಇದೀಗ ಆರ್ಥಿಕ ಬಿಕ್ಕಟ್ಟಿನಿಂದಾಗಿ ನಟರೊಬ್ಬರು ಮೀನು ಮಾರಾಟ ಮಾಡುತ್ತಿದ್ದಾರೆ. ಹೌದು, ಜನಪ್ರಿಯ ಮರಾಠಿ ಟಿವಿ ಶೋ ‘ಡಾ.ಬಾಬಾಸಾಹೇಬ್ ಅಂಬೇಡ್ಕರ್’ ಖ್ಯಾತಿಯ ನಟ ರೋಹನ್ ಪೆಡ್ನೇಕರ್ ಲಾಕ್ ಡೌನ್ ಕಾರಣದಿಂದಾಗಿ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಅವರ ಕುಟುಂಬಕ್ಕೆ ಏಕೈಕ ಆಧಾರವಾಗಿರುವ ರೋಹನ್, ಈಗ ಒಣಗಿದ ಮೀನುಗಳ ಪ್ಯಾಕೆಟ್’ಗಳನ್ನು ಮಾರುತ್ತಿದ್ದಾರೆ. ರೋಹನ್ ಸಹ ಖಿನ್ನತೆಯ ವಿರುದ್ಧ ಹೋರಾಡುತ್ತಿದ್ದರು ಮತ್ತು ಆ ಆಲೋಚನೆಗಳನ್ನು ಹೊಂದಿದ್ದರು. ಆದರೆ ಇದೀಗ ಅವರು ಅದೆಲ್ಲದರಿಂದ ಹೊರಬಂದಿದ್ದಾರೆ.  3 ತಿಂಗಳ ನಂತರ ಶೂಟಿಂಗ್ ಪುನರಾರಂಭಗೊಳ್ಳಲಿವೆ ಎಂದು ಯೋಚಿಸುತ್ತಿದ್ದ ರೋಹನ್, ತಮ್ಮ ವೃತ್ತಿಜೀವನದ ಬಗ್ಗೆ ಚಿಂತಿತರಾಗಿದ್ದರು. ಆದರೆ ಈಗ ಅದರ ಬಗ್ಗೆ ರೋಹನ್ ಯೋಚಿಸುತ್ತಿಲ್ಲ.

Advertisement

Advertisement

ಬಲವಾದ ಆತ್ಮವಿಶ್ವಾಸವನ್ನು ಹೊಂದಿರುವ ರೋಹನ್, ಒಣಗಿದ ಮೀನುಗಳನ್ನು ಮಾರಾಟ ಮಾಡುವ ಬಗ್ಗೆ ತನಗೆ ನಾಚಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಹಸಿವಿಗೆ ವೃತ್ತಿ ತಿಳಿದಿಲ್ಲ. ಈ ಹಿಂದೆ ಬಾಲಿವುಡ್’ನ ‘ಡ್ರೀಮ್ ಗರ್ಲ್’ ಮತ್ತು ‘ತಿತಿಲಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟ ದಿವಾಕರ್ ಸೋಲಂಕಿ COVID-19 ಕಾರಣದಿಂದ ಲಾಕ್ ಡೌನ್ ಮಾಡಿದ್ದಕ್ಕೆ ಬೀದಿಗಳಲ್ಲಿ ಹಣ್ಣುಗಳನ್ನು ಮಾರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ದಿವಾಕರ್ ಸೋಲಂಕಿ ಜೀವನೋಪಾಯಕ್ಕಾಗಿ ದೆಹಲಿಯ ಬೀದಿಗಳಲ್ಲಿ ಹಣ್ಣುಗಳನ್ನು ಮಾರಾಟ ಮಾಡಿ, ಹಣ ಸಂಪಾದಿಸುತ್ತಿದ್ದಾರೆ. ವಿವಾಹಿತನಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿರುವ ದಿವಾಕರ್ ಸೋಲಂಕಿ, ಈಗ ತನ್ನ ಕುಟುಂಬವನ್ನು ಪೋಷಿಸಲು ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.

Advertisement

Advertisement

ದಿವಾಕರ್ ಸೋಲಂಕಿ ಪ್ರಕಾರ ಯಾವುದೇ ಕೆಲಸ ದೊಡ್ಡದಲ್ಲ ಅಥವಾ ಸಣ್ಣದಲ್ಲ. ಇನ್ನು ಮುಖ್ಯವಾದ ವಿಚಾರವೆಂದರೆ ಈ ಕೆಲಸ ಮಾಡಿದ ನಂತರ ಅವರು ಹೆಚ್ಚು ಸಂತೋಷವಾಗಿದ್ದಾರಂತೆ. ಅಷ್ಟೇ ಅಲ್ಲ, “ನನ್ನ ಮತ್ತು ನನ್ನ ಕುಟುಂಬದ ಅಗತ್ಯಗಳನ್ನು ನಾನು ನೋಡಿಕೊಳ್ಳಬೇಕು” ಎಂದು ದಿವಾಕರ್ ಸೋಲಂಕಿ ಹೇಳಿದ್ದಾರೆ.
“ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ನಾನು ಏನೂ ಮಾಡದೆ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮನೆಯ ಬಾಡಿಗೆಗೆ ನಾನು ಪಾವತಿಸಬೇಕಾಗಿದೆ. ಆದ್ದರಿಂದ, ನಾನು ಹಣ್ಣುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಲಾಕ್ ಡೌನ್ ಆಗದಿದ್ದರೆ, ಕೊರೊನಾ ಸಂಭವಿಸದಿದ್ದರೆ, ನಾನು ಮುಂಬೈನಲ್ಲಿ ಕೆಲವು ಚಲನಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದೆ” ಎಂದು ದಿವಾಕರ್ ಹೇಳಿದ್ದಾರೆ.

Advertisement
Share this on...