ಪುತ್ರಿಯ 17ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಖ್ಯಾತ ನಟಿ ರೋಜಾ…ಅಮ್ಮನಂತೆ ಮಗಳು ಎಷ್ಟು ಮುದ್ದಾಗಿದ್ದಾಳೆ ನೋಡಿ

in ಮನರಂಜನೆ/ಸಿನಿಮಾ 284 views

ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಹೂವ ರೋಜಾ ಹೂವ…ಎಂದು ಡ್ಯೂಯೆಟ್ ಹಾಡಿದ ನಟಿ ರೋಜಾರನ್ನು ಸಿನಿಪ್ರಿಯರು ಮರೆಯಲು ಸಾಧ್ಯವೇ ಇಲ್ಲ. ಗಡಿಬಿಡಿ ಗಂಡ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಬಂದ ರೋಜಾ ನಂತರ ಕಲಾವಿದ, ಪ್ರೇಮೋತ್ಸವ, ಇಂಡಿಪೆಂಡೆನ್ಸ್ ಡೇ, ಗ್ರಾಮದೇವತೆ, ಸುಂದರ ಕಾಂಡ, ಪರ್ವ, ಮೌರ್ಯ ಸಿನಿಮಾಗಳಲ್ಲಿ ನಟಿಸಿದರು. ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ರೋಜಾ ಈಗ ಸಿನಿಮಾಗಳಿಗಿಂತ ರಿಯಾಲಿಟಿ ಶೋಗಳನ್ನು ಜಡ್ಜ್​ ಆಗುವ ಮೂಲಕ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಎಂಬಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವ ರೋಜಾ ಸದ್ಯಕ್ಕೆ ಫುಲ್​ ಟೈಮ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ವೈ.ಎಸ್​. ರಾಜಶೇಖರ್ ರೆಡ್ಡಿ ಕಾಂಗ್ರೆಸ್ ಪಾರ್ಟಿಯಲ್ಲಿ ಗುರುತಿಸಿಕೊಂಡಿರುವ ರೋಜಾ ಸದ್ಯಕ್ಕೆ ಆಂಧ್ರದ ನಗರಿ ಕ್ಷೇತ್ರದ ಎಂಎಲ್​ಎ. ಸದ್ಯಕ್ಕೆ ಈಟಿವಿಯಲ್ಲಿ ಪ್ರಸಾರವಾಗುತ್ತಿರುವ ಜಬರ್ದಸ್ತ್ ಕಾರ್ಯಕ್ರಮದಲ್ಲಿ ರೋಜಾ ಜಡ್ಜ್ ಆಗಿದ್ದಾರೆ. ರಾಜಕೀಯ, ಸಿನಿಮಾ, ಕಿರುತೆರೆಗಿಂತ ರೋಜಾ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ.

Advertisement

Advertisement

ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ ಇಂತಿಷ್ಟು ಸಮಯ ಮೀಸಲಿಡುತ್ತಾರೆ ಈ ಚೆಲುವೆ. ರೋಜಾ ಪತಿ ಸೆಲ್ವಮಣಿ, ತಮಿಳು ಸಿನಿಮಾ ನಿರ್ದೇಶಕ. ಈ ದಂಪತಿ 2002 ರಲ್ಲಿ ಮದುವೆಯಾದರು. ಕಳೆದ ಆಗಸ್ಟ್​​​ನಲ್ಲಿ ಈ ದಂಪತಿ ತಮ್ಮ 19ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಈ ದಂಪತಿಗೆ ಈಗ ಇಬ್ಬರು ಮಕ್ಕಳು. ಮಗಳು ಅನ್ಷುಮಲಿಕಾ, ಮಗ ಕೃಷ್ಣ ಲೋಹಿತ್. ಕಳೆದ ವಾರವಷ್ಟೇ ರೋಜಾ ತಮ್ಮ ಪುತ್ರ ಅನ್ಷುಮಲಿಕಾ 17ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದು ಈ ಫೋಟೋಗಳೆಲ್ಲಾ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Advertisement

Advertisement

ರೋಜಾಗೆ ಇಷ್ಟು ದೊಡ್ಡ ಮಗಳಿದ್ದಾರಾ ಎಂದು ಎಲ್ಲರೂ ಆಶ್ಚರ್ಯ ಪಡುತ್ತಾರೆ. ರೋಜಾ ಪುತ್ರಿ ನೋಡಲು ಅಮ್ಮನಂತೆ ಇದ್ದಾರೆ. ಮುಂದಿನ ದಿನಗಳಲ್ಲಿ ಅಮ್ಮನಂತೆ ಸಿನಿಮಾಗೆ ಬರಲಿದ್ದಾರಾ ಅಥವಾ ಓದು ಮುಂದುವರೆಸಿ ಉದ್ಯೋಗ ಮಾಡಲಿದ್ದಾರಾ ಎಂಬುದು ಗೊತ್ತಿಲ್ಲ. ಅನ್ಷು ಹುಟ್ಟುಹಬ್ಬಕ್ಕೆ ಅನೇಕ ಗಣ್ಯರು ಬಂದು ಶುಭ ಕೋರಿದ್ದಾರೆ. ವೈಎಸ್​​​ಆರ್​​​​​​​​​ಸಿಪಿ ಪಕ್ಷದ ಮುಖಂಡ, ಆಂಧ್ರ ಪ್ರದೇಶ ಸಿಎಂ ಜಗನ್​​ಮೋಹನ್ ರೆಡ್ಡಿ ಕೂಡಾ ಅನ್ಷು ಹುಟ್ಟುಹಬ್ಬಕ್ಕೆ ಮೊಬೈಲ್ ಮೂಲಕ ಶುಭ ಕೋರಿದ್ದಾರೆ. ಕಳೆದ ತಿಂಗಳು ರೋಜಾ ಸೆಲ್ವಮಣಿ ಮದುವೆ ವಾರ್ಷಿಕೋತ್ಸವದಂದು ಕೂಡಾ ಜಗನ್​​​​ಮೋಹನ್ ರೆಡ್ಡಿ ದಂಪತಿಯನ್ನು ಭೇಟಿ ಮಾಡಿ ಶುಭ ಕೋರಿದ್ದರು.

ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿ ಶ್ರೀಲತಾ , ನಾಗರಾಜ ರೆಡ್ಡಿ ಎಂಬ ಸಾಮಾನ್ಯ ದಂಪತಿಗೆ ಜನಿಸಿದ ರೋಜಾ ಈಗ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ನಟಿಯಾಗಿ, ನಿರ್ಮಾಪಕಿಯಾಗಿ , ನಿರೂಪಕಿಯಾಗಿ , ರಾಜಕೀಯದಲ್ಲೂ ಗುರುತಿಸಿಕೊಂಡಿರುವ ರೋಜಾಗೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಶ್ರೀ ಆದಿಶಕ್ತಿ ಚೌಡೇಶ್ವರಿ ಆರಾಧಕರಾದ ಶ್ರೀ ಪಂಡಿತ್ ಶ್ರೀನಿವಾಸ್ ಭಟ್ ( ಕುಡ್ಲ ) ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ವ್ಯಾಪಾರ ಲಗ್ನ ಸಂತಾನ ಸ್ತ್ರೀ – ಪುರುಷ ವಶೀಕರಣ ಶತ್ರುನಾಶ ಮಾಟ ಮಂತ್ರ ಸತಿಪತಿ ಕಲಹ ರ ಮದುವೆ ದುಷ್ಟಶಕ್ತಿ ಲೈಂಗಿಕ ಸಮಸ್ಯೆ ಇತರ ಎಲ್ಲಾ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ 48 ಗಂಟೆಗಳ ಒಳಗೆ ಪರಿಹಾರ ಶತಸಿದ್ಧ. ಬೇರೆ ಜ್ಯೋತಿಷ್ಯರುಗಳ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಸಿಗದೆ ನೊಂದಿದ್ದರೆ ಒಮ್ಮೆ ಕರೆ ಮಾಡಿ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ Phone no : 9972245888 ಬದಲಾಗುತ್ತದೆ. ಫೋನಿನ ಮೂಲಕ ಪರಿಹಾರವನ್ನು ನೀಡಲಾಗುತ್ತದೆ.

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀನಿವಾಸ ಭಟ್ ಇವರು ವಶೀಕರಣ ಮಹಾ ಮಾಂತ್ರಿಕರು ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ, ಹಾಗೂ ಪುರುಷ ವಶೀಕರಣ, ಅತ್ತೆ ಸೊಸೆ ಕಿರಿಕಿರಿ, ಸಂತಾನಫಲ, ಶತ್ರುನಾಶ, ರಾಜಕೀಯ, ಹಣಕಾಸಿನ ಸಮಸ್ಯೆ, ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ 48 ಗಂಟೆಗಳ ಒಳಗೆ ಶಾಶ್ವತ ಪರಿಹಾರ. ಈ ಕೂಡಲೇ 9972245888 ಸಂಖ್ಯೆಗೆ ಕರೆ ಮಾಡಿರಿ.

Advertisement
Share this on...