ಮತ್ತೆ ಹಾಡಿತು ಕೋಗಿಲೆ ಚಿತ್ರದ ನಟಿ ರೂಪಿಣಿ ಈಗ ಹೇಗಿದ್ದಾರೆ..? ಎಲ್ಲಿದ್ದಾರೆ ಗೊತ್ತಾ..?

in ಮನರಂಜನೆ/ಸಿನಿಮಾ 686 views

1975 ರಲ್ಲಿ ಬಾಲಿವುಡ್ ನ ಬಿಗ್-ಬಿ ಅಮಿತಾಬ್ ಬಚ್ಚನ್ ರವರ ‘ಮಿಲಿ’ ಎಂಬ ಹಿಂದಿ ಚಿತ್ರದಲ್ಲಿ ಕೇವಲ ಐದು ವರ್ಷದ ಪುಟ್ಟ ಬಾಲಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 80-90 ರ ದಶಕದಲ್ಲಿ ದಕ್ಷಿಣ ಭಾರತದ ಟಾಪ್ ನಟರ ಜೊತೆ ನಾಯಕಿಯಾಗಿ ನಟಿಸಿದರು. ನಟಿ ರೂಪಿಣಿ 1969 ರಲ್ಲಿ ಮುಂಬೈನಲ್ಲಿ ಜನಿಸಿದರು ನಟಿ ರೂಪಿಣಿ. ರೂಪಿಣಿಯವರು ಭರತನಾಟ್ಯ, ಕೂಚುಪುಡಿ ನೃತ್ಯವನ್ನು ಕಲಿತಿದ್ದಾರೆ. ರೂಪಿಣಿ ಅವರ ತಾಯಿ ವೈದ್ಯೆ ಆಗಿದ್ದರು. ಒಮ್ಮೆ ರೂಪಿಣಿ ತನ್ನ ತಾಯಿಯ ಜೊತೆ ರಜಾ ದಿನಗಳಲ್ಲಿ ತಮಿಳಿನ ಪ್ರಸಿದ್ಧ ನಿರ್ದೇಶಕ ಕೆ. ಭಾಗ್ಯರಾಜುರವರ ಮನೆಗೆ ಹೋಗಿದ್ದರು. ರೂಪಿಣಿಯವರ ತಾಯಿ ಕೆ. ಭಾಗ್ಯರಾಜುರವರ ಫ್ಯಾಮಿಲಿ ಡಾಕ್ಟರ್ ಸಹ ಆಗಿದ್ದರು. ನಿರ್ದೇಶಕರು ಕೆ. ಭಾಗ್ಯರಾಜು ಹಾಗೂ ಅವರ ಪತ್ನಿ ಪೂರ್ಣಿಮಾ ರೂಪಿಣಿಯನ್ನು ಕಂಡು ಸಿನಿಮಾದಲ್ಲಿ ನಟಿಸುತ್ತೀಯಾ ಎಂದು ಕೇಳಿದರು. ಕೇವಲ ಹದಿನಾಲ್ಕು ವರ್ಷದ ರೂಪಿಣಿ ತನ್ನ ತಾಯಿಯ ಕಡೆ ತಿರುಗಿ ನೋಡಿದರು.

Advertisement

Advertisement

ರೂಪಿಣಿಯವರು ರಜನಿಕಾಂತ್ ರವರ ಚಿತ್ರವೊಂದರ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಫೇಮಸ್ ನಟಿಯಾಗಿ ಬೆಳೆದರು. ನಂತರ ತಮಿಳು, ಹಿಂದಿ, ಮಲೆಯಾಳಂ ಹಾಗೂ ಕನ್ನಡದಲ್ಲಿಯೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ‘ಒಲವಿನ ಆಸರೆ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ನಟಿ ರೂಪಿಣಿ. ನಂತರ ವಿಷ್ಣುವರ್ಧನ್ ರವರಿಗೆ ನಾಯಕಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ರೂಪಿಣಿಯವರು ನಟಿಸಿದ ವಿಷ್ಣುವರ್ಧನ್ ರವರ ‘ಮತ್ತೆ ಹಾಡಿತು ಕೋಗಿಲೆ’ ಹಾಗೂ ರವಿಚಂದ್ರನ್ ರವರ ‘ಗೋಪಿಕೃಷ್ಣ’ ಚಿತ್ರಗಳು ಸೂಪರ್-ಡೂಪರ್ ಹಿಟ್ ಆದ್ದವು. ನಟಿ ರೂಪಿಣಿಯವರು ಹಿಂದಿ ಸೇರಿದಂತೆ ದಕ್ಷಿಣ ಭಾರತದ ಸುಮಾರು 70 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

Advertisement

Advertisement

ನಟಿ ರೂಪಿಣಿಯವರು 1995 ರಲ್ಲಿ ಮೋಹನ್ ಕುಮಾರ್ ಎಂಬುವವರನ್ನು ಮದುವೆಯಾದರು. ನಟಿ ರೂಪಿಣಿಯವರು ಪ್ರಸ್ತುತ ಚೆನೈನಲ್ಲಿ ನೆಲ್ಲೆಸಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿರುವ ನಟಿ ರೂಪಿಣಿ ವಿಶೇಷ ಚೇತನ ಮಕ್ಕಳಿಗಾಗಿ ಸ್ಪರ್ಶ ಫೌಂಡೇಶನ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು ವಿಶೇಷ ಚೇತನ ಮಕ್ಕಳಿಗೆ ಆಸರೆಯಾಗಿದ್ದಾರೆ.

– ಸುಷ್ಮಿತಾ

Advertisement
Share this on...