ಈ ಸುಂದರ ಚಿತ್ರಗಳನ್ನು ಬಿಡಿಸಿದ ಕಲಾವಿದ ಇನ್ನಿಲ್ಲ….ಕೋವಿಡ್​​ಗೆ ಬ,ಲಿಯಾದ ಇವರು ಯಾರು ಗೊತ್ತಾ..?

in News/ಮನರಂಜನೆ 2,073 views

‘ಕಲಾವಿದನಿಗೆ ಸಾ’ವುಂಟು ಕಲೆಗೆ ಸಾವಿಲ್ಲ’ ಎಂಬ ಮಾತಿದೆ. ಎಷ್ಟೋ ಕಲಾವಿದರು ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ಸಾಧನೆಗಳು ಇಂದಿಗೂ ನಮ್ಮ ಕಣ್ಣ ಮುಂದಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಫೋಟೋಗ್ರಫಿ, ಶಿಲ್ಪಕಲೆ, ಚಿತ್ರಕಲೆ ಸೇರಿದಂತೆ 64 ಕಲೆಗಳಿವೆ ಎಂಬ ಮಾತಿದೆ. ಈ ಯಾವುದೇ ಕ್ಷೇತ್ರದಲ್ಲಾಗಲಿ ಕಲಾವಿದ ತನ್ನಲ್ಲಿರುವ ಕಲೆಯ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಇಲ್ಲಿರುವ ಈ ಸುಂದರ ಚಿತ್ರಗಳನ್ನು ನೋಡುತ್ತಿದ್ದರೆ ಅದು ನಿಜಕ್ಕೂ ಕುಂಚದಿಂದ ಬಿಡಿಸಲಾದ ಚಿತ್ರ ಎಂದು ಯಾರಿಗೂ ಅನಿಸುವುದಿಲ್ಲ. ಹೆಣ್ಣಿಗೆ ಅಲಂಕಾರ ಮಾಡಿ, ಸುಂದರ ಸೆಟ್​​​​ನಲ್ಲಿ ಕೂರಿಸಿ ಫೋಟೋಗ್ರಫಿ ಮಾಡಿದಂತೆ. ಈ ವರ್ಣಚಿತ್ರಗಳ ಮೂಲಕ ಕಲಾವಿದ ತನ್ನೊಳಗಿನ ಕಲೆಯನ್ನು ಬಿಂಬಿಸಿದ್ದಾರೆ. ಈ ವರ್ಣಚಿತ್ರಕಲೆಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬಹಳಷ್ಟು ಜನರು ಈ ಫೋಟೋಗಳಿಗೆ ಲೈಕ್, ಕಮೆಂಟ್ ಮಾಡಿ ಶೇರ್ ಮಾಡುತ್ತಿದ್ದರೇ ಹೊರತು ಆ ಕಲಾವಿದ ಯಾರು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ.

Advertisement

Advertisement

ಅಂದಹಾಗೆ ಈ ಸುಂದರ ಚಿತ್ರಗಳನ್ನು ಬಿಡಿಸಿರುವ ಕಲಾವಿದ 3 ದಿನಗಳ ಹಿಂದಷ್ಟೇ ಕೊರೊನಾ ಸೋಂಕಿಗೆ ಬ,ಲಿಯಾಗಿದ್ದಾರೆ. ಇವರ ಹೆಸರು ಎಸ್​​​. ಇಳಯರಾಜ ಸ್ವಾಮಿನಾಥನ್, ಇವರಿಗೆ 43 ವರ್ಷ ವಯಸ್ಸಾಗಿತ್ತು. ಚಿತ್ರಕಲೆಯಲ್ಲಿ ಇಷ್ಟು ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ಮಾಡಿರುವ ಇವರಿಗೆ ಅನೇಕ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳು ಒಲಿದುಬಂದಿವೆ. ರಾಗಿ ಬೀಸುತ್ತಿರುವ ಹೆಣ್ಣು ಮಗಳು, ದೇವರ ಮೂರ್ತಿಗೆ ಕೈ ಮುಗಿಯುತ್ತಿರುವ ಬಾಲಕಿ, ಬಾವಿಯಲ್ಲಿ ನೀರು ಸೇದುತ್ತಿರುವ ಯುವತಿ, ಹೂವಿನ ಬುಟ್ಟಿ ಹಿಡಿದಿರುವ ಯುವತಿ, ಒಲೆಯಲ್ಲಿ ಅಡುಗೆ ಮಾಡುತ್ತಿರುವ ಯುವತಿ, ಹೂ ಕಟ್ಟುತ್ತಿರುವ ಯುವತಿ, ನೀರಿನಲ್ಲಿ ಆಟವಾಡುತ್ತಿರುವ ಯುವತಿ ಸೇರಿದಂತೆ ದಕ್ಷಿಣ ಭಾರತದ ಸಾಂಪ್ರದಾಯಿಕ ಹೆಣ್ಣು ಮಕ್ಕಳ ಚಿತ್ರಗಳನ್ನು ಬಿಡಿಸಿದ್ದಾರೆ. ಇವರ ಚಿತ್ರಗಳು ಬಹಳ ವೈರಲ್ ಆಗಿದ್ದು ರಾಜ ರವಿವರ್ಮನ ಚಿತ್ರಗಳನ್ನು ಹೋಲುತ್ತವೆ. ಏಕೆಂದರೆ ರಾಜ ರವಿವರ್ಮ ಚಿತ್ರಗಳಲ್ಲೂ ಕೂಡಾ ದಕ್ಷಿಣ ಭಾರತದ ಸಾಂಪ್ರದಾಯಿಕ ಹೆಣ್ಣಿನ ಭಾವನೆಗಳನ್ನು ಕಾಣಬಹುದು.

Advertisement

Advertisement

ತಮಿಳುನಾಡಿನ ಕುಂಭಕೋಣಂಗೆ ಸೇರಿದ ಪುಟ್ಟ ಹಳ್ಳಿಯೊಂದರಲ್ಲಿ 1979 ರಲ್ಲಿ ಜನಿಸಿದ ಎಸ್. ಇಳಯರಾಜ ಸ್ವಾಮಿನಾಥನ್​​​ 11 ಮಂದಿ ಒಡಹುಟ್ಟಿದವರೊಂದಿಗೆ ಬೆಳೆದವರು. ಸ್ವಾಮಿನಾಥನ್ ಅವರ ತಂದೆ ಬಡಗಿ ಆದ್ದರಿಂದ ಆ ಸಮಯದಲ್ಲಿ ಅವರು ಎತ್ತಿನಬಂಡಿಯ ಚಕ್ರಗಳನ್ನು ಹೆಚ್ಚಾಗಿ ತಯಾರಿಸುತ್ತಿದ್ದಂತೆ. ತಂದೆಯ ಕೆಲಸವನ್ನು ಬಹಳ ಆಸಕ್ತಿಯಿಂದ ಗಮನಿಸುತ್ತಿದ್ದ ಸ್ವಾಮಿನಾಥನ್ ಆರಂಭದಲ್ಲಿ ಅದೇ ಚಕ್ರಗಳನ್ನು ಬಿಡಿಸಲು ಆರಂಭಿಸಿದರಂತೆ. ತುಂಬು ಕುಟುಂಬವೇ ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಬರಲು ಸ್ಫೂರ್ತಿಯಾಯ್ತು ಎಂದು ಸ್ವಾಮಿನಾಥನ್ ಬಹಳಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಅಕ್ಕಂದಿರು, ಅತ್ತಿಗೆಯರು ಸೇರಿದಂತೆ ಬಹುತೇಕ ಮಹಿಳೆಯರ ನಡುವೆ ಬೆಳೆದ ಸ್ವಾಮಿನಾಥನ್ ಅವರಿಗೆ ಅವರ ಕಷ್ಟ-ಸುಖ, ಭಾವನೆಗಳ ಬಗ್ಗೆ ಅರಿವಿತ್ತು. ಯಾವ ಗುರುಗಳ ಬಳಿ ಕೂಡಾ ಹೋಗದೆ ಚಿತ್ರ ಬರೆಯಲು ಆರಂಭಿಸಿದ ಅವರು, ನಂತರ ತಮ್ಮ ಮನೆಯಲ್ಲಿರುವವರ ಚಿತ್ರ, ದೇವರ ಚಿತ್ರಗಳನ್ನು ಬರೆಯಲು ಆರಂಭಿಸಿದರು.

ಸ್ವಾಮಿನಾಥನ್ ಕಲೆಯನ್ನು ಗುರುತಿಸಿದ ಅವರ ಶಿಕ್ಷಕರೊಬ್ಬರು ಅವರಿಗೆ ಕಲಾಶಾಲೆ ಸೇರುವಂತೆ ಸೂಚಿಸಿದರು. ಅದರಂತೆ ಕುಂಭಕೋಣಂ ಹಾಗೂ ಚೈನ್ನೈನ ಫೈನ್ ಆರ್ಟ್ಸ್ ಕಾಲೇಜು ಸೇರಿ ಚಿತ್ರಕಲೆಯನ್ನು ಸ್ನಾತಕೋತ್ತರ ಪದವಿ ಪಡೆದರು. ಅಂತಾರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲೂ ಭಾಗವಹಿಸಿದ್ದ ಸ್ವಾಮಿನಾಥನ್ ತಮ್ಮ ಚಿತ್ರಕಲೆಯ ಮೂಲಕ ವಿದೇಶದಲ್ಲಿ ಕೂಡಾ ಟಾಕ್​ ಆಫ್​ ದಿ ಟೌನ್ ಎನಿಸಿದ್ದಾರೆ. ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿದ್ದರಿಂದ ಸ್ವಾಮಿನಾಥನ್ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜೂನ್ 7 ರಂದು ಚಿಕಿತ್ಸೆ ಫಲಕಾರಿಯಾಗದೆ ಅವರು ನಿ’ಧನರಾಗಿದ್ದಾರೆ. ಇಳಯರಾಜ ನಿಧನಕ್ಕೆ ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​, ಸಿನಿಮಾ ನಿರ್ದೇಶಕ ಪ. ರಂಜಿತ್​​​​​​​​​ ಸೇರಿ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
-ರಕ್ಷಿತ ಕೆ.ಆರ್. ಸಾಗರ

Advertisement