ಸಾಧು ಕೋಕಿಲ ಅವರಿಗೆ ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರು, ಇವರ ನನ್ನ ಗುರುಗಳು ಎಂದಿದೇಕೆ??

in ಮನರಂಜನೆ/ಸಿನಿಮಾ 208 views

ಕೇಳಿದರೆ ನಮಗೆ ಆಶ್ಚರ್ಯ ಆಗುತ್ತದೆ ಬಾಲಸುಬ್ರಹ್ಮಣ್ಯ ಅವರು ಹೀಗೆ ಹೇಳಲು ಸಾಧ್ಯವೇ ಎಂಬುದು , ಆದರೆ ಇದು ವಾಸ್ತವ ಆಗಿ ನಿಜ ಎಂಬುದು ಸುಳ್ಳಲ್ಲ.
ಸಾದು ಕೋಕಿಲ ಅವರು ತಮ್ಮದೇ ಆದಂತಹ ದಾರಿಯಲ್ಲಿ ಅನೇಕ ಸಾಧನೆಯನ್ನು ಮಾಡಿದ್ದಾರೆ ಪ್ರೇಕ್ಷಕರಿಗೆ ಅನೇಕ ರೀತಿಯಲ್ಲಿ ಮನರಂಜನೆ ನೀಡಿರುವುದು ಸುಳ್ಳಲ್ಲ, ತೆರೆಯ ಮೇಲೆ ಇವರು ಬಂದರೆ ಸಾಕು ಪ್ರೇಕ್ಷಕರ ಮುಖದಲ್ಲಿ ನಗು ತನ್ನಿಂದ ತಾನಾಗೇ ಬರುತ್ತದೆ ಅಷ್ಟರ ಮಟ್ಟಿಗೆ ಇವರ ನಟನೆ ಇದೆ,ಇವರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದರೆ ಸಾಕು ಎಷ್ಟೋ ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಹೋಗುತ್ತಾರೆ, ಅಷ್ಟರಮಟ್ಟಿಗೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೇವಲ ನಟನೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸದೆ ಇವರು ಸಂಗೀತ ಕ್ಷೇತ್ರದಲ್ಲಿ ಅನೇಕ ಸಾಧನೆಯನ್ನು ಮಾಡಿದ್ದಾರೆ. ಇವರು ಭಾರತದಲ್ಲಿಯೇ ಅತ್ಯಂತ ವೇಗದ ಕೀ ಬೋರ್ಡ್ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲಾವಿದ ಅದು ಅಲ್ಲದೆ ಅನೇಕ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಅನೇಕ ಹಾಡುಗಳನ್ನು ಹೇಳಿರುವ ಇವರು ಕನ್ನಡ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ.

Advertisement

Advertisement

 

Advertisement

ಇನ್ನು ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಬಗ್ಗೆ ಹೇಳುವ ಅಗತ್ಯವಿಲ್ಲ ಬಿಡಿ ಯಾಕೆಂದರೆ ಇಡೀ ಭಾರತ ಚಿತ್ರಂಗದಲ್ಲಿ ಅನೇಕ ಸಾಧನೆ ಮಾಡಿರುವ ಇವರು ಹಾಡುಗಾರಿಕೆಯಲ್ಲಿ ಇವರದ್ದೇ ಆದಾ ಛಾಪನ್ನು ಮೂಡಿಸಿದ್ದಾರೆ ಯಾವ ತರಹದ ಸಂಗೀತವನ್ನು ಕೊಟ್ಟರು ಲೀಲಾ ಜಾಲವಾಗಿ ಹಾಡುತ್ತಿದ್ದರು ಸಂಗೀತವನ್ನು ಇವರು ತಮ್ಮ ನರ ನಾಡಿಗಳಲ್ಲಿ ತುಂಬಿ ಕೊಂಡಿದ್ದರು. ಸಂಗೀತವನ್ನೇ ದೇವರು ಎಂದು ಬಾವಿಸಿಕೊಂಡಿದ್ದರು , ಸಂಗೀತದಲ್ಲಿ ಅಷ್ಟೆ ಅಲ್ಲದೆ ಅಭಿನಯದಲ್ಲು ತಮ್ಮ ಚಾಕ ಚಕ್ಯತೆಯನ್ನು ತೋರಿಸಿದ್ದಾರೆ.  ಕನ್ನಡಿಗರಿಗೆ ಇವರು ಚಿರ ಪರಿಚಿತ ಆಗಲು ಕಾರಣ ಅನೇಕ ಹಾಡುಗಳ ಹಾಡುವುದರ ಜೊತೆಗೆ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಇವರಿಗೆ ಕನ್ನಡಿಗರು ತೋರಿಸುವ ಪ್ರೀತಿ ಅಪಾ. , ಇಷ್ಟೆಲ್ಲಾ ಸಾಧನೆ ಮಾಡಿರುವ ಅಭಿಮಾನಿಗಳ ಹೊಂದಿರುವ ಇವರು ನಮ್ಮನ್ನು ಬಿಟ್ಟು ಅ’ಗಲಿ’ರುವುದು ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ. ಆ ದೇವರು ಇವರ ಕುಟುಂಬಕ್ಕೆ ಆದಷ್ಟು ಬೇಗನೆ ದುಃಖವನ್ನು ಮರಸಲಿ ಎಂದು ಕೇಳಿಕೊಳ್ಳೋಣ.

Advertisement

ಇವರು ಅನೇಕ ಸಂದರ್ಭದಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಹೇಳಿರುವ ಮಾತು ಏನೆಂದರೆ “ನನಗೆ ಮುಂದಿನ ಜನ್ಮ ಎಂಬುದು ಇದ್ದರೆ ನಾನು ಕರ್ನಾಟಕದಲ್ಲೇ ಹುಟ್ಟಬೇಕು ಎಂಬುವ ಮಹಾದಾಸೆ ಇದೆ ಎಂದು ಹೇಳುತ್ತಿದ್ದರು ” ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ, ಅವರ ಇಚ್ಛೆಯಂತೆ ಇವರ ಕರ್ನಾಟಕದಲ್ಲೇ ಹುಟ್ಟಬೇಕು ಎಂಬುದು ಕನ್ನಡಿಗರ ಆಸೆಯೂ ಹೌದು. ಇಷ್ಟೆಲ್ಲಾ ಸಾಧನೆ ಮಾಡಿರುವ ಇವರು ಸಾದು ಕೋಕಿಲ ಅವರಿಗೆ ಇವರು ನಮ್ಮ ಗುರುಗಳು ಎನ್ನಲು ಕಾರಣ ಏನೆಂದರೆ, ಕಳೆದ ವರ್ಷದಲ್ಲಿ ಸಾಧುಕೋಕಿಲ ಅವರು ತಮ್ಮದೇ ಆದ ಹೊಸ ರೆಕಾರ್ಡಿಂಗ್ ಸ್ಟುಡಿಯೋ ಅನ್ನು ಹೊಸ ಕನ್ನಡ ಪ್ರತಿಭೆಗಳನ್ನೂ ಗುರುತಿಸಲು ಅವರು ಮತ್ತೆ ಅವರ ಮಗ ಸೇರಿ ಶುರು ಮಾಡಿದರು ಇದರ ಉದ್ಘಾಟನೆಗೆ ಎಸ್ ಪಿ ಬಾಲಸುಬ್ರಹ್ಮಣ್ಯ ಅವರನ್ನು ಕರೆದಿದ್ದರು.

ಉದ್ಘಾಟನೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡ ಬೇಕಾದರೆ , ಸ್ಟುಡಿಯೋಗೆ ಶುಭ ಹಾರೈಸಿ ನಂತರ ಎಲ್ಲಾ ಸಂಗೀತ ನಿರ್ದೇಶಕರು ನನ್ನ ಗುರುಗುಳು ಕಾರಣ ಅವರು ನಂಗೆ ಹೇಗೆ ಹಾಡಬೇಕು ಎಂಬುದನ್ನು ಹೇಳಿಕೊಡುತ್ತಾರೆ ಆ ಹಾಡನ್ನು ಯಾವ ರೀತಿಯಲ್ಲಿ ಹಾಡಬೇಕು ಅದು ಹೇಗೆ ಬೇಕು ಎಂಬುದನ್ನು ತಿಳಿಸುತ್ತಾರೆ ಅದೇ ರೀತಿಯಲ್ಲಿ ನಾನು ಹಾಡುತ್ತೇನೆ ಎನ್ನುತ್ತಾರೆ ಈ ಕಾರಣಕ್ಕೆ ಅವರು ನಮ್ಮ ಗುರುಗಳು ಎನ್ನುತ್ತಾರೆ ಹಾಗಾಗಿ ಸಾದು ಕೋಕಿಲಾ ಅವರು ಕೂಡ ನನ್ನ ಗುರುಗಳು ಅವರ ಸಂಯೋಜನೆಯಲ್ಲಿ ಅನೇಕ ಹಾಡುಗಳನ್ನು ನಾನು ಹಾಡಿರುವೆ ಎಂದು ಹೇಳುತ್ತಾರೆ. ಅವರು ಹೇಳಿರುವ ಅರ್ಥ ಏನೆಂದರೆ ನನಗೆ ಯಾರೇ ಏನೇ ಹೇಳಿ ಕೊಟ್ಟರು ಅವರು ನನ್ನ ಗುರುಗಳು ಎನ್ನುವ ಅರ್ಥದಲ್ಲಿ ಹೇಳುತ್ತಾರೆ . ಇದು ಅವರ ದೊಡ್ಡ ವ್ಯಕ್ತಿತ್ವ ಅನ್ನು ತೋರಿಸುತ್ತದೆ ಅಷ್ಟಿಲ್ಲದೆ ಹೇಳುತ್ತಾರೆಯೇ ತುಂಬಿದ ಕೊಡ ತುಳುಕುವುದಿಲ್ಲ ಎಂದು. ನಿಮ್ಮ ಆ ವ್ಯಕ್ತಿತ್ವಕ್ಕೆ ನಮ್ಮ ದೊಡ್ಡ ನಮಸ್ಕಾರಗಳು ಸರ್ ಅಷ್ಟೆ.

ಶರತ್ ಕುಮಾರ್ ಟಿ
ಸಾರಗನ ಜೆಡ್ಡು.

 

Advertisement
Share this on...