22 ವರ್ಷದ ಅಂಜಲಿ 17 ವರ್ಷದ ಸಚಿನ್ ಗೆ ಮೊದಲ ಬಾರಿ ಫೋನ್ ಮಾಡಿದಾಗ ಏನಾಯ್ತು..?

in ಕ್ರೀಡೆ 34 views

ಸಚಿನ್ ತೆಂಡೂಲ್ಕರ್ ಹಾಗೂ ಅಂಜಲಿಯವರ ಮೊದಲ ನೋಟ ಹಾಗೂ ಮೊದಲ ಭೇಟಿ ತುಂಬಾ ಸ್ವಾರಸ್ಯಕರವಾಗಿದೆ. ಇವರ ಪ್ರೇಮಕಥೆ ಯಾವ ಸಿನಿಮಾಗೂ ಕಮ್ಮಿ ಇಲ್ಲ ಅನ್ನುವುದು ಸತ್ಯ. ಈ ಕಥೆ ನಡೆದಿದ್ದು 1990 ರ ಇಸವಿಯಲ್ಲಿ. ಅಂಜಲಿಯವರು ಆಗಾಲೇ ಡಾಕ್ಟರ್ ಆಗಿ ಆಸ್ಪತ್ರೆಯಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದರು. ಇವರಿಬ್ಬರ ಮೊದಲ ನೋಟ ಪ್ರಾರಂಭವಾಗುವುದು ಮುಂಬೈ ಏರ್ಪೋರ್ಟ್ ನಲ್ಲಿ. ತನ್ನ ತಾಯಿಯನ್ನು ರಿಸೀವ್ ಮಾಡಿಕೊಳ್ಳಲು ಅಂಜಲಿಯವರು ಏರ್ಪೋರ್ಟ್ ಗೆ ತನ್ನ ಫ್ರೆಂಡ್ ಜೊತೆ ಹೋಗಿದ್ದರು. ಅದೇ ಸಂದರ್ಭದಲ್ಲಿ ಇಂಗ್ಲೆಂಡ್ ನಲ್ಲಿ ತಮ್ಮ ಮೊದಲ ಶತಕ ಬಾರಿಸಿದ ಸಚಿನ್ ವಾಪಸ್ ಬಂದು ಮುಂಬೈ ಏರ್ಪೋರ್ಟ್ ನಲ್ಲಿ ಇಳಿದಿದ್ದರು.

Advertisement

 

Advertisement

Advertisement

 

Advertisement

ಸಚಿನ್ ಏರ್ಪೋರ್ಟ್ ನಿಂದ ಆಚೆ ಬರುವಾಗ ಮೊದಲ ಬಾರಿಗೆ ಅವರನ್ನು ನೋಡಿದ ಅಂಜಲಿಯವರಿಗೆ ಅದೇನಾಯ್ತೋ ಗೊತ್ತಿಲ್ಲ. ಆ ಸಮಯದಲ್ಲಿ ಸಚಿನ್ ಒಬ್ಬ ಕ್ರಿಕೆಟ್ ಆಟಗಾರಯೆಂದು ಅಂಜಲಿಯವರಿಗೆ ಗೊತ್ತಿರಲಿಲ್ಲ. ಹುಡುಗ ಸೋ ಕ್ಯೂಟ್ ಎಂದು ತಮ್ಮ ಫ್ರೆಂಡ್ ಬಳಿ ಹೇಳಿದ ಅವರು ಸಚಿನ್ ರನ್ನು ಹಿಂಬಾಲಿಸಿ ಮಾತನಾಡಲು ಪ್ರಯತ್ನ ಮಾಡಿದರು. ಅದೇ ಸಮಯದಲ್ಲಿ ಸಚಿನ್ ಕೂಡ ಅಂಜಲಿಯವರನ್ನು ನೋಡಿದರು.

 

 

ಆದರೆ ಸಚಿನ್ ಗೆ ಟೈಟ್ ಸೆಕ್ಯೂರಿಟಿ ಇದ್ದ ಕಾರಣ ಅವರನ್ನು ಮಾತನಾಡಿಸಲು ಅಂಜಲಿಯವರಿಗೆ ಸಾಧ್ಯವಾಗಲಿಲ್ಲ. ಆಗ ಅಂಜಲಿಯವರ ಫ್ರೆಂಡ್ ಸಚಿನ್ ಬಗ್ಗೆ ಹೇಳಿ ಇವರು ಇಂಡಿಯನ್ ಕ್ರಿಕೆಟರ್ ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ತಮ್ಮ ಮೊದಲ ಶತಕ ಬಾರಿಸಿದ್ದಾರೆ ಎಂದು ಹೇಳಿದರು. ಅಂಜಲಿ ಅವರಿಗೆ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲದ ಕಾರಣ ಆ ಸಂಗತಿಗಳು ಹೆಚ್ಚು ವ್ಯಾತ್ಯಾಸವನ್ನು ಉಂಟುಮಾಡಲಿಲ್ಲ. ತಮಾಷೆಯೆಂದರೆ ಸಚಿನ್ ರನ್ನು ಭೇಟಿ ಮಾಡುವ ಪ್ರಯತ್ನದಲ್ಲಿ ಅಂಜಲಿಯವರು ತನ್ನ ತಾಯಿಯನ್ನು ರಿಸೀವ್ ಮಾಡಲು ಮರೆತು ಹೋಗಿದ್ದರಂತೆ.

 

 

ಸಚಿನ್ ಜೊತೆ ಹೇಗಾದರೂ ಮಾಡಿ ಮಾತನಾಡಬೇಕು ಎಂಬ ದೃಢ ನಿರ್ಧಾರ ಮಾಡಿದ ಅಂಜಲಿಯವರು ಸಚಿನ್ ಫೋನ್ ನಂಬರ್ ರಿಗಾಗಿ ಬಾರಿ ಪ್ರಯತ್ನಪಟ್ಟು ಕೊನೆಗೆ ಫೋನ್ ನಂಬರ್ ಪಡೆದು ಸಚಿನ್ ಗೆ ಫೋನ್ ಮಾಡಿ ನನ್ನ ಹೆಸರು ಅಂಜಲಿ. ನೀವು ಬಹುಶಃ ನನಗೆ ತಿಳಿದಿಲ್ಲ. ನಿನ್ನೆ ಏರ್ಪೋರ್ಟ್ ನಲ್ಲಿ ನಾನು ನಿಮ್ಮನ್ನ ಮೊದಲ ಬಾರಿಗೆ ನೋಡಿದೆ ಎಂದರು. ಇದನ್ನು ಕೇಳಿದ ಸಚಿನ್ ಉತ್ತರವಾಗಿ ಹೌದು ನನಗೆ ನೆನಪಿದೆ ಎಂದಿದ್ದಾರೆ.

 

 

ಇದನ್ನು ಕೇಳಿದ ಅಂಜಲಿಯವರಿಗೆ ಆಶ್ಚರ್ಯವಾಗಿ ಕುತೂಹಲ ತಡೆಯಲಾಗದೆ ನಾನು ನೆನ್ನೆ ಯಾವ ಕಲರ್ ಬಟ್ಟೆ ಹಾಕಿಕೊಂಡಿದೆ ಹೇಳಿ ಎಂದು ಕೇಳಿದರಂತೆ ಅದಕ್ಕೆ ಉತ್ತರಿಸಿದ ಸಚಿನ್ ಆರೆಂಜ್ ಕಲರ್ ಟಿ-ಶರ್ಟ್ ಎಂದು ಹೇಳಿದರು. ಅಲ್ಲಿಂದ ಅವರಿಬ್ಬರ ಸ್ನೇಹ ಪ್ರಾರಂಭವಾಯಿತು.

ತುಂಬಾ ನಾಚಿಕೆಯ ಸ್ವಭಾವದ ಸಚಿನ್ ಮೊದಲ ಬಾರಿಗೆ ಅಂಜಲಿಯವರನ್ನು ಮನೆಗೆ ಕರೆದುಕೊಂಡು ಬಂದಾಗ ಇವರು ಪರ್ತಕರ್ತೆ, ನನ್ನನ್ನು ಇಂಟರ್ವ್ಯೂ ಮಾಡಲು ಬಂದಿದ್ದಾರೆ ಅಂತ ಹೇಳಿದ್ದರಂತೆ. ಆದರೆ ಮನೆಯವರಿಗೆ ಮಾತ್ರ ಫುಲ್ ಡೌಟ್ ಬಂದಿತ್ತಂತೆ. ನಂತರ ಐದು ವರ್ಷ ಡೇಟಿಂಗ್ ಮಾಡಿದ ಇವರು 1995 ರಲ್ಲಿ ಮದುವೆಯಾದರು.

– ಸುಷ್ಮಿತಾ

Advertisement
Share this on...