ಸಾಯಿಪಲ್ಲವಿ ನಿರ್ದೇಶಕರ ಜೊತೆ ಈ ವಿಚಾರದಲ್ಲಿ ಕಾಂಪ್ರಮೈಸ್ ಆಗಿದ್ದು ಗೊತ್ತಾ?

in ಸಿನಿಮಾ 80 views

ಪ್ರತಿಯೊಬ್ಬರಿಗೂ ತಿಳಿದ ವಿಷಯವೆಂದರೆ ಸ್ಟಾರ್ ಬ್ಯೂಟಿ ಸಾಯಿ ಪಲ್ಲವಿ ಗ್ಲಾಮರಸ್ ಪಾತ್ರಗಳಿಂದ ದೂರವಿರುತ್ತಾರೆ. ಸ್ಕಿನ್ ಶೋ ಮಾಡುವುದಕ್ಕೆ ಎಂದಿಗೂ ಇಷ್ಟಪಡುವುದಿಲ್ಲ. ಒಂದು ವೇಳೆ ನಿರ್ದೇಶಕರು ಅಂತಹ ಪಾತ್ರಗಳನ್ನು ಮಾಡುವುದಕ್ಕೆ ಕೇಳಿದರೂ ಸಾರಸಗಟಾಗಿ ತಳ್ಳಿಹಾಕುತ್ತಾರೆ. ಆದರೆ ಸಾಯಿ ಪಲ್ಲವಿ ಒರ್ವ ನಿರ್ದೇಶಕರ ಜೊತೆಗೆ ಈ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದಾರೆಂಬ ವಿಷಯ ನಿಮಗೆ ಗೊತ್ತಾ?.

Advertisement

 

Advertisement

Advertisement

 

Advertisement

ಹೌದು, ಇತ್ತೀಚೆಗೆ ಸಾಯಿಪಲ್ಲವಿ ಜೊತೆ ಚಿಟ್ ಚಾಟ್ ಮಾಡುವಾಗ ಫಿದಾ ಚಿತ್ರೀಕರಣದ ಸಮಯದಲ್ಲಿ ಶೇಖರ್ ಕಮ್ಮುಲಾ ಗ್ಲಾಮರ್ ಆಗಿ ಕಾಣಲು ಒತ್ತಾಯಿಸಿದರು ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಸ್ಲೀವ್ಲೆಸ್ ಬಟ್ಟೆಗಳನ್ನು ಧರಿಸುವುದು ತನಗೆ ಇಷ್ಟವಿಲ್ಲ ಎಂದು ಬಹಿರಂಗಪಡಿಸಿರುವ ಸಾಯಿ ಪಲ್ಲವಿ, ಆದರೆ ಶೇಖರ್ ಕಮ್ಮುಲಾ ಅವರ ಫಿದಾ ಚಿತ್ರದಲ್ಲಿ ಸ್ಲೀವ್ಲೆಸ್ ಧರಿಸುವಂತೆ ಹೇಳಿದರು ಎಂದು ಹೇಳಿದ್ದಾರೆ.

 

 

ಫಿದಾದಲ್ಲಿನ ಒಂದು ದೃಶ್ಯದಲ್ಲಿ, ಶೇಖರ್ ಕಮ್ಮುಲಾ ಅವರು ತೋಳಿಲ್ಲದ ಉಡುಪನ್ನು ಧರಿಸಲು ನನ್ನನ್ನು ಒತ್ತಾಯಿಸಿದರು ಎಂದು ಹೇಳಿರುವ ಸಾಯಿಪಲ್ಲವಿ, ಮುಂದೆ ಅಂತಹ ಬಟ್ಟೆಗಳನ್ನು ಧರಿಸದಿರಲು ನಾನು ನಿರ್ಧರಿಸಿದ್ದೇನೆ. ಅಂತಹ ಬಟ್ಟೆಗಳನ್ನು ಧರಿಸಿದ ನಂತರ ಜನರು ನಾಯಕಿಯರನ್ನು ವಿಭಿನ್ನ ರೀತಿಯಲ್ಲಿ ನೋಡುತ್ತಾರೆ. ಆದರೆ ನಾನು ಆ ರೀತಿ ಆಗಬೇಕೆಂದು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

 

 

ಇತ್ತೀಚೆಗಷ್ಟೆ ಸಾಯಿಪಲ್ಲವಿ ಸಂದರ್ಶನವೊಂದರಲ್ಲಿ ಮೂರು ಪ್ರಶ್ನೆಯೊಂದಕ್ಕೆ ನೇರವಾಗಿ ಉತ್ತರಿಸಿದ್ದು, ಇದರಲ್ಲಿ ಒಂದು ಪ್ರಶ್ನೆಗೆ ಅವರು ನೀಡಿರುವ ಉತ್ತರ ನಮ್ಮೆಲ್ಲರಿಗೂ ಆಶ್ಚರ್ಯ ಉಂಟು ಮಾಡಿತ್ತು. ಸಾಯಿಪಲ್ಲವಿ ತಾನು ಬಡುಗ ಎಂಬ ಬುಡಕಟ್ಟು ಕುಟುಂಬದಿಂದ ಬಂದವರಾಗಿದ್ದು, ಅವರ ಮಾತೃಭಾಷೆಗೆ ಯಾವುದೇ ಲಿಖಿತ ರೂಪವಿಲ್ಲ ಎಂದು ಹೇಳಿದ್ದರು. ಇನ್ನೊಂದು ಪ್ರಶ್ನೆಯಲ್ಲಿ ಹೆಚ್ಚು ಅಳುವ ದೃಶ್ಯದ ಬಗ್ಗೆ ಕೇಳಿದಾಗ, ಸಾಯಿ ಪಲ್ಲವಿ ಅವರು ‘ಎನ್ಜಿಕೆ’ ಚಿತ್ರದ ಒಂದು ದೃಶ್ಯದಲ್ಲಿ ಅತ್ತಿದ್ದೇನೆ. ಅಲ್ಲಿ ನಿರ್ದೇಶಕರು ಒಂದೇ ದೃಶ್ಯಕ್ಕಾಗಿ ಅನೇಕ ಟೇಕ್ಗಳನ್ನು ತೆಗೆದುಕೊಂಡಿದ್ದಾರೆ. ನಂತರ ನಾನು ಅವರ ಪರಿಪೂರ್ಣತೆಯನ್ನು ಇಷ್ಟಪಟ್ಟೆ ಎಂದು ಹೇಳಿದ್ದಾರೆ. ಮೂರನೇ ಪ್ರಶ್ನೆಗೆ, ನಟಿ ಆಗದಿದ್ದರೆ ನೀವು ಏನಾಗುತ್ತಿದ್ದೀರಿ? ಎಂದಾಗ ಹೃದ್ರೋಗ ತಜ್ಞೆಯಾಗುತ್ತಿದೆ ಎಂದು ಉತ್ತರಿಸಿದ್ದರು.

 

 

ಸದ್ಯ ನಾಗಾ ಚೈತನ್ಯ ಅವರೊಂದಿಗೆ ಜೋಡಿಯಾಗಿ ನಟಿಸುತ್ತಿರುವ ಶೇಖರ್ ಕಮ್ಮುಲಾ ಅವರ ಲವ್ ಸ್ಟೋರಿ ಹೊರತಾಗಿ, ಸಾಯಿ ಪಲ್ಲವಿ ಟಾಲಿವುಡ್ನಲ್ಲಿ ರಾಣಾ ಅವರ ‘ವಿರಾಟಪರ್ವ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement
Share this on...