ನಟ ಸಾಯಿಕುಮಾರ್ ಅವರ ತಾಯಿ ಕೂಡ ನಟಿಯೆಂದು ನಿಮಗೆ ಗೊತ್ತಾ….?

in ಸಿನಿಮಾ 196 views

ಒಂದು ಕಾಲದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ತನ್ನ ಪಂಚಿಂಗ್ ಡೈಲಾಗ್ ಗಳಿಂದ ಕನ್ನಡ ಸಿನಿಮಾರಂಗದಲ್ಲಿ  ಸಂಚಲನ ಉಂಟು ಮಾಡಿದ ನಟ ಡೈಲಾಗ್ ಕಿಂಗ್ ಸಾಯಿಕುಮಾರ್. 1992 ರಲ್ಲಿ ಪ್ರೇಮಸಂಗಮ ಚಿತ್ರದಿಂದ ಕನ್ನಡ ಸಿನಿಮಾರಂಗಕ್ಕೆ ಬಂದರು. ನಂತರ ಕುಂಕುಮಭಾಗ್ಯ, ಲಾಕಪ್ ಡೆತ್, ಹೆತ್ತ ಕರುಳು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರಗಳಲ್ಲಿ ಸಾಯಿಕುಮಾರ್ ಅಂದರೆ ಇವರೇನಾ ಅನ್ನುವಷ್ಟರ ಮಟ್ಟಿಗೆ ಗುರುತಿಸಿಕೊಂಡರು. 1996 ರಲ್ಲಿ ಕನ್ನಡದ ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ನಿರ್ದೇಶನದ ಪೊಲೀಸ್ ಸ್ಟೋರಿ ಚಿತ್ರದಿಂದ ತಮ್ಮ ವಿಶಿಷ್ಟ ರೀತಿಯ ಡೈಲಾಗ್ ಡೆಲಿವರಿಯಿಂದ ಕನ್ನಡ ಪ್ರೇಕ್ಷಕರಿಗೆ ತುಂಬಾ ಇಷ್ಟವಾದರು. ಹೇಗೊ ಕನ್ನಡ ಚಿತ್ರರಂಗಕ್ಕೆ ಒಬ್ಬ ಪರ್ಫೆಕ್ಟ್ ಮಾಸ್ ಹೀರೋ ಸಿಕ್ಕಿದ್ದಾರೆ ಎಂದು ಅಂದಿನ ಮಾಸ್ ಚಿತ್ರಗಳನ್ನು ಇಷ್ಟ ಪಡುತ್ತಿದ್ದ ಕನ್ನಡ ಪ್ರೇಕ್ಷಕರು ಸಾಯಿಕುಮಾರ್ ರವರ ಅಭಿನಯ ಕಂಡು ಸಕ್ಕತ್ ಖುಷಿಪಟ್ಟರು. ತೆಲುಗಿನ ಹಲವಾರು ಚಿತ್ರಗಳಲ್ಲಿ ನಟ ಸಾಯಿಕುಮಾರ್ ನಟಿಸಿದ್ದಾರೆ.

Advertisement

 

Advertisement


ತೆಲುಗು ಸಿನಿಮಾಗಳಲ್ಲಿ ಮೊದಲು ಡಬ್ಬಿಂಗ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡರು. ತೆಲುಗಿನಲ್ಲಿ ಸುಮನ್, ರಾಜಶೇಖರ್, ಚಿರಂಜೀವಿ, ಅರ್ಜುನ್ ಸರ್ಜಾ ರವರಿಗೆ ಡಬ್ಬಿಂಗ್ ಮಾಡಿದ್ದಾರೆ. ತಮಿಳಿನಲ್ಲಿ ರಜನಿಕಾಂತ್ ಹಾಗೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ರವರಿಗೂ ತಮ್ಮ ಕಂಚಿನ ಕಂಠ ದಾನ ನೀಡಿದ್ದಾರೆ. ತೆಲುಗು, ಕನ್ನಡ, ತಮಿಳು ಸೇರಿದಂತೆ ಸಾಯಿಕುಮಾರ್ ರವರು ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ, ಪೋಷಕ ನಟನಾಗಿ ನಟಿಸಿದ್ದಾರೆ. ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಕಲ್ಪನಾ ಹಾಗೂ ರಂಗಿತರಂಗ ಚಿತ್ರಗಳಲ್ಲಿ ನಟಿಸಿ ಸಾಯಿಕುಮಾರ್ ಹೀಗೂ ಆಕ್ಟಿಂಗ್ ಮಾಡ್ತಾರಾ ಎಂದು ಪ್ರೇಕ್ಷಕರು ಆಶ್ಚರ್ಯಪಡುವಂತಹ ಅಭಿನಯ ನೀಡಿದ್ದರು.

Advertisement

 

Advertisement


ಇನ್ನು ಇವರ ಸಹೋದರರಾದ ನಟ ರವಿಶಂಕರ್ ಹಾಗೂ ಅಯ್ಯಪ್ಪ ಕನ್ನಡ ಹಾಗೂ ತಮಿಳು-ತೆಲುಗಿನಲ್ಲಿ ಸಖತ್ ಫೇಮಸ್ ನಟರಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ನಟ ಸಾಯಿಕುಮಾರ್ ಅವರ ತಾಯಿ ಕೃಷ್ಣ ಜ್ಯೋತಿ. ಇವರು ಕೂಡ ಒಂದು ಕಾಲದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಯಾಗಿ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದರು ಹಾಗೂ ಕಂಠದಾನ ಕಲಾವಿದೆಯಾಗಿ ಸುಮಾರು ಐವತ್ತು ಚಿತ್ರಗಳಿಗೆ ಕೆಲಸ ಮಾಡಿದ್ದರು. ಸಾಯಿ ಕುಮಾರ್ ಅವರ ತಾಯಿ ಕೃಷ್ಣ ಜ್ಯೋತಿ ರವರು 2006ರಲ್ಲಿ ತಮ್ಮ 66ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು.

– ಸುಷ್ಮಿತಾ

Advertisement
Share this on...