ಧಾರಾವಾಹಿ ಮತ್ತು ಸಿನಿಮಾ ಬೇರೆ ಬೇರೆ ಎಂದ ಶೃಂಗೇರಿ ಬೆಡಗಿ ಸಂಗೀತಾ

in ಮನರಂಜನೆ 203 views

ಕಿರುತೆರೆ ವೀಕ್ಷಕರಿಗೆ ಇವರದು ಪರಿಚಿತ ಮುಖ. ಮನೋಜ್ಞ ಅಭಿನಯದ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ಈ ಚೆಂದುಳ್ಳಿ ಚೆಲುವೆಯ ಹೆಸರು ಸಂಗೀತಾ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಪೌರಾಣಿಕ ಧಾರಾವಾಹಿ ಹರಹರ ಮಹಾದೇವ ಧಾರಾವಾಹಿಯಲ್ಲಿ ಸತಿ ಆಗಿ ನಟಿಸುತ್ತಿದ್ದಾರೆ. ಶಿವಕುಮಾರ್ ಹಾಗೂ ಭವಾನಿ ದಂಪತಿಗಳ ಪುತ್ರಿಯಾದ ಸಂಗೀತಾ ಬಯಸಿದ್ದು ಇಂಡಿಯನ್ ಏರ್ ಫೋರ್ಸ್ ಆಫೀಸರ್ ಆಗಬೇಕೆಂದು. ಅದಕ್ಕೂ ಒಂದು ಕಾರಣವಿದೆ. ಸಂಗೀತಾ ತಂದೆ ಇಂಡಿಯನ್ ಏರ್ ಫೋರ್ಸ್ ನಲ್ಲಿ ಅಧಿಕಾರಿಯಾಗಿದ್ದರು. ಬಾಲ್ಯದಿಂದಲೂ ಅದನ್ನೇ ನೋಡುತ್ತಾ ಬೆಳೆದ ಈಕೆ ಅದೇ ಹಾದಿಯಲ್ಲಿ ಮುಂದುವರಿಯಬೇಕು ಎಂದುಕೊಂಡಿದ್ದರು. ಆದರೆ ಕಾಲೇಜು ಜೀವನ ಅವರ ದಿಕ್ಕನ್ನೇ ಬದಲಿಸಿತು. ಕಾಲೇಜು ಓದುವ ಸಮಯದಲ್ಲಿ ಮಾಡೆಲಿಂಗ್ ನತ್ತ ಆಸಕ್ತಿ ಆಕೆಯಲ್ಲಿ ಮೂಡಿತು.ಮುಂದೆ ಕೆಲವೊಂದು ಫ್ಯಾಷನ್ ಇವೆಂಟ್ ಗಳಲ್ಲಿ ಭಾಗವಹಿಸಿದ ಸಂಗೀತಾ ಮಾಡೆಲಿಂಗ್ ನ ರೀತಿ ನೀತಿ ತಿಳಿದುಕೊಂಡರು. ಇದರೊಂದಿಗೆ ರೂಪದರ್ಶಿಯಾಗಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಸಂಗೀತಾ ಹಲವು ಪ್ರಶಸ್ತಿಗಳನ್ನು ಪಡೆದರು. ಕರ್ಮ ಎನ್ನುವ ಕಿರುಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ನಟನಾ ರಂಗಕ್ಕೆ ಬಂದ ಸತಿಯಾಗಿ ಬದಲಾದರು. ಹರಹರ ಮಹಾದೇವ ಧಾರಾವಾಹಿಯ ಸತಿಯಾಗಿ ನಟಿಸಿದ್ದ ಈಕೆ ಮೊದಲ ಧಾರಾವಾಹಿಯಲ್ಲಿಯೇನೆ ಮಾತಾದವರು.

Advertisement

Advertisement

” ಪೌರಾಣಿಕ ಪಾತ್ರ ನಿಜಕ್ಕೂ ಸವಾಲಿನ ಪಾತ್ರ. ಅದರಲ್ಲೂ ದೇವರ ಪಾತ್ರ ನಿರ್ವಹಿಸುವುದು ಸುಲಭವಲ್ಲ. ಪೌರಾಣಿಕ ಪಾತ್ರಕ್ಕೆ ಜೀವ ತುಂಬುವಾಗ ಭಾಷೆಯ ಮೇಲೆ ಅಪಾರವಾದ ಹಿಡಿತವಿರಬೇಕು. ಅದಕ್ಕಾಗಿ ಸಾಕಷ್ಟು ಅಧ್ಯಯನ ಮಾಡಬೇಕು. ಪಾತ್ರವನ್ನು ಆಳವಾಗಿ ಅಧ್ಯಯನ ಮಾಡಿಕೊಳ್ಳಬೇಕು .ಆಗ ಮಾತ್ರ ಸರಾಗ ಅಭಿನಯ ಸಾಧ್ಯ” ಎನ್ನುತ್ತಾರೆ ಸಂಗೀತಾ.

Advertisement

ಹರಹರ ಮಹಾದೇವ ಧಾರಾವಾಹಿಯ ನಂತರ ಬೆಳ್ಳಿತೆರೆಯತ್ತ ಮುಖ ಮಾಡಿರುವ ಸಂಗೀತಾ ಸದ್ಯ ಬೆಳ್ಳಿತೆರೆಯಲ್ಲಿಯೇ ಬ್ಯುಸಿ. ಎ+ ಸಿನಿಮಾದ ಮೂಲಕ ಮಹಾಪರದೆಯ ಮೇಲೆ ಕಾಣಿಸಿದ ಸಂಗೀತಾ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ದಿಗಂತ್ ನಟನೆಯ ಮಾರಿಗೋಲ್ಡ್ ನಲ್ಲಿ ನಾಯಕಿಯಾಗಿ ಅಭಿನಯಿಸಿರುವ ಈಕೆ ಪಂಪದಲ್ಲಿಯೂ ಬಣ್ಣ ಹಚ್ಚಲಿದ್ದಾರೆ.

Advertisement

“ಧಾರಾವಾಹಿ ಮತ್ತು ಸಿನಿಮಾ ಒಂದಕ್ಕಿಂತ ಒಂದು ತುಂಬಾನೇ ಭಿನ್ನ. ಧಾರಾವಾಹಿಯಲ್ಲಿ ಕೇವಲ ಒಂದು ಪಾತ್ರದ ಮೂಲಕ ಜನರ ಮನಕ್ಕೆ ಹತ್ತಿರವಾಗಬಹುದು. ಮತ್ತು ಸ್ಥಾನವನ್ನು ಕೂಡಾ ಪಡೆಯಬಹುದು. ಆದರೆ ಸಿನಿಮಾದಲ್ಲಿ ಹಾಗಲ್ಲ. ಪ್ರತಿ ಸಿನಿಮಾದಲ್ಲಿಯೂ ಬೇರೆ ಬೇರೆ ಪಾತ್ರಗಳು. ಜನರ ಮನ ತಲುಪುವುದು ನಿಜವಾಗಿಯೂ ಚಾಲೆಂಜಿಗ್ ಆದುದು'” ಎಂದು ಹೇಳುತ್ತಾರೆ ಸಂಗೀತಾ.

ಅಚಾನಕ್ ಆಗಿ ಬಣ್ಣದ ಲೋಕಕ್ಕೆ ಬಂದಿರುವ ಸಂಗೀತಾ ಗೆ ಈ ಕ್ಷೇತ್ರ ಬಹಳವೇ ಸಂತಸ ನೀಡಿದೆ. ಇಂದು ಆಕೆ ಎತ್ತ ಹೋದರೂ ಜನ ಸತಿ ಎಂದು ಗುರುತಿಸುತ್ತಾರೆ. ಕಲಾವಿದೆಗೆ ಇದಕ್ಕಿಂತ ಹೆಚ್ಚಿನ ಗೌರವ ಬೇರೇನು ಬೇಕಿದೆ ಎನ್ನುತ್ತಾರೆ ಸಂಗೀತಾ.
– ಅಹಲ್ಯಾ

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...